Producer Arrested: ಕಾಂತಾರ ನಟನ ಸಿನಿಮಾಗೆ ಬಂಡವಾಳ ಹೂಡಿದ್ದ ಪ್ರೊಡ್ಯೂಸರ್ ಅರೆಸ್ಟ್

ನಿರ್ಮಾಪಕ ಪ್ರಕಾಶ್

ನಿರ್ಮಾಪಕ ಪ್ರಕಾಶ್

ಕಾಂತಾರ ಸಿನಿಮಾ ಮೂಲಕ ದೊಡ್ಡ ಬ್ರೇಕ್ ಪಡೆದ ಕರಾವಳಿ ನಟ ಪ್ರಮೋದ್ ಶೆಟ್ಟಿ ಅವರ ಸಿನಿಮಾಗೆ ಬಂಡವಾಳ ಹೂಡಿದ್ದ ಸ್ಯಾಂಡಲ್​ವುಡ್ ನಿರ್ಮಾಪಕನನ್ನು ವಂಚನೆ ಕೇಸ್​ನಲ್ಲಿ ಅರೆಸ್ಟ್ ಮಾಡಲಾಗಿದೆ.

  • News18 Kannada
  • 3-MIN READ
  • Last Updated :
  • Bangalore, India
  • Share this:

ಬಹಳಷ್ಟು ಸಲ ಕೆಲಸ ಕೊಡಿಸುವ ನೆಪದಲ್ಲಿ ವಂಚನೆ ಪ್ರಕರಣಗಳು  (Fraud Case)ನಡೆಯುತ್ತಲೇ ಇರುತ್ತವೆ. ದೊಡ್ಡ ರಾಜಕಾರಣಿಗಳ, ನಟರ ಹೆಸರನ್ನು (Actors) ಬಳಸಿಕೊಂಡು ಮುಗ್ಧ ಜನರನ್ನು ಯಾಮಾರಿಸಿ ದೊಡ್ಡ ಹೊಡಿಯುವ ಜನ ಆಗಾಗ ಪೊಲೀಸರ (Police) ಕೈಗೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ಇದೀಗ ಇದೇ ರೀತಿ ವಂಚನೆ ಮಾಡಿದ ಪ್ರಕರಣದಲ್ಲಿ ಸ್ಯಾಂಡಲ್​ವುಡ್ ನಿರ್ಮಾಪಕನನ್ನು (Producer) ಅರೆಸ್ಟ್  (Arrest) ಮಾಡಲಾಗಿದೆ. ಕೆಎಮ್​ಎಫ್ ನಲ್ಲಿ (KMF) ಕೆಲಸ ಕೊಡಿಸುತ್ತೇನೆ ಎಂದು ವಂಚನೆ ಮಾಡಿದ ಸ್ಯಾಂಡಲ್​​ವುಡ್  (Sandalwood) ನಿರ್ಮಾಪಕನ ಬಂಧ‌ನವಾಗಿದೆ.


ಶಬಾಷ್ ಬಡ್ಡಿ ಮಗನೇ ಎಂಬ ಕನ್ನಡ ಸಿನಿಮಾಗೆ ಬಂಡವಾಳ ಹೂಡಿದ್ದ ನಿರ್ಮಾಪಕ ಪ್ರಕಾಶ್ ಎಂಬಾತನ ಅರೆಸ್ಟ್ ಆಗಿದೆ. ಶಬಾಷ್ ಬಡ್ಡಿ ಮಗನೇ ಪ್ರಮೋದ್ ಶೆಟ್ಟಿ ನಾಯಕನಟನಾಗಿ ಅಭಿನಯದ ಮೊದಲ ಸಿನಿಮಾ ಆಗಿದ್ದು ಇದರಲ್ಲಿ ಮೊದಲ ಬಾರಿ ಪ್ರಮೋದ್ ನಾಯಕ ನಟನಾಗಿ ಮಿಂಚಿದ್ದರು.
ಕಳೆದ ವರ್ಷ ಅಕ್ಟೋಬರ್ 2022 ರ ದಸರಾ ವೇಳೆಗೆ ಮುಹೂರ್ತ ಶುರುಮಾಡಿದ್ದ ಸಿನಿಮಾ ಆ ನಂತರ ಅಷ್ಟೇನೂ ಸುದ್ದಿ ಮಾಡಲಿಲ್ಲ. ಆಡುಗೋಡಿ ಠಾಣೆ ಪೊಲೀಸರು ಶಬ್ಬಾಷ್ ಬಡ್ಡಿ ಮಗನೇ ಸಿನಿಮಾ ನಿರ್ಮಾಪಕ ಪ್ರಕಾಶ್​ನನ್ನು ಅರೆಸ್ಟ್ ಮಾಡಿದ್ದಾರೆ.


ನಟ ಪ್ರಮೋದ್ ಶೆಟ್ಟಿ ಜೊತೆ ನಿರ್ಮಾಪಕ ಪ್ರಕಾಶ್


KMF ನಲ್ಲಿ ವಿವಿಧ ಹುದ್ದೆ ಕೊಡಿಸುತ್ತೇನೆ ಎಂದು ಆಸೆ ಹುಟ್ಟಿಸಿ ಹಣ ಪಡೆದಿದ್ದ ನಿರ್ಮಾಪಕ ಪ್ರಕಾಶ್ 20 ಲಕ್ಷಕ್ಕೆ KMF ನಲ್ಲಿ ತಾಂತ್ರಿಕ ಅಧಿಕಾರಿ ಹುದ್ದೆ ಕೊಡಿಸೋದಾಗಿ ನಂಬಿಸಿದ್ದ. ಚಿಕ್ಕಬಳ್ಳಾಪುರ ಮೂಲದ ಚರಣ್ ಎಂಬುವವರಿಂದ ಮುಂಗಡವಾಗಿ 10 ಲಕ್ಷ ಪಡೆದಿದ್ದ.


ಇದನ್ನೂ ಓದಿ: Anupam Kher: ಕನ್ನಡಕ್ಕೆ ಬರ್ತಿದ್ದಾರೆ ಕಾಶ್ಮೀರ್ ಫೈಲ್ಸ್ ನಟ! ಶಿವಣ್ಣ ಜೊತೆ ಅನುಪಮ್ ಖೇರ್!


ಕಳೆದ ಡಿಸೆಂಬರ್ ನಲ್ಲಿ KMF ಗೆ ವಿವಿಧ ಹುದ್ದೆಗಳ ಲಿಖಿತ ಪರೀಕ್ಷೆ ನಡೆದಿತ್ತು. KMF ನಿರ್ದೇಶಕರ ಸರ್ಕಾರಿ ಲಾಂಛನ ನಕಲು ಮಾಡಿ ಆದೇಶ ಪ್ರತಿ ನೀಡ್ತಿದ್ದ ಪ್ರಕಾಶ್ ಉದ್ಯೋಗಾಕಾಂಕ್ಷಿಗಳನ್ನು ಮೋಸ ಮಾಡುತ್ತಿದ್ದ.


ಚರಣ್ ರಾಜ್ ನಕಲಿ ಆದೇಶ ಪ್ರತಿ ಕಂಡು KMF ಅಧಿಕಾರಿಗಳು ಆಡುಗೋಡಿ ಠಾಣೆಯಲ್ಲಿ ದೂರು ನೀಡಿದ್ದರು. ದೂರಿ ಅನ್ವಯ ಐಪಿಸಿ 420 ಅಡಿಯಲ್ಲಿ ನಿರ್ಮಾಪಕ ಪ್ರಕಾಶ್​ನ ಬಂಧನವಾಗಿದೆ. ಇದೇ ರೀತಿ ಐದಾರು ಮಂದಿಗೆ ವಂಚಿಸಿರೋ ಆರೋಪ ಕೂಡಾ ಕೇಳಿ ಬಂದಿದೆ.

Published by:Divya D
First published: