ಮ್ಯಾಜಿಕಲ್ ಕಂಪೋಜರ್ ಅರ್ಜುನ್ (Arjun Janya 45 Secrets) ಜನ್ಯ ನಿಜಕ್ಕೂ ಒಬ್ಬ ಹೋರಾಟಗಾರನೇ ನೋಡಿ, ಮ್ಯೂಸಿಕ್ ಮಾಡಿಕೊಂಡು ಸಕ್ಸಸ್‌ಫುಲ್ ಆಗಿಯೇ ಇದ್ದ ಅರ್ಜುನ್ ಜನ್ಯ, ಇದೀಗ ಸಿನಿಮಾ ಡೈರೆಕ್ಷನ್ ಮಾಡುತ್ತಿದ್ದಾರೆ. ಹಾಗಂತ ಈ ಒಂದು ಅನೌನ್ಸ್‌ಮೆಂಟ್ ಅನ್ನ ಸಿನಿಮಾ ಇಂಡಸ್ಟ್ರೀಯ ಕೆಲವು (Director Arjun Janya Movie) ಮಂದಿ ಕಮೆಂಟ್ ಮಾಡಿದ್ದಾರೆ. ಅರ್ಜುನ್ ಜನ್ಯಗೆ ಕೆಲಸವೇ ಬರೋದಿಲ್ಲ. ಅವರಿಗೆ ಡೈರೆಕ್ಷನ್ ಕೊಟ್ಟಿರಲ್ಲಾ ಅಂತಲೂ ನಿರ್ಮಾಪಕ ರಮೇಶ್ ರೆಡ್ಡಿ ಅವರ ಕಿವಿ ಚುಚ್ಚಿದವರೂ ಇದ್ದಾರೆ. ಇನ್ನೂ ಕೆಲವರಂತೂ ಬೇಜಾನ್ ಟಾಂಗ್ ಕೊಟ್ಟಿದ್ದಾರೆ. ಟ್ರೋಲ್ ಪೇಜ್ ಅಲ್ಲೂ (45 Movie News) ಅರ್ಜುನ್ ಜನ್ಯ ಅವರನ್ನ ಕಾಲೆಳೆದವ್ರೆ ಹೆಚ್ಚು. ಆದರೆ ಅದನ್ನ ಕೇಳಿದ್ದ ಅರ್ಜುನ್ ಜನ್ಯ ಇದೀಗ ಅದನ್ನೂ ಒಂದು ವಿಡಿಯೋ ಮೂಲಕ ಎಲ್ಲರಿಗೂ ತೋರಿಸಿ ಬಿಟ್ಟಿದ್ದಾರೆ.
ಆ ವಿಡಿಯೋ (45 Movie Preparation Video) ನಿಜಕ್ಕೂ ಅಸಲಿ ಸತ್ಯವನ್ನ ಎಳೆ ಎಳೆಯಾಗಿಯೇ ಹೇಳುತ್ತಿದೆ.
ಮ್ಯಾಜಿಕಲ್ ಕಂಪೋಜರ್ ಅರ್ಜುನ್ ಜನ್ಯ 45 ಸಿನಿಮಾ ತೆರೆ ಮರೆಯ ಕಥೆ
ಅರ್ಜುನ್ ಜನ್ಯ ಒಬ್ಬ ಯಶಸ್ವಿ ಸಂಗೀತ ನಿರ್ದೇಶಕ ಆಗಿದ್ದಾರೆ. ಕಷ್ಟಪಟ್ಟು ಮೇಲೆ ಬಂದ ಒಬ್ಬ ಪ್ರತಿಭಾವಂತ ಸಂಗೀತ ನಿರ್ದೇಶಕ ಅನ್ನೋದು ಗೊತ್ತೇ ಇದೆ. ಆದರೆ ಸಿನಿಮಾ ಡೈರೆಕ್ಷನ್ ಅಂದಾಗ ಕಾಲೆಳೆದವರೇ ಹೆಚ್ಚು. ಆದರೂ ಶಿವಣ್ಣ ಸೇರಿದಂತೆ ಇನ್ನೂ ಅನೇಕರು ಅರ್ಜುನ್ ಜನ್ಯ ಅವರ ಮೊದಲ ಸಾಹಸಕ್ಕೆ ತಮ್ಮದೇ ರೀತಿಯಲ್ಲಿ ಸಾಥ್ ಕೊಟ್ಟಿದ್ದಾರೆ.
ಅರ್ಜುನ್ ಜನ್ಯ ನಿರ್ದೇಶನದ 45 ಸಿನಿಮಾ ಇನ್ನಿಲ್ಲದಂತೆ ಈಗಲೇ ಗಮನ ಸೆಳೆದಿದೆ. ಇದಕ್ಕೆ ಕಾರಣ ಏನೂ ಗೊತ್ತೇ? ಹೌದು, ಅರ್ಜುನ್ ಜನ್ಯ ತಮ್ಮ ಚಿತ್ರವನ್ನ ಶೂಟಿಂಗ್ ಮುಂಚೇನೆ ಎಲ್ಲರಿಗೂ ತೋರಿಸಿ ಬಿಟ್ಟಿದ್ದಾರೆ. ಟೆಕ್ನಾಲಜಿಯ ಸಹಾಯದಿಂದಲೇ ಎಲ್ಲವನ್ನೂ ಸಾಧ್ಯವಾಗಿಸಿದ್ದಾರೆ.
ಕಾಲೆಳೆದವರಿಗೆ ತಿರುಗೇಟು ಕೊಟ್ಟೇ ಬಿಟ್ಟರೇ ಅರ್ಜುನ್ ಜನ್ಯ
ಹಿಂದೆ-ಮುಂದೆ ಕಮೆಂಟ್ ಹೊಡೆಯುತ್ತಿದ್ದವರಿಗೆ ಈ ಮೂಲಕ ಅರ್ಜುನ್ ಜನ್ಯ ಸಾಲಿಡ್ ತಿರುಗೇಟು ಕೊಟ್ಟಿದ್ದಾರೆ. ತಮ್ಮ 45 ಸಿನಿಮಾದ ಇಡೀ ಕಥೆಯನ್ನ ಅನಿಮೇಷನ್‌ನಲ್ಲಿ ಈಗಾಗಲೇ ಡೈರೆಕ್ಷನ್ ಮಾಡಿಬಿಟ್ಟಿದ್ದಾರೆ. ಇದರಿಂದ ನಿರ್ಮಾಪಕರಿಗೆ ಅತಿ ದೊಡ್ಡ ಭರವಸೆಯನ್ನ ಕೂಡ ಅರ್ಜುನ್ ಜನ್ಯ ಮೂಡಿಸಿದ್ದಾರೆ.
ಅರ್ಜುನ್ ಜನ್ಯ ಅವರ ನಿರ್ದೇಶನದ 45 ಚಿತ್ರವನ್ನ ಈಗಾಗಲೇ ಶಿವಣ್ಣ ನೋಡಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಈ ಚಿತ್ರವನ್ನ ನೋಡಿ ಖುಷಿಪಟ್ಟಿದ್ದಾರೆ. ಅರ್ಜುನ್ ಜನ್ಯ ಅವರಿಗೆ ಗುಡ್ ಲಕ್ ಹೇಳಿದ್ದಾರೆ. ಇಷ್ಟೇ ಯಾಕೆ? ರಾಜ್ ಬಿ ಶೆಟ್ಟಿ ಕೂಡ ಚಿತ್ರವನ್ನ ವೀಕ್ಷಿಸಿ ಸಂತೋಪಟ್ಟಿದ್ದಾರೆ. ಅರ್ಜುನ್ ಜನ್ಯ ಅವರ ಪೂರ್ವ ತಯಾರಿಯನ್ನ ಕಂಡು ಥ್ರಿಲ್ ಆಗಿದ್ದಾರೆ.
ಅರ್ಜುನ್ ಜನ್ಯ ಮೊದಲ ಚಿತ್ರದ ಹಿಂದಿನ ಅಸಲಿ ಕಹಾನಿ
ಹೌದು, ಅರ್ಜುನ್ ಜನ್ಯ ಕಳೆದ ಒಂದು ವರ್ಷಕ್ಕಿಂತಲೂ ಹೆಚ್ಚು ದಿನದಿಂದ 45 ಚಿತ್ರಕ್ಕಾಗಿಯೇ ಶ್ರಮಪಟ್ಟಿದ್ದಾರೆ. ಒಬ್ಬ ಸಂಗೀತ ನಿರ್ದೇಶಕ ಏನ್ ಸಿನಿಮಾ ಮಾಡ್ತಾರೆ ಅನ್ನೋ ಕೆಟ್ಟ ಕಮೆಂಟ್‌ಗೆ ತಿರುಗೇಟು ಕೊಡುವ ರೀತಿಯಲ್ಲಿಯೇ ಇದೀಗ ಅರ್ಜುನ್ ಜನ್ಯ ರೆಡಿ ಆಗಿದ್ದಾರೆ.
ಇದನ್ನೂ ಓದಿ: Samantha: ಹುಟ್ಟು ಹಬ್ಬದ ದಿನ ಎಂಥಾ ಮೆಸೇಜ್ ಕೊಟ್ರು ಸಮಂತಾ! ಫೋಟೋ ಹಂಚಿಕೊಂಡ ಸ್ಯಾಮ್ ಹೇಳಿದ್ದೇನು?
ಅರ್ಜುನ್ ಜನ್ಯ ಅವರ ಮೊದಲ ನಿರ್ದೇಶನದ 45 ಚಿತ್ರಕ್ಕೆ ಮೈಸೂರಿನಲ್ಲಿ ಮುಹೂರ್ತ ಆಗಿದೆ. ಚಿತ್ರೀಕರಣದ ಕೆಲಸವೂ ಶುರು ಆಗಿದೆ. ನಟಿ ಕೌಸ್ತುಭ ಮಣಿ, ಶಿವಣ್ಣ, ರಿಯಲ್ ಸ್ಟಾರ್ ಉಪೇಂದ್ರ, ರಾಜ್ ಬಿ.ಶೆಟ್ಟಿ, ನಿರ್ಮಾಪಕ ರಮೇಶ್ ರೆಡ್ಡಿ ಎಲ್ಲರೂ ಈ ಚಿತ್ರವನ್ನ ಈಗಾಗಲೇ ನೋಡಿ ಇದೀಗ ಶೂಟಿಂಗ್‌ನಲ್ಲೂ ಬ್ಯುಸಿಯಾಗಿದ್ದು, ಈ ಮೂಲಕ ಕನ್ನಡಿಗರಿಗೆ ಒಂದು ಹೊಸ ರೀತಿಯ ಸಿನಿಮಾ ಕೊಡಲು ಮುನ್ನುಗ್ಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ