Actress Ramya: ಡಾಲಿಗೆ ಸಾಥ್ ನೀಡಿದ ರಮ್ಯಾ, ಶೂಟಿಂಗ್​ ಸೆಟ್​ನಲ್ಲಿ ಕಾಣಿಸಿಕೊಂಡ ಸ್ಯಾಂಡಲ್‌ವುಡ್‌ ಕ್ವೀನ್

ಸ್ಯಾಂಡಲ್​ವುಡ್​ ಕ್ವೀನ್ ರಮ್ಯಾ ಹೊಯ್ಸಳ ಚಿತ್ರದ ಶೂಟಿಂಗ್ ಸೆಟ್​ಗೆ ಭೇಟಿ ನೀಡಿದ್ದರು. ಜೊತೆಗೆ ಧನಂಜಯ್ ಹಾಗೂ ಚಿತ್ರತಂಡದ ಜೊತೆ ಕೆಲ ಸಮಯ ಕಳೆದು ಹೋಗಿದ್ದಾರೆ.

ನಟಿ ರಮ್ಯಾ

ನಟಿ ರಮ್ಯಾ

  • Share this:
ಸ್ಯಾಂಡಲ್​ ವುಡ್​ ಕ್ವೀನ್ (Sandalwood Queen) ರಮ್ಯಾ (Ramya) ಒಂದು ಕಾಲದಲ್ಲಿ ಸಾಲು ಸಾಲು  ಹಿಟ್​ ಚಿತ್ರಗಳನ್ನು (Movies) ನೀಡಿದ ನಟಿ. ಆದರೆ ಕಳೆದ ಕೆಲ ವರ್ಷಗಳಿಂದ ರಮ್ಯಾ ಚಿತ್ರರಂಗದಿಂದ ದೂರವಾಗಿದ್ದರು. ಅಭಿಮಾನಿಗಳು (Fans) ಮನದರಸಿ ಎಲ್ಲಿ ಎಂದು ಹುಡುಕಿದ್ದರು. ರಾಜಕೀಯದಲ್ಲಿ (Politics) ಬ್ಯುಸಿ ಇದ್ದ ನಟಿ ನಂತರ ಅಲ್ಲಿಂದ ಸಹ ಹೊರಬಂದಿದ್ದರು. ಆದರೆ ಇದೀಗ ಮತ್ತೆ ಪ್ರತ್ಯಕ್ಷವಾಗಿದ್ದು, ಅಭಿಮಾನಿಗಳ ಸಂತೋಷಕ್ಕೆ ಕಾರಣವಾಗಿದೆ. ಹೌದು, ರಮ್ಯಾ ಮತ್ತೆ ಸಿನಿಮಾ ಮಾಡುತ್ತಾರಂತೆ ಎಂದು ಸ್ಯಾಂಡಲ್​ವುಡ್​ ನಲ್ಲಿ ಸುದ್ದಿಯೊಂದು ಹರಿದಾಡುತ್ತಿತ್ತು. ಆದರೆ ಕೆಲ ದಿನಗಳ ಹಿಂದೆ ಸ್ವತಃ ರಮ್ಯಾ ಖಂಡಿತವಾಗಿಯೂ ಸಿನಿಮಾಗೆ ಮತ್ತೆ ಮರಳುವುದಾಗಿ ತಿಳಿಸಿದ್ದು ಅಭಿಮಾನಿಗಳಿಗೆ ಸಂತಸ ತಂದಿದೆ. ಆದರೆ ಈವರೆಗೂ ಯಾವ ಹೀರೋ ಜೊತೆ ರಮ್ಯಾ ಸಿನಿಮಾ ಮಾಡಲಿದ್ದಾರೆ ಎಂಬ ಮಾಹಿತಿ ತಿಳಿದಿಲ್ಲ. ಇದರ ನಡುವೆ ಇದೀಗ ರಮ್ಯಾ ಶೂಟಿಂಗ್​ ಸೆಟ್​ಗೆ ಹೋಗಿದ್ದು, ಅವರ ಅಭಿಮಾನಿಗಳಲ್ಲಿ ಡಬಲ್ ಸಂಸತ ತಂದಿದೆ.

ಹೊಯ್ಸಳ ಶೂಟಿಂಗ್​ ಸೆಟ್​ಗೆ ಆಗಮಿಸಿದ ರಮ್ಯಾ:

ಹೌದು, ಸ್ಯಾಂಡಲ್​​ವುಡ್​ ನ ನಟ ಡಾಲಿ ಧನಂಜಯ್​ ಸದ್ಯ ಹೊಯ್ಸಳ ಚಿತ್ರದ ಶೂಟಿಂಗ್​ ನಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಶೂಟಿಂಗ್​ ಕಾರ್ಯಗಳು ಭರದಿಂದ ಸಾಗುತ್ತಿವೆ. ಇದರ ನಡುವೆ ಹೊಯ್ಸಳ ಶೂಟಿಂಗ್​ ಸೆಟ್​ಗೆ ವಿಶೇಷ ಅತಿಥಿಯೊಬ್ಬರು ಭೇಟಿ ನೀಡಿದ್ದಾರೆ. ಹೌದು, ಸ್ಯಾಂಡಲ್​ವುಡ್​ ಕ್ವೀನ್ ರಮ್ಯಾ ಹೊಯ್ಸಳ ಚಿತ್ರದ ಶೂಟಿಂಗ್ ಸೆಟ್​ಗೆ ಭೇಟಿ ನೀಡಿದ್ದರು. ಅಲ್ಲದೇ ಧನಂಜಯ್ ಹಾಗೂ ಚಿತ್ರತಂಡದ ಜೊತೆ ಕೆಲ ಸಮಯ ಕಳೆದು ಹೋಗಿದ್ದಾರೆ. ಈ ಕುರಿತು ಸ್ವತಃ ರಮ್ಯಾ ಅವರೇ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

2023ರಲ್ಲಿ ಎದುರು ನೋಡುತ್ತಿರುವ ಚಿತ್ರ:

ಹೊಯ್ಸಳ ಚಿತ್ರದ ಶೂಟಿಂಗ್​ ಸೆಟ್​ಗೆ ಭೇಟಿ ನೀಡಿದ ನಂತರ ರಮ್ಯಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಬರೆದುಕೊಂಡಿದ್ದು, ‘ವಾರಾಂತ್ಯದಲ್ಲಿ ವಿಜಯ್ ಅವರು ನಿರ್ದೇಶಿಸುತ್ತಿರುವ ಹೊಯ್ಸಳ ಚಿತ್ರದ ಸೆಟ್ ಗೆ ಭೇಟಿ ನೀಡಿದೆ. ಇಂಟೆನ್ಸ್ ಆಕ್ಷನ್ ದೃಶ್ಯವೊಂದನ್ನು ಅವರು ಚಿತ್ರೀಕರಿಸುತ್ತಿದ್ದರು. ಅವರು ಚಿತ್ರೀಕರಿಸಿರುವ ಕೆಲವು ದೃಶ್ಯದ ತುಣುಕುಗಳನ್ನು ನೋಡಿದೆ ಹಾಗೂ ಅವು ಬಹಳ ಚೆನ್ನಾಗಿ ಮೂಡಿಬಂದಿವೆ. ಅಲ್ಲದೇ ಚಾಕ್ಲೆಟ್ ಹಾಗೂ ಆಸಕ್ತಿದಾಯಕ ಮಾತುಕತೆ ಎರಡಕ್ಕೂ ಧನಂಜಯ್​ ಅವರಿಗೆ ಧನ್ಯವಾದಗಳು.

ಇದನ್ನೂ ಓದಿ: Actress Ramya: ವಿಡಿಯೋ ಮೂಲಕ ಅಭಿಮಾನಿಗಳ ತಲೆಗೆ ಹುಳ ಬಿಟ್ಟ ರಮ್ಯಾ, ಹೊಸ ಸಿನಿಮಾದ ಶೂಟಿಂಗ್ ಸ್ಟಾರ್ಟ್​ ಮಾಡಿದ್ರಾ ಕ್ವೀನ್​?

ತೆರೆಯ ಮೇಲೆ ನಿಮ್ಮನ್ನು ಪೋಲೀಸ್ ಪಾತ್ರದಲ್ಲಿ ನೋಡಲು ನನಗೆ ಬಹಳ ಕಾತುರವಿದೆ. ಅಮೃತಾ ಅಯ್ಯರ್ ಇದರಲ್ಲಿನ ನಿಮ್ಮ ಅತ್ಯುನ್ನತ ಅಭಿನಯಕ್ಕೆ ಬಹಳಷ್ಟು ಪ್ರಶಸ್ತಿಗಳು ನಿಮ್ಮ ಪಾಲಾಗುವುದರಲ್ಲಿ ಅನುಮಾನವಿಲ್ಲ. ರತ್ನನ್ ಪ್ರಪಂಚ ಚಿತ್ರದ ಗೆಲುವಿನ ನಂತರ ಗೆಲುವಿನ ಸರಮಾಲೆಯೊಂದಿಗೆ ಮುನ್ನುಗ್ಗುತ್ತಿರುವಿರಿ. ನನ್ನನ್ನು ಕರೆದದ್ದಕ್ಕೆ ಹಾಗೂ ನಿಮ್ಮ ಪ್ರೀತಿಗೆ ನನ್ನ ಧನ್ಯವಾದಗಳ‘ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Rashmika Mandanna: ಸೀತಾ ರಾಮಂ ಚಿತ್ರದಲ್ಲಿ ರಶ್ಮಿಕಾ ವಿಶೇಷ ಪಾತ್ರ! ರಿಲೀಸ್ ಆಯ್ತು ಹೊಸ ಪೋಸ್ಟರ್

ರಮ್ಯಾ ಕಮ್​ ಬ್ಯಾಕ್​ಗೆ ಕಾಯ್ತಿದ್ದಾರೆ ಫ್ಯಾನ್ಸ್:

ಅಭಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ರಮ್ಯಾ ನಂತರ ತಿರುಗಿ ನೋಡಲಲ್ಲಿ, ಒಂದರ ನಂತರ ಒಂದು ಹಿಟ್​ ಸಿನಿಮಾಗಳನ್ನು ನೀಡಿ, ಜನರಿಗೆ ಇಷ್ಟವಾದರೂ. ಪುನೀತ್ ರಾಜ್​ಕುಮಾರ್ ಜೊತೆ ಹೆಚ್ಚಿನ ಸಿನಿಮಾದಲ್ಲಿ ನಟಿಸಿದ ರಮ್ಯಾ ಅರಸು ಚಿತ್ರದ ನಂತರ ಮತ್ತೆ ಪುನೀತ್ ಜೊತೆ ಕಾಣಿಸಿಕೊಂಡಿಲ್ಲ. ಅವರಿಬ್ಬರದ್ದು ಹಿಟ್​ ಜೋಡಿ ಎಂಬುದು ಬಹಳಷ್ಟು ಸಲ ಸಾಬೀತಾಗಿದೆ. ರಮ್ಯಾ ಪುನೀತ್ ಜೊತೆ ಮತ್ತೆ ಕಮ್​ ಬ್ಯಾಕ್​ ಮಾಡುವ ಆಸೆ ಹೊಂದಿದ್ದರು. ಅಪ್ಪು ನಿಧನದ ಸಮಯದಲ್ಲಿ ಮಾತನಾಡಿದ್ದ ರಮ್ಯಾ, ಮತ್ತೆ ನಾವಿಬ್ಬರು ನಟಿಸಬೇಕಿತ್ತು ಎಂದಿದ್ದರು. ಅಲ್ಲದೇ ಮತ್ತೆ ಚಿತ್ರರಂಗಕ್ಕೆ ಮರಳುವುದಾಗಿ ರಮ್ಯಾ ಹೇಳಿಕೊಂಡಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
Published by:shrikrishna bhat
First published: