ಪೊಲೀಸರ ಮೇಲೆ ದರ್ಪ ತೋರಿದ್ರಾ ನಿರ್ಮಾಪಕ ಕೆ.ಮಂಜು..?

ಸ್ಯಾಂಡಲ್​ವುಡ್​ ನಿರ್ಮಾಪಕ ಕೆ. ಮಂಜು ಸಿನಿಮಾಗಳ ಹೊರತಾಗಿಯೂ ಕೆಲವೊಮ್ಮೆ ಸುದ್ದಿಯಾಗಿದ್ದೂ ಇದೆ. ಈಗ ಲಾಕ್​ಡೌನ್​ ಸಮಯದಲ್ಲೂ ಸಹ ಪೊಲೀಸರ ಮೇಲೆ ದರ್ಪ ತೋರುವ ಮೂಲಕ ಸುದ್ದಿಯಾಗಿದ್ದಾರೆ.

ನಿರ್ಮಾಪಕ ಕೆ.ಮಂಜು

ನಿರ್ಮಾಪಕ ಕೆ.ಮಂಜು

  • Share this:
ಕೊರೋನಾ ಭೀತಿಯಿಂದಾಗಿ ಬೆಂಗಳೂರು ನಗರ ಹಾಗೂ ಗ್ರಾಮಾಂತರದಲ್ಲಿ ಲಾಕ್​ಡೌನ್​ ಜಾರಿ ಮಾಡಲಾಗಿದೆ. ಈ ವೇಳೆ ಅನಗತ್ಯವಾಗಿ ಯಾರೂ ಮನೆಗಳಿಂದ ಹೊರ ಬಾರದಂತೆ  ಪೊಲೀಸರು ಎಚ್ಚರವಹಿಸುತ್ತಿದ್ದಾರೆ. ಕೊರೋನಾ ಕಾಟ ಆರಂಭವಾದಾಗಿನಿಂದಲೂ ಪೊಲೀಸರು ಹಗಲಿರುಳು ಶ್ರಮಿಸುತ್ತಿದ್ದಾರೆ. 

ಕಾರಣವಿಲ್ಲದೆ ರಸ್ತೆಗಿಳಿಯುವವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಾರೆ. ಹೀಗಿದ್ದರೂ ಜನರು ಸುಮ್ಮನೆ ಓಡಾಡುವುದನ್ನು ಮಾತ್ರ ನಿಲ್ಲಿಸಿಲ್ಲ. ಇಂದು ಬೆಳಿಗ್ಗೆ ನಿರ್ಮಾಪಕ ಕೆ.ಮಂಜು ತಮ್ಮ ಬೈಕ್ ಹತ್ತಿ ರಸ್ತೆಗಿಳಿದಾಗ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆದಿದೆ.  ​

ಮಂಜು ಅವರು ಬೆಳ್ಳಿಗೆ ಬ್ಯಾಂಕಿಗೆ ಹಣ ಕಟ್ಟಲು ಹೋಗುತ್ತಿರುವಾಗ ಪೊಲೀಸರು ತಡೆದಿದ್ದಾರೆ. ರಸ್ತೆಯಲ್ಲಿ ತಪಾಸಣೆ ಮಾಡುತ್ತಿದ್ದ ಪೊಲೀಸರು, ಬೈಕ್​ನ ದಾಖಲೆಗಳನ್ನು ತೋರಿಸುವಂತೆ ಮಂಜು ಅವರನ್ನು ಕೇಳಿದ್ದಾರೆ.  ಆಗ ಅವರೊಂದಿಗೆ ಮಾತಿಗಿಳಿದ ಮಂಜು,  ತಾನೊಬ್ಬ ಖ್ಯಾತ ನಿರ್ಮಾಪಕ, ನನ್ನನ್ನು ದಾಖಲೆ ಕೇಳುತ್ತಿದ್ದೀರಾ ಅಂತ ದರ್ಪ ತೋರಿದ್ದಾರಂತೆ.

ಇದನ್ನೂ ಓದಿ:Vidya Srimurali: ಫೋಟೋಗಳಿಗೆ ಕೊಡುವ ಶೀರ್ಷಿಕೆಗೆ ಪೇಟೆಂಟ್​ ಪಡಿತಾರಂತೆ ಶ್ರೀಮುರಳಿ ಮಡದಿ ವಿದ್ಯಾ..!

ನಾನು ದಾಖಲೆಗಳನ್ನು ತೋರಿಸುವುದಿಲ್ಲ. ನನಗೆ ನಗರ ಪೊಲೀಸರ್​ ಆಯುಕ್ತರು ಗೊತ್ತು ಎಂದಿದ್ದಾರಂತೆ. ಮಂಜು ಅವರ ವರ್ತನೆ ಕಂಡ ಸಬ್​ ಇನ್​​ಸ್ಪೆಕ್ಟರ್​, ಅವರ ಬೈಕ್​ ಅನ್ನು ಪೊಲೀಸ್​ ಠಾಣೆಗೆ ತೆಗೆದುಕೊಂಡು ಹೋಗುವಂತೆ ಸಿಬ್ಬಂದಿಗೆ ಸೂಚಿಸಿದ್ದಾರೆ.

ಇದಾದ ಬಳಿಕ ಜೆ.ಪಿ.ನಗರ ಪೊಲೀಸ್ ಠಾಣೆಗೆ ಬಳಿ ಬಂದ ಕೆ.ಮಂಜು ಮತ್ತೆ ಗಲಾಟೆ ಮಾಡಿದರಂತೆ.‌ ಆಗಲೂ ಸಬ್ ಇನ್​ಸ್ಪೆಕ್ಟರ್​ ಅವರು ದಾಖಲೆ ಇಲ್ಲದೆ ಗಾಡಿ ಕೊಡುವುದಿಲ್ಲ ಎಂದಿದ್ದಾರೆ. ಕೊನೆಗೆ ಮಂಜು ದಾಖಲೆ ತೋರಿಸಿ, ತಮ್ಮ ಬೈಕ್​ ಬಿಡಿಸಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಜೊತೆಗೆ ಸುಮ್ಮನೆ ರಸ್ತೆಯಲ್ಲಿ ಓಡಾಡಬೇಡಿ ಎಂದು ಬುದ್ಧಿ ಹೇಳಿ ಕಳುಹಿಸಿದ್ದಾರಂತೆ ಪೊಲೀಸರು.

ರೊಮ್ಯಾಂಟಿಕ್​ ಫೋಟೋ ಜೊತೆ ಪ್ರೀತಿಯ ಸಂದೇಶ ಕೊಟ್ಟ ನಿಖಿಲ್​ ಕುಮಾರಸ್ವಾಮಿಇನ್ನು ಕೆ.ಮಂಜು ಅವರು ನ್ಯೂಸ್​18ಗೆ ಪ್ರತಿಕ್ರಿಯೆ ಕೊಟ್ಟಿದ್ದು, 11:45ಕ್ಕೆ ಬ್ಯಾಂಕ್​ಗೆ ಹೋಗುವಾಗ, ಈ ಘಟನೆ ನಡೆಯಿತು. ನಂತರ ಪೊಲೀಸ್ ಇನ್​ಸ್ಪೆಕ್ಟರ್ ನನಗೆ ಪರಿಚಯ ಇದ್ದ ಕಾರಣಕ್ಕೆ ದಾಖಲೆಗಳನ್ನು ತೋರಿಸಿದ್ದೇ, ಬಿಟ್ಟು ಕಳಿಹಿಸಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: Remo: ಬೆಂಗಳೂರಿಗರಿಗಾಗಿ ರೆಮೊ ಹಾಡಿರುವ ಸಖತ್ ಹಾಡು ಇಲ್ಲಿದೆ..!
Published by:Anitha E
First published: