• Home
  • »
  • News
  • »
  • entertainment
  • »
  • Matador Movie: ಜೂನ್​ನಲ್ಲಿ ಪ್ರಯಾಣ ಆರಂಭಿಸಲಿದೆ ಮೆಟಡೋರ್, ಪ್ರಮೋಷನ್ ಮೂಲಕ ಗಮನ ಸೆಳೆದ ಚಿತ್ರತಂಡ

Matador Movie: ಜೂನ್​ನಲ್ಲಿ ಪ್ರಯಾಣ ಆರಂಭಿಸಲಿದೆ ಮೆಟಡೋರ್, ಪ್ರಮೋಷನ್ ಮೂಲಕ ಗಮನ ಸೆಳೆದ ಚಿತ್ರತಂಡ

ಮೆಟಡೋರ್ ಚಿತ್ರ

ಮೆಟಡೋರ್ ಚಿತ್ರ

ಮೆಟಡೋರ್ ಚಿತ್ರತಂಡ ಇದೀಗ ವಿಭಿನ್ನ ರೀತಿಯಲ್ಲಿ ಚಿತ್ರದ ಪ್ರಮೋಶನ್​ ಅನ್ನು ಮಾಡುತ್ತಿದೆ. ಮೆಟಡೋರ್ ವಾಹನದಲ್ಲಿಯೇ ಊರ್ ಊರ್ ಸುತ್ತಿ ಚಿತ್ರತಂಡ ಹೊಸ ರೀತಿಯಲ್ಲಿ ಪ್ರಮೋಷನ್ ಮಾಡುವ ಮೂಲಕ ಸುದ್ದಿಯಲ್ಲಿದೆ.

  • Share this:

ಸ್ಯಾಂಡಲ್​ವುಡ್​ ನಲ್ಲಿ (Sandalwood) ಹೊಸ ಪ್ರತಿಭೆಗಳಿಗೆ ಯಾವುದೇ ತೊಂದರೆಯಿಲ್ಲ. ವಿಭಿನ್ನ ಕಥೆಗಳ ಸಿನಿಮಾಗಳನ್ನು (Movies) ಹೊಸಬರ ತಂಡ ಆಗ್ಗಾಗ್ಗೆ ಮಾಡುತ್ತಲೇ ಇರುತ್ತದೆ. ಅದಲ್ಲದೇ ಹೊಸಬರ ಸಿನಿಮಾಗಳು ಸಹ ಒಂದಲ್ಲಾ ಒಂದು ರೀತಿಯಲ್ಲಿ ಸದ್ದು ಮಾಡುತ್ತಿರುತ್ತದೆ. ಇದೀಗ ಅದೇ ರೀತಿ ಹೊಸಬರ ತಂಡವೊಂದು ಸಿದ್ಧಪಡಿಸಿರುವ ‘ಮೆಟಡೋರ್‘ (Matador) ಎಂಬ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೈಲರ್ ಮತ್ತು ಪ್ರಮೋಷನಲ್ ಹಾಡುಗಳು ಸಖತ್ ಸೌಂಡ್​ ಮಾಡುತ್ತಿದ್ದು, ಇದೀಗ ವಿಭಿನ್ನ ರೀತಿಯಲ್ಲಿ ಚಿತ್ರತಂಡ ಪ್ರಮೋಷನ್ (Promotion) ಮಾಡುತ್ತಿದೆ. ಹೌದು, ಹಳೆಯ ವಾಹನಕ್ಕೆ ಚಿತ್ರದ ಪೋಸ್ಟರ್​ ಅನ್ನು ಅಂಟಿಸಿ ಹಾಡುಗಳನ್ನು ಬಳಸಿಕೊಂಡು ಹೊಸ ರೀತಿಯಲ್ಲಿ ಪ್ರಚಾರ ಕಾರ್ಯವನ್ನು ಚಿತ್ರತಂಡ ಆರಂಭಿಸಿದೆ.


ವಿಭಿನ್ನವಾಗಿ ಪ್ರಮೋಷನಲ್ ಮಾಡಿದ ಮೆಟಡೋರ್:


ಮೆಟಡೋರ್ ಚಿತ್ರತಂಡ ಇದೀಗ ವಿಭಿನ್ನ ರೀತಿಯಲ್ಲಿ ಚಿತ್ರದ ಪ್ರಮೋಶನ್​ ಅನ್ನು ಮಾಡುತ್ತಿದೆ. ಮೆಟಡೋರ್ ವಾಹನದಲ್ಲಿಯೇ ಊರ್ ಊರ್ ಸುತ್ತಿ ಚಿತ್ರತಂಡ ಹೊಸ ರೀತಿಯಲ್ಲಿ ಪ್ರಮೋಷನ್ ಮಾಡುವ ಮೂಲಕ ಸುದ್ದಿಯಲ್ಲಿದೆ. ಅದ್ಲಲದೇ ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಚಿತ್ರವು 2022 ಜೂನ್ 3ಕ್ಕೆ ರಾಜ್ಯಾದ್ಯಂತ ತೆರೆಕಾಣಲಿದೆ. ಹೀಗಾಗಿ ಬಿಡುಗಡೆ ಕೆಲದಿನಳಷ್ಟೇ ಬಾಕಿ ಇರುವುದರಿಂದ ಚಿತ್ರದ ಪ್ರಚಾರ ಕಾರ್ಯಗಳು ಮತ್ತಷ್ಟು ಬಿರುಸಿನಿಂದ ಕೂಡಿದ್ದಾಗಿ ಚಿತ್ರತಂಡ ತಿಳಿಸಿದೆ.



ಜೂನ್ 3ಕ್ಕೆ ಪ್ರಯಾಣ ಆರಂಭಿಸಲಿರುವ ಮೆಟಡೋರ್:


ಈಗಾಗಲೇ ಚಿತ್ರದ ಟ್ರೈಲರ್ ಮತ್ತು ಪ್ರಮೋಶನಲ್ ವಿಡಿಯೋಗಳು ಬಿಡುಗಡೆಯಾಗಿದ್ದು, ಎಲ್ಲಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದ ಟ್ರೈಲರ್ ನೋಡಿರುವ ನಿರ್ದೇಶ, ನಟ ರಿಷಭ್ ಶೆಟ್ಟಿ ಮತ್ತು ಡಾಲಿ ಧನಂಜಯ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇನ್ನು, ಚಿತ್ರ ಬರುವ ಜೂನ್ 3ಕ್ಕೆ ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ಹೀಗಾಗಿ ಮೆಟಡೋರ್ ಸಿನಿಮಾ ರಿಲೀಸ್ ಗೆ ಕ್ಷಣಗಣನೆ ಶುರುವಾಗಿದ್ದು, ಚಿತ್ರತಂಡ ಭರ್ಜರಿ ಪ್ರಮೋಷನ್ ಆರಂಭಿಸಿದೆ. ಮೆಟಡೋರ್ ವಾಹನಕ್ಕೆ ಸಿನಿಮಾದ ಪೋಸ್ಟರ್ ಅಂಟಿಸಿ ಅದರ ಮೂಲಕ ತಿರುಗಾಟ ಮಾಡಿ ಪ್ರಚಾರ ಮಾಡುತ್ತಿದೆ.


ಮೆಟಡೋರ್ ಚಿತ್ರದ ಪೋಸ್ಟರ್


5 ಕಥೆಗಳ ಚಿತ್ರ ಮೆಟಡೋರ್:


ಮೆಟಡೋರ್ ಒಂದು ವಿಭಿನ್ನ ಕಥೆಗಳನ್ನು ಹೊಂದಿರುವ ಚಿತ್ರವಾಗಿದ್ದು, ಇದು ಐದು ಕಥೆಯುಳ್ಳ ಹೈಪರ್ ಲಿಂಕ್ ಸಿನಿಮಾವಾಗಿರಲಿದೆ ಎಂದು ಚಿತ್ರದ ನಿರ್ದೇಶಕ ಸುದರ್ಶನ್ ಜಿ ಶೇಖರ್ ಹೇಳಿದ್ದಾರೆ. ಇನ್ನು, ಚಿತ್ರಕ್ಕೆ ಕಿರಣ್ ಕುಮಾರ್ ಎಸ್ ಹೆಚ್ ಬಂಡವಾಳ ಹೂಡಿದ್ದು, ಓಂ ಸ್ಟುಡಿಯೋ ಪ್ರೊಡಕ್ಷನ್ ಹೌಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದೆ. ಚಿತ್ರಕ್ಕೆ ತಂಗಾಳಿ ನಾಗರಾಜ್ ಸಂಗೀತ ಸಂಯೋಜನೆ ಇದ್ದು, ಗೋಪಿನಾಥ್ ಅವರ ಕ್ಯಾಮೆರಾ ಕಣ್ಣಲ್ಲಿ ಮೆಟಡೋರ್ ಸೆರೆಹಿಡಿಯಲಾಗಿದೆ. ಚಿತ್ರದಲ್ಲಿ ರವಿ ಮೈಸೂರು, ಮೋಹನ್ ಬಾಬು, ಕಿರಣ್, ಅರ್ಚನಾ ಮಹೇಶ್ ಸೇರಿದಂತೆ ದೊಡ್ಡ ತಾರಾಬಳಗವೇ ಸಿನಿಮಾದಲ್ಲಿದೆ.


ಇದನ್ನೂಓದಿ: Hollywood: ಹಾಲಿವುಡ್​ನಲ್ಲಿ ಮಿಂಚುತ್ತಿರುವ ಕನ್ನಡದ ಹುಡುಗಿ, ಅಲ್ಲಿನ ಅದ್ಧೂರಿತನದಲ್ಲಿ ಇವರದ್ದೂ ಪಾಲಿದೆ


ಗಾಂಧಾರಿ ಹಾಡಿನಲ್ಲಿ ಮಿಂಚಿದ ಕವಿತಾ ಗೌಡ:


ಇನ್ನು, ಕೆಲ ದಿನಗಳ ಹಿಂದೆ ಬಿಡುಗಡೆಯಾದ ಚಿತ್ರದ ಗಾಂಧಾರಿ ಹಾಡಿನಲ್ಲಿ ನಟಿ ಕವಿತಾ ಗೌಡ ನಟಿಸಿದ್ದು, ಸಖತ್ ಸದ್ದು ಮಾಡುತ್ತಿದೆ. ಈ ಹಾಡಿಗೆ ತಂಗಾಳಿ ನಾಗರಾಜ್ ಸಾಹಿತ್ಯ ಬರೆದಿದ್ದು, ಅಪೂರ್ವ ಶ್ರೀಧರ್ ಕಂಠದಾನ ಮಾಡಿದ್ದಾರೆ.

Published by:shrikrishna bhat
First published: