• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Ramya Untold Story: ನಟಿ ರಮ್ಯಾ ನೆಚ್ಚಿನ ಬಾಲಿವುಡ್ ನಟ ಯಾರು? ಈ ಹೀರೋ ಬಳಿ ಆಟೋಗ್ರಾಫ್ ಪಡೆದ ಸ್ಯಾಂಡಲ್​ವುಡ್ ಕ್ವೀನ್

Ramya Untold Story: ನಟಿ ರಮ್ಯಾ ನೆಚ್ಚಿನ ಬಾಲಿವುಡ್ ನಟ ಯಾರು? ಈ ಹೀರೋ ಬಳಿ ಆಟೋಗ್ರಾಫ್ ಪಡೆದ ಸ್ಯಾಂಡಲ್​ವುಡ್ ಕ್ವೀನ್

ರಮೇಶ್ ಶೋದಲ್ಲಿ ರಮ್ಯಾ ಜೀವನ ಪಯಣದ ಚಿತ್ರಣ

ರಮೇಶ್ ಶೋದಲ್ಲಿ ರಮ್ಯಾ ಜೀವನ ಪಯಣದ ಚಿತ್ರಣ

ರಮ್ಯಾ ಅವರು ತಮ್ಮ ತಂದೆ-ತಾಯಿ ಬಗ್ಗೆ ವೀಕೆಂಡ್ ವಿಥ್ ರಮೇಶ್ ಶೋದಲ್ಲಿ ಮುಕ್ತವಾಗಿಯೇ ಮಾತನಾಡಿದ್ದಾರೆ. ತಂದೆ ಯಾರು ಅನ್ನೋದನ್ನ ಕೂಡ ಹೇಳಿಕೊಂಡಿದ್ದಾರೆ.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:
  • published by :

ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಅವರ ಚಿತ್ರ ಜೀವನ (Ramya Untold Story) ಎಲ್ಲರಿಗೂ ಗೊತ್ತಿದೆ. ಸಿನಿಮಾಗಳ ಲೆಕ್ಕವೂ ತಿಳಿದಿದೆ. ಅಭಿ ಚಿತ್ರದಿಂದ ಹಿಡಿದು ಕಟ್ಟಕಡೆಯ ನಾಗರಹಾವು ಸಿನಿಮಾವರೆಗೂ ಬಹುತೇಕರು ತಿಳಿದುಕೊಂಡಿದ್ದಾರೆ. ರಮ್ಯಾ ಅವರ ಬದುಕಿನ ಅದೆಷ್ಟೋ ವಿಷಯಗಳು ಎಲ್ಲರಿಗೂ ತಿಳಿದಿಲ್ಲ ನೋಡಿ. ಆದರೆ ವೀಕೆಂಡ್‌ (Ramya Real Life Story) ವಿಥ್ ರಮೇಶ್ ಶೋದಲ್ಲಿ ಈಗ ಅದೆಲ್ಲವೂ ರಿವೀಲ್ ಆಗುತ್ತಿದೆ. ಶನಿವಾರ ರಾತ್ರಿ 9 ಗಂಟೆಗೆ ಪ್ರಸಾರ ಆಗೋ ಈ ಶೋದಲ್ಲಿ ರಮ್ಯಾ ಅವರ ಬಾಲ್ಯದಿಂದ ಹಿಡಿದು (Weekend with Ramesh Show) ಇಂದಿನ ಎಲ್ಲ ವಿಷಯಗಳು ತಿಳಿಯಲಿದೆ. ವೈಯುಕ್ತಿಕ ಬದುಕು, ಸಿನಿಮಾ ಜೀವನ, ರಾಜಕೀಯ ಪ್ರವೇಶದ ಕಥೆಗಳು, ತಂದೆ-ತಾಯಿಯ ವಿಷಯ, ಹೀಗೆ (Ramya Movie Untold Stories) ಎಲ್ಲವೂ ಇಲ್ಲಿ ಎಲ್ಲರಿಗೂ ತಿಳಿಯಲಿದೆ.


ವೀಕೆಂಡ್ ವಿಥ್ ರಮೇಶ್ ಶೋದಲ್ಲಿ ರಮ್ಯಾ ಜೀವನ ಪಯಣದ ಚಿತ್ರಣ


ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಚಿತ್ರ ಜೀವನ ಸ್ಪೆಷಲ್ ಆಗಿದೆ. ಅಭಿನಯಿಸಿರೋ ಸಿನಿಮಾಗಳು ರಮ್ಯಾ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿವೆ. ದಿವ್ಯ ಸ್ಪಂದನಾ ಅನ್ನೋ ಹೆಸರಿನ ರಮ್ಯಾ ಅವರಿಗೆ ರಮ್ಯಾ ಅಂತ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಅವರು ಹೆಸರಿಟ್ಟರು.


Sandalwood Queen Ramya Weekend with Ramesh Show Special Matter Reveal
ಸ್ಯಾಂಡಲ್‌ವುಡ್ ರಮ್ಯಾ ಫೇವರಿಟ್ ಬಾಲಿವುಡ್ ನಟ ಯಾರು?


ಅಂದಿನಿಂದ ಕನ್ನಡಕ್ಕೆ ರಮ್ಯಾ ಅಂತಲೇ ಪರಿಚಯ ಆದ ರಮ್ಯಾ ಅವರು, ಇಡೀ ಚಿತ್ರ ಜೀವನ ಸೂಪರ್ ಆಗಿಯೇ ಸಾಗಿ ಬಂತು. ಆದರೆ ರಮ್ಯಾ ಅವರಿಗೆ ಬಾಲಿವುಡ್‌ನ ಆ ನಟರನ್ನ ಕಂಡ್ರೆ ತುಂಬಾನೇ ಇಷ್ಟ ನೋಡಿ. ಆ ನಟನಿಂದ ಆಟೋಗ್ರಾಫ್ ಕೂಡ ರಮ್ಯಾ ಪಡೆದಿದ್ದರು.




ಬಾಲಿವುಡ್‌ ಜಾಕಿ ಶ್ರಾಫ್‌ ರಮ್ಯಾ ಫೇವರಿಟ್ ಹೀರೋ


ಹೌದು, ರಮ್ಯಾ ಅವರಿಗೆ ಬಾಲಿವುಡ್ ನಟ ಜಾಕಿ ಶ್ರಾಫ್ ಅಂದ್ರೆ ತುಂಬಾ ಇಷ್ಟ ಆಗಿದ್ದರು. ಅವರೊಮ್ಮೆ ರಮ್ಯಾ ಓದುತ್ತಿದ್ದ ಊಟಿಗೂ ಬಂದಿದ್ದರು. ಆಗ ರಮ್ಯಾ ಅವರು ಜಾಕಿ ಶ್ರಾಫ್ ಅವರಿಂದ ಆಟೋಗ್ರಾಫ್ ಕೂಡ ಪಡೆದಿದ್ದರು.


ರಮ್ಯಾ ಅವರ ಚಿತ್ರ ಜೀವನ ಯಶಸ್ವಿಯಾಗಿಯೇ ಸಾಗಿ ಬಂದಿದೆ. ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ರಮ್ಯಾ ಸಿನಿಮಾರಂಗದಿಂದ ದೂರ ಉಳಿದ್ರು ನೋಡಿ. ಆದರೂ ಇವರ ಕ್ರೇಜ್ ಕಡಿಮೆ ಆಗಲೇ ಇಲ್ಲ. ಹಾಗಾಗಿಯೇ ಈಗ ವಾಪಸ್ ಬಂದಿದ್ದಾರೆ ಅನ್ನೋರು ಇದ್ದಾರೆ ಬಿಡಿ.


ವೀಕೆಂಡ್ ವಿಥ್ ರಮೇಶ್ ಶೋದಲ್ಲಿ ಅಪ್ಪನ ಬಗ್ಗೆ ಹೇಳಿಕೊಂಡ ರಮ್ಯಾ


ರಮ್ಯಾ ಅವರ ವೈಯುಕ್ತಿಕ ಬದುಕಿನಲ್ಲಿ ಅವರ ತಂದೆ ಬಗ್ಗೆ ಸಾಕಷ್ಟು ಕುತೂಹಲಗಳಿವೆ. ಅದರ ಸುತ್ತ ಒಂದಷ್ಟು ಗಾಸಿಪ್‌ಗಳೂ ಇವೆ. ಆದರೆ ರಮ್ಯಾ ಅವರು ತಮ್ಮ ತಂದೆ-ತಾಯಿ ಬಗ್ಗೆ ವೀಕೆಂಡ್ ವಿಥ್ ರಮೇಶ್ ಶೋದಲ್ಲಿ ಮುಕ್ತವಾಗಿಯೇ ಮಾತನಾಡಿದ್ದಾರೆ. ತಂದೆ ಯಾರು ಅನ್ನೋದನ್ನ ಕೂಡ ಹೇಳಿಕೊಂಡಿದ್ದಾರೆ.


Sandalwood Queen Ramya Weekend with Ramesh Show Special Matter Reveal
ಬಾಲಿವುಡ್‌ ಜಾಕಿ ಶ್ರಾಫ್‌ ರಮ್ಯಾ ಫೇವರಿಟ್ ಹೀರೋ


ರಮ್ಯಾ ಅವರು ಬಾಲ್ಯದ ದಿನಗಳನ್ನ ಮೆಲುಕು ಹಾಕುತ್ತಲೇ ತಮ್ಮ ಕಾಲೇಜು ದಿನಗಳನ್ನೂ ಈ ಶೋದಲ್ಲಿ ನೆನಪಿಸಿಕೊಂಡಿದ್ದಾರೆ. ರಾಜಕೀಯ ಎಂಟ್ರಿ ಕುರಿತು ಅಷ್ಟೇ ಮುಕ್ತವಾಗಿಯೇ ರಮ್ಯಾ ಇಲ್ಲಿ ಹೇಳಿಕೊಂಡಿದ್ದಾರೆ.


ವೀಕೆಂಡ್ ವಿಥ್ ರಮೇಶ್ ಎರಡು ದಿನವೂ ರಮ್ಯಾಮಯ


ಬಾಲ್ಯ, ಯೌವ್ವನ, ಕಾಲೇಜು ದಿನಗಳು, ಸಿನಿಮಾ ಎಂಟ್ರಿ, ರಾಜಕೀಯ ಪ್ರವೇಶ, ವೈಯುಕ್ತಿಕ ಜೀವನ, ಆತ್ಮೀಯ ಸ್ನೇಹಿತರು ಹೀಗೆ ಎಲ್ಲರ ಕುರಿತು ರಮ್ಯಾ ಅಷ್ಟೇ ಓಪನ್ ಆಗಿಯೇ ಈ ಶೋದಲ್ಲಿ ಮಾತನಾಡಿದ್ದಾರೆ.


ಇದನ್ನೂ ಓದಿ: Olavina Nildana: ಸಿದ್ಧಾಂತ್-ತಾರಿಣಿ ಮದುವೆ ಆಗೇ ಹೋಯ್ತಾ? ಇದು ಕನಸಾ, ನನಸಾ?

top videos


    ರಮ್ಯಾ ಅವರು ವೀಕೆಂಡ್ ವಿಥ್ ರಮೇಶ್ ಸೀಸನ್-5 ಇದೇ ಮಾರ್ಚ್‌-25 ರಂದು ರಾತ್ರಿ 9 ಗಂಟೆಗೆ ಪ್ರಸಾರ ಆಗಲಿದೆ. ಶನಿವಾರ ಮತ್ತು ಭಾನುವಾರ ಪ್ರಸಾರ ಆಗೋ ಈ ಶೋದ ಮೊದಲ ಎರಡು ಸಂಚಿಕೆ ರಮ್ಯಾ ಅವರಿಗೆ ಮೀಸಲಾಗಿದ್ದು ಎರಡು ದಿನವೂ ರಮ್ಯಾಮಯವೇ ಆಗಿದೆ.

    First published: