ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಅಭಿನಯದಲ್ಲಿ (Sanju Weds Geetha Film Untold Story) ಒಂದು ಅದ್ಭುತ ಚಿತ್ರ ಬಂದಿತ್ತು. ಆ ಚಿತ್ರ (Ramya Movie Intresting Story) ಬಂದು ಹೆಚ್ಚು-ಕಡಿಮೆ 12 ವರ್ಷ ಆಗಿದೆ. ಈ ಚಿತ್ರದಲ್ಲಿ ರಮ್ಯಾ ಅದ್ಭುತವಾಗಿಯೇ ಅಭಿನಯಿಸಿದ್ದರು. ಚಿತ್ರ ಸಾಹಿತಿ ಕವಿರಾಜ್ ಈ ಚಿತ್ರಕ್ಕೆ ತುಂಬಾ ಹಾರ್ಟ್‌ಟಚೇಬಲ್ (Kannada Super Hit Film) ಹಾಡುಗಳನ್ನ ಬರೆದುಕೊಟ್ಟಿದ್ದರು. ರಮ್ಯಾ ನಿರ್ವಹಿಸಿದ್ದ ಗೀತಾ ಪಾತ್ರಕ್ಕೆ ಈ ಸಾಲುಗಳು ಹೇಳಿ ಮಾಡಿಸಿದ್ದಂತೇನೆ ಇದ್ದವು. ಈ ಚಿತ್ರದ ಚಿತ್ರೀಕರಣ ಅಷ್ಟು ಸುಲಭಕ್ಕೆ ಆಗಿಲ್ಲ ಬಿಡಿ. ಸೂಪರ್ ಡೂಪರ್ ಹಿಟ್ ಆಗಿರೋ ಸಂಜು ವೆಡ್ಸ್ ಗೀತಾ ಒಂದು ಹಂತಕ್ಕೆ ನಿಂತೇ ಹೋಗಿತ್ತು. ಆರಂಭದಲ್ಲಿ ಫಿನಾನ್ಸಿಯಲ್ ತೊಂದರೆಯಿಂದ ಸಿನಿಮಾ ಕೆಲಸ ಸ್ಟಾಪ್ ಆಗಿತ್ತು.
ಆಗ ದೇವತೆಯಂತೆ (Ramya Movie Untold Story) ಬಂದವರು ಯಾರು ಗೊತ್ತೇ? ಆ ದೇವತೆ ಇರದೇ ಇದ್ದರೇ ಸಂಜು ವೆಡ್ಸ್ ಗೀತಾ ಆಗ್ತಾನೇ ಇರಲಿಲ್ಲ ನೋಡಿ. ಅವರಾರು? ಇಲ್ಲಿದೆ ಓದಿ.
ಕ್ವೀನ್ ರಮ್ಯಾ ಅವರಿಂದ ಮರು ಜೀವ ಪಡೆದ ಸಂಜು ವೆಡ್ಸ್ ಗೀತಾ
ಸಂಜು ವೆಡ್ಸ್ ಗೀತಾ ಸಿನಿಮಾ ಸ್ಪೆಷಲ್ ಆಗಿದೆ. ಈ ಸ್ಪೆಷಲ್ ಸಿನಿಮಾದ ನಿರ್ಮಾಣದ ಹಿಂದೆ ಒಂದಲ್ಲ ಎರಡಲ್ಲ, ಹಲವು ರೋಚಕ ಕಥೆಗಳಿವೆ. ಆ ಕಥೆಗಳಲ್ಲಿ ವೀಕೆಂಡ್ ವಿಥ್ ರಮೇಶ್ ಶೋದಲ್ಲಿ ನಟಿ ರಮ್ಯಾ ಒಂದಷ್ಟು ಹೇಳಿಕೊಂಡಿದ್ದಾರೆ.
ಆ ಕಥೆಗಳಲ್ಲಿ ಇಲ್ಲೊಂದಿಷ್ಟು ಹೇಳ್ತಾ ಹೋಗಿದ್ದೇವೆ ಓದಿ. ಅಂದ್ಹಾಗೆ ರಮ್ಯಾ ಅಭಿನಯದ ಸಂಜು ವೆಡ್ಸ್ ಗೀತಾ ಚಿತ್ರದ ಕಥೆ ತುಂಬಾ ಚೆನ್ನಾಗಿದೆ. ಈ ಕಥೆ ಕೇಳಿದ್ದ ರಮ್ಯಾ ಇದನ್ನ ತುಂಬಾನೇ ಇಷ್ಟಪಟ್ಟಿದ್ದರು. ಚಿತ್ರ ಮಾಡಲು ಕೂಡ ಒಪ್ಪಿಕೊಂಡರು.
ಸಂಜು ವೆಡ್ಸ್ ಗೀತಾ ಸ್ಟಾಪ್ ಆದಾಗ ಮರು ಜೀವ ಕೊಟ್ಟ ರಮ್ಯ
ಸಿನಿಮಾ ಕೂಡ ಶುರು ಆಯಿತು. ಎಲ್ಲವೂ ಸುಗಮವಾಗಿಯೇ ನಡೆಯಿತು. ಚಿತ್ರಕ್ಕೆ ಮುಹೂರ್ತ ಕೂಡ ಆಯಿತು. ಆದರೆ ಅದ್ಭುತ ಕಥೆಯ ಸಂಜು ವೆಡ್ಸ್ ಗೀತಾ ಒಂದು ಹಂತಕ್ಕೆ ನಿಂತೇ ಹೋಯಿತು. ಒಳ್ಳೆ ಸಿನಿಮಾ ನಿಂತು ಹೋದ್ರೆ ಹೇಗೆ ಅನ್ನೋ ಚಿಂತೆ ಕೂಡ ಡೈರೆಕ್ಟರ್ ನಾಗಶೇಖರ್ ಸೇರಿದಂತೆ ಎಲ್ಲರ ಮನಸ್ಸಿನಲ್ಲೂ ಇತ್ತು.
ಈ ಒಂದು ಮನಸ್ಥಿತಿಯಲ್ಲಿದ್ದಾಗಲೇ, ದೇವತೆಯಂತೆ ಬಂದವ್ರು ಯಾರು ಗೊತ್ತೇ? ಅದು ಬೇರೆ ಯಾರೋ ಅಲ್ಲ. ಚಿತ್ರದ ಗೀತಾ ಪಾತ್ರಧಾರಿ ನಾಯಕಿ ಸ್ಯಾಂಡಲ್‌ವುಡ್ ರಮ್ಯಾ. ಹೌದು, ಇದು ನಿಜ ನಿಂತು ಹೋದ ಸಿನಿಮಾ ಸಂಜು ವೆಡ್ಸ್ ಗೀತಾ ಮತ್ತೆ ಶುರು ಆಯಿತು.
ಸಂಜು ವೆಡ್ಸ್ ಗೀತಾ ಚಿತ್ರಕ್ಕೆ ರಮ್ಯಾ 60 ಲಕ್ಷ ಕೊಟ್ಟಿದ್ಯಾಕೆ?
ಸಂಜು ವೆಡ್ಸ್ ಗೀತಾ ಚಿತ್ರ ಮತ್ತೆ ಆರಂಭ ಆಗಲು ರಮ್ಯಾ ದುಡ್ಡು ಕೊಟ್ಟರು. ಸಿನಿಮಾ ಶುರು ಮಾಡಿ ಅಂತಲೇ ಹೇಳಿದರು. ಹಾಗೆ ರಮ್ಯಾ ಕೊಟ್ಟ ದುಡ್ಡು ಎಷ್ಟು ಗೊತ್ತೇ? ಬರೋಬ್ಬರಿ 60 ಲಕ್ಷದಷ್ಟು ದುಡ್ಡನ್ನ ರಮ್ಯಾ ಕೊಟ್ಟರು.
ರಮ್ಯಾ ಕೊಟ್ಟ ದುಡ್ಡಿನಿಂದ ಸಂಜು ವೆಡ್ಸ್ ಗೀತಾ ಸಿನಿಮಾ ಶುರು ಆಯಿತು. ಸೂಪರ್ ಡೂಪರ್ ಹಿಟ್ ಆಯಿತು. ಇದಕ್ಕೂ ಹೆಚ್ಚಾಗಿ ರಮ್ಯಾ ಅವರ ಈ ಚಿತ್ರ ಇಡೀ ನಾಡಿನ ಹೆಣ್ಣುಮಕ್ಕಳ ಮನಸ್ಥಿತಿಯನ್ನ ಅಷ್ಟೇ ಸೂಕ್ಷ್ಮವಾಗಿಯೇ ಬಿಂಬಿಸಿತ್ತು.
ನಿರ್ದೇಶಕ ನಾಗಶೇಖರ್ ಅವರು ತಮ್ಮ ಈ ಚಿತ್ರದ ಬಗ್ಗೆ ಸಾಕಷ್ಟು ಪ್ರೀತಿಯನ್ನ ಇಟ್ಟುಕೊಂಡಿದ್ದಾರೆ. ಈಗಲೂ ಈ ಚಿತ್ರದ ಪಾರ್ಟ್-2 ಮಾಡುವ ಮನಸ್ಸು ಕೂಡ ಇಟ್ಟುಕೊಂಡಿದ್ದಾರೆ. ಆದರೆ ಈ ಬಗ್ಗೆ ವೀಕೆಂಡ್ ವಿಥ್ ರಮೇಶ್ ಶೋದಲ್ಲಿ ಸಂಜು ವೆಡ್ಸ್ ಗೀತಾ-2 ಬಗ್ಗೆ ಹೇಳಿಕೊಂಡಿಲ್ಲ.
ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಅವರಿಗೆ ನಾಗಶೇಖರ್ ಕೊಟ್ಟ ಗಿಫ್ಟ್ ಏನು?
ಆದರೆ ಸಂಜು ವೆಡ್ಸ್ ಗೀತಾ ಚಿತ್ರದ ಕ್ಲಾಪ್ ಬೋರ್ಡ್ ಅನ್ನ ಈ ಶೋದಲ್ಲಿ ಡೈರೆಕ್ಟರ್ ನಾಗಶೇಖರ್ ಅವರು ರಮ್ಯಾ ಅವರಿಗೆ ಗಿಫ್ಟ್ ಆಗಿ ಕೊಟ್ಟಿದ್ದಾರೆ. ಚಿತ್ರದ ಸವಿಸವಿ ನೆನಪಿಗಾಗಿಯೇ ಈ ಒಂದು ಸ್ಪೆಷಲ್ ಉಡುಗೊರೆಯನ್ನ ನಾಗಶೇಖರ್ ಇಲ್ಲಿ ಕೊಟ್ಟಿದ್ದಾರೆ.
ಇದನ್ನೂ ಓದಿ: Shekhar Kapur: 15 ವರ್ಷಗಳ ಬಳಿಕ ಮತ್ತೆ ನಿರ್ದೇಶನಕ್ಕೆ ಮರಳಿದ ಶೇಖರ್ ಕಪೂರ್, ಮದುವೆ ಬಗ್ಗೆ ಏನು ಹೇಳಿದ್ದಾರೆ?
ಸಂಜು ವೆಡ್ಸ್ ಗೀತಾ ಸಿನಿಮಾದ ಒಂದು ದೃಶ್ಯವನ್ನ ಕೂಡ ರಮ್ಯಾ ಮತ್ತು ಶ್ರೀನಗರ ಕಿಟ್ಟಿ ಇಲ್ಲಿ ಆ್ಯಕ್ಟ್ ಮಾಡಿ ತೋರಿಸಿದ್ದಾರೆ. ಹೀಗೆ ರಮ್ಯಾ ಅವರ ಚಿತ್ರ ಜೀವನದಲ್ಲಿ ತುಂಬಾ ಸ್ಪೆಷಲ್ ಆಗಿಯೇ ಸಂಜು ವೆಡ್ಸ್ ಗೀತಾ ಸಿನಿಮಾ ನಿಲ್ಲುತ್ತದೆ ಅಂತಲೇ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ