• Home
  • »
  • News
  • »
  • entertainment
  • »
  • Gandasi Nagaraj: ಸ್ಯಾಂಡಲ್​ವುಡ್​ನ ಖ್ಯಾತ ಹಾಸ್ಯ ನಟ ಗಂಡಸಿ ನಾಗರಾಜ್ ಇನ್ನಿಲ್ಲ

Gandasi Nagaraj: ಸ್ಯಾಂಡಲ್​ವುಡ್​ನ ಖ್ಯಾತ ಹಾಸ್ಯ ನಟ ಗಂಡಸಿ ನಾಗರಾಜ್ ಇನ್ನಿಲ್ಲ

ಗಂಡಸಿ ನಾಗರಾಜ್​ ಇನ್ನಿಲ್ಲ

ಗಂಡಸಿ ನಾಗರಾಜ್​ ಇನ್ನಿಲ್ಲ

ಕನ್ನಡ ಚಿತ್ರರಂಗದ ಹಾಸ್ಯ ನಟ ಗಂಡಸಿ ನಾಗರಾಜ್​ ಕೊನೆಯುಸಿಳೆದಿದ್ದಾರೆ. ಸ್ಯಾಂಡಲ್‌ವುಡ್‌ನ ಜನಪ್ರಿಯ ಕಾಸ್ಟ್ಯೂಮ್ ಡಿಸೈನರ್ ಮತ್ತು ಹಾಸ್ಯ ನಟ ಗಂಡಸಿ ನಾಗರಾಜ್ ಇಂದು ನಿಧನರಾಗಿದ್ದಾರೆ.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

ಕನ್ನಡ ಚಿತ್ರರಂಗದ ಹಾಸ್ಯ ನಟ ಗಂಡಸಿ ನಾಗರಾಜ್​  ಕೊನೆಯುಸಿಳೆದಿದ್ದಾರೆ  (Gandasi Nagaraj Death). ಸ್ಯಾಂಡಲ್‌ವುಡ್‌ (Sandalwood) ನ ಜನಪ್ರಿಯ ಕಾಸ್ಟ್ಯೂಮ್ ಡಿಸೈನರ್ ಮತ್ತು ಹಾಸ್ಯ ನಟ ಗಂಡಸಿ ನಾಗರಾಜ್ ಇಂದು ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ  ಗಂಡಸಿ ನಾಗರಾಜ್​ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.  ಗಂಡಸಿ ನಾಗರಾಜ್ ಅವರು ಬೆಂಗಳೂರಿ (Bengaluru) ನಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. ಗಂಡಸಿ ನಾಗರಾಜ್ ಕನ್ನಡದ 1,000 ಕ್ಕೂ ಹೆಚ್ಚು ಚಲನಚಿತ್ರಗಳ ನಟಿಸಿದ್ದಾರೆ. ಗಂಡಸಿ ಅವರ ಸಾವಿಗೆ ಕನ್ನಡ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ಹಲವು ದಶಕಗಳ ಕಾಲ ಕನ್ನಡ ಸಿನಿರಸಿಕರನ್ನುಗಂಡಸಿ ನಾಗರಾಜ್​ ನಕ್ಕು ನಲಿಸಿದ್ದರು. ಇದೀಗ ಅವರ ಸಾವು ಅಭಿಮಾನಿಗಳಿಗೂ ಬೇಸರ ಮೂಡಿಸಿದೆ.


ಸಿನಿರಸಿಕರನ್ನು ನಕ್ಕು ನಲಿಸಿದ್ದ ಗಂಡಸಿ ನಾಗರಾಜ್!


ಗಂಡಸಿ ನಾಗರಾಜ್​ ಅವರು ಕನ್ನಡ ಚಿತ್ರರಂಗಕ್ಕೆ ಮೊದಲು ಕಾಸ್ಟೂಮ್ಸ್​​ ಡಿಸೈನರ್​ ಆಗಿ ಎಂಟ್ರಿಯಾಗಿದ್ದರು. ಇದಾದ ಬಳಿಕ ಅವರು ಬಣ್ಣ ಹಚ್ಚುವುದಕ್ಕೂ ಶುರು ಮಾಡಿದ್ದರು. ಗುಂಡನ ಮದುವೆ, ರಾಯರ ಮಗ, ಹಬ್ಬ, ಪರ್ವ, ಮಾತಾಡು ಮಾತಾಡ್ ಮಲ್ಲಿಗೆ, ಕೋಟಿಗೊಬ್ಬ-3 ಚಿತ್ರಗಳಲ್ಲಿ ನಟಿಸಿದ್ದರು. ನವರಸ ನಾಯಕ ಜಗ್ಗೇಶ್ ಅವರ ಆಪ್ತ ವಸ್ತ್ರಾಲಂಕಾರ ಮಾಡುತ್ತಿದ್ದರು. ಅವರು ನಟಿಸಿದ ಪ್ರಮುಖ ಚಿತ್ರಗಳೆಂದರೆ ಸರ್ವರ್ ಸೋಮಣ್ಣ, ಬಂಡ ನನ್ನ ಗಂಡ, ಹಬ್ಬ, ಶ್ರೀ ಮಂಜುನಾಥ ಮತ್ತು ರಾಜ ಹುಲಿಯಲ್ಲಿ ಅವರು ಅಭಿನಯಿಸಿದ್ದಾರೆ. ಜೊತೆಗೆ ಕೆ3 ಚಿತ್ರದಲ್ಲಿ ಕೊನೆ ಬಾರಿಗೆ ಅವರು ನಟಿಸಿದ್ದರು.


ಟೈಲರಿಂಗ್​ ಮಾಡಿಕೊಂಡಿದ್ದ ಗಂಡಸಿ ನಾಗರಾಜ್!


ನಾಗರಾಜ್​ ಅವರು ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದ ಅವರು ಚಿತ್ರರಂಗದಲ್ಲಿ ನಟನಾಗುವ ಕನಸು ಕಂಡಿದ್ದರು. ಆರಂಭದಲ್ಲಿ ಅವಕಾಶ ಸಿಗದೇ ಇದ್ದಾಗ ಟೈಲರಿಂಗ್​ ಮಾಡಿಕೊಂಡಿದ್ದು, ನಂತರ ಅವರಿಗೆ ಕಾಸ್ಟ್ಯೂಮರ್​ ಆಗಿ ಚಿತ್ರರಂಗದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಬಳಿಕ 40 ವರ್ಷಗಳ ಕಾಲ ಗಂಡಸಿ ನಾಗರಾಜ್​ ಅವರು ಕಾಸ್ಟ್ಯೂಮರ್ ಆಗಿ ಶ್ರಮಿಸಿದ್ದಾರೆ. ನಟ ಜಗ್ಗೇಶ್​ ಅವರ ಆಪ್ತ ವಸ್ತ್ರಾಲಂಕಾರ ಕಲಾವಿದನಾಗಿ ಅವರು ಗುರುತಿಸಿಕೊಂಡಿದ್ದರು

Published by:ವಾಸುದೇವ್ ಎಂ
First published: