ಮೂರು ನೈಜ ಘಟನೆಗಳ ಸುತ್ತ ತ್ರಿವೇದಂ: ಬೆಂಗಳೂರು, ಮೈಸೂರು, ಮಂಡ್ಯದಲ್ಲಿ ನಡೆದ Real Stories..!

ಬೇರೆ ಬೇರೆ ಸ್ಥಳಗಳಲ್ಲಿ ನಡೆದಿರುವ ಮೂರು ಸತ್ಯ ಘಟನೆಗಳಿಗೆ ಇಲ್ಲಿ ಸಿನಿಮಾ ರೂಪ ನೀಡಲಾಗುತ್ತಿದೆ. 2012ರಲ್ಲಿ ಅರ್ಥಾತ್ ಈಗ್ಗೆ 19 ವರ್ಷಗಳ ಹಿಂದೆ ಬೆಂಗಳೂರಿನ ಕುರುಬರಹಳ್ಳಿಯಲ್ಲಿ, ಹನ್ನರೆಡು ವರ್ಷದ ಹಿಂದೆ ಮೈಸೂರಿನ ಸುತ್ತಮುತ್ತ ನಡೆದ ಮತ್ತೊಂದು ಘಟನೆ ಹಾಗೂ ಆರು ವರ್ಷದ ಕೆಳಗೆ ಮಂಡ್ಯದಲ್ಲಿ ನಡೆದ ಇನ್ನೊಂದು ಘಟನೆ ಈ ಮೂರೂ ಕಥೆಗಳನ್ನು ಒಗ್ಗೂಡಿಸಿ ತ್ರಿವೇದಂ ಸಿನಿಮಾ ಮಾಡಲಾಗುತ್ತಿದೆ.

ತ್ರಿವೇದಂ ಸಿನಿಮಾದ ಮುಹೂರ್ತದಲ್ಲಿ ತೆಗೆದ ಚಿತ್ರ

ತ್ರಿವೇದಂ ಸಿನಿಮಾದ ಮುಹೂರ್ತದಲ್ಲಿ ತೆಗೆದ ಚಿತ್ರ

  • Share this:
ಕನ್ನಡ ಚಿತ್ರರಂಗದಲ್ಲಿ ನೈಜ ಘಟನೆಗಳ ಆಧಾರಿತ ಸಿನಿಮಾಗಳು ಬಂದಿರುವುದು ಕಡಿಮೆಯೇ. ಅದರಲ್ಲೂ ಡೆಡ್ಲಿ, ಕಿಲ್ಲಿಂಗ್ ವೀರಪ್ಪನ್,  ಸೈನೈಡ್,  ಅಟ್ಟಹಾಸ,  ದಂಡುಪಾಳ್ಯ ಸರಣಿಯಂತೆ ಕ್ರೈಮ್ ಬೇಸ್ಡ್ ಹಾಗೂ ಕ್ರಿಮಿನಲ್‍ಗಳ ಕುರಿತ ಸಿನಿಮಾಗಳೇ ಹೆಚ್ಚು. ಆಗೊಮ್ಮೆ ಈಗೊಮ್ಮೆ ಬೇರೆ ರೀತಿಯ ಬಯೋಪಿಕ್ ಅಥವಾ ನೈಜ ಘಟನೆಗಳ ಆಧಾರಿತ ಸಿನಿಮಾಗಳು ಬಂದಿದ್ದರೂ, ಅವುಗಳ ಬಗ್ಗೆ ಚಿತ್ರತಂಡಗಳು ಗೌಪ್ಯತೆ ಕಾಪಾಡಿಕೊಳ್ಳುತ್ತವೆ. ಜೊತೆಗೆ ನೈಜ ಘಟನೆ ಆಧಾರಿತ ಸಿನಿಮಾಗಳನ್ನು ಮಾಡಲು ಸಾಕಷ್ಟು ರೀಸರ್ಚ್ ಬೇಕು, ಇತಿಹಾಸ ಹುಡುಕಬೇಕು, ಹಿನ್ನೆಲೆಗಳ ಕೆದಕಬೇಕು, ನೈಜತೆಗೆ ಹತ್ತಿರವಾಗಿರಬೇಕು. ಹೀಗಾಗಿಯೇ ಹೆಚ್ಚು ಮಂದಿ ಆ ರೀತಿಯ ಕಥೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಒಂದೇ ರಿಯಲ್ ಘಟನೆಯನ್ನು ರೀಲ್‍ಗೆ ತರಲು ಇಷ್ಟೆಲ್ಲ ಟೆನ್ಶನ್ ಇರುವಾಗ, ಇಲ್ಲೊಂದು ಹೊಸ ತಂಡ ಬರೋಬ್ಬರಿ ಮೂರು ನೈಜ ಘಟನೆಗಳನ್ನು ಸೇರಿಸಿ ಒಂದು ಸಿನಿಮಾ ಮಾಡ ಹೊರಟಿದೆ. ಹೌದು, ಚಿತ್ರದ ಹೆಸರು ತ್ರಿವೇದಂ.

ಬೇರೆ ಬೇರೆ ಸ್ಥಳಗಳಲ್ಲಿ ನಡೆದಿರುವ ಮೂರು ಸತ್ಯ ಘಟನೆಗಳಿಗೆ ಇಲ್ಲಿ ಸಿನಿಮಾ ರೂಪ ನೀಡಲಾಗುತ್ತಿದೆ. 2012ರಲ್ಲಿ ಅರ್ಥಾತ್ ಈಗ್ಗೆ 19 ವರ್ಷಗಳ ಹಿಂದೆ ಬೆಂಗಳೂರಿನ ಕುರುಬರಹಳ್ಳಿಯಲ್ಲಿ, ಹನ್ನರೆಡು ವರ್ಷದ ಹಿಂದೆ ಮೈಸೂರಿನ ಸುತ್ತಮುತ್ತ ನಡೆದ ಮತ್ತೊಂದು ಘಟನೆ ಹಾಗೂ ಆರು ವರ್ಷದ ಕೆಳಗೆ ಮಂಡ್ಯದಲ್ಲಿ ನಡೆದ ಇನ್ನೊಂದು ಘಟನೆ ಈ ಮೂರೂ ಕಥೆಗಳನ್ನು ಒಗ್ಗೂಡಿಸಿ ತ್ರಿವೇದಂ ಸಿನಿಮಾ ಮಾಡಲಾಗುತ್ತಿದೆ.

ಹಾಗಂತ ಒಂದಕ್ಕೊಂದು ಸಂಬಂಧವಿರುವುದಿಲ್ಲ ಹಾಗೂ ಮೂರೂ ಕಥೆಗಳೂ ಸಮಾನಾಂತರವಾಗಿ ಸಾಗುತ್ತವೆ. ಎಲ್ಲವು ಲವ್ ಸ್ಟೋರಿಗಳೇ ಎಂಬುದು ಮತ್ತೊಂದು ವಿಶೇಷತೆ. ಅದಕ್ಕಾಗಿಯೇ ಕತೆಗೆ ಪೂರಕವಾಗುವಂತೆ ತ್ರಿವೇದಂ ಎಂಬ ಶೀರ್ಷಿಕೆಯನ್ನು ಇಡಲಾಗಿದೆ. ಸೋಮವಾರದಂದು ಕಂಠೀರವ ಸ್ಟುಡಿಯೋದಲ್ಲಿ ಚಿತ್ರತಂಡ ಸರಳವಾಗಿ ಮಹೂರ್ತ ಆಚರಿಸಿಕೊಂಡಿತು.

ಇದನ್ನೂ ಓದಿ: ಸೀಮಂತಕ್ಕೂ ಮೊದಲು ಫೋಟೋಶೂಟ್​ಗೆ ಪೋಸ್​ ಕೊಟ್ಟ Nikhil Kumaraswamy-Revathi

ಮೊದಲ ದೃಶ್ಯಕ್ಕೆ ಹಿರಿಯ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್​ ಅವರು ಕ್ಲ್ಯಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಇಪ್ಪತ್ತು ವರ್ಷಗಳ ಕಾಲ ಚಿತ್ರರಂಗದ ಬೇರೆ ಬೇರೆ ವಿಭಾಗಗಳಲ್ಲಿ ಅನುಭವ ಪಡೆದುಕೊಂಡಿರುವ ಅರುಣ್ ಜಯರಾಂ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಅವರಿಗೆ ಸಾಥ್ ನೀಡುತ್ತಿರುವ ಬೆಂಗಳೂರಿನ ರಿಯಲ್ಎಸ್ಟೇಟ್ ಉದ್ಯಮಿ ಆರ್.ಕೆ.ಭವಾನಿ ಹೇಮಂತ್ ಬಂಡವಾಳ ಹೂಡುತ್ತಿದ್ದಾರೆ.

ತ್ರಿವೇದಂ ಚಿತ್ರಕ್ಕೆ ಮೂವರು ನಾಯಕರು ಆಯ್ಕೆಯಾಗಿದ್ದು, ಸದ್ಯ ಮೂವರು ನಾಯಕಿಯರ ಶೋಧ ನಡೆಯುತ್ತಿದೆ. ಮೂರು ಕಥೆಗಳಲ್ಲಿ ಒಂದು ಕಥೆಗೆ ಪ್ರತಾಪ್ ನಾರಾಯಣ್ ನಾಯಕನಾಗಿದ್ದು, ಅವರದ್ದು ಕೊರಿಯರ್ ಬಾಯ್ ಪಾತ್ರ. ಇದಕ್ಕಾಗಿ ಕೊರಿಯರ್​ನಲ್ಲಿ ಕೆಲಸ ಮಾಡುವ ಹುಡುಗರನ್ನು ಭೇಟಿ ಮಾಡಿ ಅವರುಗಳಿಂದ ಒಂದಷ್ಟು ಸಲಹೆಗಳನ್ನು ಪಡೆದುಕೊಂಡಿದ್ದಾರಂತೆ ಪ್ರತಾಪ್ ನಾರಾಯಣ್. ಜೀವನದಲ್ಲಿ ಯಾವ ರೀತಿ ಪ್ರೀತಿಗೋಸ್ಕರ ಹೋರಾಡುತ್ತಾನೆ ಅವರ ಕಥೆಯ ಹೈಲೈಟ್. ಇವರಿಗೆ ಅಂತಲೇ ಮೂರು ಫೈಟ್ಸ್‍ಗಳು ಎರಡು ಹಾಡುಗಳನ್ನು ಸೃಷ್ಟಿಸಲಾಗಿದೆಯಂತೆ.

ಇದನ್ನೂ ಓದಿ: ಕುಟುಂಬದೊಂದಿಗೆ ಗಣೇಶ ಹಬ್ಬ ಆಚರಿಸಿದ Sunny Leone​: ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಮಾದಕ ನಟಿ..!

ಎರಡನೆಯ ಕಥೆಯಲ್ಲಿ ಅಚ್ಯುತ್ ಕುಮಾರ್ ನಾಯಕ. ಮೂರನೇ ಕಥೆಗೆ ರಂಗಭೂಮಿ ಹಿನ್ನಲೆ ಇರುವ ಶಶಿ ಹೀರೋ ಆಗಿದ್ದಾರೆ. ನಾಯಕನ ಗೆಳಯನಾಗಿ ಹಾಸ್ಯನಟ ಧರ್ಮಣ್ಣ ಕಡೂರು ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದಲ್ಲಿ ನಟಿಸುವ ಅವಕಾಶಕ್ಕಾಗಿ ಮಂಡ್ಯದಿಂದ ಬರುವ ಕಲಾವಿದನ ಪಾತ್ರ ಅವರದು. ಇವರಿಗೆ ಕಾಂಬಿನೇಷನ್ ಓಂ ಪ್ರಕಾಶ್‍ರಾವ್ ಇರುತ್ತಾರೆ. ಉಳಿದಂತೆ ಕುರಿಪ್ರತಾಪ್, ಮಳವಳ್ಳಿ ಸಾಯಿಕೃಷ್ಣ, ಗೋಪಾಲ್ ದೇಶಪಾಂಡೆ ಮುಂತಾದವರ ತಾರಾಬಳಗವಿದೆ.

ಇದನ್ನೂ ಓದಿ: ಅಪರಿಚಿತುಡು ಸಿನಿಮಾ ಖ್ಯಾತಿಯ ನಟಿ Sadha ಈಗ ಹೇಗಿದ್ದಾರೆ ಗೊತ್ತಾ..?

ನಾದಬ್ರಹ್ಮ ಹಂಸಲೇಖ ಅವರ ಶಿಷ್ಯರಾದ ರಘುಧನ್ವಂತ್ರಿ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಕಿರಣ್ ಹಂಪ್ಲಾಪುರ ಛಾಯಾಗ್ರಹಣ, ವೆಂಕಿ ಯು.ಡಿ.ವಿ ಸಂಕಲನ, ಮಾಸ್ ಮಾದ ಸಾಹಸ, ಡಾ. ವಿ. ನಾಗೇಂದ್ರಪ್ರಸಾದ್, ಅರಸು ಅಂತಾರೆ, ಗೌಸ್ ಪೀರ್ ಸಾಹಿತ್ಯ ಹಾಗೂ ಹೈಟ್ ಮಂಜು ನೃತ್ಯ ಸಂಯೋಜಿಸಲಿದ್ದಾರೆ. ಜೈ ಸಿಂಹ ಪ್ರೊಡಕ್ಷನ್ಸ್ ಮೂಲಕ ಸಿದ್ದಗೊಳ್ಳುತ್ತಿರುವ ತ್ರಿವೇದಂ ಸಿನಿಮಾದ ಚಿತ್ರೀಕರಣ ಬುಧವಾರದಿಂದ ಬೆಂಗಳೂರು ಮತ್ತು ಸಕಲೇಶಪುರದ ಸುಂದರ ತಾಣಗಳಲ್ಲಿ ನಡೆಸಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.
Published by:Anitha E
First published: