Kannada Movies: ಪ್ರೇಮಿಗಳ ವಾರ ಸಿನಿಮಾಗಳ ಸಾಕ್ಷಾತ್ಕಾರ! ಭರ್ಜರಿ 11 ಸಿನಿಮಾ

ಸಾಲು ಸಾಲು ಸಿನಿಮಾಗಳ ಅಬ್ಬರ!

ಸಾಲು ಸಾಲು ಸಿನಿಮಾಗಳ ಅಬ್ಬರ!

ಕನ್ನಡದಲ್ಲಿ ಈ ವಾರ ತೆರೆಗೆ ಬರ್ತಿರೋ ಒಟ್ಟು 9 ರಿಂದ 10 ಸಿನಿಮಾಗಳಲ್ಲಿ ಕೆಲವು ಚಿತ್ರಗಳು ತಮ್ಮದೇ ರೀತಿ ಸದ್ದು ಮಾಡಿವೆ. ಇನ್ನು ಕೆಲವು ಪ್ರೆಸ್​ಮೀಟ್ ಮೂಲಕ ಚಿತ್ರದ ಮಾಹಿತಿ ಹಂಚಿಕೊಂಡಿದ್ದು ಇದೆ.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

ಸ್ಯಾಂಡಲ್​​ವುಡ್​ನಲ್ಲಿ ಮತ್ತೆ (Sandalwood Cinema Release) ಸಿನಿಮಾಗಳ ಅಬ್ಬರ ಶುರು ಆಗಿದೆ. ಪ್ರೇಮಿಗಳ ದಿನದ ವಾರ ಅನ್ನೋ ಲೆಕ್ಕಕ್ಕೋ ಏನೋ, ಚಿತ್ರ ರಿಲೀಸ್ (Movie Release Details) ಆಗುತ್ತಿವೆ. ಹಳೆ ಚಿತ್ರವೊಂದು ರೀ-ರಿಲೀಸ್ ಆಗುತ್ತಿದೆ. ಇದರ ಮಧ್ಯ ಹೊಸ ಚಿತ್ರಗಳು ಬಲು ಜೋರಾಗಿಯೇ ಇವೆ. ಇದರಿಂದ ಸಿನಿಪ್ರೇಮಿಗಳಿಗೆ 9 ರಿದ 10 ಸಿನಿಮಾಗಳ ನೋಡುವ (Ten Movie Release This Week) ಅವಕಾಶ ಸಿಕ್ಕಿದೆ. ಇದರ ಜೊತೆಗೆ ಹಳೆ ಚಿತ್ರವೊಂದು ಮತ್ತೊಮ್ಮೆ ಮೋಡಿ ಮಾಡಲು ಲಿಮಿಡೆಟ್ ಥಿಯೇಟರ್​ನಲ್ಲಿ ಲಗ್ಗೆ ಇಡುತ್ತಿದೆ. ರಿಲೀಸ್ ಆಗುತ್ತಿರೋ ಸಿನಿಮಾಗಳಲ್ಲಿ ಕೆಲವು ಸಿನಿಮಾಗಳು ತಮ್ಮದೇ ರೀತಿ ಪ್ರಚಾರ ಮಾಡಿವೆ. ಇನ್ನೂ ಕೆಲವು (Kannada Movie Deatils) ಲೆಕ್ಕಕ್ಕೆ ಬರ್ತಿರೋ ಹಾಗಿವೆ.  ಇದರ ಸುತ್ತ ಒಂದು ಸ್ಟೋರಿ ಇಲ್ಲಿದೆ ಓದಿ.


ಪ್ರೇಮಿಗಳ ದಿನದ ವಾರ ಲೈಫ್​​ ಇಷ್ಟೇನೆ ಮತ್ತೆ ರಿಲೀಸ್


ಲೈಫ್​ ಇಷ್ಟೇನೆ ಚಿತ್ರ ಲವ್ ಬೇಸ್ ಸಿನಿಮಾ ಆಗಿದೆ. ಲೂಸಿಯಾ ಚಿತ್ರ ಖ್ಯಾತಿಯ ಡೈರೆಕ್ಟರ್ ಪವನ್ ಕುಮಾರ್ ನಿರ್ದೇಶನದ ಮೊದಲ ಸಿನಿಮಾ ಇದಾಗಿದೆ. ಇದರ ಮೇಲೆ ವಿಶೇಷ ಪ್ರೀತಿ ಕೂಡ ಇದೆ.


Sandalwood Movie Release Latest Updates
ಬೆಂಗಳೂರು-69, ರೂಪಾಯಿ, ರಂಗೀನ ರಾಟೆ!


ಪ್ರೇಮಿಗಳ ವಾರ ಫೆಬ್ರವರಿ-10 ರಂದು ಈ ಚಿತ್ರವನ್ನ ಲಿಮಿಡೆಟ್​ ಥಿಯೇಟರ್​ನಲ್ಲಿ ರಿಲೀಸ್ ಮಾಡುತ್ತಿದ್ದಾರೆ. ದೂದ್​ ಪೇಡ ದಿಗಂತ್, ಸಂಯುಕ್ತಾ ಹೊರನಾಡು, ಸಿಂಧೂ ಲೋಕನಾಥ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಹೊಂದಿಸಿ ಬರೆಯಿರಿ ಹೊಸ ರೀತಿಯ ಸಿನಿಮಾ
ಹೊಂದಿಸಿ ಬರೆಯರಿ ಚಿತ್ರದಲ್ಲಿ ಕನ್ನಡದ ಯುವ ಕಲಾವಿದರ ದೊಡ್ಡ ದಂಡೇ ಇದೆ. ನವೀನ್ ಶಂಕರ್, ಪ್ರವೀಣ್ ತೇಜ್, ಭಾವನಾ ರಾವ್, ಸಂಯುಕ್ತಾ ಹೊರನಾಡು, ಅರ್ಚನಾ ಜೋಯಿಸ್, ಐಶಾನಿ ಶೆಟ್ಟಿ ಹೀಗೆ ಎಲ್ಲರೂ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.


ರಾಮೇನಹಳ್ಳಿ ಜಗನ್ನಾಥ್ ಅವರ ಈ ಚಿತ್ರಕ್ಕೆ ಮಾಸ್ತಿ ಡೈಲಾಗ್ ಕೂಡ ಇದೆ. ಚಿತ್ರದಲ್ಲಿ ಒಂದು ವಿಶೇಷ ಕಥೆಯನ್ನ ಡೈರೆಕ್ಟರ್ ಹೇಳಿದ್ದಾರೆ. ಸಿನಿಮಾ ತಂಡವೂ ಚಿತ್ರವನ್ನ ವಿಶೇಷವಾಗಿಯೇ ಪ್ರಮೋಟ್ ಮಾಡೋ ಕೆಲಸ ಮಾಡಿದೆ ಅಂತಲೇ ಹೇಳಬಹುದು.


ಬೆಂಗಳೂರು-69, ರೂಪಾಯಿ, ರಂಗೀನ ರಾಟೆ!
ಕನ್ನಡದಲ್ಲಿ ಈ ವಾರ ತೆರೆಗೆ ಬರ್ತಿರೋ ಒಟ್ಟು 9 ರಿಂದ 10 ಸಿನಿಮಾಗಳಲ್ಲಿ ಕೆಲವು ಚಿತ್ರಗಳು ತಮ್ಮದೇ ರೀತಿ ಸದ್ದು ಮಾಡಿವೆ. ಇನ್ನು ಕೆಲವು ಪ್ರೆಸ್​ಮೀಟ್ ಮೂಲಕ ಚಿತ್ರದ ಮಾಹಿತಿ ಹಂಚಿಕೊಂಡಿದ್ದು ಇದೆ. ಆ ಲೆಕ್ಕದಲ್ಲಿ ಬೆಂಗಳೂರು 69, ರೂಪಾಯಿ, ರಂಗೀನ್ ರಾಟೆ ಚಿತ್ರಗಳು ತಮ್ಮ ಚಿತ್ರದ ಬಗ್ಗೆ ಹೇಳಿಕೊಂಡಿವೆ.


ಬೆಂಗಳೂರು-69 ಇಂಟರ್​ ನ್ಯಾಷನಲ್ ಕ್ರೈಮ್ ಥಿಲ್ಲರ್ ಕಥೆ-ಅನಿತಾ ಭಟ್, ಶಫಿ ಅಭಿನಯ, ಡೈರೆಕ್ಟರ್- ಕ್ರಾಂತಿ ಚೈತನ್ಯ


ರಂಗೀನ್ ರಾಟೆ- ದುನಿಯಾ ರಶ್ಮಿ-ರಾಜೀವ್ ರಾಥೋಡ್, ನಟನೆ-ನಿರ್ದೇಶನ ಆರ್ಮುಗಂ


ರೂಪಾಯಿ- ಕೃಷಿ ತಾಪಂಡ-ವಿಜಯ್ ಜಗದಾಲ್ ಅಭಿನಯ, ಡೈರೆಕ್ಷನ್-ವಿಜಯ್ ಜಗದಾಲ್


Sandalwood Movie Release Latest Updates
ಪ್ರೇಮಿಗಳ ವಾರ ಸಿನಿಮಾಗಳ ಸಾಕ್ಷಾತ್ಕಾರ


ಕನ್ನಡದ ಈ ಚಿತ್ರಗಳು ಫೆಬ್ರವರಿ-10 ರಂದು ಎಲ್ಲೆಡೆ ರಿಲೀಸ್ ಆಗುತ್ತಿವೆ. ಇದಲ್ಲದೆ ಇನ್ನೂ ಒಂದಷ್ಟು ಸಿನಿಮಾಗಳು ಇವೆ. ಅವು ಯಾವವು ಅನ್ನೋದನ್ನ ಇಲ್ಲಿ ಕೊಟ್ಟಿದ್ದೇವೆ ಓದಿ.


ಒಂದಾನೊಂದು ಕಾಲದಲ್ಲಿ
ಡಿಸೆಂಬರ್-24
ಲಾಂಗ್ ಡ್ರೈವರ್
ಉತ್ತಮರು
18 ಟು 24


ಈ ಒಂದು ಲಿಸ್ಟ್​ನಲ್ಲಿ ಅಂಬಾಸಿಡರ್ ಸಿನಿಮಾ ಕೂಡ ಇದೆ. ಆದರೆ ಮಾಹಿತಿ ಪ್ರಕಾರ ಈ ಚಿತ್ರ ಫೆಬ್ರವರಿ-10ರ ಬದಲು ಮುಂದಕ್ಕೆ ಹೋಗಿದೆ ಅನ್ನೋ ವಿಷಯ ಕೂಡ ಇದೆ.
ಇಷ್ಟೆಲ್ಲ ಸಿನಿಮಾಗಳು ಒಂದೇ ದಿನ ರಿಲೀಸ್ ಆಗುತ್ತಿವೆ. ಸಿನಿ ಪ್ರೇಮಿಗಳಿಗೆ ಇಷ್ಟೊಂದು ಆಪ್ಷನ್ ಒಂದೇ ಸಿಕ್ಕಿದೆ. ಅವರಿಗೆ ಇಷ್ಟ ಆಗೋ ಸಿನಿಮಾವನ್ನ ನೋಡಬಹುದು.


Sandalwood Movie Release Latest Updates
ಸಾಲು ಸಾಲು ಸಿನಿಮಾಗಳ ಅಬ್ಬರ!


ಇದನ್ನೂ ಓದಿ: Golden Star Ganesh: ಬಾಲಿವುಡ್​ ಕಾಮಿಡಿ ಶೋನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್!


ತುಂಬಾ ಪ್ರೀತಿಯಿಂದಲೇ ಸಿನಿಮಾಗಳನ್ನ ಚಿತ್ರ ತಂಡಗಳು ಮಾಡಿರುತ್ತವೆ. ಗೆಲ್ಲಲೇ ಬೇಕು ಅಂತಲೇ ಚಿತ್ರವನ್ನ ನಿರ್ಮಿಸಿರುತ್ತಾರೆ. ಆ ಗೆಲುವು ಯಾರಿಗೆ ಸಿಗುತ್ತದೆ ಅನ್ನೋದೇ ಈಗೀನ ಕುತೂಹಲದ ಪ್ರಶ್ನೆ ಆಗಿದೆ.

First published: