• Home
  • »
  • News
  • »
  • entertainment
  • »
  • Sandalwood Queen Ramya: ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ ಹಿಂದೆ ಬಿದ್ದ ಹಾಸ್ಟೆಲ್ ಹುಡುಗರು! ಯಾಕೆ? ಏನಾಯ್ತು?

Sandalwood Queen Ramya: ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ ಹಿಂದೆ ಬಿದ್ದ ಹಾಸ್ಟೆಲ್ ಹುಡುಗರು! ಯಾಕೆ? ಏನಾಯ್ತು?

ಕ್ವೀನ್ ರಮ್ಯಾ ಹಿಂದೆ ಬಿದ್ದ ಹಾಸ್ಟೆಲ್ ಹುಡುಗರು

ಕ್ವೀನ್ ರಮ್ಯಾ ಹಿಂದೆ ಬಿದ್ದ ಹಾಸ್ಟೆಲ್ ಹುಡುಗರು

ನಮ್ಮ ಚಿತ್ರದ ಕಂಟೆಂಟ್ ಕೇಳಿ ರಮ್ಯಾ ಖುಷಿ ಆದರು. ನಮ್ಮ ಚಿತ್ರಕ್ಕೆ ಸಾಥ್ ಕೊಡಲು ಒಪ್ಪಿದರು. ಹಾಗಾಗಿಯೇ ನಮ್ಮ ಚಿತ್ರದ ವಿಶೇಷ ಟೀಸರ್​ ನಲ್ಲಿ ರಮ್ಯಾ ಅಭಿನಯಿಸಲು ಸಾಧ್ಯವಾಯಿತು. ಇಂದು ಸಂಜೆ 6 ಗಂಟೆಗೆ ಚಿತ್ರದ ರಮ್ಯಾ ಇರೋ ಟೀಸರ್ ರಿಲೀಸ್ ಆಗುತ್ತದೆ ಎಂದು ನಿರ್ಮಾಪಕ ವರುಣ್ ನ್ಯೂಸ್-18 ಕನ್ನಡ ಡಿಜಿಟಲ್​ಗೆ ಮಾಹಿತಿ ಕೊಟ್ಟರು.

ಮುಂದೆ ಓದಿ ...
  • News18 Kannada
  • Last Updated :
  • Bangalore [Bangalore], India
  • Share this:

ಚಂದನವನದ ಚೆಲುವೆ ಕ್ವೀನ್ (Actress Ramya) ರಮ್ಯಾ ಕಮ್ ಬ್ಯಾಕ್ ಮಾಡಿ ಆಗಿದೆ. ಆ್ಯಪಲ್ ಬಾಕ್ಸ್ ಮೂಲಕ (Producer Ramya) ನಿರ್ಮಾಪಕಿಯೂ ಆಗ್ತಿದ್ದಾರೆ. ಅದರ ಮಧ್ಯೆ ಸಿನಿಮಾ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಇದೇನೋ ಹೊಸ ವಿಚಾರ ಅಲ್ಲವೇ ಅಲ್ಲ ಬಿಡಿ. ಆದರೆ ಬ್ಯೂಟಿ ಕ್ವೀನ್ ರಮ್ಯಾ ಹಿಂದೆ ಆ ಹುಡುಗರೆಲ್ಲ ಬಿದ್ದು ಬಿಟ್ಟಿದ್ದಾರೆ. ಇವರ ಈ ಕಾಟಕ್ಕೆ ರಮ್ಯ ಏನ್ ಮಾಡಿದ್ದಾರೆ ಗೊತ್ತೇ? ಇದುವೇ ಈಗಿನ (Film Updates) ಅಪ್ ​ಡೇಟ್ ಅಂತ ಹೇಳಬಹುದು. ಹೌದು, ಇದು ನಿಜವಾದ ವಿಷಯವೇ ಆಗಿದೆ. ಆದರೆ ರೀಲ್​ಗೆ ಸಂಬಂಧಿಸಿದ ವಿಷಯ ಅಂತಲೇ ಹೇಳಬಹುದು. ಇದರ ಬಗೆಗಿನ ಇನ್ನಷ್ಟು ಮಾಹಿತಿಯನ್ನ ಚಿತ್ರದ ನಿರ್ಮಾಪಕ (Producer Varun) ವರುಣ್ ಈಗ ನ್ಯೂಸ್-18 ಕನ್ನಡ ಡಿಜಿಟಲ್​ಗೆ ಹಂಚಿಕೊಂಡಿದ್ದಾರೆ.


ಸ್ಯಾಂಡಲ್​​ವುಡ್ ಕ್ವೀನ್ ರಮ್ಯಾ ಹಿಂದೆ ಬಿದ್ದ ಹಾಸ್ಟೆಲ್ ಹುಡುಗರು


ಕನ್ನಡದಲ್ಲಿ ಒಂದು ಸಿನಿಮಾ ಬರುತ್ತಿದೆ. ಇದು ಕಂಪ್ಲೀಟ್ ಹೊಸಬರ ಸಿನಿಮಾ. ಇದರಲ್ಲಿ ಹಾಸ್ಟೆಲ್ ಹುಡುಗರ ಕಥೆನೆ ಇದೆ. ಇದನ್ನ ಕೇಳಿದ ಕನ್ನಡದ ಸ್ಟಾರ್​ಗಳೆಲ್ಲ ವಾರೆ ವ್ಹಾ ಎಂದು ಬೆನ್ನುತಟ್ಟಿದ್ದಾರೆ.


ಇದೇ ಖುಷಿಯಲ್ಲಿಯೇ ಇದ್ದ ಹಾಸ್ಟೆಲ್ ಹುಡುಗರು ಸಿನಿಮಾದ ಹುಡುಗರು, ರಮ್ಯಾ ಕಂಡು ಫುಲ್ ಥ್ರಿಲ್ ಆಗಿದ್ದಾರೆ. ಅವರ ಹಿಂದೇನೂ ಬಿದ್ದಿದ್ದಾರೆ. ಹೌದು, ಹಿಂದೆ ಬಿದ್ದಿದ್ದಾರೆ ಅಂದ್ರೆ, ಅದು ವಿಶೇಷಣೆಯ ಮಾತು ಅಷ್ಟೆ. ಸಿನಿಮಾ ಟೀಮ್ ಪಕ್ಕಾ ಪ್ಲಾನ್ ಮಾಡಿಕೊಂಡೇ ಸ್ಯಾಂಡಲ್​ವುಡ್ ಕ್ವೀನ್ ರಮ್ಯಾರನ್ನ ಅಪ್ರೋಚ್ ಮಾಡಿದೆ.


Sandalwood Queen Ramya Support Newcomer Hostel Hudugaru Bekagiddare Film
ಕ್ವೀನ್ ರಮ್ಯಾ ಮೀಟ್ ಆದ ಹಾಸ್ಟೆಲ್ ಟೀಮ್


ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ ಮೀಟ್ ಆದ ಹಾಸ್ಟೆಲ್ ಟೀಮ್
"ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ" ಸಿನಿಮಾ ವಿಶೇಷವಾಗಿಯೇ ಇದೆ. ಇದರ ಕಂಟೆಂಟ್ ಪ್ರಮೋಷನ್​ಗಾಗಿ ಈಗಾಗಲೇ ಹಲವು ವಿಶೇಷತೆಗಳು ಆಗಿವೆ. ಆದರೆ ಈ ಸಲ ಕ್ವೀನ್ ರಮ್ಯಾ ಈ ಹುಡುಗರಿಗೆ ಸಾಥ್ ಕೊಟ್ಟಿದ್ದಾರೆ. ತಮ್ಮ ಸಿನಿ ಜರ್ನಿಗೆ ಕಮ್ ಬ್ಯಾಕ್ ಮಾಡಿರೋ ರಮ್ಯಾ ಹೊಸಬರಿಗೆ ತಮ್ಮದೇ ರೀತಿಯಲ್ಲಿಯೇ ಸಪೋರ್ಟ್ ಮಾಡುತ್ತಿದ್ದಾರೆ.


ಇದನ್ನೂ ಓದಿ: Singara Siriye Song Secret: ಸಿಂಗಾರ ಸಿರಿಯೇ ಹಾಡು ಹಿಟ್ ಆದ ರಹಸ್ಯವಿದು! ರೈಟರ್ ಪ್ರಮೋದ್ ಮರವಂತೆ ಹೇಳೋದು ಹೀಗೆ


ಹೌದು, ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ ಹೊಸಬರ "ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ" ಚಿತ್ರಕ್ಕೆ ಜೊತೆಯಾಗಿದ್ದಾರೆ. ಸಿನಿಮಾದ ಟೀಮ್​ ಗೆ ತಮ್ಮದೇ ರೀತಿಯಲ್ಲಿ ಜೋಡಿಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಚಿತ್ರದ ನಿರ್ಮಾಪಕ ವರುಣ್ ನ್ಯೂಸ್-18 ಕನ್ನಡ ಡಿಜಿಟಲ್​ಗೆ ಒಂದಷ್ಟು ವಿಷಯ ರಿವೀಲ್ ಮಾಡಿದ್ದಾರೆ.


Sandalwood Queen Ramya Support Newcomer Hostel Hudugaru Bekagiddare Film
ಹೊಸ ಹುಡುಗರ ಈ ಚಿತ್ರಕ್ಕೆ ರಮ್ಯಾ ಸಾಥ್


ರಮ್ಯಾ ಅವರನ್ನ ಅಪ್ರೋಚ್ ಮಾಡಿದೆವು. ನಮ್ಮ ಚಿತ್ರದ ಕಂಟೆಂಟ್ ಕೇಳಿ ರಮ್ಯಾ ಖುಷಿ ಆದರು. ನಮ್ಮ ಚಿತ್ರಕ್ಕೆ ಸಾಥ್ ಕೊಡಲು ಒಪ್ಪಿದರು. ಹಾಗಾಗಿಯೇ ನಮ್ಮ ಚಿತ್ರದ ವಿಶೇಷ ಟೀಸರ್​ ನಲ್ಲಿ ರಮ್ಯಾ ಅಭಿನಯಿಸಲು ಸಾಧ್ಯವಾಯಿತು. ಇಂದು ಸಂಜೆ 6 ಗಂಟೆಗೆ ಚಿತ್ರದ ರಮ್ಯಾ ಇರೋ ಟೀಸರ್ ರಿಲೀಸ್ ಆಗುತ್ತದೆ ಎಂದು ನಿರ್ಮಾಪಕ ವರುಣ್ ಮಾಹಿತಿ ಕೊಟ್ಟರು.


ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ ಟೀಸರ್​ ನಲ್ಲಿ ಮಾತ್ರ ಇರ್ತಾರಾ?


"ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ" ಚಿತ್ರಕ್ಕೆ ಈಗೊಂದು ಬಲ ಬಂದಿದೆ. ಸಿನಿಮಾದ ಹೊಸ ಹುಡುಗರ ಈ ಚಿತ್ರಕ್ಕೆ ರಮ್ಯಾ ಸಾಥ್ ಕೊಟ್ಟಿರೋದೇ ಇದಕ್ಕೆ ಕಾರಣ ಅಂತಲೇ ಹೇಳಬಹುದು. ಆದರೆ ರಮ್ಯಾ ಈ ಹುಡುಗರ ಜೊತೆಗೆ ಕೇವಲ ಟೀಸರ್​​ ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರಾ?


ಇಲ್ಲವೇ ಇಡೀ ಸಿನಿಮಾದಲ್ಲಿ ಕೂಡ ರಮ್ಯಾ ಇರ್ತಾರಾ? ಈ ಒಂದು ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಅದು ಕೂಡ ರಿವೀಲ್ ಆಗಬಹುದು. ಆದರೆ ಸದ್ಯಕ್ಕೆ ರಮ್ಯಾ ಇರೋ ಟೀಸರ್ ಮಾತ್ರ ರಿಲೀಸ್ ಆಗುತ್ತಿದೆ.


ಇದನ್ನೂ ಓದಿ: Gaalipata 2: ಟಿವಿಯಲ್ಲಿ ಹಾರಾಡಲು ಗಾಳಿಪಟ 2 ರೆಡಿ, ಜೀ ಕನ್ನಡದಲ್ಲಿ ಸಿನಿಮಾ!


ಇನ್ನು ಹೊಸಬರ ಈ ಚಿತ್ರವನ್ನ ನಿತಿನ್ ಕೃಷ್ಣಮೂರ್ತಿ ಡೈರೆಕ್ಟ್ ಮಾಡುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಕೊಟ್ಟಿದ್ದಾರೆ. ಗೆಳೆಯರಾದ ವರುಣ್ ಮತ್ತು ಪ್ರಜ್ವಲ್ ತಮ್ಮ ವರುಣ್ ಸ್ಟುಡಿಯೋದ ಹಾಗೂ ಗುಲ್ಮೋಹರ್ ಬ್ಯಾನರ್​ನಿಂದಲೇ ಈ ಚಿತ್ರವನ್ನ ನಿರ್ಮಿಸಿದ್ದಾರೆ. ಮುಂದಿನ ವರ್ಷ ಜನವರಿ ತಿಂಗಳಲ್ಲಿಯೇ ಚಿತ್ರ ರಿಲೀಸ್ ಆಗುತ್ತಿದೆ.

First published: