Shiva Rajkumar: ಭೈರತಿ ರಣಗಲ್ ಸಿನಿಮಾ ಹೀರೋಯಿನ್ ಯಾರು? ಡೈರೆಕ್ಟರ್ ನರ್ತನ್ ಹೇಳಿದ್ದೇನು?

ನ್ಯೂಸ್-18 ಕನ್ನಡ ಡಿಜಿಟಲ್‌ಗೆ ಡೈರೆಕ್ಟರ್ ನರ್ತನ್ ಹೇಳಿದ್ದೇನು ?

ನ್ಯೂಸ್-18 ಕನ್ನಡ ಡಿಜಿಟಲ್‌ಗೆ ಡೈರೆಕ್ಟರ್ ನರ್ತನ್ ಹೇಳಿದ್ದೇನು ?

ಭೈರತಿ ರಣಗಲ್ ಸಿನಿಮಾದ ನಾಯಕಿ ಯಾರು ? ಕನ್ನಡದ ನಾಯಕಿಗೆ ಆದ್ಯತೆ ಕೊಡ್ತಾರಾ ಶಿವಣ್ಣ ? ಡೈರೆಕ್ಟರ್ ನರ್ತನ್ ಈ ಬಗ್ಗೆ ನ್ಯೂಸ್‌-18 ಕನ್ನಡ ಡಿಜಿಟಲ್‌ಗೆ ಹೇಳಿದ್ದೇನು ? ಇಲ್ಲಿದೆ ಓದಿ.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ (Bhairathi Ranagal Movie) ಭೈರತಿ ರಣಗಲ್ ಸಿನಿಮಾ ಹೊಸ ಅಪ್‌ಡೇಟ್ಸ್ ಏನಿದೆ ? ಡೈರೆಕ್ಟರ್ ನರ್ತನ್ ಸದ್ಯ ಏನ್ ಮಾಡುತ್ತಿದ್ದಾರೆ ? ಶಿವರಾಜ್ ಕುಮಾರ್ ಈ ಚಿತ್ರಕ್ಕೆ ಏನೆಲ್ಲ ತಯಾರಿ ಮಾಡಿಕೊಂಡಿದ್ದಾರೆ ? ಭೈರತಿ ರಣಗಲ್ (Bhairathi Ranagal Latest News) ಸಿನಿಮಾದಲ್ಲಿ ಯಾರೆಲ್ಲ ಇದ್ದಾರೆ ? ಚಿತ್ರಕ್ಕಾಗಿ ಡೈರೆಕ್ಟರ್ ನರ್ತನ್ ಈಗಾಗಲೇ ಏನೆಲ್ಲ ಸಿದ್ದತೆ ಮಾಡಿಕೊಂಡಿದ್ದಾರೆ. ಭೈರತಿ ರಣಗಲ್ ಐದು ಭಾಷೆಯಲ್ಲಿ ಬರಲಿದೆ. ಈ ಚಿತ್ರಕ್ಕಾಗಿ ಆಯಾ (Shiva Rajkumar Cinema Updates) ಭಾಷೆಯ ಕಲಾವಿದರೆ ನಟಿಸ್ತಾರೇಯೆ ? ಈ ಕುತೂಹಲದ ಪ್ರಶ್ನೆಗಳಿಗೆ ಸದ್ಯ ಉತ್ತರ ಇನ್ನು ಸಿಕ್ಕಿಲ್ಲ. ಆದರೆ ಚಿತ್ರದ ನಾಯಕಿ ಯಾರು ಅನ್ನುವ ಪ್ರಶ್ನೆಗೆ ನ್ಯೂಸ್-18 ಕನ್ನಡ ಡಿಜಿಟಲ್‌ ಪ್ರಶ್ನೆಗೆ ನರ್ತನ್ ಉತ್ತರ ಕೊಟ್ಟಿದ್ದಾರೆ. 


ಭೈರತಿ ರಣಗಲ್ ಸಿನಿಮಾ ಡೈರೆಕ್ಟರ್ ನರ್ತನ್ ಹೇಳೋದೇನು ?


ಭೈರತಿ ರಣಗಲ್ ಸಿನಿಮಾ ಕನ್ನಡದ ಮತ್ತೊಂದು ಬಹು ನಿರೀಕ್ಷಿತ ಸಿನಿಮಾ ಆಗಿದೆ. ಬಿಗ್ ಹಿಟ್ ಮಫ್ತಿ ಚಿತ್ರ ಆದ್ಮೇಲೆ ಡೈರೆಕ್ಟರ್ ನರ್ತನ್ ಈ ಚಿತ್ರವನ್ನ ಕೈಗೆ ಎತ್ತುಕೊಂಡಿದ್ದಾರೆ. ಸಿನಿಮಾದ ಟೈಟಲ್ ಮತ್ತು ಚಿತ್ರದ ಪ್ರಮುಖ ವಿಚಾರಗಳನ್ನ ಈಗಾಗಲೇ ರಿವೀಲ್ ಮಾಡಿದ್ದಾರೆ.


Sandalwood Shiva Rajkumar Acted Bhairathi Ranagal Movie Latest Updates
ಭೈರತಿ ರಣಗಲ್ ಚಿತ್ರದ ನಾಯಕಿ ಆಯ್ಕೆ ಆಗಿದಿಯೇ ?


ಭೈರತಿ ರಣಗಲ್ ಚಿತ್ರದ ನಾಯಕಿ ಆಯ್ಕೆ ಆಗಿದಿಯೇ?


ಆದರೆ ಚಿತ್ರದ ಸ್ಟಾರ್ ಕಾಸ್ಟ್ ಬಗ್ಗೆ ಎಲ್ಲೂ ಏನೂ ಹೇಳಿಕೊಂಡಿಲ್ಲ. ಆದರೂ ಈ ಸಿನಿಮಾದ ನಾಯಕಿಯ ವಿಚಾರ ಸದ್ಯ ವೈರಲ್ ಆಗುತ್ತಿದೆ. ಶಿವಣ್ಣನ ಈ ಚಿತ್ರದಲ್ಲಿ ಯಾರು ಹೀರೋಯಿನ್ ಅನ್ನುವ ಪ್ರಶ್ನೆ ಇದೆ. ಹಾಗಂತ ಒಂದಷ್ಟು ನಟಿಯರ ಹೆಸರು ಕೇಳಿ ಬಂತೇ ಅಂತ ಕೇಳಬೇಡಿ.




ಭೈರತಿ ರಣಗಲ್ ಚಿತ್ರದ ನಾಯಕಿ ಆಯ್ಕೆ ಆಗಿದಿಯೇ ?


ಸದ್ಯ ಆ ರೀತಿ ಎಲ್ಲೂ ಏನು ಸುದ್ದಿ ಆಗಿಲ್ಲ ಬಿಡಿ. ಹಾಗಂತ ಡೈರೆಕ್ಟರ್ ನರ್ತನ್ ಎಲ್ಲವನ್ನೂ ಬಚ್ಚಿಟ್ಟಿದ್ದಾರಾ ಅಂತಲೂ ಕೇಳಬೇಡಿ. ನರ್ತನ್ ಈ ಬಗ್ಗೆ ಸೀಕ್ರೆಟ್ ಏನೂ ಮೆಂಟೇನ್ ಮಾಡಿಲ್ಲ. ಹಾಗಾಗಿಯೇ ಈ ಒಂದು ಸಿನಿಮಾದ ನಾಯಕಿಯ ಆಯ್ಕೆ ಇನ್ನೂ ಮಾಡಿಯೇ ಇಲ್ಲ.




ನ್ಯೂಸ್-18 ಕನ್ನಡ ಡಿಜಿಟಲ್‌ಗೆ ಡೈರೆಕ್ಟರ್ ನರ್ತನ್ ಹೇಳಿದ್ದೇನು ?


ನಮ್ಮ ಚಿತ್ರದ ನಾಯಕಿಯ ಆಯ್ಕೆ ಇನ್ನೂ ಆಗಿಲ್ಲ. ಹುಡುಕಾಟವೂ ಇನ್ನೂ ಮುಗಿದಿಲ್ಲ. ಅದು ಇನ್ನೂ ಮುಂದುವರೆದಿದೆ ಅಂತಲೇ ಡೈರೆಕ್ಟರ್ ನರ್ತನ್, ನ್ಯೂಸ್-18 ಕನ್ನಡ ಡಿಜಿಟಲ್ ಗೆ ತಿಳಿಸಿದ್ದಾರೆ.


Sandalwood Shiva Rajkumar Acted Bhairathi Ranagal Movie Latest Updates
ಭೈರತಿ ರಣಗಲ್ ಸಿನಿಮಾ ಶೂಟಿಂಗ್ ಯಾವಾಗ ?


ಭೈರತಿ ರಣಗಲ್ ಸಿನಿಮಾ ಶೂಟಿಂಗ್ ಯಾವಾಗ ?


ಭೈರತಿ ರಣಗಲ್ ಸಿನಿಮಾ ಶೂಟಿಂಗ್ ಮುಂದಿನ ವರ್ಷ ಜನವರಿಯಿಂದಲೇ ಶುರು ಆಗುತ್ತದೆ ಅನ್ನುವ ಸುದ್ದಿ ಇದೆ. ಈ ಸಿನಿಮಾ ಇತರ ಕೆಲಸಗಳು ಸದ್ಯ ನಡೆಯುತ್ತಿವೆ. ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಭೈರತಿ ರಣಗಲ್ ಆಗಿಯೇ ಅಬ್ಬರಿಸಲಿದ್ದಾರೆ.


ಗೀತಾ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಭೈರತಿ ರಣಗಲ್ ನಿರ್ಮಾಣ


ಭೈರತಿ ರಣಗಲ್ ಚಿತ್ರದ ಇತರ ವಿಷಯ ಸದ್ಯಕ್ಕೆ ಏನೂ ಹೊರ ಬಿದ್ದಿಲ್ಲ. ವೇದ ಸಿನಿಮಾ ಆದ್ಮೇಲೆ ಶಿವಣ್ಣ ತಮ್ಮ ಗೀತಾ ಪಿಕ್ಚರ್ಸ್ ಬ್ಯಾನರ್‌ ಮೂಲಕ ಭೈರತಿ ರಣಲ್ ಸಿನಿಮಾ ಮಾಡಿದ್ದಾರೆ.


ಇದನ್ನೂ ಓದಿ: Antarapata Serial: ಬಡವರಾಗಿ ಹುಟ್ಟಬಾರದು, ಅಮ್ಮನ ಬಳಿ ಕಣ್ಣೀರಿಡುತ್ತಿರುವ ಆರಾಧನಾ!


ಶಿವಣ್ಣ ಒಪ್ಪಿರೋ ಸಿನಿಮಾಗಳು ಯಾವವು ?

top videos


    ಯೋಗರಾಜ್ ಭಟ್ಟರ ಸಿನಿಮಾವನ್ನ ಕೂಡ ಶಿವಣ್ಣ ಒಪ್ಪಿದ್ದಾರೆ. ತಮಿಳಿನ ಜೈಲರ್ ಚಿತ್ರದ ಕೆಲಸವನ್ನು ಮುಗಿಸಿ ಬಂದಿದ್ದಾರೆ. ತಮಿಳಿನ ಧನುಷ್ ಸಿನಿಮಾದಲ್ಲೂ ಶಿವಣ್ಣ ಅಭಿನಯಿಸಿದ್ದಾರೆ. ಇನ್ನುಳಿದಂತೆ ಒಪ್ಪಿಕೊಂಡ ಎಲ್ಲ ಚಿತ್ರ ಮುಗಿದ್ಮೇಲೆ ತಮ್ಮ ನಿರ್ಮಾಣದ ಭೈರತಿ ರಣಗಲ್ ಸಿನಿಮಾದಲ್ಲಿ ಬ್ಯುಸಿ ಆಗಲಿದ್ದಾರೆ.

    First published: