Yash Birthday: ರಾಕಿಂಗ್​ ಸ್ಟಾರ್​ಗೆ 36ರ ಸಂಭ್ರಮ.. ಯಶ್​ ಬರ್ತ್​ಡೇ ರಾಜ್ಯದಲ್ಲಷ್ಟೇ ಅಲ್ಲ.. ದೇಶದೆಲ್ಲೆಡೆ ಸಂಭ್ರಮ!

Rocking Star Yash Birthday: ರಾಕಿಭಾಯ್​ ಹೆಸರಿಗೆ ಎಲ್ಲರ ಮುಖದಲ್ಲೂ ಬೆವರು ಬರುತ್ತೆ ಅಂದರೆ, ನಮ್ಮ ಕನ್ನಡ ನಟ ಯಶ್​ ಅವರ ರೇಂಜ್​ ಏನು ಅಂತ ಇಡೀ ವಿಶ್ವಕ್ಕೆ ಗೊತ್ತಿದೆ. ‘ರಾಜಧಾನಿ’ಯಲ್ಲಿ ‘ರಾಜಾಹುಲಿ’ ಇವರು.. ‘ಕಳ್ಳರ ಸಂತೆ’ಯಲ್ಲಿ ‘ಕಿರಾತಕ’.. ಅಭಿಮಾನಿಗಳ ಪ್ರೀತಿಯಲ್ಲಿ ಅಣ್ತಮ್ಮ ಇವರು..

ರಾಕಿಂಗ್​ ಸ್ಟಾರ್​ ಯಶ್​

ರಾಕಿಂಗ್​ ಸ್ಟಾರ್​ ಯಶ್​

  • Share this:
Rocking Star Yash Birthday: ಕಾಲರು ಎತ್ತು ಗುರೂ.. ಯಶ್​ ಬಾಸು ಬಂದ್ರೂ  ಗುರೂ.. ರಾ..ರಾ.. ರಾಕಿ.. ಇನ್ನೇನಿದೆ ಬಾಕಿ.. ಎಲ್ಲರನ್ನೂ ನೂಕಿ.. ಸೆಲ್ಯೂಟ್​ ಹಾಕಿ.. ಕನ್ನಡದ ಕಿರೀಟ ಇವರು ನಮ್ಮ ರಾಕಿಂಗ್ ಸ್ಟಾರ್(Rocking Star)​.. ಸ್ಯಾಂಡಲ್​ವುಡ್(Sandalwood)​ನಲ್ಲಿ ಅಂದು ಆ ನಟ​ ಕ್ರಿಯೇಟ್​ ಮಾಡಿದ​​ ಹವಾ.. ಅಬ್ಬಬ್ಬಾ.. ಇಂದಿಗೂ ರೇಂಜ್​​​(Range) ಕಿಂಚಿತ್ತು ಕಡಿಮೆಯಾಗಿಲ್ಲ. ಮೈಸೂರಿ(Mysore)ನಿಂದ ನಟನಾಗಬೇಕೆಂದು ಬಟ್ಟೆ ಬ್ಯಾಗ್​ ನೇತುಹಾಕಿಕೊಂಡು ಬೆಂಗಳೂರಿಗೆ ಬಂದ ಆ ಯುವಕನಿಗೆ, ಮುಂದೊಂದು ದಿನ ತಾನೂ ಇಷ್ಟು ದೊಡ್ಡ ಸ್ಟಾರ್(Big Star)​ ಆಗುತ್ತೇನೆ ಎಂದು ಅಂದುಕೊಂಡಿರಲಿಲ್ಲ ಅನ್ಸುತ್ತೆ. ಕನ್ನಡ ಸಿನಿಮಾಗಳ ಬಗ್ಗೆ ಕೇವಲವಾಗಿ ಮಾತನಾಡುತ್ತಿದ್ದವರಿಗೆ ಗಪ್​ ಚುಪ್​ ಮಾಡಿಸಿದ್ದು ಇವರೇ.. ಕನ್ನಡ ಸಿನಿಮಾಗಳಿಗೆ ಬೇರೆ ರಾಜ್ಯ, ದೇಶದಲ್ಲಿ ಮಾರ್ಕೆಟ್(Market)​ ಕ್ರಿಯೇಟ್​​​ ಮಾಡಿದ್ದು ಇದೇ ನಟ. ಹೇಳಿದ ಹಾಗೇ ಎಲ್ಲವನ್ನು ಮಾಡಿಕೊಂಡು ಹೋಗುತ್ತಿರುವವರು ಅಂದರೆ ಇವರೊಬ್ಬರೇ. ಹೌದು, ನಾವು ಇಲ್ಲಿ ಹೇಳುತ್ತಿರುವುದು ರಾಕಿಂಗ್​ ಸ್ಟಾರ್​(Rocking Star).. ಅಲ್ಲ.. ಅಲ್ಲ.. ಈಗ ನ್ಯಾಷನಲ್​ ಸ್ಟಾರ್​(National Star) ಆಗಿರುವ ಯಶ್(Yash)​ ಅವರ ಬಗ್ಗೆ. ರಾಕಿ ಭಾಯ್(Rocky Bhai)​ ಅಂದರೆ ಒಂದು ಗತ್ತಿದೆ, ಅದು ಎಲ್ಲರಿಗೂ ಗೊತ್ತಿದೆ. ರಾಕಿ ಭಾಯ್​ ಬಗ್ಗೆ ಇಂಟ್ರಡಕ್ಷನ್(Introduction)​ ಕೊಡುವ ಕಾಲ ಎಲ್ಲ ಹೋಯಿತು. ರಾಕಿಂಗ್​ ಸ್ಟಾರ್​ ಎಂದರೆ ಸಾಕು ಎಲ್ಲರೂ ಜೈಕಾರ ಹಾಕುತ್ತಾರೆ. ನೋಡ ನೋಡುತ್ತಿದ್ದಂತೆ ನಟನಾಗಬೇಕೆಂದು ಬಂದಿದ್ದ ಯುವಕ, ದೇಶ-ವಿದೇಶಗಳಲ್ಲಿಯೂ ತಮ್ಮ ಹೆಸರಿಗೆ ಒಂದದೆ ರೇಂಜ್ ಸೃಷ್ಟಿಸಿದ್ದಾರೆ. ಹೌದು, ಸ್ಯಾಂಡಲ್​ವುಡ್​ ರಾಕಿಂಗ್​ ಸ್ಟಾರ್​, ನಮ್ಮ, ನಿಮ್ಮೆಲ್ಲರ ಪ್ರೀತಿಯ ಯಶ್​ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಇಂದು 36ನೇ ವಸಂತಕ್ಕೆ ರಾಕಿ ಭಾಯ್​ ಕಾಲಿಟಿದ್ದಾರೆ. ಈ ದಿನವನ್ನು ಕೇವಲ ರಾಜ್ಯವಷ್ಟೇ ಅಲ್ಲ, ಇಡೀ ದೇಶವೇ ಯಶ್​ ಅವರ ಹುಟ್ಟುಹಬ್ಬವನ್ನು ಸಂಭ್ರಮಿಸುತ್ತಿದೆ.

36ನೇ ವಸಂತಕ್ಕೆ ಕಾಲಿಟ್ಟ ‘ರಾಕಿಭಾಯ್​’

2007ರಲ್ಲಿ ತೆರೆಗೆ ಬಂದ 'ಜಂಬದ ಹುಡುಗಿ' ಚಿತ್ರದ ಮೂಲಕ ಚಂದನವನ ಪ್ರವೇಶಿಸಿದ ಯಶ್ 2014ರಲ್ಲಿ ತೆರೆಗೆ ಬಂದ 'Mr & Mrs ರಾಮಾಚಾರಿ' ಬಾಕ್ಸ್ ಆಫೀಸ್​​ನಲ್ಲಿ ಐವತ್ತು ಕೋಟಿಗೂ ಹೆಚ್ಚು ಗಳಿಕೆ ಕಂಡು ದಾಖಲೆ ಬರೆಯಿತು. ಇದಾದ ಬಳಿಕ ‘ಕೆಜಿಎಫ್ ಚಾಪ್ಟರ್​ 1’ 2018 ಡಿಸೆಂಬರ್‌ನಲ್ಲಿ ತೆರೆಕಂಡ ಈ ಚಿತ್ರ ಬಿಡುಗಡೆಯಾದ ಐದು ದಿನಗಳಲ್ಲಿ 100 ಕೋಟಿ ಗಳಿಕೆ ಕಂಡು ಕನ್ನಡ ಚಿತ್ರರಂಗದಲ್ಲಿ ಹೊಸ ಪರ್ವಕ್ಕೆ ನಾಂದಿ ಹಾಡಿತು. ಈ ಚಿತ್ರದ ಮೂಲಕ ನ್ಯಾಷನಲ್​ ಸ್ಟಾರ್​ ಆಗಿ ಯಶ್​ ಮಿಂಚಿದರು. ಇವರು ಮಾಡಿದ ಸಿನಿಮಾಗಳೆಲ್ಲ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ. ಇವರನ್ನು ಕಂಡರೇ ಜನರಿಗೆ ಅದೇನೋ ಪ್ರೀತಿ. ನಮ್ಮನೆ ಮಗ ಎನ್ನಿಸುವ ಭಾವನೆ.


ಇದನ್ನು ಓದಿ: ರಾಕಿ ಭಾಯ್​ ಎದುರು ತೊಡೆ ತಟ್ಟಿದ ಮತ್ತೊಬ್ಬ ಸ್ಟಾರ್​ ನಟ: ಪ್ಲೀಸ್..​ ತಪ್ಪು ಮಾಡ್ಬೇಡಿ ಅಂದಿದ್ಯಾಕೆ ಫ್ಯಾನ್ಸ್​?

ಕಳೆದ ವರ್ಷದಂತೆ ಹುಟ್ಟುಹಬ್ಬ ಆಚರಿಸಿಕೊಳ್ಳದ ಯಶ್​!

ಪವರ್​ ಇಲ್ಲದೇ ಚಂದನವನವೆಲ್ಲ ಕತ್ತಲಾಗಿದೆ. ಹೌದು, ಪುನೀತ್​ ರಾಜ್​ಕುಮಾರ್​ ಇಲ್ಲದೇ ಸ್ಯಾಂಡಲ್​ವುಡ್​ ಬರಿದಾಗಿದೆ. ಅಪ್ಪು ನಮ್ಮಂದಿಗೆ ಇಲ್ಲ ಅನ್ನುವುದನ್ನು ಇಂದಿಗೂ ನಂಬಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸ್ಯಾಂಡಲ್​ವುಡ್​ ಯಾವ ನಟರು ಕೂಡ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದರು. ಕಳೆದ ತಿಂಗಳು ಶ್ರೀ ಮುರುಳಿ ಕೂಡ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದರು. ಇದೀಗ ಯಶ್​ ಕೂಡ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ತಮ್ಮ ಅಭಿಮಾನಿಗಳಗೆ ಕೆಲ ದಿನಗಳ ಹಿಂದೆಯೇ ಮನವಿ ಮಾಡಿಕೊಂಡಿದ್ದಾರೆ. ವೀಕೆಂಡ್​ ಕರ್ಫ್ಯೂ ಇರುವುದರಿಂದ ಅಭಿಮಾನಿಗಳು ಮನೆ ಬಳಿ ಬರುವುದಿಲ್ಲ ಎಂದು ಹೇಳಲಾಗುತ್ತಿದೆ. ಆದರೂ ಅಭಿಮಾನಿಗಳ ಬಗ್ಗೆ ನಿಮಗೆ ಗೊತ್ತಿದೆ.

ಇದನ್ನು ಓದಿ : ಈ ವರ್ಷ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಕೆಜಿಎಫ್​-2: ಕಂಪ್ಲೀಟ್​ ಡೀಟೆಲ್ಸ್​ ಇಲ್ಲಿದೆ..

ಕೆಜಿಎಫ್ 2 ಸಿನಿಮಾಗಾಗಿ ಇಡೀ ವಿಶ್ವವೇ ಕಾಯುತ್ತಿದೆ!

ಕೆಜಿಎಫ್​ ಎಂಬ ಒಂದು ಸಿನಿಮಾದಿಂದ ಕನ್ನಡ ಚಿತ್ರರಂಗದ ಹೆಸರೇ ಬದಲಾಯಿತು. ರಾಕಿಂಗ್​ ಸ್ಟಾರ್​ ಯಶ್​ ಅವರ ರೇಂಜ್​ ಬದಲಾಗಿತ್ತು. ಕೆಜಿಎಫ್​ ಬರೆದ ದಾಖಲೆಗಳನ್ನು ಮುರಿಯುವುದಿರಲಿ, ಅದರ ಹತ್ತಿರಕ್ಕೂ ಬರಲು ಯಾರಿಂದಲೂ ಸಾಧ್ಯವಾಗಿಲ್ಲ. ಕೆಜಿಎಫ್​ ಚಾಪ್ಟರ್​ 2 ಸಿನಿಮಾ ಏಪ್ರಿಲ್​ 14 ರಂದು ತೆರೆಗೆ ಬರಲಿದೆ. ಈ ಸಿನಿಮಾ ನೋಡಲು ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದೆ. ಏಪ್ರಿಲ್​ನಲ್ಲಿ ತೆರೆಗೆ ಬರಲು ಸಿದ್ಧವಾಗಿರುವ ಬೇರೆ ಭಾಷೆಯ ಬಿಗ್​ ಬಜೆಟ್​ ಸಿನಿಮಾಗಳಿಗೆ ಅವರ ಅಭಿಮಾನಿಗಳೇ ಎಚ್ಚರಿಕೆ ಕೊಟ್ಟಿದ್ದಾರೆ. ದಯವಿಟ್ಟು ಕೆಜಿಎಫ್​ 2 ಮುಂದೆ ಸಿನಿಮಾ ರಿಲೀಸ್ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಕೇವಲ ರಾಕಿಭಾಯ್​ ಹೆಸರಿಗೆ ಎಲ್ಲರ ಮುಖದಲ್ಲೂ ಬೆವರು ಬರುತ್ತೆ ಅಂದರೆ, ನಮ್ಮ ಕನ್ನಡ ನಟ ಯಶ್​ ಅವರ ರೇಂಜ್​ ಏನು ಅಂತ ಇಡೀ ವಿಶ್ವಕ್ಕೆ ಗೊತ್ತಿದೆ. ‘ರಾಜಧಾನಿ’ಯಲ್ಲಿ ‘ರಾಜಾಹುಲಿ’ ಇವರು.. ‘ಕಳ್ಳರ ಸಂತೆ’ಯಲ್ಲಿ ‘ಕಿರಾತಕ’.. ಅಭಿಮಾನಿಗಳ ಪ್ರೀತಿಯಲ್ಲಿ ಅಣ್ತಮ್ಮ ಇವರು..
Published by:Vasudeva M
First published: