ರಾಜ್ ಬಿ. ಶೆಟ್ಟಿ ಅವರ ಬಹುನಿರೀಕ್ಷಿತ ಸಿನಿಮಾ ಸ್ವಾತಿ ಮುತ್ತಿನ ಮಳೆ ಹನಿಯೇ (Swathi Mutthina Male Haniye) ಅತ್ಯಂತ ಕಡಿಮೆ ಅವಧಿಯಲ್ಲಿ ಚಿತ್ರೀಕರಣ (Shooting) ಪೂರ್ತಿಗೊಳಿಸಿದೆ. ಇದೀಗ ಸಿನಿಮಾದ ನಿರ್ಮಾಪಕಿ ನಟಿ ರಮ್ಯಾ (Ramya) ಅವರು ಈ ಸಿನಿಮಾದಲ್ಲಿ ಸಿರಿ ರವಿಕುಮಾರ್ ಅವರ ಲುಕ್ ಬಿಡುಗಡೆ ಮಾಡಿದ್ದಾರೆ. ರಾಜ್ ಬಿ. ಶೆಟ್ಟಿ (Raj B Shetty), ನಟಿ ರಮ್ಯಾ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಸಿರಿ ರವಿಕುಮಾರ್ (Siri Ravikumar) ಅವರ ಪ್ರೇರಣಾ (Prerana) ಲುಕ್ ಅನ್ನು ಪೋಸ್ಟ್ ಮಾಡಿದ್ದಾರೆ. ಸಿಂಪಲ್ ಸೀರೆಯಲ್ಲಿ ಕಾಣಿಸಿಕೊಂಡಿರುವ ಪ್ರೇರಣಾ ಪಾತ್ರದ ಲುಕ್ ಪ್ರೇಕ್ಷಕರಿಗೆ (Viewers) ಮೆಚ್ಚುಗೆಯಾಗಿದೆ. ರಮ್ಯಾ ಅವರ ನಿರ್ಮಾಣ ಸಂಸ್ಥೆ ಆ್ಯಪಲ್ಬಾಕ್ಸ್ ಸ್ಟುಡಿಯೋಸ್ನ (Appleboxstudios) ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಈ ಹೊಸ ಪೋಸ್ಟ್ (Post) ರಿವೀಲ್ ಮಾಡಲಾಗಿದ್ದು ನಟಿ ಸಿರಿ ರವಿ ಕುಮಾರ್ ಅವರನ್ನು ಡಿಫರೆಂಟ್ ಲುಕ್ನಲ್ಲಿ ಇಲ್ಲಿ ಕಾಣಬಹುದಾಗಿದೆ.
ಹೇಗಿದೆ ಪ್ರೇರಣಾ ಲುಕ್?
ಹಚ್ಚ ಹಸಿರಿನ ದಾರಿ ಮಧ್ಯೆ ಕೈಯಲ್ಲಿ ಪುಸ್ತಕ ಹಿಡಿದು ತುಂಬಾ ಸಿಂಪಲ್ ಆಗಿರುವ ಸೀರೆ ಉಟ್ಟಿರುವ ಲುಕ್ನಲ್ಲಿ ಸಿರಿ ರವಿಕುಮಾರ್ ಕಾಣಿಸಿಕೊಂಡಿದ್ದಾರೆ. ಸೀರೆಗೆ ಚೆನ್ನಾಗಿ ಹೊಂದಿಕೊಳ್ಳುವಂತೆ ಸಡಿಲವಾಗಿ ಬಾಚಿ ಕಟ್ಟಿದ ಕೂದಲು, ಸರಳವಾದ ಮೇಕಪ್, ಸಿಂಪಲ್ ಸೌಂದರ್ಯವತಿಯಾಗಿ ಮಿಂಚಿದ್ದಾರೆ ನಟಿ.
ಈ ಫೋಟೋಗಳನ್ನು ಶೇರ್ ಮಾಡಿದ ಆ್ಯಪಲ್ ಬಾಕ್ಸ್ ಸ್ಟೂಡಿಯೋ, ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದಲ್ಲಿ ಪ್ರೇರಣಾ ಆಗಿ ಟ್ಯಾಲೆಂಡೆಟ್ ಸಿರಿ ರವಿಕುಮಾರ್ ಅವರನ್ನು ಪ್ರಸ್ತುತಪಡಿಸುತ್ತಿದ್ದೇವೆ ಎಂದು ಪೋಸ್ಟ್ಗೆ ಕ್ಯಾಪ್ಶನ್ ಕೊಟ್ಟಿದ್ದಾರೆ.
View this post on Instagram
ಪೋಸ್ಟ್ನಲ್ಲಿ ಪ್ರೇರಣಾ ಎನ್ನುವ ಪದದ ಅರ್ಥವನ್ನೂ ರಿವೀಲ್ ಮಾಡಲಾಗಿದೆ. ಸಂಸ್ಕೃತದಲ್ಲಿ ಮೂಲವನ್ನು ಹೊಂದಿರುವ ಈ ಪ್ರೇರಣಾ ಎನ್ನುವ ಪದದ ಅರ್ಥ ಸ್ಪೂರ್ಥಿ. ನಿಮಗೆ ಏನು ಸ್ಪೂರ್ಥಿ ನೀಡುತ್ತದೆ ಎಂದು ನಮಗೆ ತಿಳಿಸಿದ ಎಂದು ಪೋಸ್ಟ್ನ ಕೊನೆಯಲ್ಲಿ ಬರೆಯಲಾಗಿದೆ.
ಇದನ್ನೂ ಓದಿ: Siri Ravikumar: ರಮ್ಯಾ ಬದಲು ರಾಜ್ಗೆ ಜೋಡಿಯಾಗಲಿದ್ದಾರೆ ಸಿರಿ! ಇವರೇ ನೋಡಿ ಹೊಸ ಹೀರೋಯಿನ್
ನಟಿ ರಮ್ಯಾ ಅವರು ಫೇಸ್ಬುಕ್ನಲ್ಲಿ ಪೋಸ್ಟ್ ಶೇರ್ ಮಾಡಿದ್ದು ಇದರಲ್ಲಿ ಸಿರಿ ರವಿಕುಮಾರ್ ಅವರ ಪ್ರೇರಣಾ ಲುಕ್ ತೋರಿಸಿದ್ದಾರೆ. ಈ ಫೋಟೋ ನೋಡಿ ನೆಟ್ಟಿಗರು ಮೆಚ್ಚಿಕೊಂಡಿದ್ದು ಈಗಾಗಲೇ 800ಕ್ಕೂ ಹೆಚ್ಚು ಜನರು ರಿಯಾಕ್ಟ್ ಮಾಡಿದ್ದಾರೆ. ಬಹಳಷ್ಟು ಜನರು ಕಾಮೆಂಟ್ ಮಾಡಿ ಶುಭ ಹಾರೈಸಿದ್ದು ಇನ್ನು ಕೆಲವರು ನಾವು ನಿಮ್ಮನ್ನು ನಿರೀಕ್ಷಿಸುತ್ತಿದ್ದೇವೆ ಎಂದಿದ್ದಾರೆ.
ಯಾರು ಸಿರಿ ರವಿಕುಮಾರ್?
ಪ್ರೇರಣಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಸಿರಿ ರವಿಕುಮಾರ್ ಅವರು ಈ ಹಿಂದೆ ಸಕುಟುಂಬ ಸಮೇತ ಎನ್ನುವ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಈಗ ಅವರಿಗೆ ರಾಜ್ ಬಿ ಶೆಟ್ಟಿ ಸಿನಿಮಾದಲ್ಲಿ ನಟಿಸೋ ಅವಕಾಶ ಸಿಕ್ಕಿದೆ. ಕನ್ನಡ ಕೋಗಿಲೆ ಸೀಸನ್ 2 ಕಾರ್ಯಕ್ರಮಕ್ಕೆ ನಿರೂಪಕಿಯಾಗಿದ್ದ ಸಿರಿ ಅವರು ನಟಿ ಮಾತ್ರವಲ್ಲದೆ ರೂಪದರ್ಶಿಯೂ ಹೌದು. ಸೋಷಿಯಲ್ ಮೀಡಿಯಾದಲ್ಲಿಯೂ ಇವರು ಆ್ಯಕ್ಟಿವ್ ಆಗಿದ್ದಾರೆ. ನಟಿ 41 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಟಿ ಫೋಟೋಸ್ ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ