Ramya And Rakshit Shetty: ಒಟ್ಟಿಗೆ ತೆರೆ ಹಂಚಿಕೊಳ್ಳಲಿದ್ದಾರಾ ರಮ್ಯಾ - ರಕ್ಷಿತ್? Ramya ನನ್ನ ಕ್ರಶ್ ಎಂದ ಶೆಟ್ರು

ರಮ್ಯಾ ಮತ್ತು ರಕ್ಷಿತ್ ಶೆಟ್ಟಿ ಕುರಿತಾದ ಅನೇಕ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದ್ದು, ಇವರಿಬ್ಬರೂ ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸ್ಯಾಂಡಲ್ ವುಡ್ (Sandalwood) ಕ್ವೀನ್ ರಮ್ಯಾ (Ramya) ಮತ್ತೆ ಚಿತ್ರರಂಗದತ್ತ ಬರುವ ಮುನ್ಸೂಚನೆಯನ್ನು ನೀಡುತ್ತಿದ್ದಾರೆ. ಚಿತ್ರಗಳ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಅವರು, ಚಿತ್ರರಂಗದ ನಟ, ನಟಿಯರ ಟ್ವೀಟ್​ ಗಳಿಗೆ ಹಾಗೂ ಚಿತ್ರಗಳಿಗೆ ಪ್ರತಿಕ್ರಿಯಿಸುವ ಮೂಲಕ ನಿಧಾನವಾಗಿ ಮತ್ತೆ ಸ್ಯಾಂಡಲ್ ವುಡ್​ನತ್ತ ಮುಖಮಾಡುತ್ತಿದ್ದಾರೆ. ಇದರೊಂದಿಗೆ ಒಂದು ಹೆಜ್ಜೆ ಮುಂದೆ ಹೋಗಿ ಟ್ರೇಲರ್ (Trailer) ರಿಲೀಸ್, ಸಿನಿಮಾ ಕಾರ್ಯಕ್ರಮದಲ್ಲೂ ಸ್ಯಾಂಡಲ್ ವುಡ್ ಪದ್ಮಾವತಿ ಕಾಣಿಸಿಕೊಳ್ಳುವುದರ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ. ಇದನ್ನೆಲ್ಲಾ ನೋಡಿದ ಅಭಿಮಾನಿಗಳು ಮತ್ತೆ ರಮ್ಯಾ ಸಿನಿಮಾ ರಂಗಕ್ಕೆ ವಾಪಸ್ಸಾಗುವ ಮುನ್ಸೂಚನೆ ನೀಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಇದರ ನಡುವೆ ರಮ್ಯಾ ಮತ್ತು ರಕ್ಷಿತ್ ಶೆಟ್ಟಿ (Rakshit Shetty) ಕುರಿತಾದ ಅನೇಕ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದ್ದು, ಇವರಿಬ್ಬರೂ ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.

ರಕ್ಷಿತ್ ಸಿನಿಮಾಗೆ ಹಾರೈಸಿದ ರಮ್ಯಾ:

ಇನ್ನು, ಕನ್ನಡದ ಸಿನಿಮಾಗಳ ಬಿಡುಗಡೆಗೂ ಮುನ್ನ ಟ್ವಿಟರ್ ಮತ್ತು ಇತರೇ ಸೋಶಿಯಲ್ ಮೀಡಿಯಾಗಳ ಮೂಲಕ ರಮ್ಯಾ ಶುಭ ಹಾರೈಸುವುದು ಹೊಸದಲ್ಲ. ಹಾಗೆಯೇ ಇದೀಗ ಅವರು ರಕ್ಷಿತ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ಚಾರ್ಲಿ 777 ಚಿತ್ರತಂಡ್ಕಕೆ ಶುಭಕೋರಿದ್ದಾರೆ. ಚಿತ್ರದ ಟ್ರೈಲರ್ ಇದೇ ಮೇ 16ರಂದು ಬಿಡುಗಡೆಯಾಗುತ್ತಿದ್ದು, ಈ ಸಿನಿಮಾಗಾಗಿ ನಾನು ಕಾಯುತ್ತಿದ್ದೇನೆ ರಕ್ಷಿತ್ ಎಂದು ಟ್ವೀಟ್ ಮಾಡಿದ್ದಾರೆ.

ರಕ್ಷಿತ್ ಜೊತೆ ರಮ್ಯಾ ಸಿನಿಮಾ?:

ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ರಕ್ಷಿತ್ ಶೆಟ್ಟಿ ಮತ್ತು ರಮ್ಯಾ ಅಭಿಮಾನಿಗಳು ತಮ್ಮ ಮನದ ಆಸೆಯನ್ನು ತಿಳಿಸುತ್ತಿದ್ದಾರೆ. ಅದರಂತೆ ರಕ್ಷಿತ್ ಮತ್ತು ರಮ್ಯಾ ಒಟ್ಟಿಗೆ ಸಿನಿಮಾ ಮಾಡಬೇಕು ಎಂದು ಅಭಿಮಾನಿಗಳು ಬೇಡಿಕೆಯಾಗಿದೆ. ಇದರ ನಡುವೆ ಸಿನಿಮಾ ರಂಗಕ್ಕೆ ವಾಪಸ್ಸಾಗುವ ಕುರಿತು ರಮ್ಯಾ ಈವರೆಗೂ ಯಾವುದೇ ರೀತಿಯ ಖಚಿತವಾದ ಮಾಹಿತಿಯನ್ನು ಕೊಡುತ್ತಿಲ್ಲ. ಆದರೆ, ಇವತ್ತಲ್ಲ ನಾಳೆ ಬಂದೇ ಬರುತ್ತೇನೆ ಅದನ್ನು ಎಲ್ಲರ ಎದುರಿಗೆ ಬಹಿರಂಗ ಪಡಿಸುವುದಾಗಿ ಅವರು ತಿಳಸಿದ್ದಾರೆ.

ಇದನ್ನೂ ಓದಿ: Puneeth Rajkumar​ ಜೊತೆ Come Back ಮಾಡುವ ಮಾತುಕತೆ ಮಾಡಿದ್ದ ನಟಿ ರಮ್ಯಾ..!

ಪುನೀತ್ ಸಿನಿಮಾದ ಮೂಲಕ ಕಮ್​ಬ್ಯಾಕ್ ಆಗಬೇಕಿತ್ತು ರಮ್ಯಾ:

ಇನ್ನೊಂದು ಮಾಹಿತಿಯ ಪ್ರಕಾರ ರಮ್ಯಾ ಅವರು ನಟ ದಿ, ಪುನಿತ್ ರಾಜ್​ಕುಮಾರ್ ಅವರ ಚಿತ್ರದ ಮೂಲಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಕಮ್​ಬ್ಯಾಕ್ ಮಾಡಬೇಕಿತ್ತು. ಇದನ್ನು ಸ್ವತಃ ರಮ್ಯಾ ಅವರೇ ಒಮ್ಮೆ ಹೇಳಿಕೊಂಡಿದ್ದರು. ಆದರೆ ದುರಾದೃಷ್ಟವಶಾತ್ ಅಪ್ಪು ನಿಧನದಿಂದ ಇದು ಸಾಧ್ಯವಾಗದಂತಾಯಿತು. ವಿಶೇಷವೆಂಬಂತೆ ರಮ್ಯಾ ಅವರು ಮೊದಲು ಸಿನಿರಂಗಕ್ಕೆ ಪುನೀತ್ ಅಭಿನಯದ ‘ಅಭಿ‘ ಚಿತ್ರದ ಮೂಲಕವೇ ಪಾದಾರ್ಪಣೆ ಮಾಡಿದ್ದರು.

ಇದನ್ನೂ ಓದಿ: Ramya Gift: ಅಮೂಲ್ಯಗೆ ದುಬಾರಿ ಗಿಫ್ಟ್​ ಕೊಟ್ಟ ರಮ್ಯಾ! ‘ಪದ್ಮಾವತಿ‘ ಕೊಟ್ಟ ಉಡುಗೊರೆ ಏನು ಗೊತ್ತಾ?

ಅನುಮಾನಗಳಿಗೆ ತೆರೆಯೆಳೆದ ಶೆಟ್ರು:

ಇನ್ನು, ರಮ್ಯಾ ಮತ್ತು ರಕ್ಷಿತ್ ಸಿನಿಮಾದ ಕುರಿತು ಹರಿದಾಡುತ್ತಿರುವ ಗಾಸಿಫ್ ಗಳಿಗೆ ರಕ್ಷಿತ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ. ಈ ವೇಳೆ ರಕ್ಷಿತ್ ನಾನು ಇದುವರೆಗೆ ಅವರನ್ನು ಭೇಟಿಯಾಗಿಲ್ಲ. ಹಾಗಿದ್ದರೂ ಅವರು ನನ್ನ ಕ್ರಶ್. ಆವತ್ತಿಂದ ಈವರೆಗೂ ರಮ್ಯಾ ಎಂದರೆ ನನಗೆ ಏನೋ ಒಂದು ರೀತಿಯ ಅಭಿಮಾನ. ರಮ್ಯಾ ಜೊತೆ ನಟಿಸಲು ಅವಕಾಶವಿರುವಂತಹ ಸ್ಕ್ರಿಪ್ಟ್ ಸಿಕ್ಕರೆ ಖಂಡಿತಾ ಅವರ ಜೊತೆ ಸಿನಿಮಾ ಮಾಡುತ್ತೇನೆ‘ ಎನ್ನುವ ಮೂಲಕ ಎಲ್ಲಾ ಅನುಮಾನಗಳಿಗೆ ಕ್ಲ್ಯಾರಿಟಿ ನೀಡಿದ್ದಾರೆ. ಆದರೆ ಈ ವಿಡಿಯೋವನ್ನು ಶೇರ್ ಮಾಡಿರುವ ರಮ್ಯಾ ‘ಯೆಸ್ ರಕ್ಷಿತ್ ಶೆಟ್ಟಿ ನಾನು ರೆಡಿ’ ಎಂದಿದ್ದಾರೆ.
Published by:shrikrishna bhat
First published: