Actress Ramya: ಟಾಪ್​ ನಟಿಯರ ಲಿಸ್ಟ್​ನಲ್ಲಿ ರಮ್ಯಾ, ಇವರೇ ಅಂತೆ ನಂಬರ್ ಒನ್​ ಹೀರೋಯಿನ್​

Popular Kannada Female Stars: ರಮ್ಯಾ ಯಾವುದೇ ಸಿನಿಮಾದಲ್ಲಿ ನಟಿಸದೇ ಇದ್ದರೂ ಸಹ ಟಾಪ್ 5 ನಟಿಯರ ಪಟ್ಟಿಯಲ್ಲಿ ಹೆಸರುಗಳಿಸಿದ್ದಾರೆ. ಓರಾಮ್ಯಾಕ್ಸ್​ ಸಂಸ್ಥೆಯು ಕನ್ನಡದ ಫೇಮಸ್ ಟಾಪ್​ ನಟಿಯರ ಸಮೀಕ್ಷೆ ಮಾಡಿದ್ದು, ಅದರಲ್ಲಿ ರಮ್ಯಾ ಕೂಡ ಸ್ಥಾನ ಪಡೆದಿದ್ದಾರೆ.

ನಟಿ ರಮ್ಯಾ

ನಟಿ ರಮ್ಯಾ

  • Share this:
ಸ್ಯಾಂಡಲ್​ ವುಡ್​ ಕ್ವೀನ್​ (Sandalwood Queen) ರಮ್ಯಾ (Ramya) ಕಳೆದ 8 ವರ್ಷದಿಂದ ಸಿನಿಮಾ ರಂಗದಿಂದ (Film Industry) ದೂರವಿದ್ದಾರೆ. ಆದರೆ ಅವರ ಬಗ್ಗೆ ಅಭಿಮಾನ ಮಾತ್ರ ಇಂದಿಗೂ ಒಂದಿಂಚೂ ಕಡಿಮೆಯಾಗಿಲ್ಲ. ಈಗಲೂ ಅವರೆಂದರೆ ಅದೇ ಪ್ರೀತಿ ಜನರಿಗಿದೆ. ಅವರು ರಾಜಕೀಯಕ್ಕೆ ಇಳಿದ ನಂತರ ಸಿನಿಮಾದಿಂದ ದೂರವಿದ್ದರು. ಈಗ ರಾಜಕೀಯ (Politics) ಹಾಗೂ ಸಿನಿಮಾ ಎರಡಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಆದರೆ ಇತ್ತೀಚೆಗಷ್ಟೇ ಸಿನಿಮಾ ರಂಗಕ್ಕೆ ಮರಳಿ ಬರುವುದಾಗಿ ಹೇಳಿದ್ದು, ಅಭಿಮಾನಿಗಳ ಸಂತೋಷಕ್ಕೆ ಕಾರಣವಾಗಿದೆ. ಸದ್ಯ ರಮ್ಯಾ ಸಿನಿಮಾ ರಂಗದಲ್ಲಿ ಇಲ್ಲದಿದ್ದರೂ ಅವರ ಹವಾ ಕಡಿಮೆಯಾಗಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.  

ಟಾಪ್ 5 ನಟಿಯರ ಲಿಸ್ಟ್​ನಲ್ಲಿ ರಮ್ಯಾ

ಹೌದು, ರಮ್ಯಾ ಯಾವುದೇ ಸಿನಿಮಾದಲ್ಲಿ ನಟಿಸದೇ ಇದ್ದರೂ ಸಹ ಟಾಪ್ 5 ನಟಿಯರ ಪಟ್ಟಿಯಲ್ಲಿ ಹೆಸರುಗಳಿಸಿದ್ದಾರೆ. ಓರಾಮ್ಯಾಕ್ಸ್​ ಸಂಸ್ಥೆಯು ಕನ್ನಡದ ಫೇಮಸ್ ಟಾಪ್​ ನಟಿಯರ ಸಮೀಕ್ಷೆ ಮಾಡಿದ್ದು, ಅದರಲ್ಲಿ ರಮ್ಯಾ ಕೂಡ ಸ್ಥಾನ ಪಡೆದಿದ್ದಾರೆ. ಈ ಸಮೀಕ್ಷೆಯನ್ನು ಟ್ವಿಟ್ಟರ್​ನಲ್ಲಿ ಶೇರ್ ಮಾಡಿಕೊಂಡಿರುವ ಅವರು ನಾನು ಕಳೆದ 8 ವರ್ಷಗಳಿಂದ ಸಿನಿಮಾ ರಂಗದಿಂದ ದೂರವಿದ್ದರೂ ಸಹ ಈ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದ್ದು ಬಹಳ ಸಂತೋಷವಾಗಿದೆ. ರಚಿತಾ ರಾಮ್​, ಆಶಿಕಾ ರಂಗನಾಥ್, ರಾಧಿಕಾ ಪಂಡಿತ್ ಹಾಗೂ ರಶ್ಮಿಕಾ ಜೊತೆ ಸ್ಥಾನ ಪಡೆದಿರುವುದು ಖುಷಿಯಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಈ ಸಂಸ್ಥೆ ಬಿಡುಗಡೆ ಮಾಡಿರುವ ಟಾಪ್​ 5 ನಟಿಯರ ಪಟ್ಟಿಯಲ್ಲಿ ರಮ್ಯಾ 4ನೇ ಸ್ಥಾನ ಪಡೆದಿದ್ದಾರೆ. ಇನ್ನು ಕಳೆದ ಕೆಲ ವರ್ಷದಿಂದ ಸಿನಿಮಾದಿಂದ ದೂರವಿರುವ ರಾಧಿಕಾ ಪಂಡಿತ್ ಸಹ ಈ ಪಟ್ಟಿಯಲ್ಲಿ ಮೂರನೇ ಸ್ಥಾನಗಳಿಸಿದ್ದಾರೆ. ಇನ್ನು ಈ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿ ಆಶಿಕಾ ರಂಗನಾಥ ಇದ್ದು, 2ನೇ ಸ್ಥಾನ ರಚಿತಾ ರಾಮ್​ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ನಟಿ ರಶ್ಮಿಕಾ ಮಂದಣ್ಣ ಪಡೆದುಕೊಂಡಿದ್ದಾರೆ.  ಇನ್ನು ಅವರ ಈ ಪೋಸ್ಟ್​ ಗೆ ಅಭಿಮಾನಿಗಳು ಸಹ ಕಾಮೆಂಟ್​ ಮಾಡುತ್ತಿದ್ದು, ಎಷ್ಟೇ ವರ್ಷವಾದರೂ ಸಹ ನೀವೇ ನಮ್ಮ ನೆಚ್ಚಿನ ನಟಿ ಎಂದು ಹೇಳಿದ್ದಾರೆ.ಇನ್ನು ಬಹಳಷ್ಟು ದಿನಗಳಿಂದ ಅಭಿಮಾನಿಗಳು ರಮ್ಯಾ ಅವರಿಗೆ ಕಮ್​ ಬ್ಯಾಕ್​ ಮಾಡುವಂತೆ ಒತ್ತಾಯಿಸುತ್ತಿದ್ದರು. ಅಭಿಮಾನಿಗಳು ಯಾವಾಗಲೂ ಕೇಳೋದು ಯಾವಾಗ ಸಿನಿಮಾಕ್ಕೆ ವಾಪಸ್ ಆಗ್ತೀರಾ? ಯಾವಾಗ ನಿಮ್ಮ ಹೊಸ ಸಿನಿಮಾ ಬರುತ್ತೆ? ಸಿನಿಮಾದಲ್ಲಿ ನಿಮ್ಮ ಅಭಿನಯ ನೋಡಿ ಕಣ್ತುಂಬಿಕೊಳ್ಳೋದು ಯಾವಾಗ? ಅಂತ ಹತ್ತು ಹಲವು ಪ್ರಶ್ನೆ. ಇದಕ್ಕೆಲ್ಲ ರಮ್ಯಾ ಉತ್ತರ ನೀಡಿದ್ದರು. ನಾನು ಬೇಗ ಸಿನಿಮಾಗೆ ವಾಪಸ್ ಬರ್ತಿನಿ ಎನ್ನುವ ಮೂಲಕ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ಕೊಟ್ಟಿದ್ದಾರೆ. ಆದರೆ ಯಾವ ಚಿತ್ರ? ಹೀರೋ ಯಾರು? ಯಾವಾಗ ಶೂಟಿಂಗ್ ಸೇರಿದಂತೆ ಯಾವುದೇ ಮಾಹಿತಿಗಳನ್ನು ರಮ್ಯಾ ಬಿಟ್ಟುಕೊಟ್ಟಿಲ್ಲ.

ಇದನ್ನೂ ಓದಿ: ವಿಕ್ರಾಂತ್ ರೋಣ ಸಂಭ್ರಮಾಚರಣೆ ಶುರು, ಸಿನಿಮಾ ಬಿಡುಗಡೆ ಮೊದಲೇ ಥಿಯೇಟರ್ ಸಿಂಗಾರ ಮಾಡಿದ ಫ್ಯಾನ್ಸ್

ರಮ್ಯಾ ಕಮ್​ಬ್ಯಾಕ್​ಗೆ ಕಾಯ್ತಿದ್ದಾರೆ ಫ್ಯಾನ್ಸ್​

ಅಭಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ರಮ್ಯಾ ನಂತರ ತಿರುಗಿ ನೋಡಲಲ್ಲಿ, ಒಂದರ ನಂತರ ಒಂದು ಹಿಟ್​ ಸಿನಿಮಾಗಳನ್ನು ನೀಡಿ, ಜನರಿಗೆ ಇಷ್ಟವಾದರೂ. ಪುನೀತ್ ರಾಜ್​ಕುಮಾರ್ ಜೊತೆ ಹೆಚ್ಚಿನ ಸಿನಿಮಾದಲ್ಲಿ ನಟಿಸಿದ ರಮ್ಯಾ ಅರಸು ಚಿತ್ರದ ನಂತರ ಮತ್ತೆ ಪುನೀತ್ ಜೊತೆ ಕಾಣಿಸಿಕೊಂಡಿಲ್ಲ. ಅವರಿಬ್ಬರದ್ದು ಹಿಟ್​ ಜೋಡಿ ಎಂಬುದು ಬಹಳಷ್ಟು ಸಲ ಸಾಬೀತಾಗಿದೆ. ರಮ್ಯಾ ಪುನೀತ್ ಜೊತೆ ಮತ್ತೆ ಕಮ್​ ಬ್ಯಾಕ್​ ಮಾಡುವ ಆಸೆ ಹೊಂದಿದ್ದರು. ಅಪ್ಪು ನಿಧನದ ಸಮಯದಲ್ಲಿ ಮಾತನಾಡಿದ್ದ ರಮ್ಯಾ, ಮತ್ತೆ ನಾವಿಬ್ಬರು ನಟಿಸಬೇಕಿತ್ತು ಎಂದಿದ್ದರು. ಈ ಬಗ್ಗೆ ಹಿಂದೆಯೇ ಚರ್ಚೆಯಾಗಿತ್ತು. ಇಬ್ಬರೂ ಒಪ್ಪಿಗೆ ನೀಡಿಯೂ ಆಗಿತ್ತು ಎಂದಿದ್ದರು.

ಇದನ್ನೂ ಓದಿ: ಡಿಫರೆಂಟ್​ ಅವತಾರದಲ್ಲಿ ದೀಪಿಕಾ ಪಡುಕೋಣೆ, ಪಠಾಣ್ ಸಿನಿಮಾದ ಮೋಷನ್ ಪೋಸ್ಟರ್‌ ರಿಲೀಸ್​

ಅಲ್ಲದೇ ರಮ್ಯಾ ಹಾಗೂ ರಕ್ಷಿತ್ ಶೆಟ್ಟಿ ಬಗ್ಗೆ ಸಹ ಹಲವಾರು ಸುದ್ದಿ ಕೇಳಿ ಬಂದಿತ್ತು. ರಕ್ಷಿತ್ ಶೆಟ್ಟಿ ಹಾಗೂ ರಮ್ಯಾ ನಡುವೆ ಪ್ರೀತಿಯಾಗಿದೆ, ಇಬ್ಬರು ಮದುವೆಯಾಗುತ್ತಾರೆ ಎಂಬೆಲ್ಲಾ ಗುಸುಗುಸು ಕೇಳಿ ಬಂದಿತ್ತು. ಅಲ್ಲದೇ ಈಗ ರಮ್ಯಾ ರಕ್ಷಿತ್ ಸಿನಿಮಾ ಮೂಲಕವೇ ಕಮ್​ ಬ್ಯಾಕ್​ ಮಾಡುತ್ತಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ರಮ್ಯಾ ಆಗಲಿ ಅಥವಾ ರಕ್ಷಿತ್ ಆಗಲಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಅದೇನೇ ಇರಲಿ ರಮ್ಯಾ ಕಮ್​ ಬ್ಯಾಕ್​ ಮಾಡುತ್ತಿರುವ ವಿಚಾರ ಸ್ಯಾಂಡಲ್​ವುಡ್​ಗೆ ನಿಜಕ್ಕೂ ಸಂತೋಷದ ಸುದ್ದಿ
Published by:Sandhya M
First published: