ಕನ್ನಡ ಕ ಕಿರುತೆರೆಯ (Kannada Small screen) ಪ್ರಸಿದ್ಧ ರಿಯಾಲಿಟಿ ಶೋ (Reality Show) ವೀಕೆಂಡ್ ವಿತ್ ರಮೇಶ್ (Weekend With Ramesh) ಮತ್ತೆ ಶುರುವಾಗಿದೆ. ಈ ಬಾರಿ ಮೊದಲ ಅತಿಥಿಯಾಗಿ (Guest) ಸ್ಯಾಂಡಲ್ವುಡ್ನ (Sandalwood) ಮೋಹಕ ತಾರೆ ರಮ್ಯಾ (Ramya) ಭಾಗವಹಿಸಿದ್ದಾರೆ. ರಮ್ಯಾ ಅವರು ಅತಿಥಿ ಸೀಟ್ನಲ್ಲಿ ಕುಳಿತು ತಮ್ಮ ಬಾಲ್ಯ, ಸಿನಿಮಾ, ಮೊದಲ ಸಂಪಾದನೆ (Earning) ಎಲ್ಲದರ ಬಗ್ಗೆಯೂ ಮಾತನಾಡಿದ್ದಾರೆ. ಆದರೆ ಎಲ್ಲಕ್ಕಿಂತ ಹೆಚ್ಚು ಜನರು ಗಮನಿಸಿದ್ದು ನಟಿಯ ಇಂಗ್ಲಿಷ್. ಹೌದು ರಮ್ಯಾ ಅವರು ಇಂಗ್ಲಿಷ್ ಮಿಶ್ರಿತ ಕನ್ನಡ (Kannada) ಭಾಷೆಯಲ್ಲಿ ಮಾತನಾಡಿದ್ದು ಕನ್ನಡಿಗರ ಕೋಪಕ್ಕೆ ಕಾರಣವಾಗಿದೆ.
ರಮ್ಯಾ ಅವರು ಶೋನಲ್ಲಿ ಹೆಚ್ಚು ಇಂಗ್ಲಿಷ್ ಮಾತನಾಡಿದ್ದನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ರಮ್ಯಾ ಕುರಿತು ಬಹಳಷ್ಟು ಟ್ರೋಲ್ಗಳು ಈಗ ಇಂಟರ್ನೆಟ್ನಲ್ಲಿ ವೈರಲ್ ಆಗಿದೆ.
ಅಜ್ಜಿಗೆ ರಮ್ಯಾ ಗೊತ್ತು, ಆದ್ರೆ ಇಂಗ್ಲಿಷ್ ಬರಲ್ಲ
ಬಹಳಷ್ಟು ಟ್ರೋಲ್ ವೈರಲ್ ಆಗುತ್ತಿದ್ದು ಅದರಲ್ಲಿ ಒಂದರಲ್ಲಿ ನನ್ನಜ್ಜಿಗೆ ರಮ್ಯಾ ಅವರ ಪರಿಚಯ ಇದೆ. ಆದರೆ ಅವರಿಗೆ ಇಂಗ್ಲಿಷ್ ಗೊತ್ತಿಲ್ಲ. ಹಾಗಾಗಿ ಅವರು ಟಿವಿ ಆಫ್ ಮಾಡಿ ಹೋಗಿ ಮಲಗಿದ್ರು ಎಂದಿದ್ದಾರೆ ನೆಟ್ಟಿಗರು.
ಬರೀ ಇಂಗ್ಲಿಷ್ ಮಾತಾಡೋದೇ ಆಯ್ತು. ಸಾಧನೆ ಮಾಡಿರೋದು ಇಲ್ಲಿನ ಭಾಷೆಯಿಂದ ಎಂದಿದ್ದಾರೆ ಇನ್ನೊಬ್ಬರು. ಈ ಸೀಸನ್ನಲ್ಲಿ ವೀಕೆಂಡ್ ವಿತ್ ರಮೇಶ್ ಯಾಕೆ ಇಂಗ್ಲಿಷ್ ವರ್ಷನ್ ಮಾಡಿದ್ದಾರೆ? ಕನ್ನಡ ಸಬ್ಟೈಟಲ್ ಆದ್ರೂ ಹಾಕ್ರೋ ಕೆಳಗೆ ಕನ್ನಡ ಮಾಯ ಎಂದಿದ್ದಾರೆ ಇನ್ನೊಬ್ಬರು.
ಇನ್ನೊಬ್ಬರು ಇದು ವೀಕೆಂಡ್ ವಿತ್ ರಮೇಶ್ ಹಾ? ಅಥವಾ ವೀಕೆಂಡ್ ವಿತ್ ಇಂಗ್ಲಿಷ್ ಹಾ? ಎಂದು ಕೇಳಿದ್ದಾರೆ ನೆಟ್ಟಿಗರು. ನಿಮ್ಮ ಮೇಲೆ ಪ್ರೀತಿ ಅಭಿಮಾನ ಜಾಸ್ತಿ ಇದೆ. ಆದರೆ ನೀವು ಕನ್ನಡ ಜಾಸ್ತಿ ಬಳಸದೆ ಇದ್ದದ್ದು ಖಂಡಿತ ತಪ್ಪು ಎಂದಿದ್ದಾರೆ ಇನ್ನೊಬ್ಬರು. ನಮ್ ಅಜ್ಜಿಗೆ ರಮ್ಯಾ ಗೊತ್ತು. ಆದರೆ ನಮ್ಮ ಅಜ್ಜಿಗೆ ಇಂಗ್ಲಿಷ್ ಬರಲ್ಲ ಅಂತ ಟಿವಿ ಆಫ್ ಮಾಡಿ ಮಲ್ಕೊಂಡುಬಿಟ್ಟರು ಎಂದಿದ್ದಾರೆ ಇನ್ನೊಬ್ಬರು.
ಇದನ್ನೂ ಓದಿ: Weekend With Ramesh: ಗೌಡ್ರು ಸಿನಿಮಾ, ನೀನು ಮಾಡ್ಲೇಬೇಕು! ಮೊದಲಿಗೆ ಎಕ್ಸ್ಕ್ಯೂಸ್ ಮಿ ಸಿನಿಮಾ ಒಪ್ಪಿರಲಿಲ್ಲ ರಮ್ಯಾ
ನಾವೇನಾದ್ರೂ ಇಂಗ್ಲಿಷ್ ಶೋ ನೋಡ್ತಿದ್ದೀವಾ? ಎಂದು ಪ್ರಶ್ನಿಸಿದ್ದಾರೆ ಕೆಲವರು. ನಮ್ಮ ಅಜ್ಜಿಗೆ ಇಂಗ್ಲಿಷ್ ಬರಲ್ಲ, ರಮ್ಯಾ ಅವರಿಗೆ ಕನ್ನಡ ಬರಲ್ಲ ಎಂದಿದ್ದಾರೆ ಕೆಲವರು.
View this post on Instagram
ಆರ್.ಟಿ ನಾರಾಯಣ್ ಮತ್ತು ರಂಜಿತಾ ದಂಪತಿಗಳ ಪುತ್ರಿಯಾಗಿ 29 ನವೆಂಬರ್ 1982ರಲ್ಲಿ ಜನಿಸಿದರು. ಊಟಿಯ ಬೋರ್ಡಿಂಗ್ ಸ್ಕೂಲ್ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ರಮ್ಯಾ, ಚೆನ್ನೈನಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ.
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಆಗಮಿಸಿದ ರಮ್ಯಾ ಗೆಳತಿಯರು, ನಟಿಯ ಶಾಲಾ ದಿನಗಳ ಬಗ್ಗೆ ಮಾತಾಡಿದ್ರು. ತಮ್ಮ ಹಳೆಯ ಫೋಟೋಗಳನ್ನು ನೋಡಿ ರಮ್ಯಾ ಕೂಡ ತುಂಬಾ ಖುಷಿ ಪಟ್ಟಿದ್ದಾರೆ. ಬಾಲ್ಯದಲ್ಲಿ ಸ್ಫೋರ್ಟ್ಸ್ನಲ್ಲಿ ಮುಂದಿದ್ದ ರಮ್ಯಾಗೆ ಬ್ಯಾಸ್ಕೆಟ್ ಬಾಲ್ ಅಂದ್ರೆ ತುಂಬಾ ಇಷ್ಟ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ