Actress Ramya: ಹೊಂಬಾಳೆ ಫಿಲ್ಸ್ಮ್​ ಮೂಲಕ ರಮ್ಯಾ ಕಮ್​ ಬ್ಯಾಕ್, ಪುನೀತ್ ಆಸೆ ಈಡೇರಿಸುತ್ತಾ ಸಂಸ್ಥೆ​?

Sandalwood Queen Ramya: ರಮ್ಯಾ ಈ ಹಿಂದೆಯೂ ಕೂಡ ಕೆ.ಆರ್.ಜಿ ಸ್ಟುಡಿಯೋ ನಿರ್ಮಾಣ ಮಾಡುತ್ತಿರುವ ಹೊಯ್ಸಳ ಸಿನಿಮಾದ ಶೂಟಿಂಗ್ ಸ್ಥಳಕ್ಕೆ ಸಹ  ಭೇಟಿ ನೀಡಿದ್ದರು.  ಪದೇ ಪದೇ ರಮ್ಯಾ ಕೆ.ಆರ್.ಜಿ ಸ್ಟುಡಿಯೋಗೆ ಭೇಟಿ ನೀಡುತ್ತಿರುವುದು ಕುತೂಹಲ ಮೂಡಿಸಿದೆ.

ನಟಿ ರಮ್ಯಾ

ನಟಿ ರಮ್ಯಾ

  • Share this:
ರಮ್ಯಾ ದಿವ್ಯ ಸ್ಪಂದನಾ (Ramya Divya Spandana).. ಈ ಹೆಸರು ಕೇಳಿದ ತಕ್ಷಣ ಕನ್ನಡ (Kannada) ಸಿನಿ ರಸಿಕರ ಮನಸ್ಸು ಸಂತೋಷದಿಂದ ಕುಣಿಯುತ್ತದೆ. ಮನಮೋಹಕ ಅಭಿನಯದಿಂದ (Acting) ಕನ್ನಡ ಕಲಾ ರಸಿಕರ ಮನಗೆದ್ದು ಮೋಹಕ ತಾರೆ ಪಟ್ಟವನ್ನು ತಮ್ಮದಾಗಿಸಿಕೊಂಡ ನಟಿ ಇವರು. ಆದರೆ ಕಳೆದ ಕೆಲ ವರ್ಷಗಳಿಂದ ರಮ್ಯಾ ಚಿತ್ರರಂಗದಿಂದ ಕಾಣೆಯಾಗಿದ್ದರು. ಇದೀಗ ಅವರು ಮತ್ತೆ ಸಿನಿಮಾಗೆ ಬರಲು ಸಜ್ಜಾಗಿದ್ದಾರೆ. ಈ ವಿಚಾರ ಹಳೆಯದು, ಹೊಸ ವಿಚಾರ ಎಂದರೆ ರಮ್ಯಾ ಹೊಂಬಾಳೆ ಫಿಲ್ಮ್ಸ್​ ಪ್ರೊಡಕ್ಷನ್ ಹೌಸ್​ (Hombale Films Production House) ಮೂಲಕ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಏನಿದು ವಿಚಾರ? ಈ ಸ್ಟೋರಿ ಓದಿ.

ಹೊಂಬಾಳೆ ಫಿಲ್ಮ್ಸ್ ಮೂಲಕ ರಮ್ಯಾ ಕಮ್​ಬ್ಯಾಕ್​?

ಸದ್ಯ ಸ್ಯಾಂಡಲ್​ವುಡ್​ನಲ್ಲಿ ರಮ್ಯಾ ಹೊಂಬಾಳೆ ಫಿಲ್ಮ್ಸ್ ಮೂಲಕ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಕಾರಣ, ಕೆಜಿಎಫ್ ಸಿನಿಮಾದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಅವರ ಕೆ.ಆರ್.ಜಿ ಸ್ಟುಡಿಯೋಗೆ ನಿನ್ನೆ ರಮ್ಯಾ ವಿಸಿಟ್​ ಮಾಡಿರುವುದು. ಹೌದು, ರಮ್ಯಾ ನಿನ್ನೆಯಷ್ಟೇ, ಕೆ.ಆರ್.ಜಿ ಸ್ಟುಡಿಯೋಗೆ ಭೇಟಿ ನೀಡಿದ್ದಾರೆ. ಅಲ್ಲಿ ಸ್ವಲ್ಪ ಕಳೆದಿದ್ದಾರೆ. ಹಾಗಾಗಿ ರಮ್ಯಾ ಹೊಂಬಾಳೆ ಫಿಲ್ಮ್ಸ್ ಜೊತೆ ಸಿನಿಮಾ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.



ಇನ್ನು ರಮ್ಯಾ ಈ ಹಿಂದೆಯೂ ಕೂಡ ಕೆ.ಆರ್.ಜಿ ಸ್ಟುಡಿಯೋ ನಿರ್ಮಾಣ ಮಾಡುತ್ತಿರುವ ಹೊಯ್ಸಳ ಸಿನಿಮಾದ ಶೂಟಿಂಗ್ ಸ್ಥಳಕ್ಕೆ ಸಹ  ಭೇಟಿ ನೀಡಿದ್ದರು.  ಪದೇ ಪದೇ ರಮ್ಯಾ ಕೆ.ಆರ್.ಜಿ ಸ್ಟುಡಿಯೋಗೆ ಭೇಟಿ ನೀಡುತ್ತಿರುವುದು ಕುತೂಹಲ ಮೂಡಿಸಿದೆ. ಅಲ್ಲದೇ, ರಮ್ಯಾ ಹೊಂಬಾಳೆ ಫಿಲ್ಮ್ಸ್ ಮೂಲಕ ಕಮ್​ ಬ್ಯಾಕ್​ ಮಾಡಬೇಕು ಎಂಬುದು ಪುನೀತ್ ಆಸೆಯಾಗಿತ್ತು ಎನ್ನುವ ಸುದ್ದಿ ಸಹ ಕೇಳಿ ಬಂದಿದೆ.

twitter has removed the blue tick of Puneeth Rajkumars account
ಪುನೀತ್ ರಾಜ್‌ಕುಮಾರ್


ಪುನೀತ್​ ಆಸೆಯಂತೆ ಇದು

ಪುನೀತ್ ಮಾಡಬೇಕಿದ್ದ  ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಲು ಹೊರಟಿದ್ದ ಸಿನಿಮಾವೊಂದಕ್ಕೆ ರಮ್ಯಾ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಬೇಕು ಎನ್ನುವುದು ಪುನೀತ್ ರಾಜ್ ಕುಮಾರ್ ಅವರು ಹೇಳಿದ್ದರಂತೆ. ಹಾಗಾಗಿ ಹೊಂಬಾಳೆ ರಮ್ಯಾ ಜೊತೆ ಸಿನಿಮಾ ಮಾಡಲು ಹೊರಟಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಬಿಗ್​ಬಾಸ್​ ಮನೆಗೆ ಹೋಗಿಲ್ಲ ಕಾಫಿನಾಡು ಚಂದು, ಕಾಯ್ತಿದ್ದ ಫ್ಯಾನ್ಸ್​ಗೆ ನಿರಾಸೆ



ಇನ್ನು ಬಹಳಷ್ಟು ದಿನಗಳಿಂದ ಅಭಿಮಾನಿಗಳು ರಮ್ಯಾ ಅವರಿಗೆ ಕಮ್​ ಬ್ಯಾಕ್​ ಮಾಡುವಂತೆ ಒತ್ತಾಯಿಸುತ್ತಿದ್ದರು. ಅಭಿಮಾನಿಗಳು ಯಾವಾಗಲೂ ಕೇಳೋದು ಯಾವಾಗ ಸಿನಿಮಾಕ್ಕೆ ವಾಪಸ್ ಆಗ್ತೀರಾ? ಯಾವಾಗ ನಿಮ್ಮ ಹೊಸ ಸಿನಿಮಾ ಬರುತ್ತೆ? ಸಿನಿಮಾದಲ್ಲಿ ನಿಮ್ಮ ಅಭಿನಯ ನೋಡಿ ಕಣ್ತುಂಬಿಕೊಳ್ಳೋದು ಯಾವಾಗ? ಅಂತ ಹತ್ತು ಹಲವು ಪ್ರಶ್ನೆ. ಇದಕ್ಕೆಲ್ಲ ರಮ್ಯಾ ಉತ್ತರ ನೀಡಿದ್ದರು. ನಾನು ಬೇಗ ಸಿನಿಮಾಗೆ ವಾಪಸ್ ಬರ್ತಿನಿ ಎನ್ನುವ ಮೂಲಕ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ಕೊಟ್ಟಿದ್ದಾರೆ. ಆದರೆ ಯಾವ ಚಿತ್ರ? ಹೀರೋ ಯಾರು? ಯಾವಾಗ ಶೂಟಿಂಗ್ ಸೇರಿದಂತೆ ಯಾವುದೇ ಮಾಹಿತಿಗಳನ್ನು ರಮ್ಯಾ ಬಿಟ್ಟುಕೊಟ್ಟಿಲ್ಲ.

ಇದನ್ನೂ ಓದಿ: ಯುಗಾಂತರ ಧಾರಾವಾಹಿಯ ನಟನಟಿಯರನ್ನ ಭೇಟಿಯಾಗ್ಬೇಕಾ? ಈ ಪ್ರೋಗ್ರಾಂಗೆ ಹೋಗಿ - ಎಲ್ಲಿ? ಯಾವತ್ತು? ಡೀಟೆಲ್ಸ್ ಇಲ್ಲಿದೆ

ಅಭಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ರಮ್ಯಾ ನಂತರ ತಿರುಗಿ ನೋಡಲಲ್ಲಿ, ಒಂದರ ನಂತರ ಒಂದು ಹಿಟ್​ ಸಿನಿಮಾಗಳನ್ನು ನೀಡಿ, ಜನರಿಗೆ ಇಷ್ಟವಾದರೂ. ಪುನೀತ್ ರಾಜ್​ಕುಮಾರ್ ಜೊತೆ ಹೆಚ್ಚಿನ ಸಿನಿಮಾದಲ್ಲಿ ನಟಿಸಿದ ರಮ್ಯಾ ಅರಸು ಚಿತ್ರದ ನಂತರ ಮತ್ತೆ ಪುನೀತ್ ಜೊತೆ ಕಾಣಿಸಿಕೊಂಡಿಲ್ಲ. ಅವರಿಬ್ಬರದ್ದು ಹಿಟ್​ ಜೋಡಿ ಎಂಬುದು ಬಹಳಷ್ಟು ಸಲ ಸಾಬೀತಾಗಿದೆ. ರಮ್ಯಾ ಪುನೀತ್ ಜೊತೆ ಮತ್ತೆ ಕಮ್​ ಬ್ಯಾಕ್​ ಮಾಡುವ ಆಸೆ ಹೊಂದಿದ್ದರು. ಅಪ್ಪು ನಿಧನದ ಸಮಯದಲ್ಲಿ ಮಾತನಾಡಿದ್ದ ರಮ್ಯಾ, ಮತ್ತೆ ನಾವಿಬ್ಬರು ನಟಿಸಬೇಕಿತ್ತು ಎಂದಿದ್ದರು. ಈ ಬಗ್ಗೆ ಹಿಂದೆಯೇ ಚರ್ಚೆಯಾಗಿತ್ತು. ಇಬ್ಬರೂ ಒಪ್ಪಿಗೆ ನೀಡಿಯೂ ಆಗಿತ್ತು ಎಂದಿದ್ದರು.
Published by:Sandhya M
First published: