ಕನ್ನಡದಲ್ಲಿ ರೌಡಿಸಂ ಆಧರಿಸಿ ಅನೇಕ ಸಿನಿಮಾ (Kaddipudi Movie News) ಬಂದಿವೆ. ಓಂ ಸಿನಿಮಾ ಅಂತು ಶಿವಣ್ಣನ ಕಲ್ಟ್ ಸಿನಿಮಾನೇ ಆಗಿದೆ. ಆದರೆ ಇದೇ ಶಿವಣ್ಣ ಮತ್ತು ಡೈರೆಕ್ಟರ್ ದುನಿಯಾ ಸೂರಿ ಸೇರಿ ಒಂದು ಸಿನಿಮಾ ಮಾಡಿದ್ದರು. ಈ ಚಿತ್ರದ ನಾಯಕ ಆನಂದ್ ಒಬ್ಬ ರೌಡಿ (Movie Complete 10 Years) ಆಗಿರುತ್ತಾನೆ. ಈತ ಎಲ್ಲ ಬಿಟ್ಟು ನಾರ್ಮಲ್ ಲೈಫ್ ಲೀಡ್ ಮಾಡಬೇಕು ಅಂತ ಆಸೆ ಪಡ್ತಾನೆ. ಆದರೆ ಅದು ಸಾಧ್ಯವೇ ಆಗೋದಿಲ್ಲ. ಇಷ್ಟು ಸಿಂಪಲ್ ಆಗಿದ್ದ ಕತೆಯನ್ನ ಡೈರೆಕ್ಟರ್ ಸೂರಿ 10 ವರ್ಷದ ಹಿಂದೆ ( Shiva Rajkumar Movie) ಮಾಡಿದ್ದರು. ಆಗ ಜನ ಈ ಚಿತ್ರವನ್ನ ಮೆಚ್ಚಿದ್ದರು. ವಿ.ಹರಿಕೃಷ್ಣ ಸಂಗೀತದ ಒಂದು ಹಾಡಂತೂ ಹುಚ್ಚು ಹಿಡಿಸಿತ್ತು. ರೌಡಿಸಂನ ರಾಷ್ಟ್ರೀಯ ಸಿನಿಮಾ ಅನ್ನೊ ಕಾಮೆಂಟ್‌ಗಳೂ ಬಂದವು.
ಆದರೆ (Shiva Rajkumar Cinema Updates) ವಿಮರ್ಶಕರು ಈ ಚಿತ್ರಕ್ಕೆ ಮಿಕ್ಸ್ ರೆಸ್ಪಾನ್ಸ್ ಕೊಟ್ಟಿದ್ದರು.
ಕಡ್ಡಿಪುಡಿ ಸಿನಿಮಾದ ಆ ದಿನಗಳ ಕಥೆಗಳು
ಕಡ್ಡಿಪುಡಿ ಸಿನಿಮಾದ ಹಿನ್ನೆಲೆ ಮುನ್ನೆಲೆ ಹೀಗಿದೆ ನೋಡಿ. ಹೌದು ಸಿನಿಮಾ ಮಾಡೊ ಮುಂಚೆ ಒಂದು ಕ್ರೇಜ್ ಇತ್ತು. ಸಿನಿಮಾ ಬಂದ್ಮೇಲೆ ಇನ್ನೂ ಒಂದು ಕ್ರೇಜ್ ಹುಟ್ಟಿತ್ತು. ಹಾಗೇನೆ ಶಿವರಾಜ್ ಕುಮಾರ್ ಮತ್ತು ದುನಿಯಾ ಸೂರಿ ಈ ಮೂಲಕ ಹೊಸ ಅಲೆ ಎಬ್ಬಿಸಿದ್ದರು. ಹೊಸ ರೀತಿಯ ಸಿನಿಮಾ ಕೊಟ್ಟ ಖುಷಿಯಲ್ಲೂ ಇದ್ದರು.
ಕಡ್ಡಿಪುಡಿ ಎಂಬ ರೌಡಿಸಂ ಸಿನಿಮಾ ಬಂದು 10 ವರ್ಷ ಪೂರ್ಣ
ಜನರ ನಿರೀಕ್ಷೆಯಂತೆ ರೌಡಿಸಂ ಸಿನಿಮಾನೇ ಇದಾಗಿತ್ತು. ದುನಿಯಾ ಸೂರಿ ಅವರ ಕಲ್ಪನೆಯಲ್ಲಿ ಈ ಚಿತ್ರ ಸ್ಪಷಲ್ ಆಗಿತ್ತು. ತಮ್ಮ ಕಲ್ಪನೆಯಂತೆ ಕಡ್ಡಿಪುಡಿ ಸಿನಿಮಾ ತೆಗೆದಿದ್ದರು. ಸಿನಿಮಾ ಪ್ರೇಮಿಗಳಲ್ಲಿ ಈ ಚಿತ್ರಕ್ಕಿಂತಲೂ ಇದರಲ್ಲಿದ್ದ ಆ ಒಂದು ಗೀತೆ ತುಂಬಾನೇ ಹೈಪ್ ಪಡೆದಿತ್ತು.
ಹೌದು, ಸೌಂದರ್ಯ ಸಮರ ಅನ್ನೋ ಹಾಡು ಅತಿ ಹೆಚ್ಚು ಗಮನ ಸೆಳೆದಿತ್ತು. ನಟಿ ಐಂದ್ರಿತಾ ರೇ ಈ ಒಂದು ಸ್ಪೆಷಲ್ ಸಾಂಗ್ ಅಲ್ಲಿ ಕಾಣಿಸಿಕೊಂಡಿದ್ದರು. ಯೋಗರಾಜ್ ಭಟ್ ಸಾಹಿತ್ಯದಲ್ಲಿಯೇ ಈ ಒಂದು ಗೀತೆ ಮೂಡಿ ಬಂದಿತ್ತು. ಸೋನು ನಿಗಮ್ ಈ ಗೀತೆಗೆ ಧ್ವನಿಯಾಗಿದ್ದರು.
ಕಡ್ಡಿಪುಡಿ ಚಿತ್ರಕ್ಕೆ ಹೈಪ್ ಕೊಟ್ಟ ಸೌಂದರ್ಯ ಸಮರ ಹಾಡು
ದುನಿಯಾ ಸೂರಿ ಈ ಗೀತೆಯನ್ನೆ ತುಂಬಾನೇ ಮೆಚ್ಚಿಕೊಂಡಿದ್ದರು. ಸಾಹಿತ್ಯದ ತಲೆ ಮೇಲೆ ಹೊಡೆದಂತಹ ಸಾಹಿತ್ಯವನ್ನ ಈ ಹಾಡಿನಲ್ಲಿ ಯೋಗರಾಜ್ ಭಟ್ ಬರೆದಿದ್ದಾರೆ ಎಂದು ಬಣ್ಣಿಸಿದ್ದರು.
ಕಡ್ಡಿಪುಡಿ ಸಿನಿಮಾದ ಹಿಂದೆ ದೊಡ್ಡ ತಂಡವೇ ಕೆಲಸ ಮಾಡಿತ್ತು. ಚಿತ್ರದ ಚಿತ್ರಕಥೆಯನ್ನ ದುನಿಯಾ ಸೂರಿ ಮತ್ತು ನಟ ರಾಜೇಶ್ ನಟರಂಗ ಜೊತೆಗೂಡಿ ಮಾಡಿದ್ದರು. ರಿಯಲ್ ಫೀಲ್ ಕೊಡುವ ಈ ಕಥೆಯಲ್ಲಿ ರಾಧಿಕಾ ಪಂಡಿತ್ ಅಭಿನಯಿಸಿದ್ದರು. ಶಿವಣ್ಣ ಇಲ್ಲಿ ರಾಧಿಕಾಗೆ ಜೋಡಿ ಆಗಿದ್ದರು.
ಕೆ.ಆರ್.ಮಾರ್ಕೆಟ್‌ನಲ್ಲಿ ಚಿತ್ರೀಕರಿಸಿದ ಕಡ್ಡಿಪುಡಿ ಸಿನಿಮಾ
ಬೆಂಗಳೂರಿನ ಕೆ.ಆರ್.ಮಾರ್ಕೆಟ್‌ನ ಹೂವಿನ ಮಂಡಿಯಲ್ಲಿ ಚಿತ್ರದ ಕೆಲವು ದೃಶ್ಯಗಳನ್ನ ಸೂರಿ ತೆಗೆದಿದ್ದರು. ಅದು ಒಂದು ರೀತಿ ಅದ್ಭುತವಾಗಿಯೇ ಬಂದಿತ್ತು. ಇದಾದ್ಮೇಲೆ ಅನೇಕರು ಇದನ್ನ ಫಾಲೋ ಮಾಡಿದ್ದು ಇದೆ.
ಟಗರು ಸಿನಿಮಾ ಬರೋ ಮೊದಲೇ ಬಂದಿದ್ದ ಕಡ್ಡಿಪುಡಿ ಚಿತ್ರವನ್ನ ಅಂದು ನಟ ಚಂದ್ರು ನಿರ್ಮಿಸಿದ್ದರು. ಚಿತ್ರಕ್ಕೆ ಮಿಕ್ಸ್ ರೆಸ್ಪಾನ್ಸ್ ಬಂದಿತ್ತು. ಆದರೂ ಅಭಿಮಾನಿಗಳು ಈ ಚಿತ್ರವನ್ನ ಒಪ್ಪಿಕೊಂಡಿದ್ದರು.
ಕಡ್ಡಿಪುಡಿ ಎಂಬ ರೌಡಿಗಳ ರಾಷ್ಟ್ರೀಯ ಸಿನಿಮಾ
ಲಾಂಗ್ ಹಿಡಿದ ರೌಡಿ ಲಾಂಗ್ ಬಿಟ್ರೆ ಬದುಕೋಕೆ ಆಗೋದಿಲ್ಲ ಅನ್ನೋ ಸತ್ಯವನ್ನ ಇಡೀ ಸಿನಿಮಾ ಹೇಳಿತ್ತು. ರೌಡಿಗಳ ರಾಷ್ಟ್ರೀಯ ಸಿನಿಮಾ ಅನ್ನೊ ವಿಶ್ಲೇಷಣೆಗಳು, ವಿಮರ್ಶೆಗಳು ಕೂಡ ಬಂದಿದ್ದವು.
ಇದನ್ನೂ ಓದಿ: Pavitra Lokesh: ನಿಮ್ಮ ಮುಂದೆಯೇ ಬೆಳೆದ ಹುಡುಗಿ ನಾನು, ನನಗೆ ಹಣದ ವ್ಯಾಮೋಹ ಇಲ್ಲ ಎಂದ ಪವಿತ್ರಾ ಲೋಕೇಶ್
ಅಂತಹ ಈ ಚಿತ್ರ 10 ವರ್ಷದ ಹಿಂದೆ ಜೂನ್-7, 2013 ರಲ್ಲಿ ಎಲ್ಲೆಡೆ ತೆರೆಗೆ ಬಂದಿತ್ತು. ಆ ಹತ್ತು ವರ್ಷದಲ್ಲಿ ಏನೇನೋ ಆಗಿ ಹೋಗಿದೆ. ಆದರೆ ಕಡ್ಡಿಪುಡಿ ಸಿನಿಮಾ ತನ್ನ ವಿಶೇಷತೆಯನ್ನ ಸಿನಿಮಾ ತಂಡದಲ್ಲಿ ಇನ್ನೂ ಜೀವಂತವಾಗಿಯೇ ಇಟ್ಟಿದೆ ಅಂತಲೇ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ