Shivaji Suratkal Teaser: ಕೊಲೆಯ ಜಾಡು ಹಿಡಿದು ಹೊರಟ ರಮೇಶ್ ಅರವಿಂದ್; ಶಿವಾಜಿ ಸುರತ್ಕಲ್​ನಲ್ಲಿ ನಿಗೂಢಗಳ ಗುಚ್ಛ

Shivaji Suratkal Teaser: ಇದುವರೆಗೂ ಮಾಡಿರದ ಪಾತ್ರದಲ್ಲಿ ರಮೇಶ್ ಅರವಿಂದ್ ಕಾಣಿಸಿಕೊಂಡಿರುವುದು ಈ ಸಿನಿಮಾದ ವಿಶೇಷತೆಗಳಲ್ಲೊಂದು. ಶಿವಾಜಿ ಸುರತ್ಕಲ್- ದಿ ಕೇಸ್ ಆಫ್​ ರಣಗಿರಿ ರಹಸ್ಯ ಎಂಬ ಅಡಿಬರಹವಿರುವ ಈ ಸಿನಿಮಾವನ್ನು ಆಕಾಶ್ ಶ್ರೀವತ್ಸ ಎಂಬುವವರು ನಿರ್ದೇಶಿಸಿದ್ದಾರೆ.

Sushma Chakre | news18-kannada
Updated:September 11, 2019, 10:54 PM IST
Shivaji Suratkal Teaser: ಕೊಲೆಯ ಜಾಡು ಹಿಡಿದು ಹೊರಟ ರಮೇಶ್ ಅರವಿಂದ್; ಶಿವಾಜಿ ಸುರತ್ಕಲ್​ನಲ್ಲಿ ನಿಗೂಢಗಳ ಗುಚ್ಛ
ಶಿವಾಜಿ ಸುರತ್ಕಲ್ ಸಿನಿಮಾದ ಟೀಸರ್
Sushma Chakre | news18-kannada
Updated: September 11, 2019, 10:54 PM IST
100 ಸಿನಿಮಾಗಳ ಸರದಾರ, ಕನ್ನಡ ಚಿತ್ರರಂಗದಲ್ಲಿ ತ್ಯಾಗಮಯಿ ಎಂದೇ ಕರೆಸಿಕೊಳ್ಳುವ  ರಮೇಶ್ ಅರವಿಂದ್ ಕನ್ನಡ ಚಿತ್ರರಂಗದಲ್ಲಿ ಉತ್ತುಂಗದಲ್ಲಿದ್ದ ನಾಯಕ ನಟ.  ಚಿತ್ರರಂಗಕ್ಕೆ ಬಂದು 35 ವರ್ಷಗಳೇ ಕಳೆದಿದ್ದರೂ ಇನ್ನೂ ಅವರ ವರ್ಚಸ್ಸು ಕಡಿಮೆಯಾಗಿಲ್ಲ. ಅವರ 101ನೇ ಸಿನಿಮಾ 'ಶಿವಾಜಿ ಸುರತ್ಕಲ್' ಟೀಸರ್ ಬಿಡುಗಡೆಯಾಗಿದೆ. ನಿನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ರಮೇಶ್​ ಅರವಿಂದ್​ಗೆ ಈ ಟೀಸರ್ ಅನ್ನೇ ಚಿತ್ರತಂಡ ಉಡುಗೊರೆಯಾಗಿ ನೀಡಿದೆ. 

ಆರಂಭದಲ್ಲಿ ತ್ಯಾಗಮಯಿ ನಟನಾಗಿ ಕಾಣಿಸಿಕೊಂಡು ಟ್ರಾಜಿಡಿ ಹೀರೋ ಎನಿಸಿಕೊಂಡಿದ್ದ ರಮೇಶ್ ಅರವಿಂದ್ ನಂತರ ಕಾಮಿಡಿ ಪಾತ್ರಗಳಲ್ಲಿ ಕಾಣಿಸಿಕೊಳ್ಳತೊಡಗಿದರು. ಬಳಿಕ, ಡೈರೆಕ್ಟರ್​ ಕ್ಯಾಪ್ ಕೂಡ ಧರಿಸಿದ ಅವರು ಏಳೆಂಟು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. 'ವೀಕೆಂಡ್ ವಿಥ್ ರಮೇಶ್' ಮೂಲಕ ಕಿರುತೆರೆಗೂ ಪ್ರವೇಶ ಮಾಡಿದ ರಮೇಶ್ ಸಿನಿಮಾ ಜೊತೆಗಿನ ನಂಟನ್ನು ಹಾಗೇ ಉಳಿಸಿಕೊಂಡಿದ್ದಾರೆ.



ಪೋಸ್ಟರ್​ನಿಂದಲೇ ಕುತೂಹಲ ಕೆರಳಿಸಿದ್ದ ಶಿವಾಜಿ ಸುರತ್ಕಲ್ ಸಿನಿಮಾದಲ್ಲಿ ರಮೇಶ್ ಅರವಿಂದ್ ಪತ್ತೇದಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. 'ರಂಗಿತರಂಗ', 'ಕಾಫಿತೋಟ', 'ಯೂ- ಟರ್ನ್'​ ನಂತರ ಮತ್ತೊಮ್ಮೆ ರಾಧಿಕಾ ಚೇತನ್ ಸಸ್ಪೆನ್ಸ್​ ಕಥಾಹಂದರವಿರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿನ್ನೆ ಸಂಜೆ ರಿಲೀಸ್ ಆಗಿರುವ ಈ ಸಿನಿಮಾದ ಟೀಸರ್​ಗೆ ಸಾಮಾಜಿಕ ಜಾಲತಾಣದಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆರೋಹಿ ನಾರಾಯಣ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಕೆ.ಜಿ.ಎಫ್ ನಿರ್ದೇಶಕನಿಗೆ ಬಂಪರ್ ಆಫರ್: ಬಾಹುಬಲಿಯನ್ನೇ ಮೀರಿಸೋ ಚಿತ್ರಕ್ಕೆ ಆ್ಯಕ್ಷನ್ ಕಟ್?

ಇದುವರೆಗೂ ಮಾಡಿರದ ಪಾತ್ರದಲ್ಲಿ ರಮೇಶ್ ಅರವಿಂದ್ ಕಾಣಿಸಿಕೊಂಡಿರುವುದು ಈ ಸಿನಿಮಾದ ವಿಶೇಷತೆಗಳಲ್ಲೊಂದು. 'ಶಿವಾಜಿ ಸುರತ್ಕಲ್- ದಿ ಕೇಸ್ ಆಫ್​ ರಣಗಿರಿ ರಹಸ್ಯ' ಎಂಬ ಅಡಿಬರಹವಿರುವ ಈ ಸಿನಿಮಾವನ್ನು ಆಕಾಶ್ ಶ್ರೀವತ್ಸ ಎಂಬುವವರು ನಿರ್ದೇಶಿಸಿದ್ದಾರೆ. ಈ ಸಸ್ಪೆನ್ಸ್​ ಥ್ರಿಲ್ಲರ್ ಸಿನಿಮಾದ ಶೂಟಿಂಗ್ ಮುಗಿದು ಡಬ್ಬಿಂಗ್ ಕೂಡ ಕೊನೆಯ ಹಂತದಲ್ಲಿದೆ. ಜೂಡಾ ಸ್ಯಾಂಡಿ ನಿರ್ದೇಶನವಿರುವ ಈ ಸಿನಿಮಾದ ಟೀಸರ್ ಇನ್ನಷ್ಟು ಕುತೂಹಲ ಕೆರಳಿಸಿದೆ. ಒಂದು ಕೊಲೆಯ ಸುತ್ತ ನಡೆಯುವ ಕಥೆಯೇ 'ಶಿವಾಜಿ ಸುರತ್ಕಲ್'.
First published:September 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...