ನಿನ್ನ ಗುಂಗಲ್ಲೇ ನನ್ನೇ ಮರೆತೆ ನಾ ಎಂದ ಮೋಹಕ ತಾರೆ ರಮ್ಯಾ: ಯಾರಿಗೆ ಅಂತ ನೀವೇ ನೋಡಿ..

ನಿನ್ನ ಗುಂಗಲ್ಲೇ ನನ್ನೇ ಮರೆತೆ  ನಾ ಅಂತ ರಮ್ಯಾ ಪೋಸ್ಟ್(Post)​ ಹಾಕಿದ್ದಾರೆ. ಈ ಪೋಸ್ಟ್​ ಕಂಡ ನೆಟ್ಟಿಗರು ಫುಲ್​ ಖುಷಿಯಾಗಿದ್ದಾರೆ. ಮತ್ತೆ ರಮ್ಯಾ ಮದುವೆ ವಿಚಾರ ಹೇಳಿದ್ದಾರಾ ಅಂತ ಈ ಪೋಸ್ಟ್​ ನೋಡಿದವರಿಗೆ ಶಾಕ್(Shock)​ ಎದುರಾಗಿದೆ.

ನಟಿ ರಮ್ಯಾ

ನಟಿ ರಮ್ಯಾ

  • Share this:
ಸ್ಯಾಂಡಲ್​ವುಡ್​ ಕ್ವೀನ್(Sandalwood Queen)​ ಮೋಹಕ ತಾರೆ ರಮ್ಯಾ ಸದಾ ಒಂದೊಲ್ಲ ಒಂದು ಸುದ್ದಿಯಲ್ಲಿರುತ್ತಾರೆ. ಹೊಸ ಕಲಾವಿದರ ತಂಡ, ಹೊಸ ಸಿನಿಮಾ ಬಗ್ಗೆ ಸಂತಸ ವ್ಯಕ್ತಪಡಿಸಿರುವ ರಮ್ಯಾ (Ramya) ಆಗಾಗ ರಾಜಕೀಯ (Politics) ಮತ್ತು ಸಮಾಜದಲ್ಲಿ ನಡೆಯುತ್ತಿರುವ ಕೆಲವೊಂದು ಹ್ಯಾಪನಿಂಗ್ ವಿಚಾರಗಳ ಬಗ್ಗೆ ಬರೆದುಕೊಳ್ಳುತ್ತಾರೆ. ಕೆಲ ದಿನಗಳ ಹಿಂದೆ ಇನ್​ಸ್ಟಾಗ್ರಾಂನಲ್ಲಿ ಲೈವ್(Instagram Live)​ ಬಂದು ಸಖತ್​ ಸುದ್ದಿಯಾಗಿದ್ದರು. ಇದಾದ ಬಳಿಕ ರಮ್ಯಾ ಮತ್ತೆ ಸ್ಯಾಂಡಲ್​ವುಡ್​ಗೆ ಬರ್ತಾರೆ ಅನ್ನುವ ಸುದ್ದಿ ಹರಿದಾಡಿತ್ತು. ಪವರ್​ ಸ್ಟಾರ್​ ಪುನೀತ್​ ರಾಜ್​​ಕುಮಾರ್​(Puneeth Rajkumar) ಅಂತಿಮ ದರ್ಶನಕ್ಕೆ ಬಂದಿದ್ದ ರಮ್ಯಾ, ಮತ್ತೆ ಅಪ್ಪು ಜೊತೆ ಸಿನಿಮಾ ಮಾಡಬೇಕು ಅಂದುಕೊಂಡಿದ್ದೇ ಅಂತ ಕಣ್ಣೀರು ಹಾಕಿದ್ದರು.  ಮೊನ್ನೆ ಬೆಂಗಳೂರು ವಿಮಾನ ನಿಲ್ದಾಣದ ಬಗ್ಗೆ ಪೋಸ್ಟ್​ ಮಾಡಿದ್ದರು. ಇದೀಗ ಇವರ ಮತ್ತೊಂದು ಪೋಸ್ಟ್​ ಸಖತ್​ ವೈರಲ್​ ಆಗುತ್ತಿದೆ. ನಿನ್ನ ಗುಂಗಲ್ಲೇ ನನ್ನೇ ಮರೆತೆ  ನಾ ಅಂತ ರಮ್ಯಾ ಪೋಸ್ಟ್(Post)​ ಹಾಕಿದ್ದಾರೆ. ಈ ಪೋಸ್ಟ್​ ಕಂಡ ನೆಟ್ಟಿಗರು ಫುಲ್​ ಖುಷಿಯಾಗಿದ್ದಾರೆ. ಮತ್ತೆ ರಮ್ಯಾ ಮದುವೆ ವಿಚಾರ ಹೇಳಿದ್ದಾರಾ ಅಂತ ಈ ಪೋಸ್ಟ್​ ನೋಡಿದವರಿಗೆ ಶಾಕ್(Shock)​ ಎದುರಾಗಿದೆ. ಅಷ್ಟಕ್ಕೂ ರಮ್ಯಾ ಯಾರಿಗಾಗಿ ಈ ಹಾಡನ್ನು ಪೋಸ್ಟ್​ ಮಾಡಿದ್ದಾರೆ ಅಂತ ಯೋಚಿಸುತ್ತಿದ್ದಿರ?. ಇಲ್ಲಿದೆ ನೋಡಿ..

ಟ್ರಿಪ್​ ವಿಡಿಯೋ ಮಾಡಿ ರಮ್ಯಾ ಪೋಸ್ಟ್​!

ಮೋಹಕ ತಾರೆ ರಮ್ಯಾ ಫುಲ್​ ಟೈಮ್​ ಚಿತ್ರರಂಗ ತೊರೆದು ದಶಕಗಳೇ ಕಳೆದುಹೋಗಿದೆ. ರಾಜಕೀಯದಲ್ಲೂ ಅಷ್ಟು ಸಕ್ರಿಯವಾಗಿಲ್ಲ. ಮೊದಲಿನಿಂದಲೂ ರಮ್ಯಾ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್​ ಆಗಿದ್ದರು. ಈಗಲೂ ಇದ್ದಾರೆ. ಇತ್ತೀಚೆಗೆ ಟ್ರಿಪ್​ ಮಾಡಿದ ಫೋಟೋ, ವಿಡಿಯೋಗಳನ್ನು ರಮ್ಯಾ ಎಡಿಟ್​ ಮಾಡಿ, ನಿನ್ನ ಗುಂಗಲ್ಲೇ ನನ್ನೇ ಮರೆತೆ ನಾ ಎಂಬ ಕನ್ನಡ ಹಾಡನ್ನು ಸೇರಿಸಿದ್ದಾರೆ. ಈ ವಿಡಿಯೋವನ್ನು ಪೋಸ್ಟ್​ ಮಾಡಿದ್ದಾರೆ. ಟ್ರಿಪ್​ ಟೈಮ್​ನಲ್ಲಿ ರಮ್ಯಾ ಸಖತ್ ಎಂಜಾಯ್​ ಮಾಡಿರುವುದು ಫೋಟೋಗಳಲ್ಲಿ ನೋಡಬಹುದು.
ಇದನ್ನು ಓದಿ : 29ನೇ ವಸಂತಕ್ಕೆ ಕಾಲಿಟ್ಟ ಮಾಸ್ಟರ್​ ಪೀಸ್​ ಬೆಡಗಿ: ಗ್ಯಾಂಗ್​​ಸ್ಟಾರ್​​​ ಆಗಿ ಬರ್ತಾರೆ ಶಾನ್ವಿ!

ರಮ್ಯಾ ಮೆಕ್ಸಿಕೋ ಟ್ರಿಪ್​ ವಿಡಿಯೋ ವೈರಲ್​

ರಮ್ಯಾ ಇತ್ತೀಚೆಗೆ ಮೆಕ್ಸಿಕೋ ಟ್ರಿಪ್​ ಮುಗಿಸಿ ಬಂದಿದ್ದಾರೆ. ಅಲ್ಲಿ ಸಖತ್​ ಎಂಜಾಯ್​ ಮಾಡಿದ್ದಾರೆ. ಈ ಟ್ರಿಪ್​ನ ವಿಡಿಯೋವನ್ನು ರಮ್ಯಾ ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ. ಬೀಚ್​​ನಲ್ಲಿ ರಿಲ್ಯಾಕ್ಸ್​ ಮಾಡುವ ಫೋಟೋಗಳನ್ನು ಹಾಕಿದ್ದಾರೆ. ಸಮುದ್ರದ ನೀರಿನಲ್ಲಿ ರಮ್ಯಾ ಈಜು ಮಾಡುತ್ತಿರುವ ಫೋಟೋ ಕೂಡ ಇದರಲ್ಲಿ ಇದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್​ ಆಗುತ್ತಿದೆ. ದಯವಿಟ್ಟು ಸಿನಿಮಾ ರಂಗಕ್ಕೆ ವಾಪಸ್​ ಬನ್ನಿ ನನ್ನ ದೇವತೆ ಅಂತ ಒಬ್ಬ ಅಭಿಮಾನಿ ಕಮೆಂಟ್​ ಮಾಡಿದ್ದಾನೆ.

ಇದನ್ನು ಓದಿ : ಮದ್ವೆಗೆ ಕರೆಯದಿದ್ರೂ ತನ್ನ ಪರ್ಸನಲ್​ ಬಾಡಿಗಾರ್ಡ್​ ಕಳಿಸಿಕೊಟ್ಟ ಸಲ್ಮಾನ್​ ಖಾನ್​!

ಏರ್​ಪೋರ್ಟ್​ ಬಗ್ಗೆ ಪೋಸ್ಟ್​ ಹಾಕಿದ್ದ ರಮ್ಯಾ!

ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿದ ನಟಿ ರಮ್ಯಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇಲ್ಲಿನ ವ್ಯವಸ್ಥೆ ಬಗ್ಗೆ ಬರೆದುಕೊಂಡಿದ್ದಾರೆ. ' ಬೆಂಗಳೂರು ವಿಮಾನ ನಿಲ್ದಾಣದವರು ನನ್ನ ಅಭಿಪ್ರಾಯ ತಿಳಿಸುವುದಕ್ಕೆ ಕೇಳಿದ್ದರು, ಇಲ್ಲಿದೆ...ಏರ್‌ಪೋರ್ಟ್‌ನಲ್ಲಿ ನಡೆದ ಕೋವಿಡ್‌ ಟೆಸ್ಟ್‌ ಸುಲಭವಾಗಿತ್ತು. ಯಾವುದೇ ಗೊಂದಲ ಇರಲಿಲ್ಲ. ವೈದ್ಯರು, ನರ್ಸ್‌ಗಳು, ಅಧಿಕಾರಿಗಳು ಮತ್ತು ಅಲ್ಲಿನ ಉದ್ಯೋಗಿಗಳು ಕೋವಿಡ್‌ ಟೆಸ್ಟ್‌ಗಾಗಿ ಉತ್ತಮ ವ್ಯವಸ್ಥೆ ರೂಢಿಸಿಕೊಂಡಿದ್ದಾರೆ. ಪ್ರತಿಯೊಬ್ಬರ ಕೆಲಸವೂ ಪ್ರಶಂಸೆಗೆ ಕಾರಣ ಆಗಿದೆ. ಧನ್ಯವಾದಗಳು' ಎಂದು ಬರೆದಿದ್ದಾರೆ.
Published by:Vasudeva M
First published: