Actress Ramya: ನಟಿ ರಮ್ಯಾ ಡ್ರಾಮಾ ಕ್ವೀನ್ ಅಂತೆ, ಸ್ಯಾಂಡಲ್​ವುಡ್​ ಪದ್ಮಾವತಿಗೆ ಹೀಗಂದಿದ್ಯಾರು?

Sandalwood Queen Ramya: ಸದ್ಯ ರಮ್ಯಾ ಅವರ ಸೋಷಿಯಲ್ ಮೀಡಿಯಾ ಸ್ಟೇಟಸ್​ ಒಂದು ವೈರಲ್ ಆಗಿದೆ. ಅದರ ಜೊತೆ ವಿಡಿಯೋವೊಂದನ್ನು ಸಹ ಅವರು ಶೇರ್ ಮಾಡಿಕೊಂಡಿದ್ದಾರೆ.  

ನಟಿ ರಮ್ಯಾ

ನಟಿ ರಮ್ಯಾ

  • Share this:
ರಮ್ಯಾ (Ramya), ಸ್ಯಾಂಡಲ್​ ವುಡ್​ ಕ್ವೀನ್ (Sandalwood Queen) ಎಂದು ಪ್ರಸಿದ್ದರಾದವರು. ಇವರ ಹೆಸರು ಕೇಳಿದರೆ ಸಾಕು ಸಿನಿಪ್ರಿಯರ ಮನದಲ್ಲಿ ಅದೇನೋ ಸಂತೋಷ. ಸ್ಯಾಂಡಲ್​ವುಡ್​ನಲ್ಲಿ ಅದೆಷ್ಟೋ ಜನ ಹೀರೋಯಿನ್​ಗಳು ಬಂದು ಹೋಗಿದ್ದಾರೆ, ಆದರೆ ರಮ್ಯಾಗೆ ಸರಿ ಸಾಟಿ ಯಾರೂ ಇಲ್ಲ ಎಂಬುದು ನಿಜ. ಸಾಲು ಸಾಲು ಹಿಟ್​ ಚಿತ್ರಗಳನ್ನು (Movies) ನೀಡಿದ ರಮ್ಯಾ ಎಂದರೆ ಕರುನಾಡ ಜನತೆಗೆ ಈಗಲೂ ಅಷ್ಟೇ ಅಭಿಮಾನಿ. ಆದರೆ ಕಳೆದ ಕೆಲ ವರ್ಷಗಳಿಂದ ರಮ್ಯಾ ಚಿತ್ರರಂಗದಿಂದ ಕಾಣೆಯಾಗಿದ್ದರು. ಅಭಿಮಾನಿಗಳು (Fans) ಮನದರಸಿ ಎಲ್ಲಿ ಎಂದು ಹುಡುಕಿದ್ದರು. ಆದರೆ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್​ ಆಗಿದ್ದು, ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ಸದ್ಯ ರಮ್ಯಾ, ತಮ್ಮನ್ನು ತಾವೇ ಸ್ವತಃ ಡ್ರಾಮಾ ಕ್ವೀನ್ ಎಂದು ಕರೆದುಕೊಂಡಿದ್ದಾರೆ.  

ನಾನು ಡ್ರಾಮಾ ಕ್ವೀನ್ ಎಂದ ನಟಿ

ಹೌದು, ಸ್ಯಾಂಡಲ್​ವುಡ್​ನಲ್ಲಿ ರಮ್ಯಾಗೆ ಅಭಿಮಾನಿಗಳು ಬಹಳಷ್ಟಿದ್ದಾರೆ. ಅವರ ಬಗ್ಗೆ ಯಾರಾದರೂ ನೆಗೆಟಿವ್​ ಆಗಿ ಕಾಮೆಂಟ್​ ಮಾಡಿದರೆ ಸಾಕು ಅವರ ವಿರುದ್ಧ ಅಭಿಮಾನಿಗಳು ಸಿಡಿದೇಳುತ್ತಾರೆ. ಆ ಮಟ್ಟಿಗೆ ರಮ್ಯಾ ಇನ್ನೂ ಸ್ಯಾಂಡಲ್​ವುಡ್​ನಲ್ಲಿ ಫ್ಯಾನ್ಸ್​ ಬಳಗವನ್ನು ಹೊಂದಿದ್ದಾರೆ. ಆದರೆ ಸದ್ಯ ರಮ್ಯಾ ಅವರ ಸೋಷಿಯಲ್ ಮೀಡಿಯಾ ಸ್ಟೇಟಸ್​ ಒಂದು ವೈರಲ್ ಆಗಿದೆ. ಅದರ ಜೊತೆ ವಿಡಿಯೋವೊಂದನ್ನು ಸಹ ಅವರು ಶೇರ್ ಮಾಡಿಕೊಂಡಿದ್ದಾರೆ.

ರಮ್ಯಾ ಕೆಲ ವರ್ಷಗಳ ಹಿಂದೆ ಮಜಾ ಟಾಕೀಸ್​ ಶೋನಲ್ಲಿ ಭಾಗವಹಿಸಿದ್ದರು. ಆ ಕಾರ್ಯಕ್ರಮದಲ್ಲಿ ರಮ್ಯಾ ವಿವಿಧ ರೀತಿಯ ರಿಯಾಕ್ಷನ್ ಕೊಟ್ಟಿದ್ದರು. ಸದ್ಯ ಆ ವಿಡಿಯೋ ಈಗ ವೈರಲ್ ಆಗಿದ್ದು, ತಾನೆಂಥಹ ಡ್ರಾಮಾ ಕ್ವೀನ್ ಅಂತಾ ಅವರು ಹೇಳಿದ್ದಾರೆ. ಇಷ್ಟಕ್ಕೂ ಈ ವಿಡಿಯೋವನ್ನು ಮೀಮ್​ ಪೇಜ್​ ಒಂದು ಶೇರ್ ಮಾಡಿಕೊಂಡಿತ್ತು, ಆ ವಿಡಿಯೋ ನೋಡಿದ ರಮ್ಯಾ ಡ್ರಾಮಾ ಕ್ವೀನ್ ಎಂದು ಕಾಮೆಂಟ್​ ಮಾಡಿದ್ದಾರೆ. ಸದ್ಯ ಈ ಕಾಮೆಂಟ್​ ಸಹ ಎಲ್ಲಡೆ ವೈರಲ್​ ಆಗುತ್ತಿದೆ.
ಇನ್ನು ಬಹಳಷ್ಟು ದಿನಗಳಿಂದ ಅಭಿಮಾನಿಗಳು ರಮ್ಯಾ ಅವರಿಗೆ ಕಮ್​ ಬ್ಯಾಕ್​ ಮಾಡುವಂತೆ ಒತ್ತಾಯಿಸುತ್ತಿದ್ದರು. ಅಭಿಮಾನಿಗಳು ಯಾವಾಗಲೂ ಕೇಳೋದು ಯಾವಾಗ ಸಿನಿಮಾಕ್ಕೆ ವಾಪಸ್ ಆಗ್ತೀರಾ? ಯಾವಾಗ ನಿಮ್ಮ ಹೊಸ ಸಿನಿಮಾ ಬರುತ್ತೆ? ಸಿನಿಮಾದಲ್ಲಿ ನಿಮ್ಮ ಅಭಿನಯ ನೋಡಿ ಕಣ್ತುಂಬಿಕೊಳ್ಳೋದು ಯಾವಾಗ? ಅಂತ ಹತ್ತು ಹಲವು ಪ್ರಶ್ನೆ. ಇದಕ್ಕೆಲ್ಲ ರಮ್ಯಾ ಉತ್ತರ ನೀಡಿದ್ದರು. ನಾನು ಬೇಗ ಸಿನಿಮಾಗೆ ವಾಪಸ್ ಬರ್ತಿನಿ ಎನ್ನುವ ಮೂಲಕ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ಕೊಟ್ಟಿದ್ದಾರೆ. ಆದರೆ ಯಾವ ಚಿತ್ರ? ಹೀರೋ ಯಾರು? ಯಾವಾಗ ಶೂಟಿಂಗ್ ಸೇರಿದಂತೆ ಯಾವುದೇ ಮಾಹಿತಿಗಳನ್ನು ರಮ್ಯಾ ಬಿಟ್ಟುಕೊಟ್ಟಿಲ್ಲ.

ಇದನ್ನೂ ಓದಿ: ಆಂಧ್ರದಲ್ಲೂ ಪುನೀತ್ ನೆನಪು, ಅಭಿಮಾನಿಗಳನ್ನು ಬಿಟ್ಟು ಹೋಗಿಲ್ಲ ನಮ್ಮ ಅಪ್ಪುಕಮ್​ ಬ್ಯಾಕ್​ ಮಾಡಿ ಅಂತಿದ್ದಾರೆ ಫ್ಯಾನ್ಸ್ 

ಅಭಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ರಮ್ಯಾ ನಂತರ ತಿರುಗಿ ನೋಡಲಲ್ಲಿ, ಒಂದರ ನಂತರ ಒಂದು ಹಿಟ್​ ಸಿನಿಮಾಗಳನ್ನು ನೀಡಿ, ಜನರಿಗೆ ಇಷ್ಟವಾದರೂ. ಪುನೀತ್ ರಾಜ್​ಕುಮಾರ್ ಜೊತೆ ಹೆಚ್ಚಿನ ಸಿನಿಮಾದಲ್ಲಿ ನಟಿಸಿದ ರಮ್ಯಾ ಅರಸು ಚಿತ್ರದ ನಂತರ ಮತ್ತೆ ಪುನೀತ್ ಜೊತೆ ಕಾಣಿಸಿಕೊಂಡಿಲ್ಲ. ಅವರಿಬ್ಬರದ್ದು ಹಿಟ್​ ಜೋಡಿ ಎಂಬುದು ಬಹಳಷ್ಟು ಸಲ ಸಾಬೀತಾಗಿದೆ. ರಮ್ಯಾ ಪುನೀತ್ ಜೊತೆ ಮತ್ತೆ ಕಮ್​ ಬ್ಯಾಕ್​ ಮಾಡುವ ಆಸೆ ಹೊಂದಿದ್ದರು. ಅಪ್ಪು ನಿಧನದ ಸಮಯದಲ್ಲಿ ಮಾತನಾಡಿದ್ದ ರಮ್ಯಾ, ಮತ್ತೆ ನಾವಿಬ್ಬರು ನಟಿಸಬೇಕಿತ್ತು ಎಂದಿದ್ದರು. ಈ ಬಗ್ಗೆ ಹಿಂದೆಯೇ ಚರ್ಚೆಯಾಗಿತ್ತು. ಇಬ್ಬರೂ ಒಪ್ಪಿಗೆ ನೀಡಿಯೂ ಆಗಿತ್ತು ಎಂದಿದ್ದರು.

ಇದನ್ನೂ ಓದಿ: ವಿಕ್ರಾಂತ್ ರೋಣ ಸಂಭ್ರಮಾಚರಣೆ ಶುರು, ಸಿನಿಮಾ ಬಿಡುಗಡೆ ಮೊದಲೇ ಥಿಯೇಟರ್ ಸಿಂಗಾರ ಮಾಡಿದ ಫ್ಯಾನ್ಸ್

ಅಲ್ಲದೇ ರಮ್ಯಾ ಹಾಗೂ ರಕ್ಷಿತ್ ಶೆಟ್ಟಿ ಬಗ್ಗೆ ಸಹ ಹಲವಾರು ಸುದ್ದಿ ಕೇಳಿ ಬಂದಿತ್ತು. ರಕ್ಷಿತ್ ಶೆಟ್ಟಿ ಹಾಗೂ ರಮ್ಯಾ ನಡುವೆ ಪ್ರೀತಿಯಾಗಿದೆ, ಇಬ್ಬರು ಮದುವೆಯಾಗುತ್ತಾರೆ ಎಂಬೆಲ್ಲಾ ಗುಸುಗುಸು ಕೇಳಿ ಬಂದಿತ್ತು. ಅಲ್ಲದೇ ಈಗ ರಮ್ಯಾ ರಕ್ಷಿತ್ ಸಿನಿಮಾ ಮೂಲಕವೇ ಕಮ್​ ಬ್ಯಾಕ್​ ಮಾಡುತ್ತಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ರಮ್ಯಾ ಆಗಲಿ ಅಥವಾ ರಕ್ಷಿತ್ ಆಗಲಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಅದೇನೇ ಇರಲಿ ರಮ್ಯಾ ಕಮ್​ ಬ್ಯಾಕ್​ ಮಾಡುತ್ತಿರುವ ವಿಚಾರ ಸ್ಯಾಂಡಲ್​ವುಡ್​ಗೆ ನಿಜಕ್ಕೂ ಸಂತೋಷದ ಸುದ್ದಿ.
Published by:Sandhya M
First published: