Shivarajkumar: ವ್ಹಾ, ಸೂಪರ್​ ಹೀರೋ ಅವತಾರದಲ್ಲಿ ಶಿವಣ್ಣ! ಆ್ಯಕ್ಷನ್​ ಕಟ್​ ಹೇಳ್ತಿರೋದು 'ಅವನೇ ಶ್ರೀಮನ್ನಾರಾಯಣ'

ಇತ್ತೀಚೆಗೆ ಶಿವಣ್ಣ ಅಭಿನಯಿಸಿದ ಬೈರಾಗಿ ಸಿನಿಮಾ ರಿಲೀಸ್​ ಆಗಿ ಸೂಪರ್​ ಹಿಟ್​ ಎನಿಸಿಕೊಂಡಿತ್ತು. ಇದೀಗ ಶಿವಣ್ಣ ಅಭಿನಯದ ಮುಂದಿನ ಸಿನಿಮಾ (Next Movie) ಬಗ್ಗೆ ಬಿಗ್​ ಅಪ್​ಡೇಟ್ ಸಿಕ್ಕಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್​ 127ನೇ ಸಿನಿಮಾಗೆ "ಅವನೇ ಶ್ರೀಮನ್ನಾರಾಯಣ" ನಿರ್ದೇಶಕರು ಆ್ಯಕ್ಷನ್​ ಕಟ್ (Action Cut)​ ಹೇಳುತ್ತಿದ್ದಾರೆ.

ಶಿವಣ್ಣ

ಶಿವಣ್ಣ

  • Share this:
ಸ್ಯಾಂಡಲ್​ವುಡ್ (Sandalwood) ನ ಹ್ಯಾಟ್ರಿಕ್ ಹೀರೋ (Hattrick Hero) , ಅಭಿಮಾನಿಗಳ ಪಾಲಿನ ಮೆಚ್ಚಿನ ಶಿವಣ್ಣ (Shivanna) ,  ಡಾ. ಶಿವರಾಜ್‌ಕುಮಾರ್‌ (Shivarajkumar) ಅವರು ಇದೇ  ಜುಲೈ 12ರಂದು  60ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಈ ದಿನವನ್ನು ಶಿವಣ್ಣನ ಅಭಿಮಾನಿಗಳು ವಿಶೇಷವಾಗಿ ಆಚರಿಸಲು ನೂರಾರು ಯೋಜನೆಗಳನ್ನು ಹಾಕಿಕೊಂಡಿದ್ದರು. ಆದರೆ ಈ ಬಾರಿ ಶಿವರಾಜ್​ಕುಮಾರ್​ ಅವರು ತಮ್ಮ ಬರ್ತ್‌ ಡೇ (Birthday) ಅನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಅಪ್ಪು ಅಗಲಿಕೆಯ ನೋವು ಇನ್ನೂ ಶಿವರಾಜ್​ಕುಮಾರ್​​ ಅವರನ್ನು ಕಾಡುತ್ತಿದೆ. ಇತ್ತೀಚೆಗೆ ಶಿವಣ್ಣ ಅಭಿನಯಿಸಿದ ಬೈರಾಗಿ ಸಿನಿಮಾ ರಿಲೀಸ್​ ಆಗಿ ಸೂಪರ್​ ಹಿಟ್​ ಎನಿಸಿಕೊಂಡಿತ್ತು. ಇದೀಗ ಶಿವಣ್ಣ ಅಭಿನಯದ ಮುಂದಿನ ಸಿನಿಮಾ (Next Movie) ಬಗ್ಗೆ ಬಿಗ್​ ಅಪ್​ಡೇಟ್ ಸಿಕ್ಕಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್​ 127ನೇ ಸಿನಿಮಾಗೆ "ಅವನೇ ಶ್ರೀಮನ್ನಾರಾಯಣ" ನಿರ್ದೇಶಕರು ಆ್ಯಕ್ಷನ್​ ಕಟ್ (Action Cut)​ ಹೇಳುತ್ತಿದ್ದಾರೆ.

ಶಿವಣ್ಣ-ಸಚಿನ್ ಸಿನಿಮಾ ಟೈಟಲ್ ಲಾಂಚ್ ಗೆ ಡೇಟ್ ಫಿಕ್ಸ್!

ಕನ್ನಡ ಸಿನಿಲೋಕದ ಯಂಗ್ ಅಂಡ್ ಎನರ್ಜಿಟಿಕ್ ಸೂಪರ್ ಸ್ಟಾರ್ ಶಿವರಾಜ್ ಕುಮಾರ್ ಭತ್ತಳಿಕೆಯಲ್ಲೀಗ ಸಾಲು ಸಾಲು ಸಿನಿಮಾಗಳಿವೆ. ಈ ಚಿತ್ರಗಳ ಪೈಕಿ ಶಿವಣ್ಣ ನಟಿಸಲಿರುವ 127ನೇ ಸಿನಿಮಾಗೆ ಅವನೇ ಶ್ರೀಮನ್ನಾರಾಯಣ ನಿರ್ದೇಶಕ ಸಚಿನ್ ರವಿ ಆಕ್ಷನ್ ಕಟ್ ಹೇಳುವುದು ಕನ್ಫರ್ಮ್ ಆಗಿದೆ. ಶಿವಣ್ಣನ 60ನೇ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಇಂಟ್ರೆಸ್ಟಿಂಗ್ ಆಗಿರುವ ಪೋಸ್ಟರ್ ರಿಲೀಸ್ ಮಾಡಿ ಶಿವಣ್ಣ‌ನ‌ ಜನುಮದಿನಕ್ಕೆ ಶುಭಾಶಯ ಕೋರಿದೆ.

ಆಗಸ್ಟ್​​ನಲ್ಲಿ ಟೈಟಲ್ ರಿವೀಲ್​ ಮಾಡಲಿದೆ ಚಿತ್ರತಂಡ!

ಮಹಾಭಾರತದ ವೀರದಲ್ಲಿ ಒಬ್ಬರಾದ ಅಶ್ವತ್ಥಾಮ ಸಾಹಸಗಾಥೆಯನ್ನು ಆಧಾರಿಸಿ ತಯಾರಾಗಲಿರುವ ಈ ಸಿನಿಮಾದ ಟೈಟಲ್ ಅನ್ನು ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ರಿವೀಲ್ ಆಗಲಿದೆ. ಟೈಟಲ್ ಬಳಿಕ ತಾಂತ್ರಿಕ ಬಳಗದ ಬಗ್ಗೆ ಮಾಹಿತಿ ಕೊಡಲು ಚಿತ್ರತಂಡ ಪ್ಲ್ಯಾನ್ ಹಾಕಿಕೊಂಡಿದೆ. ಇದೊಂದು ಪಕ್ಕಾ ಆಕ್ಷನ್ ಪ್ಯಾಕ್ಡ್ ಸ್ಪೈ ಥ್ರಿಲ್ಲರ್ ಕಥಾಹಂದರವನ್ನು ಒಳಗೊಂಡಿದೆ. ಅಮರತ್ವ ಪಡೆದಿರುವ ಅಶ್ವತ್ಥಾಮನ ಸುತ್ತಾ ಸಾಗುವ ಇಡೀ ಕಥೆಯಲ್ಲಿ ಶಿವಣ್ಣ ಸೂಪರ್ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ಸೆಂಚುರಿ ಸ್ಟಾರ್ ಶಿವಣ್ಣನ ಹುಟ್ಟುಹಬ್ಬ ಆಚರಣೆ

ಸಚಿನ್​ ನಿರ್ಮಾಣದ ಜೊತೆಗೆ ನಿರ್ದೇಶನ!

ಸಚಿನ್ ಈ ಸಿನಿಮಾಗೆ ನಿರ್ದೇಶನದ ಜೊತೆಗೆ ನಿರ್ಮಾಣ ಜವಾಬ್ದಾರಿ ಕೂಡ ಹೊತ್ತಿದ್ದು, ತಮ್ಮದೇ ಹೋಮ್ ಬ್ಯಾನರ್ ಜೊತೆಗೆ ಕಾರ್ಪೊರೇಟ್ ಕಂಪನಿಯೊಂದರ ಜೊತೆಗೂಡಿ ಸಿನಿಮಾ ನಿರ್ಮಾಣ ಮಾಡಲಿದ್ದಾರೆ. ಕನ್ನಡದ ಮಟ್ಟಿಗೆ ಸೂಪರ್ ಹೀರೋ ಕನ್ಸೆಪ್ಟ್ ನ ಮೊದಲ ಸಿನಿಮಾ ಇದಾಗಿದ್ದು, ಈ ಚಿತ್ರದಲ್ಲಿ ಶಿವಣ್ಣ ಹಿಂದೆಂದೂ ಕಾಣದ ರೀತಿಯಲ್ಲಿ ಕಂಗೊಳಿಸಲಿದ್ದಾರೆ. ಜೊತೆಗೆ ವಿಎಫ್‌ಎಕ್ಸ್‌ಗೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆಯಂತೆ.

ಸಚಿನ್​, ಶಿವರಾಜ್​ಕುಮಾರ್​​


ಇದನ್ನೂ ಓದಿ: ಹ್ಯಾಟ್ರಿಕ್ ಹೀರೋ ಬರ್ತ್​ ಡೇಗೆ 60 ಗಂಟೆ ನಾನ್​ ಸ್ಟಾಪ್​ ಸಿನಿಮೋತ್ಸವ, ಸತತ 3 ದಿನಗಳ ಕಾಲ ಶಿವಣ್ಣ ಹಬ್ಬ!

ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ ಶಿವಣ್ಣ!

ಕರುನಾಡ ಮುತ್ತು ಪುನೀತ್ ರಾಜ್​ಕುಮಾರ್ (Puneeth Rajkumar) ಅವರು ನಮ್ಮನ್ನು ಅಗಲಿ ಅನೇಕ ದಿನಗಳೇ ಕಳೆದಿದೆ. ಆದರೆ ಇದರ ನೋವಿನಿಂದ ಅವರ ಅಭಿಮಾನಿಗಳಾಗಲಿ ಅಥವಾ ರಾಜ್​ ಕುಟುಂಬವಾಗಲಿ ಇನ್ನೂ ಸಂಪೂರ್ಣವಾಗಿ ಹೊರಬಂದಿಲ್ಲ. ಹೀಗಾಗಿ ಅಪ್ಪು (Appu) ಅಗಲಿಕೆ ಕಾರಣದಿಂದ ಶಿವಣ್ಣ ಈ ಬಾರಿ ಜನ್ಮದಿನ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಮತ್ತೊಂದು ಸಿನಿಮಾ ಅನೌನ್ಸ್​ ಮಾಡ್ತಾರಾ ಶಿವಣ್ಣ!

ಶಿವಣ್ಣನ   ಮತ್ತೊಂದುಜ ಹೊಸ ಸಿನಿಮಾದ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಶಿವರಾಜ್​ಕುಮಾರ್ ಅವರ ಹೊಸ ಚಿತ್ರಕ್ಕೆ ಕೊಟ್ರೇಶ್ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ಮಾತುಗಳು ಸ್ಯಾಂಡಲ್​ವುಡ್​ ಅಂಗಳದಲ್ಲಿ ಕೇಳಿಬರುತ್ತಿದೆ. ಅಲ್ಲದೇ ಎ. ಆರ್. ಕೆ ಪ್ರೊಡಕ್ಷನ್ ಮತ್ತು ರುಬಿನ್ ರಾಜ್ ಪ್ರೊಡಕ್ಷನ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಚರಣ್ ರಾಜ್ ಸಂಗೀತ ನೀಡಲಿದ್ದಾರೆ.
Published by:Vasudeva M
First published: