ಸಿದ್ಧಾರ್ಥ್ ಮತ್ತು ವಿಜಯ್ ಮಲ್ಯ ಹೋಲಿಕೆಯೊಂದಿಗೆ ಕನ್ನಡಿಗರ ವ್ಯಥೆಯ ಕಥೆ ಹೇಳಿದ ಕವಿರಾಜ್

ಈಗಾಗಲೇ ನಟ ಪುನೀತ್, ರಾಗಿಣಿ ದ್ವಿವೇದಿ, ಸುಮಲತಾ, ಗಣೇಶ್​ ಸೇರಿದಂತೆ ಸಾಕಷ್ಟು ಮಂದಿ ಸಂತಾಪ ಸೂಚಿಸಿದ್ದಾರೆ. ಈಗ ಸ್ಯಾಂಡಲ್​ವುಡ್​ನ ಸಾಹಿತಿ ಕವಿ ರಾಜ್​ ಸಹ ತಮ್ಮ ಮುಖಪುಟದಲ್ಲಿ ಭಾವನಾತ್ನಕ ಪೋಸ್ಟ್​ ಮಾಡಿದ್ದಾರೆ.

Anitha E | news18
Updated:August 1, 2019, 3:32 PM IST
ಸಿದ್ಧಾರ್ಥ್ ಮತ್ತು ವಿಜಯ್ ಮಲ್ಯ ಹೋಲಿಕೆಯೊಂದಿಗೆ ಕನ್ನಡಿಗರ ವ್ಯಥೆಯ ಕಥೆ ಹೇಳಿದ ಕವಿರಾಜ್
ವಿಜಯ್​ ಮಲ್ಯ ಹಾಗೂ ಸಿದ್ಧಾರ್ಥ ಅವರ ಬಗ್ಗೆ ಬರೆದ ಕವಿ ರಾಜ್​
  • News18
  • Last Updated: August 1, 2019, 3:32 PM IST
  • Share this:
ಕಾಫಿ ಲೋಕದ ದೊರೆಯಾಗಿದ್ದ ಸಿದ್ಧಾರ್ಥ ಅವರ ನಿಧನ ರಾಜ್ಯದ ಜನತೆಗೆ ನೋವುಂಟು ಮಾಡುವುದರ ಜತೆಗೆ ದಿಗ್ಭ್ರಮೆ ಮೂಡಿಸಿದೆ. ಮಲೆನಾಡಿನ ಸಾಮಾನ್ಯ ವ್ಯಕ್ತಿಯೋರ್ವ ಯಶಸ್ವೀ ಉದ್ಯಮಿಯಾಗಿ ಬೆಳೆದು ಸಾವಿರಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸಿದ್ದರು. ಇಂತಹ ಉದ್ಯಮಿಯ ಅಗಲಿಕೆಗೆ ಸಾಮಾನ್ಯ ಜನರು, ರಾಜಕಾರಣಿಗಳು ಸೇರಿದಂತೆ ಸಿನಿ ಜಗತ್ತೇ ಕಂಬನಿ ಮಿಡಿಯುತ್ತಿದೆ.

ಈಗಾಗಲೇ ನಟ ಪುನೀತ್, ರಾಗಿಣಿ ದ್ವಿವೇದಿ, ಸುಮಲತಾ, ಗಣೇಶ್​ ಸೇರಿದಂತೆ ಸಾಕಷ್ಟು ಮಂದಿ ಸಂತಾಪ ಸೂಚಿಸಿದ್ದಾರೆ. ಈಗ ಸ್ಯಾಂಡಲ್​ವುಡ್​ನ ಸಾಹಿತಿ ಕವಿ ರಾಜ್​ ಸಹ ತಮ್ಮ ಮುಖಪುಟದಲ್ಲಿ ಭಾವನಾತ್ಮಕ ಪೋಸ್ಟ್​ ಮಾಡಿದ್ದಾರೆ.ಲ್ಯಾವೆಲ್ಲೆ ರಸ್ತೆಯಲ್ಲಿರುವ ಯುಬಿ ಸಿಟಿ ಹಾಗೂ ಕೆಫೆ ಕಾಫಿ ಡೇ ಇರುವ ಕಟ್ಟಡಗಳನ್ನು ಒಂದೇ ಫ್ರೇಮಿನಲ್ಲಿ ಸೆರೆ ಹಿಡಿದಿರುವ ಚಿತ್ರ ಪ್ರಕಟಿಸಿರವ ಕವಿರಾಜ್​ ಅದಕ್ಕೆ ಶೀರ್ಷಿಕೆಯನ್ನೂ ಬರೆದಿದ್ದಾರೆ.

ಕವಿರಾಜ್​ ಅವರ ಪೋಸ್ಟ್​ನ ವಿವಿರ:

ಒಂದೇ ಫ್ರೇಮಿನಲ್ಲಿ ಸಿಗುವಂತಿರುವ ಈ ಎರಡೂ ಕಟ್ಟಡಗಳು ಇದೀಗ ತಮ್ಮದೇ ಬೃಹತ್ ಉದ್ಯಮ ಸಾಮ್ರಾಜ್ಯ ಕಟ್ಟಿ, ಎಲ್ಲರೂ ಬೆರಗಾಗುವಂತೆ ಬೆಳೆದು ಕೊನೆಯಲ್ಲಿ ದುರಂತವಾದ ಕನ್ನಡಿಗರಿಬ್ಬರ ಕಥೆ ಹೇಳುವಂತಿವೆ . ಇಬ್ಬರ ಗುಣಗಳು ತದ್ವಿರುದ್ಧ. ಒಬ್ಬರು ಯಶಸ್ಸಿನ ಅಮಲಲ್ಲಿ ಆಕಾಶದಲ್ಲೇ ತೇಲಿದರು.ಇನ್ನೊಬ್ಬರು ಎಷ್ಟೇ ಎತ್ತರ ಏರಿದರೂ ಭೂಮಿಯಲ್ಲೇ ಕಾಲೂರಿ ನಿಂತಿದ್ದರು.ಒಬ್ಬರದು ಐಷಾರಾಮಿ ಬದುಕು , ಇನ್ನೊಬ್ಬರದು ಸರಳತೆ. ಒಬ್ಬರು ಸಾಲಕ್ಕೆ ಹೆದರಿ ದೇಶ ಬಿಟ್ಟರು.ಇನ್ನೊಬ್ಬರು ಸಾಲಕ್ಕೆ ಹೆದರಿ ಪ್ರಾಣ ಬಿಟ್ಟರು. ಇಬ್ಬರ ಪತನವು ಕರ್ನಾಟಕಕ್ಕೆ, ಕನ್ನಡಿಗರ ಉದ್ಯಮಶೀಲತೆಗೆ ಆದ ತುಂಬಲಾರದ ನಷ್ಟ.ಕೆಲವೇ ವರ್ಷಗಳ ಹಿಂದೆ ಬೆಂಗಳೂರಿನ ಹೃದಯ ಭಾಗದಲ್ಲಿ ಕನ್ನಡಿಗರ ಹೆಮ್ಮೆಯ ಪ್ರತೀಕದಂತಿದ್ದ ಎರಡೂ ಕಟ್ಟಡಗಳ ಮೇಲೆ ಈಗೊಂದು ವಿಷಾದದ ಛಾಯೆ ಆವರಿಸಿರುವುದು ವಿಪರ್ಯಾಸ.

ಇದನ್ನೂ ಓದಿ: 'ಕೆ.ಜಿ.ಎಫ್'. ನಂತರ ತೆಲುಗಿನ ಸ್ಟಾರ್​ ನಿರ್ದೇಶಕನೊಂದಿಗೆ ಕೆಲಸ ಮಾಡಲಿರುವ ರಾಕಿಂಗ್​ ಸ್ಟಾರ್ ಯಶ್​..!ಮದ್ಯದ ದೊರೆ ಮಲ್ಯ ಹಾಗೂ ಸಿಸಿಡಿ ಸಂಸ್ಥಾಪಕ ಸಿದ್ಧಾರ್ಥ ಅವರ ಜೀವನ ಶೈಲಿಯನ್ನು ತುಂಬಾ ಸರಳವಾಗಿ ವಿವರಿಸಿದ್ದಾರೆ. ಜನ ಹಣ ತಿಂದು ದೇಶದ ಗಡಿ ದಾಟಿದ ಮಲ್ಯ ಹಾಗೂ ಮಾಡಿದ ಸಾಲಕ್ಕೆ ಹೆದರಿ ಪ್ರಾಣ ಬಿಟ್ಟ ಸರಳ ವ್ಯಕ್ತಿಯ ಪತನ ರಾಜ್ಯ ಹಾಗೂ ಕನ್ನಡಿಗರ ಉದ್ಯಮಶೀಲತೆಗೆ ತುಂಬಲಾರದ ನಷ್ಟ ಎಂದು ಬರೆದುಕೊಂಡಿದ್ದಾರೆ ಕವಿ ರಾಜ್​.

 

HBD Kiara Advani: 27ನೇ ವಸಂತಕ್ಕೆ ಕಾಲಿಟ್ಟ ನಟಿ ಕಿಯಾರ ಅಡ್ವಾಣಿಯ ಹಾಟ್​ ಹಾಗೂ ಬೋಲ್ಡ್​ ಚಿತ್ರಗಳು..!


 

 
First published:August 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading