Kiccha Sudeep: ಗುರು ರಾಯರ ದರ್ಶನ ಪಡೆದ ಸುದೀಪ್​, ನೆಲದ ಮೇಲೆ ಕೂತು ಧ್ಯಾನ ಮಾಡಿದ ಕಿಚ್ಚ!

ಸುದೀಪ್ ಬರುವ ವಿಚಾರ ತಿಳಿಯುತ್ತಿದಂತೆ ಸುದೀಪ್ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ನೆರೆದಿದ್ದರು. ನಿಗದಿಯಂತೆ ಮಠದ ಮುಂಭಾಗದ ಯೋಗಿಂದ್ರ ಸಭಾ ಭವನದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮಂತ್ರಾಲಯದಲ್ಲಿ ಕಿಚ್ಚ ಸುದೀಪ್​

ಮಂತ್ರಾಲಯದಲ್ಲಿ ಕಿಚ್ಚ ಸುದೀಪ್​

  • Share this:
ಸ್ಯಾಂಡಲ್​ವುಡ್(Sandalwood)​ನ ಬಹುತೇಕ ನಟ- ನಟಿಯರು ತುಂಬಾ ನಂಬುವುದು ಅಂದರೆ ಅದು ಶ್ರೀ ಗುರುರಾಘವೇಂದ್ರ ಸ್ವಾಮಿ(Sri Gururaghavendra Swamy)ಗಳು. ಸಿನಿಮಾ ರಿಲೀಸ್​ ಸಮಯವಾಗಲಿ, ಮತ್ಯಾವುದೋ ತೊಂದರೆ ಇರಲಿ ಮಂತ್ರಾಲಯ(Mantralaya)ಕ್ಕೆ ಭೇಟಿ ನೀಡಿ ಗುರು ರಾಘವೇಂದ್ರ ಶ್ರೀಗಳ ದರ್ಶನ ಪಡೆದರೆ ಕಷ್ಟವೆಲ್ಲಾ ದೂರವಾಗುತ್ತೆ. ಅದರಲ್ಲೂ ನವರಸನಾಯಕ ಜಗ್ಗೇಶ್ (Jaggesh)​ ಅವರು ರಾಘವೇಂದ್ರ ಸ್ವಾಮಿಗಳು ಭಕ್ತರು. ಸ್ಯಾಂಡಲ್​ವುಡ್​ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಮಂತ್ರಾಲಯಕ್ಕೆ ಭೇಟಿ ಕೊಟ್ಟಿದ್ದಾರೆ. ರಾಯರ ಪಟ್ಟಾಭಿಷೇಕ ಹಾಗೂ ಜನ್ಮದಿನಾಚರಣೆಯನ್ನ ಗುರುವೈಭವೋತ್ಸವವಾಗಿ ಆಚರಣೆ ಮಾಡಲಾಗುತ್ತೆ. ಈ ಹಿನ್ನೆಲೆ  ರಾಯರ 401ನೇ ಪಟ್ಟಾಭಿಷೇಕವಾಗಿದ್ದು, ಸುದೀಪ್ ಮಂತ್ರಾಲಯಕ್ಕೆ ಆಗಮಿಸಿದ್ದರು.  

ಕಿಚ್ಚನಿಗೆ ಅನುಗ್ರಹ ಪ್ರಶಸ್ತಿ ನೀಡಿ ಗೌರವ

ಸುದೀಪ್ ಮಂತ್ರಾಲಯಕ್ಕೆ ಆಗಮಿಸಿದ ನಂತರ ರಾಯರ ಬೃಂದಾವನದ ದರ್ಶನವನ್ನು ಮೊದಲು ಪಡೆದಿದ್ದಾರೆ. ಬಳಿಕ ಕಿಚ್ಚನಿಗೆ ವೇದಿಕೆ ಕಾರ್ಯಕ್ರಮದಲ್ಲಿ ರಾಯರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿಗಳು ಸನ್ಮಾನ ಮಾಡಿದ್ದಾರೆ. ನಟ ಸುದೀಪ್‌ ಅವರಿಗೆ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ವೇಳೆ ಕಿಚ್ಚನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಗುರುವೈಭವೋತ್ಸವ ಹಿನ್ನೆಲೆ ಮಠದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರಿಗೆ ಸನ್ಮಾನ ನಡೆಯಿತು.

ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕಿಚ್ಚ ಫ್ಯಾನ್ಸ್​!

ಸುದೀಪ್ ಬರುವ ವಿಚಾರ ತಿಳಿಯುತ್ತಿದಂತೆ ಸುದೀಪ್ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ನೆರೆದಿದ್ದರು. ನಿಗದಿಯಂತೆ ಮಠದ ಮುಂಭಾಗದ ಯೋಗಿಂದ್ರ ಸಭಾ ಭವನದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಸುದೀಪ್ ಸೇರಿದಂತೆ ಹಲವರಿಗೆ ಸನ್ಮಾನಿಸಿ, ಪ್ರಶಸ್ತಿ ನೀಡಬೇಕಾಗಿತ್ತು. ಆದ್ರೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದರಿಂದ ಅಲ್ಲಿ ಸನ್ಮಾನಿಸಲು ಸಾಧ್ಯವಾಗಲಿಲ್ಲ. ಇದರಿಂದ ಅಭಿಮಾನಿಗಳು ನಿರಾಸೆಗೊಂಡರು.

ಇದನ್ನೂ ಓದಿ: ಇಂದಿನಿಂದ ಅಸಲಿ ಆಟ ಶುರು ಅಂದಿದ್ಯಾಕೆ ಕಿಚ್ಚ? ಹಿಂಗ್​​ ಹೇಳಿದ್ದು ಅವ್ರಲ್ಲ.. `ವಿಕ್ರಾಂತ್​ ರೋಣ’!

ವಿಕ್ರಾಂತ್​ ರೋಣ ಇಂಗ್ಲಿಷ್​ ಡಬ್ಬಿಂಗ್​ ಮುಗಿಸಿದ ಕಿಚ್ಚ!

ವಿಕ್ರಾಂತ್​ ರೋಣ (Vikrant Rona).. ಇಡೀ ಕನ್ನಡ ಚಿತ್ರರಂಗ ಈ ಸಿನಿಮಾ ನೋಡಲು ತುದಿಗಾಲಿನಲ್ಲಿ ನಿಂತಿದೆ. ಪೋಸ್ಟರ್ (Poster)​, ಟೀಸರ್(Teaser)ಗಳಿಂದಲೇ ಸಾಕಷ್ಟು ಸದ್ದು ಮಾಡಿದ್ದಾನೆ ವಿಕ್ರಾಂತ್​ ರೋಣ.ಇದೇ ಮೊದಲ ಬಾರಿಗೆ ಸುದೀಪ್‌(Sudeep)ಗೆ ನಿರ್ದೇಶನ ಮಾಡಿದ್ದಾರೆ ಅನೂಪ್ ಭಂಡಾರಿ. ಕನ್ನಡ , ತೆಲುಗು, ಹಿಂದಿ, ತಮಿಳು, ಮಲಯಾಳಂ, ಇಂಗ್ಲಿಷ್​ ಭಾಷೆ ಸೇರಿ ಹಲವು ಭಾಷೆಗಳಲ್ಲಿ ವಿಕ್ರಾಂತ್​ ರೋಣನ ದರ್ಶನವಾಗುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಹೊಸ ವಿಚಾರ ಏನಪ್ಪ ಅಂದರೆ ಇಂಗ್ಲಿಷ್​ ವರ್ಷನ್​ನಲ್ಲೂ ಕಿಚ್ಚ ಸುದೀಪ್​ ಡಬ್​ ಮಾಡಿ ಮುಗಿಸಿದ್ದಾರೆ. ಇದಕ್ಕಾಗಿ ಸಣ್ಣದೊಂದು ವಿಡಿಯೋ ಮಾಡಿ ಅದನ್ನು ಚಿತ್ರತಂಡ ಪೋಸ್ಟ್​ ಮಾಡಿದೆ.

ಇದನ್ನೂ ಓದಿ: ಜನಾರ್ದನ ರೆಡ್ಡಿ ಮಗನ ಜಬರ್​ದಸ್ತ್​ ಎಂಟ್ರಿ.. ಫಸ್ಟ್​​ ಸಿನಿಮಾದಲ್ಲಿ ಫೇಮಸ್​ ನಟಿಮಣಿಯರ ಜೊತೆ ರೊಮ್ಯಾನ್ಸ್!

ಅಸಲಿ ಆಟ ಈಗ ಶುರು ಎಂದ ಕಿಚ್ಚ ಸುದೀಪ್​!

ಹೌದು, ಈ ವಿಡಿಯೋದಲ್ಲಿ ಕಿಚ್ಚ ಸುದೀಪ್​ ಸಖತ್ತಾಗಿ ಇಂಗ್ಲಿಷ್​ ಡಬ್​ ಮಾಡಿದ್ದಾರೆ. ಅದರಲ್ಲೂ ರಿಲೀಸ್​ ಆಗಿರುವ ವಿಡಿಯೋದಲ್ಲೇ ಸಖತ್ ಡೈಲಾಗ್​ ಹೊಡೆದಿದ್ದಾರೆ. ಈಗ ಅಸಲಿ ಆಟ ಶುರುವಾಗುತ್ತೆ ಎಂದು ಹೇಳಿದ್ದಾರೆ. ಈ ದೃಶ್ಯದಲ್ಲೇ ಕಿಚ್ಚನ ಗೆಟ್​ಅಪ್​ ಕಂಡು ಸಿನಿಮಾ ಮೇಲಿರುವ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ವಿಕ್ರಾಂತ್ ರೋಣ ಸಿನಿಮಾಗೂ ಮುನ್ನ ಅನೂಪ್​ ಭಂಡಾರಿ ಕಿಚ್ಚ ಸುದೀಪ್​ ಅವರ ಬಳಿ ಬಿಲ್ಲ ರಂಗ ಭಾಷಾ ಸಿನಿಮಾದ ಕಥೆಯನ್ನು ಹೇಳಿ ಒಕೆ ಮಾಡಿಸಿದ್ದರು. ಈ ಸಿನಿಮಾ ಕೂಡ ಅನೌನ್ಸ್​ ಆಗಿತ್ತು. ಆದರೆ, ಈ ಸಿನಿಮಾ ಟೇಕ್ ಆಫ್​ ಆಗಲಿಲ್ಲ. ಇದರ ಬದಲು ವಿಕ್ರಾಂತ್​ ರೋಣ ಸಿನಿಮಾ ಟೇಕ್​ ಆಫ್​ ಆಯ್ತು.
Published by:Vasudeva M
First published: