Kiccha Sudeep​ ಮಾತಿಗೆ ದನಿಗೂಡಿಸಿದ ಸ್ಯಾಂಡಲ್​ವುಡ್​, ಕಣ ಕಣದಲ್ಲೂ 'ಉರಿ'ತ್ತಿದ್ಯಾ ಎಂದ ಕನ್ನಡಿಗರು!

ಹಿಂದಿ ರಾಷ್ಟ್ರಭಾಷೆ ವಿಚಾರದಲ್ಲಿ ಸುದೀಪ್​​-ದೇವಗನ್​ ವಾರ್​ ವಿಚಾರಕ್ಕೆ ಸಂಬಂಧಿಸಿದಂತೆ ಕಿಚ್ಚನ ಬೆಂಬಲಕ್ಕೆ ಕನ್ನಡಿಗರು ನಿಂತಿದ್ದಾರೆ.  ಪಾಲಿಟಿಕ್ಸ್​ನಿಂದ ಟಾಲಿವುಡ್​ವರೆಗೂ ಸಾಥ್​​​​ ಸಿಕ್ಕಿದ್ದು, ಕನ್ನಡಿಗರ ಕೆಣಕಿದ ದೇವಗನ್​​ ಕಂಗಾಲಾಗಿದ್ದಾರೆ.

ಅಜಯ್​ ದೇವಗನ್​, ಕಿಚ್ಚ ಸುದೀಪ್​

ಅಜಯ್​ ದೇವಗನ್​, ಕಿಚ್ಚ ಸುದೀಪ್​

  • Share this:
ಭಾರತದ ರಾಷ್ಟ್ರ ಭಾಷೆಯ ಬಗ್ಗೆ ಸೂಪರ್ ಸ್ಟಾರ್ ಕಿಚ್ಚ ಸುದೀಪ್ (Kiccha Sudeep ) ಅವರ ಕಾಮೆಂಟ್‌ಗೆ ಅಜಯ್ ದೇವಗನ್ (ajay devgan) ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದರು. ಹಿಂದಿ ನಮ್ಮ ರಾಷ್ಟ್ರಭಾಷೆಯಲ್ಲ ಎಂದು ಸುದೀಪ್ ಹೇಳಿದ ಮಾತಿಗೆ, ಹಾಗಾದರೆ ಹಿಂದಿ ಭಾಷೆಯಲ್ಲೇಕೆ ನಿಮ್ಮ ಚಿತ್ರಗಳನ್ನು ಡಬ್ (Dub) ಮಾಡುತ್ತೀರಿ ಎಂದು ಸಂಪೂರ್ಣ ಹಿಂದಿಯಲ್ಲಿಯೇ ಬರೆದ ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದರು. ಆದರೆ, ಅಜಯ್ ದೇವಗನ್ ಅವರ ಟ್ವೀಟ್ ಗೆ  (Tweet) ಸುದೀಪ್ ಕೂಡ ತಕ್ಕ ಉತ್ತರ ನೀಡಿದ್ದರು. ಹಿಂದಿ ರಾಷ್ಟ್ರಭಾಷೆ ವಿಚಾರದಲ್ಲಿ ಸುದೀಪ್​​-ದೇವಗನ್​ ವಾರ್​ ವಿಚಾರಕ್ಕೆ ಸಂಬಂಧಿಸಿದಂತೆ ಕಿಚ್ಚನ ಬೆಂಬಲಕ್ಕೆ ಕನ್ನಡಿಗರು ನಿಂತಿದ್ದಾರೆ.   ಪಾಲಿಟಿಕ್ಸ್​ನಿಂದ ಟಾಲಿವುಡ್​ವರೆಗೂ ಸಾಥ್​​​​ ಸಿಕ್ಕಿದ್ದು, ಕನ್ನಡಿಗರ ಕೆಣಕಿದ ದೇವಗನ್​​ ಕಂಗಾಲಾಗಿದ್ದಾರೆ.

ಅಜಯ್ ದೇವ್‌ಗನ್‌ಗೆ ತಿರುಗೇಟು ನೀಡಿದ ನಟಿ ರಮ್ಯಾ

ಕಿಚ್ಚನ ಪರವಾಗಿ ಇಡೀ ಕರುನಾಡಿನ ಜನರು ನಿಂತಿದ್ದಾರೆ. ರಾಜಕಾರಣಿಗಳು ಹಾಗೂ ಸಿನಿಮಾರಂಗದ ಗಣ್ಯರು ಕೂಡ ಕಿಚ್ಚನಿಗೆ ಸಾಥ್​ ಕೊಟ್ಟಿದ್ದಾರೆ. 'ಇಲ್ಲ, ಹಿಂದಿ ನಮ್ಮ ರಾಷ್ಟ್ರಭಾಷೆ ಅಲ್ಲ. ಅಜಯ್ ದೇವ್‌ಗನ್ ನಿಮ್ಮ ಅಜ್ಞಾನವು ದಿಗ್ಭ್ರಮೆಗೊಳಿಸುವಂತಿದೆ. 'ಕೆಜಿಎಫ್', 'ಪುಷ್ಪ', 'ಆರ್‌ಆರ್‌ಆರ್‌'ನಂತಹ ಸಿನಿಮಾಗಳು ಹಿಂದಿ ಏರಿಯಾಗಳಲ್ಲಿ ಉತ್ತಮ ಪ್ರದರ್ಶನ ಕಂಡಿರುವುದು ಖುಷಿಯಾದ ವಿಷಯ. ಕಲೆಗೆ ಯಾವುದೇ ಭಾಷೆಯ ಗಡಿ ಇಲ್ಲ. ನಾವು ನಿಮ್ಮ ಸಿನಿಮಾಗಳನ್ನು ನೋಡಿ ಎಂಜಾಯ್ ಮಾಡಿದಂತೆಯೇ, ದಯವಿಟ್ಟು ನಮ್ಮ ಸಿನಿಮಾಗಳನ್ನು ನೋಡಿ ಎಂಜಾಯ್‌ ಮಾಡಿ.. ಹಿಂದಿ ಹೇರಿಕೆ ನಿಲ್ಲಿಸಿ..' ಎಂದು ಟ್ವೀಟ್ ಮೋಹಕ ತಾರೆ ರಮ್ಯಾ ಟ್ವೀಟ್​ ಮಾಡಿದ್ದಾರೆ.


ಕಿಚ್ಚನಿಗೆ ನಟ ಸತೀಶ್​ ನೀನಾಸಂ ಬೆಂಬಲ!

ಹಿಂದಿ ನಮ್ಮ ರಾಷ್ಟ್ರೀಯ ಭಾಷೆ ಅಲ್ಲ ಎಂದ ಕಿಚ್ಚನಿಗೆ ಸತೀಶ್ ನೀನಾಸಂ ಬೆಂಬಲ‌ ಕೊಟ್ಟಿದ್ದಾರೆ. "ಹಿಂದಿ ನಮ್ಮ ರಾಷ್ಟೀಯ ಭಾಷೆ ಎಂದು ಬಹಳಷ್ಟು ಜನ ತಪ್ಪಾಗಿ ತಿಳ್ಕೋಂಡಿದ್ದಾರೆ. ಇದು ಎಲ್ಲಿ ಹೇಗೆ ಹುಟ್ಟಿಕೊಳ್ತೋ ಗೊತ್ತಿಲ್ಲ. ಅಲ್ಲದೆ ಹಿಂದಿ ನಮ್ಮ ರಾಷ್ಟ್ರೀಯ ಭಾಷೆ ಅಂತ ಕಾನೂನಿನಲ್ಲಿ ಉಲ್ಲೇಖ ಆಗಿಲ್ಲ. ಅಜಯ್ ದೇವಗನ್ ಅವರು ಕನ್ನಡ ಸಿನಿಮಾ ಹಿಂದಿಗೆ ಡಬ್ ಆಗ್ತಿಲ್ವ ಅಂತ ಕೇಳಿದ್ದಾರೆ. ನಮ್ಮ ಕನ್ನಡಕ್ಕೆ ಎಲ್ಲಾ ಭಾಷೆಯ ಸಿನಿಮಾಗಳು ಡಬ್ ಆಗ್ತವೆ, ಒಳ್ಳೆ ಸಿನಿಮಾಗಳನ್ನು ನಾವು ಒಪ್ಪಿ ಅಪ್ರಿಶಿಯೇಟ್ ಮಾಡಿದ್ದೇವೆ. ಒಬ್ಬ ಕಲಾವಿದನಿಗೆ ,ಕಲೆಗೆ ಭಾಷೆ ಎಂಬುದು ಇರಲ್ಲ. ಹಿಂದಿ ಮಾತನಾಡಿ ಎಂದಿ ಹೇಳುವ ಹಕ್ಕಿಲ್ಲ" ಎಂದು ಅಜಯ್ ದೇವಗನ್​ಗೆ ಟಾಂಗ್​ ಕೊಟ್ಟಿದ್ದಾರೆ.

ಇದನ್ನೂ ಓದಿ: Kiccha Sudeep ಗೆ ಹೆಚ್ಚಾಯ್ತು ಬೆಂಬಲ, ಕಿಚ್ಚನ ಬೆನ್ನಿಗೆ ನಿಂತ ಸಿಎಂ ಬೊಮ್ಮಾಯಿ ಹೇಳಿದ್ದೇನು?

ಶ್ರೀನಗರ ಕಿಟ್ಟಿ ಹೇಳಿದ್ದೇನು?

" ಹಿಂದಿ ಯಾವಾಗಲೂ ನಮ್ಮ ರಾಷ್ಟ್ರೀಯ ಭಾಷೆ ಆಗಿರಲಿಲ್ಲ. ಅದೇ ಟ್ವೀಟ್" ಎಂದು ಕನ್ನಡದ ನಟ ಶ್ರೀನಗರ ಕಿಟ್ಟಿ ಖಡಕ್ ಆಗಿ ಟ್ವೀಟ್ ಮಾಡಿದ್ದು, ಕಿಚ್ಚ ಸುದೀಪ್ ಬೆಂಬಲಕ್ಕೆ ನಿಂತಿದ್ದಾರೆ.

ಇದನ್ನೂ ಓದಿ: Ajay Devgn ವಿರುದ್ಧ 'ದಳಪತಿ' ಗರಂ, ಕಿಚ್ಚನ ಕೆಚ್ಚಿನ ನುಡಿಗೆ ಕುಮಾರಸ್ವಾಮಿ ಸಾಥ್​!

ಕಿಚ್ಚನಿಗೆ ಪರಭಾಷೆ ನಿರ್ದೇಶಕ ಆರ್​ಜಿವಿ ಸಾಥ್​!

ಸುದೀಪ್‌ಗೆ ಪ್ರತ್ಯೇಕ ಟ್ವೀಟ್‌ ಮಾಡಿರುವ ವರ್ಮಾ, ''ಸುದೀಪ್ ಅವರೆ, ಸತ್ಯವೆಂದರೆ ಬಾಲಿವುಡ್ ಸ್ಟಾರ್ ನಟರು ದಕ್ಷಿಣ ಭಾರತದ ಸಿನಿಮಾ ಸ್ಟಾರ್ ನಟರ ಬಗ್ಗೆ ಅಸೂಯೆ ಹೊಂದಿದ್ದಾರೆ. 'ಕೆಜಿಎಫ್ 2' ಸಿನಿಮಾ ಮೊದಲ ದಿನವೇ 50 ಕೋಟಿ ಕಲೆಕ್ಷನ್ ಮಾಡಿದ್ದಕ್ಕೆ ಅವರಿಗೆ ಉರಿ ಎದ್ದಿದೆ. ಹಿಂದಿ ಸಿನಿಮಾಗಳು ಇಂಥಹಾ ಓಪನಿಂಗ್ ಅನ್ನು ಪಡೆದುಕೊಳ್ಳಲಾರವು'' ಎಂದಿದ್ದಾರೆ.
Published by:Vasudeva M
First published: