ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಈಗ ಯಶ್ ಅವರು ಪ್ಯಾನ್ ಇಂಡಿಯಾ ಆಗಿಬಿಟ್ಟಿದ್ದಾರೆ. ಅಭಿಮಾನಿಗಳಂತು ಯಶ್ ಅಂದ್ರೆ ಎಲ್ಲಿಲ್ಲದ ಕ್ರೇಜ್. ಕೆಜಿಎಫ್ (KGF) ಸಿನಿಮಾದ ನಂತರ ಯಶ್ ಅವರ ಪ್ಯಾನ್ಸ್ ಇನ್ನೂ ಹೆಚ್ಚಾಗಿದ್ದಾರೆ. ಕನ್ನಡದಲ್ಲಿ ಈ ರೀತಿ ಸಿನಿಮಾ ಮಾಡಿದ್ದಾರೆ ಎಂದು ಹಾಡಿ ಹೊಗಳಿದ್ದರು. ಅದರ ನಂತರ ಕೆಜಿಎಫ್ 2 ಸಹ ಯಶ್ ಅವರನ್ನು ಬೇರೆ ಮಟ್ಟಕ್ಕೆ ತೆಗೆದುಕೊಂಡು ಹೋಗಿದೆ. ಸದಾ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ (Busy) ಆಗಿರುವ ಹೀರೋ ಆಗಾಗ ಮನೆ, ಮಕ್ಕಳ ಜೊತೆ ಕಾಲ ಕಳೆಯುತ್ತಾರೆ. ಅದರಲ್ಲೂ ಯಶ್ ಅವರಿಗೆ ಮಕ್ಕಳೆಂದ್ರೆ ಪ್ರಾಣ. ಮಗ (Son) ಯಥರ್ವ್‍ನ ಜೊತೆ ಯಾರು ಸ್ಟ್ರಾಂಗ್ (Strong) ಎಂದು ಕೇಳಿದ್ದಾರೆ. ನಾನೇ ಅಪ್ಪ ಎಂದು ಹೇಳಿದ್ದಾರೆ.
ಕುಟುಂಬಕ್ಕೆ ಸಮಯ
ಯಶ್ ಸಿನಿಮಾ ಅಂತ ಎಷ್ಟೇ ಬ್ಯುಸಿ ಇದ್ದರೂ, ಕುಟುಂಬಕ್ಕೆ ಸಮಯ ನೀಡ್ತಾರೆ. ರಾಧಿಕಾ ಪಂಡಿತ್ ಜೊತೆ ಆಗಾಗ ಟ್ರಿಪ್ ಹೋಗ್ತಾರೆ. ಮಕ್ಕಳ ಜೊತೆಯೂ ಸಮಯ ಕಳೆಯುತ್ತಾರೆ. ಎರಡನ್ನೂ ಸಮವಾಗಿ ನಿಭಾಯಿಸುತ್ತಾರೆ. ಐರಾ, ಯಥರ್ವ್‍ನಿಗೆ ಅಪ್ಪನೇ ಪ್ರಪಂಚ. ಅಪ್ಪನ ಜೊತೆ ಹೆಚ್ಚು ಕಾಲ ಕಳೆಯಲು ಇಷ್ಟ ಪಡ್ತಾರೆ.
ವಿಡಿಯೋ ಹಂಚಿಕೊಂಡ ನಟ ಯಶ್
ನಟ ಯಶ್ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಯಶ್ ಮತ್ತು ಯಥರ್ವ್ ಖುಷಿಯಾಗಿ ಕಾಲ ಕಳೆದಿದ್ದಾರೆ. ಯಶ್ ತುಂಬಾ ಖುಷಿಯಾಗಿದ್ದಾರೆ. ರಾಧಿಕಾ ಅವರು ಈ ವಿಡಿಯೋ ತೆಗೆದಿದ್ದಾರೆ.
ವಿಡಿಯೋದಲ್ಲಿ ಏನಿದೆ?
'ಯಶ್ ಮಗನನ್ನು ಎತ್ತಿ ಮುದ್ದಾಡಿದ್ದಾರೆ, ನಂತರ ನೋಡು ನನ್ನ ಬೈಸೆಪ್ಸ್ ಎಂದಿದ್ದಾರೆ. ಯಥರ್ವ್ ಕೈ ಮುಟ್ಟಿ ಸೋ ಸಾಫ್ಟ್ ಎಂದಿದ್ದಾರೆ. ಯಶ್ ಶಾಕ್ ಆಗಿ ಏನು ಅಂತಾರೆ. ಸಾಫ್ಟ್ ಎಂದು, ನೀನು ತೋರಿಸು ಅಂತಾರೆ. ಆಗ ಯಥರ್ವ್ ತನ್ನ ಕೈ ತೋರಿಸಿ ಹಾರ್ಡ್ ಎಂದು ಹೇಳ್ತಾರೆ. ತುಂಬಾ ಹಾರ್ಡ್ ಇದೆಯಾ ಎಂದು ಯಶ್ ಕೇಳ್ತಾರೆ.
ಮತ್ತೆ ತಮ್ಮ ಕೈ ತೋರಿಸಿ ಇದು ಅಂತಾರೆ. ಯಥರ್ವ್ ಮತ್ತೆ ಸಾಫ್ಟ್ ಎನ್ನುತ್ತಾರೆ. ಇದೇ ರೀತಿ ಮೂರು, ನಾಲ್ಕು ಬಾರಿ ಅದನ್ನೇ ಕೇಳಿದ್ರೂ, ಯಥರ್ವ್ ಅದನ್ನೇ ಹೇಳ್ತಾರೆ. ಹೋ ನೀನು ಸೂಪರ್, ಯು ಆರ್ ದ ಸ್ಟ್ರಾಂಗೆಸ್ಟ್ ಎಂದು ಯಶ್ ಮಗನ ಬೆನ್ನು ತಟ್ಟಿ ಖುಷಿ ಆಗ್ತಾರೆ'.
View this post on Instagram
ಇದನ್ನೂ ಓದಿ: Kabzaa Song: ಅಬ್ಬರಿಸಿ ಬಂದ 'ಕಬ್ಜ'! ಉಪ್ಪಿ ಸಿನಿಮಾದ ಟೈಟಲ್ ಸಾಂಗ್ ಹೇಗಿದೆ ಗೊತ್ತಾ?
ಕೆಜಿಎಫ್ 2 ಸಿನಿಮಾ ಬಹಳ ದೊಡ್ಡ ಯಶಸ್ಸು ನೀಡಿದೆ. ವಿಶ್ವದಾದ್ಯಂತ ದಾಖಲೆಗಳನ್ನು ಮಾಡಿದೆ. ಕನ್ನಡ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾವಾಗಿದೆ. ಭರ್ಜರಿ ಯಶಸ್ಸು ಕಂಡಿದೆ. ಹಾಗಾಗಿ ಈ ಸಿನಿಮಾಗಳ ನಂತರ ಯಶ್ ಮುಂದೆ ಯಾವ ರೀತಿ ಸಿನಿಮಾ ಮಾಡ್ತಾರೆ ಎಂದು ಅಭಿಮಾನಿಗಳು ಕಾಯ್ತಾ ಇದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ