Soorappa Babu: ಅಪಘಾತಕ್ಕೀಡಾದ ಸ್ಯಾಂಡಲ್ವುಡ್ನ ಖ್ಯಾತ ನಿರ್ಮಾಪಕ ಸೂರಪ್ಪ ಬಾಬು ಕಾರು
ನಿರ್ಮಾಪಕ ಸೂರಪ್ಪ ಬಾಬು ಮತ್ತು ಅವರ ಕುಟುಂಬದವರಿಗೆ ರಸ್ತೆ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಸೂರಪ್ಪ ಬಾಬು ಅವರು ಕುಟುಂಬದವರ ಜೊತೆ ದೇವಸ್ಥಾನಕ್ಕೆ ಹೋಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಸ್ಯಾಂಡಲ್ವುಡ್ನ (Sandalwood) ಖ್ಯಾತ ನಿರ್ಮಾಪಕರಾದ (Producer) ಸೂರಪ್ಪ ಬಾಬು (Soorappa Babu) ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆದರೆ ಇದೀಗ ಅವರ ಕುರಿತು ಆಘಾತಕಾರಿ ಸುದ್ದಿಯೊಂದು ಕೇಳಿಬರುತ್ತಿದೆ. ನಿರ್ಮಾಪಕ ಸೂರಪ್ಪ ಬಾಬು ಮತ್ತು ಅವರ ಕುಟುಂಬದವರಿಗೆ ರಸ್ತೆ ಅಪಘಾತ (Road Accident) ಸಂಭವಿಸಿದೆ ಎಂದು ತಿಳಿದುಬಂದಿದೆ. ಸೂರಪ್ಪ ಬಾಬು ಅವರು ಕುಟುಂಬದವರ ಜೊತೆ ದೇವಸ್ಥಾನದಿಂದ ವಾಪಸ್ಸಾಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಇಂದು ಬೆಳಗಿನ ಜಾವ ಈ ಅಪಘಾತ ನಡೆದಿದ್ದು, ಸದ್ಯ ಯಾರಿಗೂ ಯಾವುದೇ ತೊಂದರೆಯಾಗಿಲ್ಲ ಎಂದು ಹೇಳಲಾಗಿದೆ. ಅಪಘಾತವಾದ ಹಿನ್ನಲೆ ಸೂರಪ್ಪ ಬಾಬು ಹಾಗೂ ಕುಟುಂಬದವರು ಬೆಂಗಳೂರಿಗೆ ಮ,ತ್ತೆ ವಾಪಸ್ಸಾಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಸೂರಪ್ಪ ಬಾಬು ಅವರ ಕಾಳಿಗೆ ಚಿಕ್ಕ ಪೆಟ್ಟಾಗಿದೆಯಂತೆ.
ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಅಪಘಾತ:
ಹೌದು, ಸೂರಪ್ಪ ಬಾಬು ಹಾಗೂ ಕುಟುಂಬದವರು ಇಂದು ಬೆಳಗ್ಗೆ ತಮಿಳು ನಾಡಿನ ದೇವಸ್ಥಾನಕ್ಕೆ ತೆರಳಿ ವಾಪಸ್ಸಾಗುತ್ತಿದ್ದ ಸಮಯದಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಅವಘಡದಲ್ಲಿ ಸೂರಪ್ಪ ಬಾಬು ಹಾಗೂ ಕುಟುಂಬದವರಿಗೆ ಚಿಕ್ಕ ಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮತ್ತರ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ ಎಂದು ತಿಳಿದುಬಂದಿದೆ.
ಅದೃಷ್ಟವಶಾತ್ ಯಾವ ತೊಂದರೆ ಸಹ ಆಗಿಲ್ಲ:
ಇನ್ನು, ತಮಿಳುನಾಡಿನ ಬ್ರಹ್ಮ ದೇವಸ್ಥಾನಕ್ಕೆ ಸೂರಪ್ಪ ಬಾಬು ಹಾಗೂ ಕುಟುಂಬಸ್ಥರು ಹೋಗಿ ವಾಪಸ್ಸಾಗುತ್ತಿದ್ದ ವೇಳೆ ಇಂದು ಬೆಳಗಿನ ಜಾವ ಈ ಅಪಘಾತ ಸಂಭವಿಸಿದೆ. ಬೆಳಗಿನ ಜಾವ ಸರಿ ಸುಮಾರು 3 ಗಂಟೆ ಅಪಘಾತ ಸಂಭವಿಸಿದೆ. ಹೊಸೂರು ಕ್ರಾಸ್ ಬಳಿ ಕಾರು ಅಪಘಾತಕ್ಕೆ ಒಳಗಾಗಿದೆ. ಆದರೆ ಅದೃಷ್ವಶಾತ್ ಸೂರಪ್ಪ ಬಾಬು ಜೊತೆ ಅವರ ಕುಟುಂಬಸ್ಥರಿಗೆ ಯಾವುದೇ ರೀತಿಯ ತೊಂದರೆ ಆಗಿಲ್ಲ ಎಂದು ಹೇಳಲಾಗಿದೆ. ಆದರೆ ನಿರ್ಮಾಪಕ ಸೂರಪ್ಪ ಬಾಬು ಅವರು ಮುಂದಿನ ಸೀಟ್ ನಲ್ಲಿ ಕುಳಿತಿದ್ದರಿಂದ ಕಾಲಿಗೆ ಸಣ್ಣ ಪೆಟ್ಟಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಸದ್ಯ ಸೂರಪ್ಪ ಬಾಬು ಅವರು ಆರೋಗ್ಯವಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಇನ್ನು, ಅಪಘಾತದ ತೀರ್ವತೆ ಎಷ್ಟಿತ್ತು ಎಂದರೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಆದರೆ ಅದೃಷ್ಟವಶಾತ್ ಯಾರಿಗೂ ಯಾವುದೇ ದೊಡ್ಡ ಪ್ರಮಾಣದ ತೊಂದರೆ ಆಗಿಲ್ಲ. ಈ ಕುಇರಿತು ಮಾತನಾಡಿರುವ ನಿರ್ಮಾಪಕ ಸೂರಪ್ಪ ಬಾಬು, ‘ಇಂದು ನಾನು ಹಾಗೂ ನನ್ನ ಕುಟುಂಬಸ್ಥರೆಲ್ಲರೂ ತಮಿಳುನಾಡಿನ ಬ್ಹ್ಮದೇವಸ್ಥಾನಕ್ಕೆ ಹೋಗುವಾಗ ರಸ್ತೆಯಲ್ಲಿ ದೊಡ್ಡ ಅಪಘಾತ ಸಂಭವಿಸಿತ್ತು. ಆದರೆ ಕುಟುಂಬಸ್ಥರು ಎಲ್ಲರೂ ಇದೀಗ ಯಾವುದೇ ತೊಂದರೆ ಇಲ್ಲದೆ ಆರಾಮಾಗಿದ್ದಾರೆ. 7 ಜನ ಪ್ರಯಾಣ ಮಾಡುತ್ತಿದ್ದೆವು. ಯಾರಿಗೂ ಏನೂ ತೊಂದರೆ ಆಗಿಲ್ಲ. ನನ್ನ ಕಾಲಿಗೆ ಸ್ವಲ್ಪ ಪೆಟ್ಟು ಬಿದ್ದಿದ್ದು ಕಾಲಿಗೆ ಬ್ಯಾಂಡೇಜ್ ಹಾಕಿಸಿಕೊಂಡಿದ್ದೇನೆ‘ ಎಂದು ಹೇಳಿದ್ದಾರೆ.
ಹೌದು, ಸ್ಯಾಂಡಲ್ವುಡ್ನ ಖ್ಯಾತ ನಿರ್ಮಾಪಕರಲ್ಲಿ ಒಬ್ಬರಾದ ಸೂರಪ್ಪ ಬಾಬು ಈವರೆಗೆ ಅನೇಕ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಕೋಟಿಗೊಬ್ಬ, ಕೋಟಿಗೊಬ್ಬ 2, ಕೋಟಿಗೊಬ್ಬ 3, ಕದಂಬ, ಸೂರಪ್ಪ, ಬಂಧುಬಳಗ, ಅರಿಶಿಣ, ದಶಮುಖ ಸೇರಿದಂತೆ ಅನೇಕ ಸಿನಿಮಾಗಳನ್ನು ನಿರ್ಮಿಸಿರುವ ಖ್ಯಾತಿ ಅವರಿಗೆ ಸಲ್ಲುತ್ತದೆ.
Published by:shrikrishna bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ