ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಕಮ್ ಬ್ಯಾಕ್ (Ramya Latest Updates) ಮಾಡಿ ಆಗಿದೆ. ಸಿನಿಮಾರಂಗದಿಂದ ಹೆಚ್ಚು ಕಡಿಮೆ ಎಂಟು ವರ್ಷದಿಂದ ದೂರವೇ ಉಳಿದಿದ್ದ ರಮ್ಯಾ ವಾಪಸ್ ಆಗಿದ್ದಾರೆ. ಆದರೆ ಇಲ್ಲಿವರೆಗೂ ಜೀವನದಲ್ಲಿ (Weekend with Ramesh Promo Release) ಆದ ಬದಲಾವಣೆಗಳೇನು? ಸಿನಿಮಾರಂಗದಿಂದ ದೂರ ಉಳಿದಿದ್ದು ಯಾಕೆ? ರಕ್ಷಿತಾ ಮತ್ತು ರಮ್ಯಾ ನಡುವೆ ಕಾಂಪಿಟೇಷನ್ ತಂದವರಾರು? ರಮ್ಯ (Ramya Weekend with Ramesh Promo) ಜೀವನ ಈಗ ಹೇಗಿದೆ. ಈ ಎಲ್ಲ ಪ್ರಶ್ನೆಗಳಿಗೆ ಸ್ವತಃ ರಮ್ಯಾ ಉತ್ತರ ಕೊಟ್ಟಿದ್ದಾರೆ. ಆ ಹಳೆ ನೆನಪುಗಳನ್ನ ರಿಕಾಲ್ ಮಾಡಿಕೊಳ್ಳೊ ವೀಕೆಂಡ್ (Ramya Promo Released) ವಿತ್ ರಮೇಶ್ ಇದೀಗ ವೇದಿಕೆ ಆಗಿದೆ. ಇದೇ ಶನಿವಾರದ ಮೊದಲ ಎಪಿಸೋಡ್‌ನಲ್ಲಿ ರಮ್ಯಾ ಈ ಎಲ್ಲ ವಿಷಯಗಳನ್ನ ಈಗ ಹಂಚಿಕೊಳ್ಳಲಿದ್ದಾರೆ.
ಕನ್ನಡದ ಕ್ವೀನ್ ರಮ್ಯಾ ಬದುಕಿನ ಭವ್ಯ ಚಿತ್ರಣ
ಕನ್ನಡದ ಕ್ವೀನ್ ರಮ್ಯಾ ಎಂದೂ ತಮ್ಮ ಚಾರ್ಮ್ ಕಳೆದುಕೊಂಡಿಲ್ಲ. ಬೆಳ್ಳಿತೆರೆಯಿಂದ ದೂರ ಇದ್ರೂ ಕೂಡ ತಮ್ಮ ಬೇಡಿಕೆಯನ್ನ ಕಳೆದುಕೊಂಡಿಲ್ಲ. ಎಲ್ಲೆ ಹೋದ್ರೂ ರಮ್ಯಾ ಸ್ಯಾಂಡಲ್‌ವುಡ್‌ನ ಕ್ವೀನೆ ಆಗಿದ್ದರು. ಈ ಕ್ವೀನ್ ಮತ್ತೆ ತಮ್ಮ ಸಿನಿಮಾ ಸಾಮ್ರಾಜ್ಯಕ್ಕೆ ಕಾಲಿಟ್ಟಿದ್ದಾರೆ.
ಈ ವೀಕೆಂಡ್‌ನಲ್ಲಿ ರಮ್ಯ ಜೀವನದ ರಮ್ಯ ಚಿತ್ರಣ
ಆದರೆ ಅದಕ್ಕೂ ಮೊದಲೇ ರಮ್ಯ ವೀಕೆಂಡ್ ವಿತ್ ರಮೇಶ್ ಶೋಗೆ ಬಂದಿದ್ದಾರೆ. ಇದೇ ಶನಿವಾರ ಮತ್ತು ಭಾನುವಾರ ಪ್ರಸಾರ ಆಗುತ್ತಿರೋ ಈ ಶೋದಲ್ಲಿ ರಮ್ಯಾ ತಮ್ಮ ಜೀವನವನ್ನ ಮತ್ತೊಮ್ಮೆ ತಿರುಗಿ ನೋಡಲಿದ್ದಾರೆ.
ರಮೇಶ್ ಅರವಿಂದ್ ಅವರು ಕೇಳುವ ತುಂಬಾ ಸಾಫ್ಟ್ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ವೀಕೆಂಡ್ ವಿತ್ ರಮೇಶ್ ಶೋದಲ್ಲಿ ಬಂದ ಎಲ್ಲ ಸಾಧಕರು ತಮ್ಮ ಜೀವನವನ್ನ ನೆನಪಿಸಿಕೊಂಡಿದ್ದಾರೆ. ಕೊನೆ ಕೊನೆಗೆ ಭಾವುಕರಾಗಿದ್ದಾರೆ.
ಕನ್ನಡದ ಕ್ವೀನ್ ರಮ್ಯ ಬದುಕಿನಲ್ಲಿ ಖುಷಿನೇ ತುಂಬಿದೆ!
ಕನ್ನಡದ ಕ್ವೀನ್ ರಮ್ಯಾ ಕೂಡ ಇಲ್ಲಿ ಭಾವುಕರಾಗಿದ್ದಾರೆ. ಜೀವನದಲ್ಲಿ ಎಮೋಷನ್ಸ್ ಇವೆ. ಖುಷಿ ಇದೆ. ನನ್ನ ಹೃದಯ ತುಂಬಿದೆ. ಹೀಗೆ ತಮ್ಮ ಮನದಾದಳ ಮಾತುಗಳನ್ನ ರಮ್ಯಾ ಇಲ್ಲಿ ಆಡಿದ್ದಾರೆ. ಪವರ್ ಸ್ಟಾರ್ ಪುನೀತ್ ನೆನಪಿಸಿಕೊಂಡು ಕಣ್ಣೀರಾಗಿದ್ದಾರೆ.
View this post on Instagram
ಅರಸು ಡೈರೆಕ್ಟರ್ ಮಹೇಶ್ ಬಾಬು ಕಂಡು ರಮ್ಯ ಹಾಗೆ ಹೇಳಿದ್ಯಾಕೆ?
ಅರಸು ಮತ್ತು ಆಕಾಶ್ ಚಿತ್ರದಲ್ಲಿ ರಮ್ಯ ಕೂಡ ಅಭಿನಯಿಸಿದ್ದಾರೆ. ಆ ಕ್ಷಣದ ಒಂದಷ್ಟು ಇಂಟ್ರಸ್ಟಿಂಗ್ ವಿಷಯಗಳನ್ನ ಕೂಡ ಹಂಚಿಕೊಂಡಂತೆ ಕಾಣುತ್ತಿದೆ. ಪ್ರೋಮೋದಲ್ಲಿ ರಮ್ಯಾ ಒಂದು ಮಾತನ್ನ ಕೂಡ ಹೇಳ್ತಾರೆ.
ಡೈರೆಕ್ಟರ್ ಮಹೇಶ್ ಬಾಬು ಅವರತ್ತ ತಿರುಗಿ ಇವರೇ ನೋಡಿ ನನ್ನ ಮತ್ತು ರಕ್ಷಿತಾ ನಡುವೆ ಕಾಂಪಿಟೇಷನ್ ತಂದು ಇಟ್ಟವರು ಅಂತಲೇ ಹೇಳ್ತಾರೆ. ಆಗ ಡೈರೆಕ್ಟರ್ ಮಹೇಶ್ ಬಾಬು ಮಂದ ಹಾಸ ಬೀರುತ್ತಲೇ ನಿಂತು ಬಿಡುತ್ತಾರೆ.
ತ್ಯಾಗರಾಜ್ ಮುಂದೆ ರಮ್ಯ ಬದುಕಿನ ಚಿತ್ರಣ
ಹಾಗೆ ಇಡೀ ಪ್ರೊಮೋದಲ್ಲಿ ಹತ್ತು ಹಲವು ವಿಷಯಗಳು ಬಂದು ಹೋಗುತ್ತವೆ. ನೆಚ್ಚಿನ ನಾಯಿಗಳ ಮೇಲಿನ ಪ್ರೀತಿ, ಇಷ್ಟಪಡೋ ಚಿತ್ರಾನ್ನ ಹೀಗೆ ಎಲ್ಲವುಗಳ ಸಣ್ಣ ಚಿತ್ರಣ ಇಲ್ಲಿ ನೋಡಬಹುದು. ರಮೇಶ್ ಅರವಿಂದ್ ಅವರ ಈ ಒಂದು ಮೊದಲ ಶೋದಲ್ಲಿ ರಮ್ಯಾ, ಬಂದು ತಮ್ಮ ಬದುಕಿನ ಅಷ್ಟೂ ಚಿತ್ರಣವನ್ನ ಮಾತುಗಳ ಮೂಲಕ ತೆರೆದಿಡಲಿದ್ದಾರೆ.
ಇದನ್ನೂ ಓದಿ: Yuva Movie Updates: ಎಲ್ಲಿಗೆ ಬಂತು ಯುವ ಸಿನಿಮಾ? ಇಲ್ಲಿದೆ ಎಕ್ಸ್ಕ್ಲೂಸಿವ್ ಅಪ್ಡೇಟ್ಸ್
ಇದೇ ಶನಿವಾರ ರಾತ್ರಿ 9 ಗಂಟೆಗೆ ಈ ಒಂದು ಶೋ ಪ್ರಸಾರ ಆಗಲಿದೆ. ಇಲ್ಲಿವರೆಗೂ ಈ ಶೋದ ಮೊದಲ ಅತಿಥಿ ಯಾರು ಅನ್ನೋ ಕುತೂಹಲಕ್ಕೆ ಈ ಮೂಲಕ ತೆರೆ ಕೂಡ ಅಧಿಕೃತವಾಗಿಯೇ ಬಿದ್ದಿದೆ ಅಂತ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ