ಲಾಕ್ಡೌನ್ ಅವಧಿಯಲ್ಲಿ ಸೆಲೆಬ್ರಿಟಿಗಳು ಮನೆಯಲ್ಲಿ ಇದ್ದುಕೊಂಡು ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದಾರೆ. ಇನ್ನು ಕೆಲವರು ಪುಸ್ತಕ ಓದುತ್ತಾ, ಅಡುಗೆ, ಯೋಗಭ್ಯಾಸ ಮಾಡುತ್ತಾ ಸಮಯ ಕಳೆಯುತ್ತಿದ್ದಾರೆ. ಅದರಂತೆ ಸ್ಯಾಂಡಲ್ವುಡ್ನ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ನವೀನ್ ಸಜ್ಜು ಏನು ಮಾಡುತ್ತಿದ್ದಾರೆ ಗೊತ್ತಾ?... ಈ ವಿಡಿಯೋ ನೋಡಿ.
ಲಾಕ್ಡೌನ್ ಸಮಯವನ್ನು ನವೀನ್ ಸಜ್ಜು ಕೊಳಲು ಕಲಿಯಲು ಮುಡುಪಾಗಿಟ್ಟಿದ್ದಾರೆ. ಮನೆಯಲ್ಲಿದ್ದಕೊಂಡು ಕೊಳಲು ನುಡಿಸುವುದನ್ನು ಕಲಿಯುತ್ತಿದ್ದಾರೆ. ಸಾಮಾನ್ಯವಾಗಿ ಕೊಳಲು ನುಡಿಸುವುದನ್ನು ಕಲಿಯಲು ಸಾಕಷ್ಟು ಸಮಯ ಬೇಕಾಗುತ್ತದೆ. ಆದರೆ, ನವೀನ್ ಸಜ್ಜು ಮಾತ್ರ ಕೇವಲ 2 ತಿಂಗಳಿನಲ್ಲಿ ಕೊಳಲು ನುಡಿಸಲು ಕಲಿತಿರುವುದು ವಿಶೇಷ. ಇಷ್ಟು ಮಾತ್ರವಲ್ಲ, ತಾವು ಕೊಳಲು ನುಡಿಸುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಇದು ವೈರಲ್ ಕೂಡ ಆಗಿದೆ.
ನವೀನ್ ಸಜ್ಜು ತಮ್ಮ ಫೇಸ್ಬುಕ್ ಖಾತೆಯಲ್ಲಿ ಕೊಳಲು ನುಡಿಸುವ ಪ್ರಾಕ್ಟೀಸ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅನೇಕರು ಇವರ ಕೊಳಲು ನಾದವನ್ನು ಕೇಳಿ ಕಾಮೆಂಟ್ ಬರೆದಿದ್ದಾರೆ. ಕೆಲವರು ಕೇಳಲು ಸುಮಧುರವಾಗಿದೆ ಎಂದರೆ, ಇನ್ನೂ ಕೆಲವರು ಎಂಜಾಯ್ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ನವೀನ್ ಸ್ಯಾಂಡಲ್ವುಡ್ನಲ್ಲಿ ಸಾಕಷ್ಟ ಸಿನಿಮಾ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಮಾತ್ರವಲ್ಲದೆ ಅನೇಕ ಸಿನಿಮಾಗಳಿಗೆ ಧ್ವನಿ ನೀಡಿದ್ದಾರೆ. ಕಳೆದ ವರ್ಷ ‘ನಾಳೆಯಿಂದ ಎಣ್ಣೆ ಬುಟ್ಬುಡ್ತೀನಿ...‘ ಎಂದು ಹಾಡಿ ವಿಡಿಯೋ ಸಾಂಗ್ ಅನ್ನು ನವೀಜ್ ಸಜ್ಜು ಯ್ಯೂಟೂಬ್ನಲ್ಲಿ ಬಿಟ್ಟಿದ್ದರು. ಇದು ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ‘ಕನಕ’ ಚಿತ್ರದಲ್ಲಿ ನವೀನ್ ಸಜ್ಜು ಹಾಡಿದ್ದ ‘ಎಣ್ಣೆ ನಮ್ದು, ಊಟ ನಿಮ್ದು…’ ಹಿಟ್ ಆಗಿತ್ತು. ಅಲ್ಲದೆ 'ಬಡ್ಡಿ ಮಗನ್ ಲೈಫು' ಚಿತ್ರದ ಹಾಡು ‘ಏನ್ ಚಂದಾನೊ ತಕೊ…’ ಹಾಡನ್ನು ಹಾಡಿ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ.
ಮರಾಠಿ ಭಾಷೆಯತ್ತ ಕನ್ನಡದ ಸಿನಿಮಾ! ರಿಮೇಕ್ ಆಗುತ್ತಿದೆ ಸತ್ಯಪ್ರಕಾಶ್ ನಿರ್ದೇಶನದ ರಾಮಾ ರಾಮಾ ರೇ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ