Shiva Rajkumar: ಶಿವಣ್ಣ-ಗೀತಕ್ಕ ಲಗ್ನ ಪತ್ರಿಕೆಯಲ್ಲಿ ಏನಂತ ಹೆಸರು ಬರೆಸಿದ್ದರು ರಾಜಣ್ಣ? ವೈರಲ್ ಆಯ್ತು ದೊಡ್ಮನೆ ದೊಡ್ಮಗನ ಮದ್ವೆ ಇನ್ವಿಟೇಶನ್

ಕನ್ನಡ ಸಿನಿಮಾರಂಗಕ್ಕೆ ಆನಂದ್ ಸಿನಿಮಾದ ಮೂಲಕ ಶಿವಣ್ಣ ಎಂಟ್ರಿ ಕೊಟ್ಟಿದ್ದರು. ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ಶಿವಣ್ಣ  ಚಂದನವನಕ್ಕೆ ನೀಡಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್​ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ.

ಶಿವಣ್ಣ ಮದುವೆ ಆಮಂತ್ರಣ ಪತ್ರಿಕೆ

ಶಿವಣ್ಣ ಮದುವೆ ಆಮಂತ್ರಣ ಪತ್ರಿಕೆ

  • Share this:
ಕನ್ನಡ ಚಿತ್ರರರಂಗ (Sandalwood) ದಲ್ಲಿ ದೊಡ್ಮನೆ ಕೊಡುಗೆ ಅಪಾರ. ದೊಡ್ಮನೆ ಎಂದರೆ ಇಡೀ ಕರುನಾಡಿಗೆ ಅವರ ಗತ್ತು ಗೊತ್ತಿದೆ. ಡಾ.ರಾಜ್​ಕುಮಾರ್​ (Dr Rajkumar) ಹಾಗೂ  ಪಾರ್ವತಮ್ಮ ರಾಜ್ ಕುಮಾರ್ (Parvathamma Rajkumar) ಅವರು ಸಿನಿಮಾರಂಗಕ್ಕೆ ದೊಡ್ಡ ಮಟ್ಟಗಿನ ಕೊಡುಗೆ ನೀಡಿದ್ದಾರೆ. ಅಷ್ಟೇ ಅಲ್ಲದೇ, ಅನೇಕರ ಪ್ರತಿಭೆಗಳನ್ನು ಕನ್ನಡ ಸಿನಿಮಾರಂಗಕ್ಕೆ ಪರಿಚಯಿಸಿದ್ದಾರೆ. ಇಂದಿಗೂ ಅಣ್ಣಾವ್ರ ಹೆಸರು ಹೇಳಿಕೊಂಡು ಊಟ ಮಾಡುತ್ತಿದ್ದಾರೆ. ದೇವರ ಫೋಟೋ (God Photo) ಇಡುವ ಜಾಗದಲ್ಲಿ ಅಣ್ಣಾವ್ರ ಫೋಟೋ ಇಟ್ಟುಕೊಂಡು ಪೂಜೆ ಮಾಡುತ್ತಿದ್ದಾರೆ. ಇನ್ನೂ ಡಾ ರಾಜ್​ಕುಮಾರ್​ ಅವರ ಮೂರು ರತ್ನಗಳ ಬಗ್ಗೆ ಹೆಚ್ಚೆನೂ ಹೇಳಬೇಕಿಲ್ಲ. ಆ ಮೂರು ರತ್ನಗಳಲ್ಲಿ ಒಂದು ರತ್ನ ಇಂದು ನಮ್ಮೊಂದಿಗೆ ಇಲ್ಲ. ಇನ್ನೂ ರಾಘಣ್ಣ ಕೂಡ ಕೆಲ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಶಿವಣ್ಣ (Shivanna) ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ.

ಶಿವಣ್ಣ ಮದುವೆ ಆಮಂತ್ರಣ ಪತ್ರಿಕೆ ವೈರಲ್!

ಕನ್ನಡ ಸಿನಿಮಾರಂಗಕ್ಕೆ ಆನಂದ್ ಸಿನಿಮಾದ ಮೂಲಕ ಶಿವಣ್ಣ ಎಂಟ್ರಿ ಕೊಟ್ಟಿದ್ದರು. ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ಶಿವಣ್ಣ  ಚಂದನವನಕ್ಕೆ ನೀಡಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್​ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಶಿವಣ್ಣ ಸಿನಿಮಾ ಬದುಕಿನಲ್ಲಿ ಯಶಸ್ಸು ಕಂಡಿರುವ ಇವರು ವೈವಾಹಿಕ ಬದುಕಿನಲ್ಲಿಯೂ ಯಶಸ್ವಿಯಾಗಿದ್ದಾರೆ. ಶಿವಣ್ಣ ಅವರ ಪತ್ನಿ ಗೀತಾ.  ಶಿವಣ್ಣ ಗೀತಾರವನ್ನು ಮದುವೆ ಸುಖವಾಗಿ ಸಂಸಾರ ಮಾಡುತ್ತಿದ್ದು, ಶಿವಣ್ಣ ದಂಪತಿಗಳ ಮದುವೆಯ ಲಗ್ನ ಪತ್ರಿಕೆಯೂ ಈಗ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಶಿವಣ್ಣ ಅವರ ಜೊತೆ ಸದಾ ಎಲ್ಲಾ ಕೆಲಸದಲ್ಲೂ ಗೀತಕ್ಕ ಜೊತೆ ಇರುತ್ತಾರೆ.

ಶಿವಣ್ಣ, ಗೀತಕ್ಕ


ಶಿವಣ್ಣ-ಗೀತಕ್ಕ ಮದುವೆ ಆಮಂತ್ರಣ ಪತ್ರಿಕೆ


ಮದುವೆ ಪತ್ರಿಕೆಯಲ್ಲಿ ಏನಿದೆ ಅಂತ ನೋಡಿ!

1986 ರಲ್ಲಿ ಮೇ 19 ರಂದು ಶಿವರಾಜ್ ಕುಮಾರ್ ಅವರು ಗೀತಾರವರನ್ನು ಮದುವೆಯಾದರು ಶಿವಣ್ಣ. ಇವರಿಬ್ಬರದ್ದು ಅರೇಂಜ್​ ಮ್ಯಾರೇಜ್​. ಶಿವಣ್ಣ ಅವರು ವೈವಾಹಿಕ ಜೀವನಕ್ಕೆ ಕಾಲಿಡುವ ವೇಳೆಗೆ ಕೇವಲ 24 ವರ್ಷ ವಯಸ್ಸಾಗಿತ್ತು. ಗೀತಾರವರು ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಮುದ್ದಿನ ಮಗಳು. ಡಾ. ರಾಜಕುಮಾರ್ ಅವರ ಕುಟುಂಬದ ಬಗ್ಗೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರಿಗೆ ಎಲ್ಲಿಲ್ಲದ ಪ್ರೀತಿ, ಗೌರವ, ಅಭಿಮಾನವಿತ್ತು. ಹೀಗಾಗಿ ಅವರು ತಮ್ಮ ಮಗಳನ್ನು ರಾಜ್​ಕುಮಾರ್ ಮಗನಿಗೆ ಮದುವೆ ಮಾಡಿಕೊಡಲು ಒಪ್ಪಿಕೊಂಡಿದ್ದರು.

ಶಿವಣ್ಣ ಮದುವೆ ಫೋಟೋಗಳು


ಇದನ್ನೂ ಓದಿ: ಬದಲಾಗಲಿದೆ ‘ರಾಕಿ ಭಾಯ್’ ಹೇರ್ ಸ್ಟೈಲ್! ಹೇಗಿರುತ್ತೆ ‘ರಾಕಿಂಗ್ ಸ್ಟಾರ್’ ಡಿಫರೆಂಟ್ ಲುಕ್?

ಬಹಳ ಅದ್ಧೂರಿಯಾಗಿ ನಡೆದಿತ್ತು ಶಿವಣ್ಣನ ಮದುವೆ!

ಬಂಗಾರಪ್ಪ ಅವರು ಡಾಕ್ಟರ್ ರಾಜಕುಮಾರ್ ಅವರ ಬಳಿ ತಮ್ಮ ಮಗಳನ್ನು ನಿಮ್ಮ ಮನೆಗೆ ಸೊಸೆಯಾಗಿ ಮಾಡುವ ಆಸೆ ಇದೆ ಎಂದು ಹೇಳಿಕೊಂಡಿದ್ದರಂತೆ. ಮನೆಯವರೆಲ್ಲರಿಗೂ ಇಷ್ಟವಾಗಿ ಶಿವಣ್ಣ ಹಾಗೂ ಗೀತಾ ಅವರ ಮದುವೆ ನಿಶ್ಚಯವಾಯಿತು.ದೊಡ್ಮನೆ ಕುಟುಂಬದಲ್ಲಿ ಅಣ್ಣಾವ್ರ ಹಿರಿಯ ಮಗನ ಮದುವೆಯಾದ ಕಾರಣ ಮನೆ ತುಂಬಾ ಹಬ್ಬದ ವಾತಾವರಣವೇ ಸೃಷ್ಟಿಯಾಗಿತ್ತು.

ಶಿವಣ್ಣ, ಗೀತಕ್ಕ




ಇದನ್ನೂ ಓದಿ: 777 ಚಾರ್ಲಿ ಸಕ್ಸಸ್ ಬಳಿಕ ಹೊಸ ಸಿನಿಮಾ ನಿರ್ಮಾಣಕ್ಕೆ ಮುಂದಾದ ನಟ ರಕ್ಷಿತ್ ಶೆಟ್ಟಿ

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿದ್ದ ಮದುವೆ!

ಶಿವಣ್ಣನವರ ಮದು ಬೆಂಗಳೂರಿನ ಅರಮನೆಯ ಮೈದಾನದಲ್ಲಿ ದೊಡ್ಮನೆ ಕುಟುಂಬದ ಹಿರಿ ಮಗನ ಮದುವೆ ವಿಜೃಂಭಣೆಯಿಂದ ನಡೆದಿತ್ತು. ಶಿವರಾಜ್ ಕುಮಾರ್ ಮದುವೆಗೆ ನಟ ಕಮಲ್ ಹಾಸನ್, ಮೇರು ಎಂ ಜಿ ರಾವ್, ಸೂಪರ್ ಸ್ಟಾರ್ ರಜನಿಕಾಂತ್ ಸೇರಿ ಸಾಕಷ್ಟು ದೊಡ್ಡ ದೊಡ್ಡ ಸ್ಟಾರ್​ ನಟರೇ ಆಗಮಿಸಿದ್ದರು. ಅಣ್ಣಾವ್ರ ದೊಡ್ಡ ಮಗನ ಮದುವೆಯಾದರೂ, ಮದುವೆ ಆಮಂತ್ರಣ ಪತ್ರಿಕೆ ಮಾತ್ರ ತುಂಬಾ ಸುಂದರ ಹಾಗೂ ಸರಳವಾಗಿತ್ತು. ಇದೀಗ ಶಿವಣ್ಣ-ಗೀತಕ್ಕ ಅವರ ಮದುವೆ ಆಮಂತ್ರಣ ಪತ್ರಿಕೆ ವೈರಲ್ ಆಗುತ್ತಿದೆ.
Published by:Vasudeva M
First published: