ಸ್ಯಾಂಡಲ್ವುಡ್ ಕ್ವೀನ್ (Sandalwood Queen Ramya) ರಮ್ಯಾ ಫುಲ್ ಆ್ಯಕ್ಟೀವ್ ಆಗಿದ್ದಾರೆ. ಕೆಆರ್ಜಿ ಸಂಸ್ಥೆಯ ಸಿನಿಮಾ ಉತ್ತರಕಾಂಡ ಒಪ್ಪಿದ್ದೇ ತಡ, ರಮ್ಯ ಎಲ್ಲೆಡೆ ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕೂ ಮೊದಲು ಸಿನಿಮಾರಂಗಕ್ಕೆ ಬರಬೇಕು (Ramya Bike Ride) ಅಂತಲೇ ಕೆಲವು ಖಾಸಗಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅದರಂತೆ ಮತ್ತೆ ಜನರೊಟ್ಟಿಗೆ ರಮ್ಯ ಬೆರೆಯುತ್ತಿದ್ದಾರೆ. ಮೊನ್ನೆ ಚಿನ್ನಸ್ವಾಮಿ (Sandalwood Queen) ಸ್ಟೇಡಿಯಂನಲ್ಲಿ ನಡೆದ ಕೆಸಿಸಿ ಪಂದ್ಯದ ವೇಳೆ ರಮ್ಯ ಆಗಮಿಸಿದ್ದರು. ಪೆವಿಲಿಯನ್ನಲ್ಲಿ (Queen bike Ride) ಕುಳಿತ ಜನರ ಜೊತೆಗೂ ಸೆಲ್ಫಿ ತೆಗೆಸಿಕೊಂಡು ಖುಷಿಪಟ್ಟರು. ರಮ್ಯ ಮೊದಲಿನಂತೇನೆ ಜನರ ಜೊತೆಗೆ ಬೆರೆಯುತ್ತಿದ್ದಾರೆ. ಖಾಸಗಿ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಜನರಿಂದ ದೂರವೇ ಉಳಿದು ಬಿಟ್ಟಿದ್ದ ರಮ್ಯ ಕಮ್ ಬ್ಯಾಕ್ ಮಾಡಿ ಆಗಿದೆ.
ಎಂದಿನಂತೆ ಜನರ ಜೊತೆಗೆ ಬೆರೆಯುತ್ತಿರೋ ರಮ್ಯ
ಆ್ಯಪಲ್ ಕಟ್ ಸಂಸ್ಥೆ ಮೂಲಕ ಸಿನಿಮಾ ನಿರ್ಮಾಣಕ್ಕೂ ಕೈಹಾಕಿ ಆಗಿದೆ. ಇದರ ಬೆನ್ನಲ್ಲಿಯೇ ಕೆಆರ್ಜಿ ಸಂಸ್ಥೆ ನಿರ್ಮಾಣದ ಉತ್ತರಕಾಂಡ ಸಿನಿಮಾವನ್ನ ಕೂಡ ರಮ್ಯ ಒಪ್ಪಿಕೊಂಡಿದ್ದಾರೆ. ಈ ಚಿತ್ರದ ಮೂಲಕ ಉತ್ತರ ಕರ್ನಾಟಕದ ಜನರ ಮನಸ್ಸನ್ನು ಈಗಾಗಲೇ ಸೆಳೆದು ಬಿಟ್ಟಿದ್ದಾರೆ.
ಉತ್ತರ ಕರ್ನಾಟಕದ ಜನ ಮನ ಗೆದ್ದ ಕ್ವೀನ್ ರಮ್ಯ
ಉತ್ತರ ಕರ್ನಾಟಕ ಭಾಗದ ಕಥೆಯನ್ನ ಡೈರೆಕ್ಟರ್ ರೋಹಿತ್ ಪದಕಿ ಉತ್ತರಕಾಂಡ ಚಿತ್ರದಲ್ಲಿ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಮ್ಯ ಮೊದಲ ಬಾರಿಗೆ ಉತ್ತರ ಕರ್ನಾಟಕ ಭಾಷೆಯಲ್ಲಿ ಮಾತನಾಡಿದ್ದಾರೆ.
ಹೀಗಿರೋವಾಗ ರಮ್ಯ ತಮ್ಮ ಎಂದಿನ ಕೆಲಸದ ಜೊತೆಗೆ ಸಾರ್ವಜನಿಕವಾಗಿಯೂ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಜನರೊಟ್ಟಿಗೆ ಬೆರೆತು ಮತ್ತಷ್ಟು ಇನ್ನಷ್ಟು ಹತ್ತಿರ ಸಹ ಆಗುತ್ತಿದ್ದಾರೆ.
ಸಾರ್ವಜನಿಕ ಜೀವನದಲ್ಲಿ ಸ್ಯಾಂಡಲ್ವುಡ್ ಕ್ವೀನ್ ಹಲ್ಚಲ್
ಇದಕ್ಕೆ ಪೂರಕ ಅನ್ನೋ ಹಾಗೆ, ಕೆಸಿಸಿ ಪಂದ್ಯದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಣಿಸಿಕೊಂಡದ್ದು ಆಗಿದೆ. ಆದರೆ ಇದಕ್ಕೂ ಹೆಚ್ಚಾಗಿ ರಮ್ಯ ಈಗ ಬೈಕ್ ರೈಡ್ ಕೂಡ ಮಾಡಿದ್ದಾರೆ.
ಬೈಕ್ ರೈಡ್ನ ಈ ವಿಶೇಷ ಪಯಣದ ಫೋಟೋ ವೈರಲ್ ಆಗಿವೆ. ಈ ಬೈಕ್ ರೈಡ್ ಮೂಲಕ ರಮ್ಯ ಬೆಂಗಳೂರಿನ ರಸ್ತೆಗಳ ಸ್ಥಿತಿಯನ್ನು ತಿಳಿದುಕೊಂಡಿದ್ದಾರೆ. ಹಾಗೇನೆ ಹೊಸ ಹೊಸ ಅನುಭವ ಪಡೆಯೋ ಕೆಲಸವನ್ನ ಕೂಡ ಮಾಡಿದಂತೆ ಕಾಣುತ್ತಿದೆ.
ಬೆಂಗಳೂರು ರಸ್ತೆಗಳಲ್ಲಿ ರಮ್ಯ ಬೈಕ್ ರೈಡಿಂಗ್
ವಿಶೇಷವಾಗಿ ಈ ಬೈಕ್ ರೈಡ್ನಲ್ಲಿ ಕೆಆರ್ಜಿಯ ಸುಮನ್ ರಾಜ್ ಕೂಡ ಸಾಥ್ ಕೊಟ್ಟಿದ್ದಾರೆ. ಕೆಆರ್ಜಿ ಸಂಸ್ಥೆಯಲ್ಲಿ ಕೆಲಸ ಮಾಡೋ ಸುಮನ್ ರಾಜ್ ಎಲ್ಲ ಸ್ಟಾರ್ಗಳಿಗೂ ಪರಿಚಯ ಅಂತಲೇ ಹೇಳಬಹುದು.
ಈ ಹೊಸ ಸ್ನೇಹಿತೆ ಜೊತೆಗೇನೆ ಸ್ಯಾಂಡಲ್ವುಡ್ ಕ್ವೀನ್ ರಮ್ಯ ಈಗ ಬೈಕ್ ರೈಡ್ ಮಾಡಿದ್ದಾರೆ. ಬೈಕ್ ರೈಡ್ ಖುಷಿಯಲ್ಲಿ ರೋಡ್ ರೂಲ್ಸ್ ಬ್ರೇಕ್ ಮಾಡಿದಂತೆ ಕಾಣೋದಿಲ್ಲ.
ಬೆಂಗಳೂರು ರೋಡ್ಲ್ಲಿ ರಮ್ಯ ರೈಡಿಂಗ್
ಯಾಕೆಂದ್ರೆ, ಬೈಕ್ ರೈಡರ್ಸ್ ಇಬ್ಬರೂ ಹೆಲ್ಮೆಟ್ ಧರಿಸಿದ್ದಾರೆ. ಹಾಗೇನೆ ಒಂದು ಜಾಗದಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಬೆಂಗಳೂರಿನ ಪ್ರಮುಖ ರಸ್ತೆಯಲ್ಲಿ ಇವರ ಪಯಣ ಸಾಗಿತ್ತೋ? ಇಲ್ಲವೆ ಬೆಂಗಳೂರಿನ ಒಳ ರಸ್ತೆಯಲ್ಲಷ್ಟೇ ಇವರು ರೈಡಿಂಗ್ ಮಾಡಿದ್ದಾರೋ? ಗೊತ್ತಿಲ್ಲ.
ಈ ಬಗ್ಗೆ ಈ ರೈಡರ್ಸ್ ಎಲ್ಲೂ ಬರೆದುಕೊಂಡಿಲ್ಲ. ಒಂದೆರಡು ಫೋಟೊಗಳನ್ನ ಮಾತ್ರ ಸುಮನ್ ರಾಜ್ ಸೋಷಿಯಲ್ ಮೀಡಿಯಾ ತಮ್ಮ ಪೇಜ್ನಲ್ಲಿ ಹಂಚಿಕೊಂಡು ಖುಷಿಪಟ್ಟಿದ್ದಾರೆ ಅಂತ ಹೇಳಬಹುದು.
ಇನ್ನು ರಮ್ಯ ತಮ್ಮ ಉತ್ತರಕಾಂಡ ಚಿತ್ರದ ಕುರಿತು ಈಗಲೇ ಎಲ್ಲೂ ಏನೂ ಹೆಚ್ಚು ಹೇಳಿಕೊಂಡಿಲ್ಲ. ಚಿತ್ರಕ್ಕೆ ಮುಹೂರ್ತ ಆದಾಗ ಮಾತ್ರ ಈ ಬಗ್ಗೆ ಹೆಚ್ಚು ಸುದ್ದಿ ಆಗಿತ್ತು.
ಇದನ್ನೂ ಓದಿ:RRR Movie: ಮಾರ್ಚ್ 3ಕ್ಕೆ ಅಮೆರಿಕಾದಲ್ಲಿ RRR ಸಿನಿಮಾ ರಿಲೀಸ್! ರಾಮ್ ಚರಣ್ ವಿಶೇಷ ಸಂದರ್ಶನ
ಇದಾದ್ಮೇಲೆ ರಮ್ಯ ವಾಯ್ಸ್ ಇರೋ ಒಂದಷ್ಟು ಮುಹೂರ್ತದ ವಿಷ್ಯೂಲ್ಸ್ ಕೂಡ ರಿವೀಲ್ ಆಗಿದ್ದವು. ಉಳಿದಂತೆ ಸದ್ಯಕ್ಕೆ ರಮ್ಯ ಮತ್ತು ಡಾಲಿ ಧನಂಜಯ್ ಅಭಿನಯದ ಈ ಚಿತ್ರದ ಇತರ ಅಪ್ಡೇಟ್ಸ್ ಹೊರ ಬೀಳಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ