Actress Ramya: ವಿಡಿಯೋ ಮೂಲಕ ಅಭಿಮಾನಿಗಳ ತಲೆಗೆ ಹುಳ ಬಿಟ್ಟ ರಮ್ಯಾ, ಹೊಸ ಸಿನಿಮಾದ ಶೂಟಿಂಗ್ ಸ್ಟಾರ್ಟ್​ ಮಾಡಿದ್ರಾ ಕ್ವೀನ್​?

Sandalwood Queen Ramya: ಅಲ್ಲದೇ ರಮ್ಯಾ ಹಾಗೂ ರಕ್ಷಿತ್ ಶೆಟ್ಟಿ ಬಗ್ಗೆ ಸಹ ಹಲವಾರು ಸುದ್ದಿ ಕೇಳಿ ಬಂದಿತ್ತು. ರಕ್ಷಿತ್ ಶೆಟ್ಟಿ ಹಾಗೂ ರಮ್ಯಾ ನಡುವೆ ಪ್ರೀತಿಯಾಗಿದೆ, ಇಬ್ಬರು ಮದುವೆಯಾಗುತ್ತಾರೆ ಎಂಬೆಲ್ಲಾ ಗುಸುಗುಸು ಕೇಳಿ ಬಂದಿತ್ತು.

ನಟಿ ರಮ್ಯಾ

ನಟಿ ರಮ್ಯಾ

  • Share this:
ರಮ್ಯಾ (Ramya), ಸ್ಯಾಂಡಲ್​ ವುಡ್​ ಕ್ವೀನ್ (Sandalwood Queen) ಎಂದು ಪ್ರಸಿದ್ದರಾದವರು. ಇವರ ಹೆಸರು ಕೇಳಿದರೆ ಸಾಕು ಸಿನಿಪ್ರಿಯರ ಮನದಲ್ಲಿ ಅದೇನೋ ಸಂತೋಷ. ಸ್ಯಾಂಡಲ್​ವುಡ್​ನಲ್ಲಿ ಅದೆಷ್ಟೋ ಜನ ಹೀರೋಯಿನ್​ಗಳು ಬಂದು ಹೋಗಿದ್ದಾರೆ, ಆದರೆ ರಮ್ಯಾಗೆ ಸರಿ ಸಾಟಿ ಯಾರೂ ಇಲ್ಲ ಎಂಬುದು ನಿಜ. ಸಾಲು ಸಾಲು ಹಿಟ್​ ಚಿತ್ರಗಳನ್ನು (Movies) ನೀಡಿದ ರಮ್ಯಾ ಎಂದರೆ ಕರುನಾಡ ಜನತೆಗೆ ಈಗಲೂ ಅಷ್ಟೇ ಅಭಿಮಾನಿ. ಆದರೆ ಕಳೆದ ಕೆಲ ವರ್ಷಗಳಿಂದ ರಮ್ಯಾ ಚಿತ್ರರಂಗದಿಂದ ಕಾಣೆಯಾಗಿದ್ದರು. ಅಭಿಮಾನಿಗಳು (Fans) ಮನದರಸಿ ಎಲ್ಲಿ ಎಂದು ಹುಡುಕಿದ್ದರು. ರಾಜಕೀಯದಲ್ಲಿ (Politics) ಬ್ಯುಸಿ ಇದ್ದ ನಟಿ ನಂತರ ಅಲ್ಲಿಂದ ಸಹ ಮಾಯವಾಗಿದ್ದರು. ಆದರೆ ಇದೀಗ ಮತ್ತೆ ಪ್ರತ್ಯಕ್ಷವಾಗಿದ್ದು, ಅಭಿಮಾನಿಗಳ ಸಂತೋಷಕ್ಕೆ ಕಾರಣವಾಗಿದೆ. ಅದರಲ್ಲೂ ರಮ್ಯಾ ಒಂದು ವಿಡಿಯೋ (Video) ಶೇರ್ ಮಾಡಿಕೊಂಡಿದ್ದು, ಅವರು ಯಾವುದಾದರೂ ಚಿತ್ರವನ್ನು ಒಪ್ಪಿಕೊಂಡಿದ್ದಾರಾ ಎಂಬ ಅನುಮಾನ ಮೂಡಿದೆ.

ಹೊಸ ವಿಡಿಯೋ ಶೇರ್ ಮಾಡಿದ ರಮ್ಯಾ

ಇನ್ನು ಬಹಳಷ್ಟು ದಿನಗಳಿಂದ ಅಭಿಮಾನಿಗಳು ರಮ್ಯಾ ಅವರಿಗೆ ಕಮ್​ ಬ್ಯಾಕ್​ ಮಾಡುವಂತೆ ಒತ್ತಾಯಿಸುತ್ತಿದ್ದರು. ಅಭಿಮಾನಿಗಳು ಯಾವಾಗಲೂ ಕೇಳೋದು ಯಾವಾಗ ಸಿನಿಮಾಕ್ಕೆ ವಾಪಸ್ ಆಗ್ತೀರಾ? ಯಾವಾಗ ನಿಮ್ಮ ಹೊಸ ಸಿನಿಮಾ ಬರುತ್ತೆ? ಸಿನಿಮಾದಲ್ಲಿ ನಿಮ್ಮ ಅಭಿನಯ ನೋಡಿ ಕಣ್ತುಂಬಿಕೊಳ್ಳೋದು ಯಾವಾಗ? ಅಂತ ಹತ್ತು ಹಲವು ಪ್ರಶ್ನೆ. ಇದಕ್ಕೆಲ್ಲ ರಮ್ಯಾ ಉತ್ತರ ನೀಡಿದ್ದರು. ನಾನು ಬೇಗ ಸಿನಿಮಾಗೆ ವಾಪಸ್ ಬರ್ತಿನಿ ಎನ್ನುವ ಮೂಲಕ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ಕೊಟ್ಟಿದ್ದಾರೆ. ಆದರೆ ಯಾವ ಚಿತ್ರ? ಹೀರೋ ಯಾರು? ಯಾವಾಗ ಶೂಟಿಂಗ್ ಸೇರಿದಂತೆ ಯಾವುದೇ ಮಾಹಿತಿಗಳನ್ನು ರಮ್ಯಾ ಬಿಟ್ಟುಕೊಟ್ಟಿಲ್ಲ.

ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟೀವ್ ಇರುವ ರಮ್ಯಾ, ಇತ್ತಿಚೆಗೆ ಬಹಳ ಫೋಟೋ ಹಾಗೂ ವಿಡಿಯೋ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಸದ್ಯ ಸಭೆ, ಸಮಾರಂಭ ಎಂದು ಬ್ಯುಸಿ ಇರುವ ನಟಿ ನಿನ್ನೆಯಷ್ಟೇ ನಟಿ ಕಾವ್ಯಾ ಶಾ ಮದುವೆಯಲ್ಲಿ ಭಾಗವಹಿಸಿದ್ದರು. ಆಗ ಕಾರಿನಲ್ಲಿ ಮಾಡಿರುವ ಒಂದು ವಿಡಿಯೋ ಹಂಚಿಕೊಂಡಿದ್ದು, ಅಭಿಮಾನಿಗಳು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.  ರಮ್ಯಾ ಮತ್ತು ಅವರ ಗೆಳತಿ 1 ಡೈಲಾಗ್​ ಅನ್ನು 1 ಟೇಕ್ 2 ಟೇಕ್ ಎಂದು ಟೇಕ್​ ತೆಗೆದುಕೊಂಡು ಹೇಳಿದ್ದು, ಆ ವಿಡಿಯೋ ಶೇರ್ ಮಾಡಿದ್ದಾರೆ.   ಈ ಮೂಲಕ ರಮ್ಯಾ ಏನಾದರು ಸುಳಿವು ಕೊಡುತ್ತಿದ್ದಾರಾ ಎಂಬ ಅನುಮಾನ ಹುಟ್ಟಿಸಿದೆ.
ಇದನ್ನೂ ಓದಿ: ಮಕ್ಕಳ ಜೊತೆ ಜಾಲಿ ಮೂಡ್​ನಲ್ಲಿ ರಾಕಿ ಭಾಯ್, ಹಕ್ಕಿ ಹಿಡಿದ ರಾಧಿಕಾ ಪಂಡಿತ್ ರಿಯಾಕ್ಷನ್ ನೋಡಿ

ರಮ್ಯಾ ಕಮ್​ ಬ್ಯಾಕ್​ಗೆ ಕಾಯ್ತಿದ್ದಾರೆ ಫ್ಯಾನ್ಸ್ 

ಅಭಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ರಮ್ಯಾ ನಂತರ ತಿರುಗಿ ನೋಡಲಲ್ಲಿ, ಒಂದರ ನಂತರ ಒಂದು ಹಿಟ್​ ಸಿನಿಮಾಗಳನ್ನು ನೀಡಿ, ಜನರಿಗೆ ಇಷ್ಟವಾದರೂ. ಪುನೀತ್ ರಾಜ್​ಕುಮಾರ್ ಜೊತೆ ಹೆಚ್ಚಿನ ಸಿನಿಮಾದಲ್ಲಿ ನಟಿಸಿದ ರಮ್ಯಾ ಅರಸು ಚಿತ್ರದ ನಂತರ ಮತ್ತೆ ಪುನೀತ್ ಜೊತೆ ಕಾಣಿಸಿಕೊಂಡಿಲ್ಲ. ಅವರಿಬ್ಬರದ್ದು ಹಿಟ್​ ಜೋಡಿ ಎಂಬುದು ಬಹಳಷ್ಟು ಸಲ ಸಾಬೀತಾಗಿದೆ. ರಮ್ಯಾ ಪುನೀತ್ ಜೊತೆ ಮತ್ತೆ ಕಮ್​ ಬ್ಯಾಕ್​ ಮಾಡುವ ಆಸೆ ಹೊಂದಿದ್ದರು. ಅಪ್ಪು ನಿಧನದ ಸಮಯದಲ್ಲಿ ಮಾತನಾಡಿದ್ದ ರಮ್ಯಾ, ಮತ್ತೆ ನಾವಿಬ್ಬರು ನಟಿಸಬೇಕಿತ್ತು ಎಂದಿದ್ದರು. ಈ ಬಗ್ಗೆ ಹಿಂದೆಯೇ ಚರ್ಚೆಯಾಗಿತ್ತು. ಇಬ್ಬರೂ ಒಪ್ಪಿಗೆ ನೀಡಿಯೂ ಆಗಿತ್ತು ಎಂದಿದ್ದರು.

ಇದನ್ನೂ ಓದಿ: ಪ್ರಿಯಾಂಕಾ ಚೋಪ್ರಾ ಮದುವೆ ಡ್ರೆಸ್​ ಕಾಪಿ ಮಾಡಿದ್ರಾ ನಯನತಾರಾ! ಮದ್ವೆ ಮುಗಿದ ಮೇಲೆ ಏನಿದು ಗುಸುಗುಸು!

ಅಲ್ಲದೇ ರಮ್ಯಾ ಹಾಗೂ ರಕ್ಷಿತ್ ಶೆಟ್ಟಿ ಬಗ್ಗೆ ಸಹ ಹಲವಾರು ಸುದ್ದಿ ಕೇಳಿ ಬಂದಿತ್ತು. ರಕ್ಷಿತ್ ಶೆಟ್ಟಿ ಹಾಗೂ ರಮ್ಯಾ ನಡುವೆ ಪ್ರೀತಿಯಾಗಿದೆ, ಇಬ್ಬರು ಮದುವೆಯಾಗುತ್ತಾರೆ ಎಂಬೆಲ್ಲಾ ಗುಸುಗುಸು ಕೇಳಿ ಬಂದಿತ್ತು. ಅಲ್ಲದೇ ಈಗ ರಮ್ಯಾ ರಕ್ಷಿತ್ ಸಿನಿಮಾ ಮೂಲಕವೇ ಕಮ್​ ಬ್ಯಾಕ್​ ಮಾಡುತ್ತಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ರಮ್ಯಾ ಆಗಲಿ ಅಥವಾ ರಕ್ಷಿತ್ ಆಗಲಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಅದೇನೇ ಇರಲಿ ರಮ್ಯಾ ಕಮ್​ ಬ್ಯಾಕ್​ ಮಾಡುತ್ತಿರುವ ವಿಚಾರ ಸ್ಯಾಂಡಲ್​ವುಡ್​ಗೆ ನಿಜಕ್ಕೂ ಸಂತೋಷದ ಸುದ್ದಿ.
Published by:Sandhya M
First published: