Karunya Ram: ದುಬೈನಲ್ಲಿ ಟಗರು ಬಂತು ಟಗರು ಎಂದ ಕಾರುಣ್ಯ ರಾಮ್​.. ಈಕೆಯನ್ನು ಕಂಡು ಫಾರಿನರ್ಸ್​ ಕೂಡ ಕಕ್ಕಾಬಿಕ್ಕಿ!

ಕನ್ನಡದ ಬಗ್ಗೆ ಸಾಕಷ್ಟು ಅಭಿಮಾನ ಇಟ್ಟುಕೊಂಡಿರುವ ಕಾರುಣ್ಯ ದುಬೈನಲ್ಲೂ ಕನ್ನಡದ ಕಂಪನ್ನು ಪಸರಿಸಿದ್ದಾರೆ. ಕಾರುಣ್ಯ ಮತ್ತು ಅವರ ಸಹೋದರಿಯ ಕನ್ನಡದ ಹಾಡಿನ ಡ್ಯಾನ್ಸ್‌ಗೆ ನೋಡುಗರು ಫಿದಾ ಆಗಿದ್ದಾರೆ.

ಕಾರುಣ್ಯ ರಾಮ್​

ಕಾರುಣ್ಯ ರಾಮ್​

  • Share this:
ಎಲ್ಲಾದರು ಇರು.. ಎಂತಾದರೂ ಇರು.. ಎಂದೆಂದಿಗೂ ನೀ ಕನ್ನಡವಾಗಿರು.. ಕನ್ನಡವೇ ಸತ್ಯ.. ಕನ್ನಡವೇ ನಿತ್ಯ.. ಹೌದು, ನಾವು ಎಲ್ಲೆ ಇದ್ದರು ನಮ್ಮ ಮಾತೃ ಭಾಷೆಯನ್ನು ಮರೆಯಬಾರದು..ಬೇರೆ ದೇಶಕ್ಕೂ ಹೋದರು ನಮ್ಮ ಭಾಷೆ(Language) ನೀಡುವ ಖುಷಿಯನ್ನು ಮತ್ಯಾವುದು ನೀಡುವುದಿಲ್ಲ. ಇದೀಗ ಬೇರೆ ದೇಶದಲ್ಲೂ ಕನ್ನಡ(Kannada) ಹಾಡಿಗೆ ನಮ್ಮ ಸ್ಯಾಂಡಲ್​ವುಡ್​(Sandalwood) ನಟಿ ಭರ್ಜರಿ ಸ್ಟೆಪ್ಸ್​ ಹಾಕಿ ಸೌಂಡ್​ ಮಾಡಿದ್ದಾರೆ. ಹೌದು, 'ವಜ್ರಕಾಯ', 'ಕಿರಗೂರಿನ ಗಯ್ಯಾಳಿಗಳು', ಮುಂತಾದ ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಕಾರುಣ್ಯ(Karunya Ram) ಈಗ ಸುದ್ದಿಯಲ್ಲಿದ್ದಾರೆ. ಕಿರುತೆರೆ ರಿಯಾಲಿಟಿ ಶೋಗಳು ಹಾಗೂ ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವ ಕಾರುಣ್ಯ ಅವರಿಗೆ ಪ್ರವಾಸ ಹೋಗುವುದು ಎಂದರೇ ತುಂಬ ಇಷ್ಟ. ಅದರಂತೆ ಕಾರುಣ್ಯ ಇತ್ತೀಚೆಗೆ ದುಬೈ(Dubai) ಪ್ರವಾಸ ಮಾಡಿದ್ದಾರೆ. ಕುಟುಂಬ ಸಮೇತ ದುಬೈಗೆ ಹಾರಿರುವ ಕಾರುಣ್ಯ, ಸಖತ್​ ಎಂಜಾಯ್(Enjoy)​ ಮಾಡುತ್ತಿದ್ದಾರೆ. ಕನ್ನಡದ ಬಗ್ಗೆ ಸಾಕಷ್ಟು ಅಭಿಮಾನ ಇಟ್ಟುಕೊಂಡಿರುವ ಕಾರುಣ್ಯ ದುಬೈನಲ್ಲೂ ಕನ್ನಡದ ಕಂಪನ್ನು ಪಸರಿಸಿದ್ದಾರೆ. ಕಾರುಣ್ಯ ಮತ್ತು ಅವರ ಸಹೋದರಿಯ ಕನ್ನಡದ ಹಾಡಿನ ಡ್ಯಾನ್ಸ್‌ಗೆ ನೋಡುಗರು ಫಿದಾ ಆಗಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸೌಂಡ್​ ಮಾಡುತ್ತಿದೆ. ಕಾರುಣ್ಯ ಅವರ ಕನ್ನಡ ಅಭಿಮಾನ ಕಂಡು ಕನ್ನಡಿಗರು ಫುಲ್​ ದಿಲ್​ಖುಷ್​ ಆಗಿದ್ದಾರೆ. 

ಟಗರು ಬಂತು ಟಗರು ಹಾಡಿಗೆ ಸ್ಟೆಪ್ಸ್​ ಹಾಕಿದ ಕಾರುಣ್ಯ!

ಕೆಲದಿನಗಳ ಹಿಂದೆಯೇ ತಂದೆ ತಾಯಿ ಮತ್ತು ತಂಗಿಯ ಜೊತೆಗೆ ದುಬೈ ಹಾರಿರುವ ಕಾರುಣ್ಯ, ಶಿವರಾಜ್‌ಕುಮಾರ್ ಅಭಿನಯದ ಬ್ಲಾಕ್‌ಬಸ್ಟರ್ ಹಿಟ್ ಚಿತ್ರದ ಟಗರು ಬಂತು ಟಗರು ಹಾಡಿಗೆ ಜಬರ್ದಸ್ತ್‌ ಆಗಿ ಡ್ಯಾನ್ಸ್ ಮಾಡಿದ್ದಾರೆ. ದುಬೈ ಪ್ರವಾಸಿಗರ ಸಮ್ಮುಖದಲ್ಲೆ ಕಾರುಣ್ಯ ಮತ್ತು ಸಹೋದರಿ ಸ್ಟೆಪ್ಸ್ ಹಾಕಿದ್ದು, ಎಲ್ಲೆ ಹೋದರೂ ಕನ್ನಡದ್ದೇ ಹವಾ ಎಂದು ಡೈಲಾಗ್ ಕೂಡ ಹೊಡೆದಿದ್ದಾರೆ. ಇನ್ನೂ ಕಾರುಣ್ಯ ಹಾಗೂ ಅವರ ತಂಗಿ ಡ್ಯಾನ್ಸ್​ಗೆ ಅಲ್ಲಿ ನೆರೆದಿದ್ದವರೆಲ್ಲ ಫಿದಾ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಕೂಡ ಸಖತ್​ ವೈರಲ್ ಆಗುತ್ತಿದೆ.
View this post on Instagram


A post shared by Karunya (@ikarunya)

ಇದನ್ನು ಓದಿ : ಡೈರೆಕ್ಟ್​​ ಡಿಸ್ನಿ+ಹಾಟ್ ಸ್ಟಾರ್​​ನಲ್ಲಿ​ `ಮಾರನ್​’ ರಿಲೀಸ್.. ಧನುಷ್​ ಅಭಿಮಾನಿಗಳು ಫುಲ್​ ಖುಷ್​!

ಎಲ್ಲೆ ಇರಲಿ ಕನ್ನಡ ನಮ್ಮ ಹೆಮ್ಮೆ ಎಂದ ನಟಿ!

ಇನ್ನೂ ಈ ವಿಡಿಯೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಕಾರುಣ್ಯ ರಾಮ್​ ಪೋಸ್ಟ್​ ಮಾಡಿದ್ದಾರೆ. ‘ಭಾರತ, ಕರ್ನಾಟಕ, ಕನ್ನಡ, ಹಾಡು, ನಾವು ಕನ್ನಡಿಗರು. ವಿದೇಶದಲ್ಲಿರಲಿ, ಸಮುದ್ರದ ಮಧ್ಯವಿರಲಿ ನಮ್ಮ ಕನ್ನಡ ನಮ್ಮ ಹೆಮ್ಮೆ. ದಯಬೈನಲ್ಲು ನಮ್ದೆ ಹವಾ ಜೈ ಭಾರತಾಂಬೆ" ಎಂದು ಬರೆದುಕೊಂಡಿದ್ದಾರೆ. ಕಾರುಣ್ಯ ಅವರ ಈ ವಿಡಿಯೊವನ್ನು ಹಲವರು ಶೇರ್ ಮಾಡಿಕೊಂಡಿದ್ದು, ಖುಷಿ ವ್ಯಕ್ತಪಡಿಸಿದ್ದಾರೆ. ನಿಮ್ಮ ಕನ್ನಡ ಪ್ರೇಮಕ್ಕೆ ಸಲಾಂ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ. ವಜ್ರಕಾಯ ಸಿನಿಮಾದಲ್ಲಿ ಶಿವಣ್ಣ ಜೊತೆ ನಟಿಸಿ ನಾಯಕಿ ನಟಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದರು.

ಇದನ್ನು ಓದಿ : ರಾಧಿಕಾ ಪಂಡಿತ್​ ಫೋನ್​ನಲ್ಲಿ ಸೇವ್​ ಆಗಿರೋ `ಡೊಲ್ಲಾ’ ನಂಬರ್​ ಯಾರದ್ದು​ ಗೊತ್ತಾ? ನೋಡಿದ್ರೆ ಶಾಕ್​ ಆಗ್ತೀರ!

ಕೇವಲ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ಕಾರುಣ್ಯಾ ರಾಮ್ ಮನೋಜ್ಞ ನಟನೆಯ ಮೂಲಕ ಬಣ್ಣದ ಲೋಕದಲ್ಲಿ ಛಾಪು ಮೂಡಿಸಿದ್ದಾರೆ. ಮುಂದೆ ದೊಡ್ಡ ಸಿನಿಮಾಗಳಲ್ಲಿ ಅವಕಾಶ ನಿರೀಕ್ಷೆಯಲ್ಲಿ ಕಾರುಣ್ಯ ರಾಮ್ ಇದ್ದಾರೆ. ಮೊದಲಿನಿಂದಲೂ ಭಾಷೆ ವಿಚಾರದಲ್ಲಿ ಕಾರಣ್ಯ ರಾಮ್​ ಮೊದಲು ಇರುತ್ತಾರೆ. ಇದೀಗ ಬೇರೆ ದೇಶದಲ್ಲೂ ಕನ್ನಡ ಹಾಡು ಹಾಕಿಸಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತದ್ದಾರೆ.
Published by:Vasudeva M
First published: