ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ (Social Media) ಸಖತ್ ಆಕ್ಟಿವ್ ಆಗಿರುವ ಸ್ಯಾಂಡಲ್ವುಡ್ ಮೋಹಕ ತಾರೆ ರಮ್ಯಾ (Ramya) ಹಲವಾರು ವಿಚಾರಗಳ ಬಗ್ಗೆ ಮಾತನಾಡುತ್ತಿದ್ದಾರೆ. ರಾಜಕೀಯಕ್ಕೆ ಬಂದ ನಂತರ ಚಿತ್ರರಂಗದಿಂದ ದೂರವಾಗಿದ್ದರು. ಮತ್ತೆ ಚುನಾವಣೆಯಲ್ಲಿ (Election) ಸೋಲನ್ನು ಅನುಭವಿಸಿದ ನಂತರ, ಚಿತ್ರರಂಗ ಹಾಗೂ ರಾಜಕೀಯ ಎರೆಡರಿಂದಲೂ ದೂರವಿದ್ದ ಬ್ಯೂಟಿ ಕ್ವೀನ್ ಮತ್ತೆ ಆಕ್ಟೀವ್ ಆಗಿದ್ದಾರೆ. ಇತ್ತೀಚೆಗೆ ರಾಜಕೀಯಕ್ಕೆ ಸಂಬಂಧಪಟ್ಟ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿದ್ದ ರಮ್ಯಾ. ಈ ಬಾರಿ ಚಿತ್ರರಂಗದ ಬಗ್ಗೆ ಮಾತನಾಡಿದ್ದು, ಇದಕ್ಕೆ ಜನರೂ ಸಹ ಹೌದು ಎಂದು ತಲೆ ಅಲ್ಲಾಡಿಸುತ್ತಿದ್ದಾರೆ.
ನಿನ್ನೆ ಫ್ಯಾಟ್ ಸರ್ಜರಿ ಮಾಡಿಸಿಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ ಪ್ರತಿಭಾನ್ವಿತ ಯುವ ಧಾರಾವಾಹಿ ನಟಿ ಚೇತನ ರಾಜ್ ಕುರಿತು ಟ್ವೀಟ್ ಮಾಡಿರುವ ರಮ್ಯಾ, ಚಿತ್ರರಂಗದ ಕಹಿ ಸತ್ಯದ ಬಗ್ಗೆ ಮೌನ ಮುರಿದಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ಲಿಂಗ ತಾರತಮ್ಯ ಎಂದ ರಮ್ಯಾ
ಹೌದು, ಸಿನೆಮಾ ರಂಗದಲ್ಲಿನ ಲಿಂಗ ತಾರತಮ್ಯದ ಬಗ್ಗೆ ಬಹಿರಂಗವಾಗಿ ಮಾತನಾಡಿರುವ ನಟಿ, ಇಲ್ಲಿ ನಟರಿಗೆ ಇರುವ ಒಂದು ಪ್ರಾಮುಖ್ಯತೆ ನಟಿಯರಿಗೆ ಕೊಡುವುದಿಲ್ಲ ಎನ್ನುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
ಇನ್ನು ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ನಟಿ ರಮ್ಯಾ, ಸಿನಿಮಾರಂಗ ಹೇಗಿದೆ? ಇಲ್ಲಿ ನಟಿಯರನ್ನು ಯಾವ ರೀತಿ ಅಳೆಯಲಾಗುತ್ತೆ? ಎಂಬ ವಿಚಾರಗಳ ಬಗ್ಗೆ ಮಾತನಾಡಿದ್ದು, ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರರಂಗದಲ್ಲಿ ಮಿಂಚಬೇಕು ಎಂದು ಕನಸು ಕಂಡಿದ್ದ ಯುವನಟಿ ಚೇತನಾ ರಾಜ್ (22) ನಿಧನರಾಗಿದ್ದು ನೋವಿನ ಸಂಗತಿ ಎಂದಿದ್ದಾರೆ.
ಪುರುಷನಾದವನು ಡೊಳ್ಳುಹೊಟ್ಟೆ ಇಟ್ಟುಕೊಂಡು, ತಲೆಕೂದಲು ಉದುರಿ ಹೋಗಿ ವಿಗ್ ಹಾಕಿಕೊಂಡರೂ ಹೀರೋ ಅಂತ ಆತನನ್ನ ಅಟ್ಟಕ್ಕೆ ಏರಿಸಲಾಗುತ್ತದೆ. ಮುಖದಲ್ಲಿ ಒಂದೊಂದು ಕೆನ್ನೆಯೂ 5 ಕೆಜಿ ಇದ್ದರೂ ಸಮಸ್ಯೆಯಿರುವುದಿಲ್ಲ. ಅಲ್ಲದೇ, 65 ವರ್ಷವಾದರೂ ಅವರನ್ನು ಹೀರೋ ಎಂದು ಹೇಳುತ್ತಾರೆ.
ಇದನ್ನೂ ಓದಿ: ಮಾಲ್ಡೀವ್ಸ್ನಲ್ಲಿ ಸಿಂಪಲ್ ಸುಂದರಿ - ಫ್ಯಾಮಿಲಿ ಜೊತೆ ಶ್ವೇತಾ ಫುಲ್ ಎಂಜಾಯ್
ಅದೇ ಒಂದು ಹೆಣ್ಣು ಸ್ವಲ್ಪ ತೂಕ ಹೆಚ್ಚಿಸಿಕೊಂಡರೆ ಆಂಟಿ, ಬುಡ್ಡಿ, ಅಜ್ಜಿ ಎಂದು ಕರೆದು ಹೀಯಾಳಿಸಲಾಗುತ್ತದೆ. ಪ್ಲಾಸ್ಟಿಕ್ ಸರ್ಜರಿ ಬಳಿಕ ಮೃತರಾದ ಯುವ ನಟಿಯ ಬಗ್ಗೆ ಸುದ್ದಿ ಓದಿ ತಿಳಿದುಕೊಂಡೆ. ಮಹಿಳೆಯರ ಮೇಲೆ ವಿಚಿತ್ರವಾದ ಬ್ಯೂಟಿ ಸ್ಟ್ಯಾಂಡರ್ಡ್ಗಳನ್ನು ಹಾಕಿ, ಹೊಸ ನಿಯಮಗಳನ್ನು ಹಾಕುತ್ತಾರೆ. ಈ ಚಿತ್ರರಂಗದಲ್ಲಿ ಯಾವ ರೀತಿ ಕಾಣಬೇಕು ಎಂಬ ಬಗ್ಗೆ ಮಹಿಳೆಯರ ಮೇಲೆ ತೀವ್ರ ಒತ್ತಡ ಇದೆ ಎಂದು ರಮ್ಯಾ ಅಸಮಾಧಾನ ಹೊರಹಾಕಿದ್ದಾರೆ.
ತಮ್ಮ ಅನುಭವ ಹಂಚಿಕೊಂಡ ನಟಿ
ಇನ್ನು ಈ ಪೋಸ್ಟ್ನಲ್ಲಿ ತಮ್ಮ ಅನುಭವನ್ನು ಹಂಚಿಕೊಂಡಿರುವ ಅವರು, 2018ರಲ್ಲಿ ಕಾಲಿನ ಟ್ಯೂಮರ್ ರಿಮೂವಲ್ ಬಳಿಕ ನಾನು ಕೂಡ ದೇಹದ ತೂಕದ ಸಮಸ್ಯೆಯನ್ನು ಅನುಭವಿಸಿದ್ದೆ. ಆ ಸಮಯದಲ್ಲಿ ಯಾವ ರೀತಿ ಭಾವನೆ ಉಂಟಾಗುತ್ತದೆ ಎಂಬುದು ನನಗೆ ಅನುಭವ ಆಗಿದೆ. ಆದರೆ ನಾನು ನನ್ನದೇ ಆದ ಮಾರ್ಗದ ಮೂಲಕ ತೂಕ ಇಳಿಸಿಕೊಂಡೆ ಎಂದಿದ್ದಾರೆ.
ಇನ್ನು ಮಹಿಳೆ ಹೇಗಿರಬೇಕು ಎಂದು ಜಗತ್ತು ಹೇಳಿಕೊಡುವ ಅವಶ್ಯಕತೆ ಇಲ್ಲ. ನಮ್ಮ ಚಿತ್ರರಂಗ ನಿಜಕ್ಕೂ ಬದಲಾಗಬೇಕು. ಸಂಭಾವನೆ ತಾರತಮ್ಯ, ಬ್ಯೂಟಿ ಸ್ಟ್ಯಾಂಡರ್ಡ್, ಪಾತ್ರಗಳ ವಿಚಾರದಲ್ಲಿ ತಾರತಮ್ಯದ ವಿರುದ್ಧ ಮಹಿಳೆಯರು ಮತ್ತು ಪುರುಷರು ಒಟ್ಟಾಗಿ ಹೋರಾಡಬೇಕು ಎಂದು ರಮ್ಯಾ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಗಟ್ಟಿಮೇಳ ಧಾರಾವಾಹಿ ಆರತಿ ನಿಜ ಜೀವನದಲ್ಲಿ ಇರೋದು ಹೀಗಂತೆ
ಕನ್ನಡ ಕಿರುತೆರೆಯ ಯುವ ನಟಿ ಚೇತನಾ ರಾಜ್ ಎಂಬುವರು ನಿನ್ನೆ ಸಾವನ್ನಪ್ಪಿದ್ದರು. 21 ವರ್ಷದ ಚೇತನಾ ತಮ್ಮ ಕುಟುಂಬಸ್ಥರೊಂದಿಗೆ ಬೆಂಗಳೂರು ಉತ್ತರ ತಾಲೂಕಿನ ಅಬ್ಬಿಗೆರೆಯಲ್ಲಿ ವಾಸವಿದ್ದರು. ನವರಂಗ ಸರ್ಕಲ್ನ ಡಾ. ಶೆಟ್ಟಿ ಕಾಸ್ಮೆಟಿಕ್ ಆಸ್ಪತ್ರೆಯಲ್ಲಿ ಚೇತನಾ ಒಂದು ಸಣ್ಣ ಎಡವಟ್ಟಿನ ಕಾರಣದಿಂದ ಕೊನೆಯುಸಿರೆಳೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ