• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Rocking Star Yash: ರಾಕಿಂಗ್ ಸ್ಟಾರ್​ಗೆ ಏಪ್ರಿಲ್-14 ಸ್ಪೆಷಲ್ ಯಾಕೆ? ವರ್ಷದ ಹಿಂದೆ ಈ ದಿನ ಏನಾಗಿತ್ತು?

Rocking Star Yash: ರಾಕಿಂಗ್ ಸ್ಟಾರ್​ಗೆ ಏಪ್ರಿಲ್-14 ಸ್ಪೆಷಲ್ ಯಾಕೆ? ವರ್ಷದ ಹಿಂದೆ ಈ ದಿನ ಏನಾಗಿತ್ತು?

ವರ್ಷ ವರ್ಷಗಳು ಉರುಳಿದರೂ ಮುಗಿಯದ ಕೆಜಿಎಫ್ ಕ್ರೇಜ್!

ವರ್ಷ ವರ್ಷಗಳು ಉರುಳಿದರೂ ಮುಗಿಯದ ಕೆಜಿಎಫ್ ಕ್ರೇಜ್!

ಸ್ಯಾಂಡಲ್‌ವುಡ್ ರಾಕಿ ಭಾಯ್‌ಗೆ ಏಪ್ರಿಲ್-14 ಯಾಕೆ ಮಹತ್ವದ ದಿನ? ಈ ದಿನ ಅಸಲಿಗೆ ಆಗಿದ್ದೇನು? ರಾಕಿಂಗ್ ಸ್ಟಾರ್ ಯಶ್ ಚಿತ್ರ ಜೀವನದಲ್ಲಿ ಈ ದಿನ ಯಾಕೆ ಸ್ಪೆಷಲ್? ಈ ವಿಚಾರ ತಿಳಿಯಲು ಈ ಸ್ಟೋರಿ ಓದಿ.

 • News18 Kannada
 • 2-MIN READ
 • Last Updated :
 • Bangalore [Bangalore], India
 • Share this:

ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಜೀವನದಲ್ಲಿ (KGF-2 Movies Updates) ಕೆಜಿಎಫ್ ತುಂಬಾ ಮಹತ್ವದ ಸಿನಿಮಾನೇ ಆಗಿದೆ. ಈ ಚಿತ್ರ ಬರದೇ ಇದ್ದರೆ, ರಾಕಿ ಭಾಯ್ ಪಾತ್ರವೇ ಹುಟ್ಟುತ್ತಿರಲಿಲ್ಲ. ಪ್ಯಾನ್ ಇಂಡಿಯಾ (Rocking Star Yash Cinema) ಅನ್ನೋ ಕಲ್ಪನೆನೇ ಹುಟ್ಟುತ್ತಿರಲಿಲ್ಲ. ರಾಕಿಂಗ್ ಸ್ಟಾರ್ ಯಶ್ ರಾಕಿ ಭಾಯ್ ಆಗ್ತಾನೂ ಇರಲಿಲ್ಲ. ಆದರೆ ಸತತ ಪ್ರಯತ್ನದ ಫಲ, 2018 ರಲ್ಲಿ ಕೆಜಿಎಫ್ ಮೂಲಕ ರಾಕಿ ಭಾಯ್ ಹುಟ್ಟಿಯೇ ಬಿಟ್ಟ ನೋಡಿ, ಅದೇ ರಾಕಿ ಭಾಯ್ ಇಡೀ ಕನ್ನಡ ನಾಡನ್ನ ಇಡೀ ಜಗತ್ತಿಗೆ ಪರಿಚಯಿಸಿ (Yash Kannada Super Hit Movie) ಬಿಟ್ಟ ಅನ್ನೋದು ಅಷ್ಟೇ ಸತ್ಯ. ಕೆಜಿಎಫ್ ಸಿನಿಮಾದ ಮೊದಲ ಭಾಗ ಹುಟ್ಟಿಸಿದ್ದ ಆ ಕ್ರೇಜ್ ಕೆಜಿಎಫ್-2 ಬರೋವರೆಗೂ ಇತ್ತು.


ಕೆಜಿಎಫ್-2 ಸಿನಿಮಾ ಬಂದ್ಮೇಲೆ ಅದರ (KGF-2 Movie Untold Story) ಖದರ್ ಜೋರಾಯಿತು. ಹಾಗೆ ಕೆಜಿಎಫ್-2 ಚಿತ್ರದ ಬಗ್ಗೆ ಈಗ ಹೇಳಲಿಕ್ಕೆ ಒಂದು ಬಲವಾದ ಕಾರಣವೂ ಇದೆ. ಅದೇನೂ ಅನ್ನೋದು ಇಲ್ಲಿದೆ ಓದಿ.


Sandalwood Rocking Star Yash Acted KGF-2 Movie Untold Story
ಇದೀಗ ವಿಶ್ವ ಸಿನಿಮಾದ ಮೇಲೆ ರಾಕಿ ಭಾಯ್ ಕಣ್ಣು!


ಕೆಜಿಎಫ್ ರಾಕಿ ಭಾಯ್ ಚಿತ್ರ ಜೀವನದ ಮಹತ್ವದ ಸಿನಿಮಾ


ರಾಕಿಂಗ್ ಸ್ಟಾರ್ ಯಶ್ ಚಿತ್ರ ಜೀವನದ ಕೆಜಿಎಫ್ ಸಿನಿಮಾ ಮೋಡಿ ಇನ್ನೂ ಇದೆ. ಸಿನಿಮಾ ಬಂದು ಹೆಚ್ಚು ಕಡಿಮೆ ಐದು ವರ್ಷಗಳೇ ಆಗಿದೆ. ಆದರೂ ಈ ಚಿತ್ರದ ಕ್ರೇಜ್ ಕಡಿಮೆ ಆಗಿಲ್ಲ. ಕೆಜಿಎಫ್ ಚಿತ್ರದ ನಾಯಕ ನಟ ಯಶ್ ಎಲ್ಲೆ ಹೋದ್ರೂ ಕೆಜಿಎಫ್ ಸಿನಿಮಾ ನೆರಳು ಇದ್ದೇ ಇರುತ್ತದೆ.
ಜನರ ಮೇಲೆ ಇನ್ನೂ ಇದೆ ಕೆಜಿಎಫ್ ಸಿನಿಮಾ ಪ್ರಭಾವ


ಕೆಜಿಎಫ್ ಸಿನಿಮಾದ ಪ್ರಭಾವ ಅಷ್ಟರ ಮಟ್ಟಿಗೆ ಜನರ ಮನದಲ್ಲಿ ಆಳವಾಗಿಯೇ ಬೇರೂರಿದೆ. ಕನ್ನಡದ ಈ ಕೆಜಿಎಫ್ ಸಿನಿಮಾ ಕೇವಲ ಭಾರತ ದೇಶದಲ್ಲಿ ರಿಲೀಸ್ ಆಗಲಿಲ್ಲ, ಪರ ದೇಶದಲ್ಲೂ ರಿಲೀಸ್ ಆಗಿತ್ತು. ಪಕ್ಕದ ಪಾಕಿಸ್ತಾನದಲ್ಲೂ ಈ ಚಿತ್ರ ರಿಲೀಸ್ ಆಗಿ ಹೊಸ ದಾಖಲೆಯನ್ನ ಮಾಡಿತ್ತು.


ಕೆಜಿಎಫ್ ಸಿನಿಮಾದ ಕ್ರೇಜ್ ಕಡಿಮೆ ಆಗೋ ಮೊದಲೇ, ಕೆಜಿಎಫ್ ಸಿನಿಮಾದ ಭಾಗ ಎರಡು ರೆಡಿ ಆಯಿತು. ಹಾಗೆ ರೆಡಿಯಾದ ಈ ಚಿತ್ರಕ್ಕೆ ಚಿತ್ರ ನಿರ್ಮಾಣ ಸಂಸ್ಥೆ ಬರೋಬ್ಬರಿ 100 ಕೋಟಿಯಷ್ಟು ದುಡ್ಡು ಹಾಕಿದ್ದರು. ಅಷ್ಟು ದುಡ್ಡಿನ ಕೆಜಿಎಫ್-2 ಸಿನಿಮಾ ಏಪ್ರಿಲ್ ತಿಂಗಳ 14ನೇ ತಾರೀಖಿನಂದು ಎಲ್ಲೆಡೆ ರಿಲೀಸ್ ಆಯಿತು.


ವರ್ಷ ವರ್ಷಗಳು ಉರುಳಿದರೂ ಮುಗಿಯದ ಕೆಜಿಎಫ್ ಕ್ರೇಜ್!


ಹೌದು, ಕೆಜಿಎಫ್-2 ಸಿನಿಮಾ ರಿಲೀಸ್ ಆಗಿ ಸುಮ್ನೆ ಕಳೆದು ಹೋಗಲಿಲ್ಲ. ಕೆಜಿಎಫ್-2 ಹೊಸ ಮೋಡಿನೇ ಮಾಡಿತ್ತು. ಮೊದಲ ಸಿನಿಮಾಕ್ಕಿಂತಲೂ ಎರಡನೇ ಸಿನಿಮಾ ಜನರಿಗೆ ಇನ್ನಷ್ಟು ಕ್ರೇಜ್ ಹುಟ್ಟಿಸಿತ್ತು. ಚಿತ್ರದ ಒಂದಷ್ಟು ಸೀನ್‌ಗಳು ಈಗಲೂ ಹಲವು ಸಿನಿಮಾಗಳಿಗೆ ಸ್ಪೂರ್ತಿ ಆಗಿದೆ.
ಇಷ್ಟೊಂದು ಕ್ರೇಜ್ ಹುಟ್ಟಿಸಿದ್ದ ಕೆಜಿಎಫ್-2 ಸಿನಿಮಾ ಎಲ್ಲರ ಫೇವರಿಟ್ ಆಗಿದೆ. ಕೋಟಿ ಕೋಟಿ ಬಜೆಟ್‌ನ ಈ ಚಿತ್ರದ ಬಾಕ್ಸ್ ಆಫೀಸ್ ಅನ್ನ ಕೊಳ್ಳೆ ಹೊಡೆದಿತ್ತು. ಸಾವಿರಾರು ಕೋಟಿ ಕಲೆಕ್ಷನ್ ಮಾಡಿತ್ತು ಅನ್ನೋದು ಕೂಡ ಅತಿ ದೊಡ್ಡ ದಾಖಲೆಯೇ ಆಗಿದೆ.


ರಾಕಿ ಭಾಯ್ ಸಿನಿ ಜೀವನದ ಅತ್ಯದ್ಭುತ ಸಿನಿಮಾ


ಕೆಜಿಎಫ್-2 ಸಿನಿಮಾದಲ್ಲಿ ರಾಕಿ ಭಾಯ್ ಬದುಕಿನ ಮುಂದುವರೆದ ಅಧ್ಯಾಯ ಇದೆ. ಮೊದಲ ಅಧ್ಯಾಯದಲ್ಲಿ ನರಾಚಿ ವಶಪಡಿಸಿಕೊಳ್ಳುವ ಕಥೆ ಇತ್ತು. ಎರಡನೇ ಅಧ್ಯಾಯದಲ್ಲಿ ರಾಕಿಯ ಗೆಲುವಿನ ಅಟ್ಟಹಾಸವೇ ಇತ್ತು.


ಇದರಿಂದ ಕೆಜಿಎಫ್-2 ಸಿನಿಮಾ ಜನರಿಗೆ ಬೇರೆ ರೀತಿಯಲ್ಲಿಯೇ ಇಷ್ಟ ಆಯಿತು. ರಾಕಿ ಭಾಯ್ ಎಂಬ ಅಪ್ಪಟ ವಿಲನ್ ಇಡೀ ಸಿನಿಮಾರಂಗದಲ್ಲಿ ಹೊಸ ಅಲೆಯನ್ನ ಎಬ್ಬಿಸಿರೋದಂತೂ ಅಷ್ಟೇ ಸತ್ಯ ಅಂತಲೇ ಹೇಳಬಹುದು.


Sandalwood Rocking Star Yash Acted KGF-2 Movie Untold Story
ರಾಕಿ ಭಾಯ್ ಸಿನಿ ಜೀವನದ ಅತ್ಯದ್ಭುತ ಸಿನಿಮಾ


ಇದೀಗ ವಿಶ್ವ ಸಿನಿಮಾದ ಮೇಲೆ ರಾಕಿ ಭಾಯ್ ಕಣ್ಣು!


ಡೈರೆಕ್ಟರ್ ಪ್ರಶಾಂತ್ ನೀಲ್ ಈ ಮೂಲಕ ಕನ್ನಡ ನಾಡಿನ ರಾಕಿ ಭಾಯ್‌ನನ್ನ ಬೇರೆ ಲೆವಲ್‌ನಲ್ಲಿ ತೋರಿಸಿದರು. ಅದೆಷ್ಟು ಅಂದ್ರೆ, ರಾಕಿ ಭಾಯ್ ಇದೀಗ ಇಂಡಿಯನ್ ಸಿನಿಮಾ ಅನ್ನುತ್ತಿಲ್ಲ. ವಿಶ್ವ ಸಿನಿಮಾ ಅನ್ನೋ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ.


ರಾಕಿ ಭಾಯ್ ಅಭಿನಯದ ಹೊಸ ಸಿನಿಮಾ ಯಾವಾಗ ಅನ್ನೋ ಮಟ್ಟಿಗೆ ಕೆಜಿಎಫ್-2 ಸಿನಿಮಾ ಕ್ರೇಜ್ ಹುಟ್ಟಿಸಿದೆ. ಆ ಕ್ರೇಜ್ ಇನ್ನೂ ಹಾಗೇ ಇದೆ. ರಾಕಿಂಗ್ ಸ್ಟಾರ್ ಯಶ್ ತಮ್ಮ ಚಿತ್ರ ಜೀವನದ 19 ನೇ ಚಿತ್ರದ ತಯಾರಿಯಲ್ಲೂ ಇದ್ದಾರೆ.

ಇದನ್ನೂ ಓದಿ: Weekend With Ramesh: ಹೀರೋ ಅಂತಾನೂ ನೋಡಲಿಲ್ಲ, ಕೆಟ್ಟ ಪದ ಬಳಸಿ ಕರೆದ್ರು, ನೋವು ಹಂಚಿಕೊಂಡ ಡಾಲಿ!


ಏಪ್ರಿಲ್-14 ರಂದು ತಮ್ಮ ಮುಂದಿನ ಚಿತ್ರದ ಅನೌನ್ಸ್‌ಮೆಂಟ್ ಮಾಡ್ತಾರೆ ಅನ್ನೋ ನಿರೀಕ್ಷೆಯಲ್ಲೂ ಈಗಾಗಲೇ ಅನೇಕ ಅಭಿಮಾನಿಗಳು ಕಾಯ್ತಾ ಇದ್ದಾರೆ ಅಂತಲೇ ಹೇಳಬಹುದು.

First published: