ಅಭಿನಯ ಚಕ್ರವರ್ತಿ ಹುಟ್ಟುಹಬ್ಬಕ್ಕೆ 100 ದಿನಬಾಕಿ; ಅಭಿಮಾನಿಗಳಿಂದ ಶುರುವಾಗಿದೆ ‘ಕಿಚ್ಚೋತ್ಸವ‘

Kiccha Sudeep: ಅಭಿಮಾನಿಗಳು ಅಭಿನಯ ಚಕ್ರವರ್ತಿಯ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ನಡೆಸಲು ಈ ರೀತಿಯಾ ಪ್ಲಾನ್​ ಮಾಡಿಕೊಂಡಿದ್ದಾರೆ. ಶನಿವಾರದಂದು ಕಿಚ್ಚೋತ್ಸವ ಸಂಭ್ರಮಕ್ಕೆ ಚಾಲನೆ ಸಿಕ್ಕಿದೆ. ನಿರೂಪ್​ ಭಂಡಾರಿ ಅವರು ನಟ ಸುದೀಪ್​​ ಜನ್ಮ ದಿನದ ಅಂಗವಾಗಿ ವಿನ್ಯಾಸಗೊಳಿಸಿರುವ ‘ಕಿಚ್ಚೋತ್ಸವ 2020‘ ವಿಶೇಷ ಸಿಡಿಪಿಯನ್ನು ಮತ್ತು #100daysForKicchotsava ​ ಹ್ಯಾಶ್​ ಟ್ಯಾಗ್​ ಅನ್ನು ಬಿಡುಗಡೆ ಮಾಡಿದ್ದಾರೆ.

news18-kannada
Updated:May 24, 2020, 8:55 PM IST
ಅಭಿನಯ ಚಕ್ರವರ್ತಿ ಹುಟ್ಟುಹಬ್ಬಕ್ಕೆ 100 ದಿನಬಾಕಿ; ಅಭಿಮಾನಿಗಳಿಂದ ಶುರುವಾಗಿದೆ ‘ಕಿಚ್ಚೋತ್ಸವ‘
ಕಿಚ್ಚೋತ್ಸವ
  • Share this:
ಸ್ಯಾಂಡಲ್​ವುಡ್​ನಲ್ಲಿ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುವ ನಟರಲ್ಲಿ ಕಿಚ್ಚ ಸುದೀಪ್​  ಕೂಡ ಪ್ರಮುಖರು.  ಸೆ. 2 ರಂದು ಸುದೀಪ್​ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಆದರೀಗ ಅವರ ಹುಟ್ಟು ಹಬ್ಬಕ್ಕೆ 100 ದಿನಗಳು ಬಾಕಿ ಇರುವಾಗ ಅಭಿಮಾನಿಗಳು ಸಂಭ್ರಮದಲ್ಲಿ ತೊಡಗಿದ್ದಾರೆ. ಅದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ‘ಕಿಚ್ಚೋತ್ಸವ‘ ಆರಂಭಿಸಿದ್ದಾರೆ.

ಅಭಿಮಾನಿಗಳು ಅಭಿನಯ ಚಕ್ರವರ್ತಿಯ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ನಡೆಸಲು ಈ ರೀತಿಯಾ ಪ್ಲಾನ್​ ಮಾಡಿಕೊಂಡಿದ್ದಾರೆ. ಶನಿವಾರದಂದು ಕಿಚ್ಚೋತ್ಸವ ಸಂಭ್ರಮಕ್ಕೆ ಚಾಲನೆ ಸಿಕ್ಕಿದೆ. ನಿರೂಪ್​ ಭಂಡಾರಿ ಅವರು ನಟ ಸುದೀಪ್​​ ಜನ್ಮ ದಿನದ ಅಂಗವಾಗಿ ವಿನ್ಯಾಸಗೊಳಿಸಿರುವ ‘ಕಿಚ್ಚೋತ್ಸವ 2020‘ ವಿಶೇಷ ಸಿಡಿಪಿಯನ್ನು ಮತ್ತು #100daysForKicchotsava ​ ಹ್ಯಾಶ್​ ಟ್ಯಾಗ್​ ಅನ್ನು ಬಿಡುಗಡೆ ಮಾಡಿದ್ದಾರೆ.

 ಕಿಚ್ಚೋತ್ಸವ


ದಾಖಲೆ ಬರೆದ ‘ಕಿಚ್ಚೋತ್ಸವ‘ !

ಕಿಚ್ಚೋತ್ಸವಕ್ಕೆ ಚಾಲನೆ ದೊರೆತ 20 ಗಂಟೆಗಳ ಒಳಗೆ #100daysForKicchotsava ಎಂಬ ಹ್ಯಾಶ್​ಟ್ಯಾಗ್​ನಡಿಯಲ್ಲಿ ಒಂದು ಮಿಲಿಯನ್​ಗೂ ಅಧಿಕ ಟ್ವೀಟ್​ಗಳು ಸೃಷ್ಠಿಯಾಗಿದೆ. 24 ಗಂಟೆಯೊಳಗೆ 1.5 ಮಿಲಿಯನ್​ ಟ್ವೀಟ್​​ಗಳು ಸೃಷ್ಠಿಯಾಗಿದ್ದು ಅಭಿಮಾನಿಗಳು ಹೊಸ ದಾಖಲೆಯನ್ನು ಬರೆದಿದ್ದಾರೆ. ಮಾತ್ರವಲ್ಲದೆ ಟ್ವಿಟ್ಟರ್​​ನಲ್ಲಿ #100daysForKicchotsava ಹ್ಯಾಶ್​ ಟ್ಯಾಗ್​ ಟ್ರೆಂಡಿಂಗ್​ನಲ್ಲಿ ಕಾಣಿಸಿಕೊಂಡಿದೆ.

ವಿಶ್ವವಿಖ್ಯಾತ ಅಂಬೇಗಾಲು ಕೃಷ್ಣನಿಗೂ ಕೊರೋನಾ ಕಂಟಕ; ಆದಾಯದಲ್ಲಿ ಭಾರೀ ಇಳಿಕೆ
First published: May 24, 2020, 8:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading