ಸ್ಯಾಂಡಲ್‌ವುಡ್‌ನ ಹೆಸರಾಂತ ನೃತ್ಯ (Imran Sardhariya Movies) ನಿರ್ದೇಶಕ ಇಮ್ರಾನ್ ಸರ್ದಾರಿಯಾ ಕನ್ನಡ ಚಿತ್ರರಂಗದಲ್ಲಿ ಅದ್ಭತ ಹಾಡುಗಳನ್ನ ಸಂಯೋಜಿಸಿಕೊಟ್ಟಿದ್ದಾರೆ. ಪವರ್‌ಸ್ಟಾರ್ ಪುನೀತ್ (Imran Sardhariya Bengali Film) ರಾಜಕುಮಾರ್ ಸೇರಿದಂತೆ ಬಹುತೇಕ ಕನ್ನಡದ ಎಲ್ಲ ಸ್ಟಾರ್ ನಟರ ಚಿತ್ರಗಳಿಗೂ ಕೋರಿಯೋಗ್ರಾಫಿ ಮಾಡಿದ್ದಾರೆ. ಬೇರೆ ಭಾಷೆಯ ಸಿನಿಮಾಗಳ ಮೂಲಕ ಬೇರೆ ಭಾಷೆಯ ಸ್ಟಾರ್‌ಗಳಿಗೂ ನೃತ್ಯ ಹೇಳಿಕೊಟ್ಟಿದ್ದಾರೆ. ಅದೇ ರೀತಿ (choreographer Imran Sardhariya) ಇಮ್ರಾನ್ ಸರ್ದಾರಿಯಾ ಇದೀಗ ಬೆಂಗಾಲಿ ಇಂಡಸ್ಟ್ರೀಗೂ ಕಾಲಿಟ್ಟಿದ್ದಾರೆ. ಈಗಾಗಲೇ ರಾವಣ ಹೆಸರಿನ ಸಿನಿಮಾ (Sardhariya Special Interview) ಮಾಡಿದ್ದಾರೆ. ಇದು ಹಿಟ್ ಆಗಿದೆ. ಎರಡನೇ ಸಿನಿಮಾ ಇನ್ನೇನು ಇದೇ ತಿಂಗಳೂ ರಿಲೀಸ್ ಆಗುತ್ತಿದೆ. ಮೂರನೇ ಸಿನಿಮಾ ಕೂಡ ನಡೆಯುತ್ತಿದೆ.
ಬೆಂಗಾಲಿ ಸ್ಟಾರ್‌ಗೆ ಡ್ಯಾನ್ಸ್ ಹೇಳಿಕೊಟ್ಟ ಇಮ್ರಾನ್ ಮಾಸ್ಟರ್
ತಮ್ಮ ಬೆಂಗಾಲಿ ಪ್ರೋಜೆಕ್ಟ್ ಬಗ್ಗೆ ಡ್ಯಾನ್ಸ್ ಮಾಸ್ಟರ್ ಇಮ್ರಾನ್ ಸರ್ದಾರಿಯಾ, ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ Exclusive ಆಗಿ ಮಾತನಾಡಿದ್ದಾರೆ. ತಮ್ಮ ಚಿತ್ರ ಬದುಕಿನಲ್ಲಿ ಬೆಂಗಾಲಿ ಇಂಡಸ್ಟ್ರೀ ಕೂಡ ವಿಶೇಷವಾಗಿಯೇ ಟ್ರೀಟ್ ಮಾಡಿದೆ ಅಂತ ಇಮ್ರಾನ್ ಸರ್ದಾರಿಯಾ ಹೇಳಿದ್ದಾರೆ.
ಇಮ್ರಾನ್ ಸರ್ದಾರಿಯಾ ಇದೀಗ ಬೆಂಗಾಲಿ ಭಾಷೆಯ ಮೂರನೇ ಸಿನಿಮಾ ಮಾಡುತ್ತಿದ್ದಾರೆ. ಇಲ್ಲಿಯ ಸೂಪರ್ ಸ್ಟಾರ್ ಜೀತ್ ಮದ್ನಾನಿ ಜೊತೆಗೆ ಕೆಲಸ ಮಾಡಿದ್ದಾರೆ. ಈ ನಾಯಕ ನಟ ತುಂಬಾನೇ ಸ್ಪೆಷಲ್ ಆಗಿದ್ದಾರೆ.
ಬೆಂಗಾಲಿ ಸೂಪರ್ ಸ್ಟಾರ್ ಜೀತ್ ಚಿತ್ರಕ್ಕೆ ಇಮ್ರಾನ್ ಕೋರಿಯೋಗ್ರಾಫಿ
ಆ್ಯಕ್ಟರ್, ಪ್ರೋಡ್ಯೂಸರ್, ಉದ್ಯಮಿ ಕೂಡ ಆಗಿರೋ ಜೀತ್, ಪ್ರೋಡಕ್ಷನ್ ಹೌಸ್ ಕೂಡ ಹೊಂದಿದ್ದಾರೆ. ಹಾಗಾಗಿಯೇ ಜೀತ್ ಹೆಚ್ಚಾಗಿ ತಮ್ಮ ಪ್ರೋಡಕ್ಷನ್ ಹೌಸ್‌ನ ಸಿನಿಮಾದಲ್ಲಿ ಮಾತ್ರ ಅಭಿನಯಿಸುತ್ತಾರೆ. ಅದೇ ರೀತಿ ಇದೀಗ ತಮ್ಮದೇ ನಿರ್ಮಾಣ ಸಂಸ್ಥೆಯ ಚೆಂಗಾಯ್ಸ್ (Chengiz) ಹೆಸರಿನ ಪಿರಿಯೋಡಿಕಲ್ ಆ್ಯಕ್ಷನ್ ಥ್ರಿಲ್ ಮಾಡಿದ್ದಾರೆ.
ಈ ಚಿತ್ರಕ್ಕೆ ಇಮ್ರಾನ್ ಸರ್ದಾರಿಯಾ ಕೋರಿಯಾಗ್ರಾಫಿ ಮಾಡಿದ್ದಾರೆ. ಬೆಂಗಾಲಿ ಸೇರಿದಂತೆ ಈ ಚಿತ್ರ ಹಿಂದಿಯಲ್ಲೂ ರಿಲೀಸ್ ಆಗುತ್ತಿದೆ. ಹಾಗೇನೆ ಈ ಚಿತ್ರದಲ್ಲಿನ ಹಾಡುಗಳಿಗೆ ಇಮ್ರಾನ್ ಸರ್ದಾರಿಯಾ ಕೋರಿಯಾಗ್ರಾಫಿ ಮಾಡಿಕೊಟ್ಟಿದ್ದಾರೆ.
ಬೆಂಗಾಲಿ 3 ನೇ ಸಿನಿಮಾದ ಕೆಲಸದಲ್ಲಿ ಇಮ್ರಾನ್ ಬ್ಯುಸಿ
ಹಾಗೇನೆ ಈ ಹಿಂದಿನ ಜೀತ್ ಅಭಿನಯದ ರಾವಣ ಸಿನಿಮಾಕ್ಕೂ ಡ್ಯಾನ್ಸ್ ಮಾಸ್ಟರ್ ಇಮ್ರಾನ್ ಸರ್ದಾರಿಯಾ ಕೆಲಸ ಮಾಡಿದ್ದಾರೆ. ಈ ಚಿತ್ರದ ಕೆಲಸವನ್ನ ನೋಡಿಯೇ, ಇಮ್ರಾನ್ ಸರ್ದಾರಿಯಾ ಮತ್ತೆರಡು ಚಿತ್ರಗಳ ಆಫರ್ ಪಡೆದಿದ್ದಾರೆ.
ಈಗಾಗಲೇ ಹೇಳಿದಂತೆ ಇಮ್ರಾನ್ ಸರ್ದಾರಿಯಾ ಅವರ ಕೋರಿಯೋಗ್ರಾಫಿ ಇರೋ ಚೆಂಗಾಯ್ಸ್ (Chengiz) ಸಿನಿಮಾ ರೆಡಿ ಆಗಿದೆ. ಇದೇ ತಿಂಗಳ 21 ರಂದು ರಿಲೀಸ್ ಆಗುತ್ತಿದೆ. ಹಿಂದಿ ಮತ್ತು ಬೆಂಗಾಲಿ ಭಾಷೆಯಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ.
ಇಮ್ರಾನ್ ಮಾಸ್ಟರ್ ಬೆಂಗಾಲಿ ಸಿನಿಮಾ ಒಪ್ಪಿದ್ದ್ಯಾಕೆ?
ಇಮ್ರಾನ್ ಸರ್ದಾರಿಯಾ ಕೋರಿಯೋಗ್ರಾಫಿ ಮಾಡಿರೋ ಈ ಚಿತ್ರಕ್ಕೆ ಹಿಂದಿಯಲ್ಲಿ ಸಂಜಿತ್ ಹೆಗ್ಡೆ ಹಾಡಿದ್ದಾರೆ. ಬೆಂಗಾಲಿಯಲ್ಲಿ ಅರಿಜಿತ್ ಸಿಂಗ್ ಧ್ವನಿಯಾಗಿದ್ದಾರೆ.
ಬೆಂಗಾಲಿ ಸೂಪರ್ ಸ್ಟಾರ್ ಜೀತ್ ಸಿನಿಮಾಗಳನ್ನ ಮತ್ತೆ ಮತ್ತೆ ಇಮ್ರಾನ್ ಸರ್ದಾರಿಯಾ ಒಪ್ಪಿಕೊಳ್ಳಲು ಕಾರಣವೂ ಇದೆ. ಹೌದು, ಸ್ವತಃ ಇಮ್ರಾನ್ ಹೇಳುವಂತೆ ಈ ಸಿನಿಮಾ ಟೀಮ್ ತುಂಬಾನೆ artistic ಆಗಿದೆ. ಇಲ್ಲಿಯ ಜನ ಕೂಡ They r very artistic ppl ಅಂತ ಇಮ್ರಾನ್ ಬಣ್ಣಿಸುತ್ತಾರೆ.
ಇಮ್ರಾನ್ ಸರ್ದಾರಿಯಾ ಹೊಸ ಪ್ರೋಜೆಕ್ಟ್ ಯಾವವು?
ಹಾಗಾಗಿಯೇ ಬೆಂಗಾಲಿ ಭಾಷೆಯ ರಾವಣ, ಚೆಂಗಾಯ್ಸ್ ಆದ್ಮೇಲೆ ಇದೀಗ ಮೂರನೇ ಪ್ರೋಜೆಕ್ಟನ್ನು ಕೂಡ ಇಮ್ರಾನ್ ಸರ್ದಾರಿಯಾ ಮಾಡುತ್ತಿದ್ದಾರೆ. ಇದರ ಹೊರತಾಗಿ ಇಮ್ರಾನ್ ಮಾಸ್ಟರ್, ಕನ್ನಡದ ಫಾರೆನ್ ಸಿನಿಮಾಕ್ಕೂ ಕೆಲಸ ಮಾಡಿದ್ದಾರೆ. ಚತ್ರಪತಿ ಚಿತ್ರಕ್ಕೂ ಕೆಲಸ ಮಾಡಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಯುಐ ಚಿತ್ರಕ್ಕೂ ಇಮ್ರಾನ್ ಮಾಸ್ಟರ್ ಕೋರಿಯೋಗ್ರಾಫಿ ಮಾಡುತ್ತಿದ್ದಾರೆ. ನಾಗತಿಹಳ್ಳಿ ಮೇಷ್ಟ್ರ ಚಿತ್ರಕ್ಕೂ ಇಮ್ರಾನ್ ಮಾಸ್ಟರ್ ಕೋರಿಯೋಗ್ರಾಫಿ ಇದೆ. ಬಾಲಿವುಡ್‌ನ ಗಾಯಕ ನಾಯಕ ಹಿಮೇಶ್ ರೇಶಮಿಯಾ ಅವರ ವಿಡಿಯೊ ಆಲ್ಬಂಗೂ ಇಮ್ರಾನ್ ಮಾಸ್ಟರ್ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: Kichcha Sudeep: ಲವ್ ಯೂ ಬೇಬಿ ಎಂದು ಸ್ಪೆಷಲ್ ಪೋಸ್ಟ್ ಶೇರ್ ಮಾಡಿದ ಕಿಚ್ಚ
ಅದು ಇನ್ನೇನು ಇದೇ ತಿಂಗಳು ರಿಲೀಸ್ ಕೂಡ ಆಗುತ್ತಿದೆ. ಇದರ ಮಧ್ಯೆ ಇಮ್ರಾನ್ ಮಾಸ್ಟರ್ ಕನ್ನಡ, ಬೆಂಗಾಲಿ ಸೇರಿದಂತೆ ವಿವಿಧ ಪ್ರೋಜೆಕ್ಟ್‌ನಲ್ಲೂ ಬ್ಯುಸಿ ಇದ್ದಾರೆ ಅಂತ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ