ಸ್ಯಾಂಡಲ್‌ವುಡ್‌ನಲ್ಲಿ ಶಿಕ್ಷಣ ವ್ಯವಸ್ಥೆಯ (Scam-1770 Film Teaser) ಮತ್ತೊಂದು ಕರಾಳ ಮುಖ ತೋರುವ ಸಿನಿಮಾ ರೆಡಿ ಆಗಿದೆ. ಈ ಚಿತ್ರದ ಮೂಲಕ ಸದ್ಯದ ಶಿಕ್ಷಣ ವ್ಯವಸ್ಥೆಯ ಆಳವನ್ನ ಹೇಳಲಾಗುತ್ತಿದೆ. ವಿದ್ಯಾರ್ಥಿಗಳು ಮತ್ತು (Kannada Scam-1770 Movie) ಪೋಷಕರೂ ನೋಡಲೇಬೇಕಾದ ಈ ಸಿನಿಮಾ ಟೀಸರ್ ರಿಲೀಸ್ ಆಗಿದೆ. ಕನ್ನಡದ ಹಿರಿಯ ನಟ ದತ್ತಣ್ಣ ಈ ಟೀಸರ್ ರಿಲೀಸ್ ಮಾಡಿದ್ದಾರೆ. ಶಿಕ್ಷಣದ ಸದ್ಯದ ವ್ಯವಸ್ಥೆ (Scam-1770 Cinema) ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚಿತ್ರದ ಮೂಲಕ ದಡ್ಡ ಪ್ರವೀಣ್ ಖ್ಯಾತಿಯ ನಟ ನಿರಂಜನ್ ನಾಯಕರಾಗಿದ್ದಾರೆ. ಈಗ ಸಿನಿಮಾದ ಟೀಸರ್ ಗಮನ ಸೆಳೆಯುತ್ತಿದೆ. ಇದರ ಒಂದು (Scam-1770 Film Facts) ಸ್ಟೋರಿ ಇಲ್ಲಿದೆ ಓದಿ.
ಶಿಕ್ಷಣ ವ್ಯವಸ್ಥೆ ಅಸಲಿ ಮುಖ ಬಿಚ್ಚಿಡೋ ಸ್ಕ್ಯಾಮ್-1770 ಸಿನಿಮಾ
ಸ್ಕ್ಯಾಮ್-1770 ಸಿನಿಮಾದಲ್ಲಿ ಏನಿದೆ ಅನ್ನೋದು ಟೈಟಲ್ ಹೇಳುತ್ತಿದೆ. ಶಿಕ್ಷಣ ವ್ಯವಸ್ಥೆಯಲ್ಲಿರೋ ಸ್ಕ್ಯಾಮ್ ಕುರಿತು ಈ ಚಿತ್ರ ತಯಾರಾಗಿದೆ. ಚಿತ್ರಕ್ಕೆ ಕಥೆ ಬರೆದವರು ಸಾಮಾನ್ಯ ವ್ಯಕ್ತಿಗಳೂ ಅಲ್ಲ ಬಿಡಿ. ಒಬ್ರು ವೈದ್ಯರು ಮತ್ತೊಬ್ಬರು ವಕೀಲರು, ಇವರ ಈ ಸಿನಿಮಾ ಟೀಸರ್ ಮೂಲಕವೇ ಅಸಲಿ ಸತ್ಯದ ಪುಟ್ಟ ಝಲಕ್ ಈಗ ಕೊಟ್ಟಿದೆ.
ಸ್ಕ್ಯಾಮ್-1770 ಸಿನಿಮಾದಲ್ಲಿ ಸ್ಕ್ಯಾಮ್ ಆಗಿರುತ್ತದೆ. ಹೆಚ್ಚು ಕಡಿಮೆ ೨೫ ಜನ ಈ ಒಂದು ಸ್ಕ್ಯಾಮ್‌ಗೆ ಬಲಿ ಆಗಿರುತ್ತಾರೆ. ಅದರ ಒಂದು ಝಲಕ್ ಟೀಸರ್‌ನಲ್ಲಿ ಸಿಗುತ್ತದೆ. ಅಲ್ಲಿಗೆ ಈ ಸಿನಿಮಾದ ಒಂದೇ ಒಂದು ಸ್ಕ್ಯಾಮ್ ಇಡೀ ಚಿತ್ರದ ಕಥಾವಸ್ತು ಅಂತ ಹೇಳಿ ಬಿಡಬಹುದು.
ದಡ್ಟ ಪ್ರವೀಣನ ಜಾಣ ಸಿನಿಮಾ ಸ್ಕ್ಯಾಮ್-1770
ಮೇಲ್ನೋಟಕ್ಕೆ ಇದು ಶಿಕ್ಷಣ ವ್ಯವಸ್ಥೆಯಲ್ಲಿ ನಡೆದಿರೋ ಒಂದು ಸ್ಕ್ಯಾಮ್ ಅನ್ನೋದು ತಿಳಿಯುತ್ತದೆ. ಅದು ಹೇಗೆ ಸ್ಕ್ಯಾಮ್ ಆಗಿದೆ. ಯಾರಿಂದ ಇದೆಲ್ಲ ಆಗಿದೆ ಅನ್ನೋದು ಎಲ್ಲೂ ರಿವೀಲ್ ಆಗೋದಿಲ್ಲ.
ಆದರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರ ಖ್ಯಾತಿಯ ನಟ ನಿರಂಜನ್, ಚಲನ-ವಲನದ ದೃಶ್ಯಗಳ ಆಧಾರದ ಮೇಲೆ ಈತನೇ ಆ ಸ್ಕ್ಯಾಮ್ ಮಾಡಿರೊದು ಅಂತಲೇ ಗೆಸ್ ಮಾಡಬಹುದು ನೋಡಿ.
ಸ್ಕ್ಯಾಮ್-1770 ಸಿನಿಮಾದ ನಿರ್ದೇಶಕ ವಿಕಾಸ್ ಪುಷ್ಪಗಿರಿ ಈ ಮೂಲಕ ಶಿಕ್ಷಣ ವ್ಯವಸ್ಥೆಯ ಭ್ರಷ್ಟತೆ ಮೇಲೆ ಬೆಳಕು ಚೆಲ್ಲಿದ್ದಾರೆ. ಇವರ ಈ ಚಿತ್ರಕ್ಕೆ ಶಂಕರ್ ರಾಮನ್ ಡೈಲಾಗ್ ಬರೆದಿದ್ದಾರೆ.
ಏನೇ ತಪ್ಪಿದರೂ ಶಿಕ್ಷಣ ತಪ್ಪಬಾರದು-ಡೈರೆಕ್ಟರ್ ವಿಕಾಸ್ ಪುಷ್ಪಗಿರಿ
ಚಿತ್ರದಲ್ಲಿ ಪಸ್ತುತ ಶಿಕ್ಷಣ ವ್ಯವಸ್ಥೆಯ ಸ್ಕ್ಯಾಮ್ ಬಗ್ಗೇನೆ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಈ ಚಿತ್ರ ಮಹತ್ವದ್ದಾಗಿದೆ. ಬೇರೆ ಏನೋ ತಪ್ಪಿದರೂ ಅಡ್ಡಿಯಿಲ್ಲ ಅನ್ನಬಹುದೇನೋ? ಆದರೆ ಶಿಕ್ಷಣವೇ ತಪ್ಪಿದ್ರೇ ಹೇಗೆ? ಈ ಒಂದು ಪ್ರಶ್ನೆಯನ್ನ ಕೇಳುವ ಡೈರಕ್ಟರ್ ವಿಕಾಸ್ ಪುಷ್ಪಗಿರಿ, ಈ ಚಿತ್ರ ಎಲ್ಲರೂ ನೋಡಲೇಬೇಕಾದ ಸಿನಿಮಾ ಅಂತಲೇ ಹೇಳಿಕೊಂಡಿದ್ದಾರೆ.
ಚಿತ್ರದ ನಾಯಕ ನಿರಂಜನ್‌ಗೆ ಇದು ಮೊದಲ ನಾಯಕ ನಟನೆಯ ಸಿನಿಮಾ ಆಗಿದೆ. ಈ ಹಿಂದೆ ರಿಷಬ್ ಶೆಟ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾದಲ್ಲಿ ದಡ್ಡ ಪ್ರವೀಣ್ ಅನ್ನೋ ಪಾತ್ರ ಮಾಡಿದ್ದರು. ಆ ಚಿತ್ರದ ಬಳಿಕ ಈ ಸಿನಿಮಾದಲ್ಲಿ ಸ್ಕ್ಯಾಮ್ ಕಥೆಯ ನಾಯಕನಾಗಿ ಗಮನ ಸೆಳೆಯುತ್ತಿದ್ದಾರೆ.
ಸ್ಕ್ಯಾಮ್-1770 ಚಿತ್ರದಲ್ಲಿ ಯಾರೆಲ್ಲ ಇದ್ದಾರೆ ಗೊತ್ತೇ?
ಸ್ಕ್ಯಾಮ್-1770 ಸಿನಿಮಾದಲ್ಲಿ ನಿಶ್ವಿತಾ, ಹರಿಣಿ, ನಾರಾಯಣ ಸ್ವಾಮಿ ಸೇರಿದಂತೆ ಇನ್ನು ಅನೇಕರು ಅಭಿನಯಿಸಿದ್ದಾರೆ. ಸತೀಶ್ ಆರ್ಯನ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ವೈದ್ಯರಾದ ಇಂದು ನಟೇಶ್ ಹಾಗೂ ವಕೀಲೆ ನೇತ್ರಾವತಿ ಈ ಚಿತ್ರಕ್ಕೆ ಕತೆ ಬರೆದಿದ್ದಾರೆ.
ಇದನ್ನೂ ಓದಿ: Vijay Raghavendra: ಚಿನ್ನಾರಿ ಮುತ್ತನ ಕಥೆಗೆ ಈಗ 30 ವರ್ಷ; ಇದು ರಾಘು ಸಿನಿ ಜರ್ನಿಯ ಸ್ಪೆಷಲ್ ಸಿನಿಮಾ
ಇನ್ನುಳಿದಂತೆ ಸದ್ಯ ಸಿನಿಮಾದ ಟೀಸರ್ ಹಂಗಾಮಾ ಮಾಡುತ್ತಿದೆ. ದಡ್ಡ ಪ್ರವೀಣ್ ಈ ಮೂಲಕ ಬುದ್ದಿವಂತಿಕೆಯನ್ನು ಪ್ರದರ್ಶಿಸಿದಂತೆ ಇದೆ. ಸಿನಿಮಾ ತಂಡ ಸದ್ಯಕ್ಕೆ ಚಿತ್ರದ ಒಂದಷ್ಟು ಮಾಹಿತಿ ಹಂಚಿಕೊಂಡಿದೆ. ಟೀಸರ್ ರಿಲೀಸ್ ಮಾಡಿ ಗಮನ ಸೆಳೆದಿದೆ. ಆದರೆ ರಿಲೀಸ್ ಡೇಟ್ ಇನ್ನೂ ಅನೌನ್ಸ್ ಮಾಡಿಲ್ಲ ಅಂತಲೇ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ