• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Love in the Cinema: ಬೆಳ್ಳಿ ಪರದೆಯ ಪ್ರೇಮದ ಕಥೆಗಳು-ಕ್ಲಾಸಿಕ್ ಚಿತ್ರದಲ್ಲೂ ಒಲವೇ ಜೀವನ ಸಾಕ್ಷಾತ್ಕಾರ!

Love in the Cinema: ಬೆಳ್ಳಿ ಪರದೆಯ ಪ್ರೇಮದ ಕಥೆಗಳು-ಕ್ಲಾಸಿಕ್ ಚಿತ್ರದಲ್ಲೂ ಒಲವೇ ಜೀವನ ಸಾಕ್ಷಾತ್ಕಾರ!

ತ್ರಿಕೋನ ಪ್ರೇಮಕ್ಕೆ ಸಾಕ್ಷಿ ನಮ್ಮೂರ ಮಂದಾರ ಹೂವೇ!

ತ್ರಿಕೋನ ಪ್ರೇಮಕ್ಕೆ ಸಾಕ್ಷಿ ನಮ್ಮೂರ ಮಂದಾರ ಹೂವೇ!

ಪ್ರೇಮಿಗಳ ದಿನ ಪ್ರೀತಿ-ಪ್ರೇಮ ತುಂಬಿದ ಸಿನಿಮಾಗಳ ಚಿತ್ರಣ. ಬೆಳ್ಳಿ ತೆರೆ ಮೇಲೆ ಪ್ರೀತಿಯ ಮಳೆ ಸುರಿಸಿದ ಮುಂಗಾರು ಮಳೆ, ಹುಚ್ಚು ಹಿಡಿದ ಕಿಚ್ಚನ ಹುಚ್ಚ ಸಿನಿಮಾ, ತ್ರಿಕೋನ ಪ್ರೇಮ ಕಥೆಯ ನಮ್ಮೂರ ಮಂದಾರ ಹೂವೇ ಪರಿಮಳ. ದುನಿಯಾದಲ್ಲಿ ಒಲವು ಹರಿಸಿದ ಡೈರೆಕ್ಟರ್ ಸೂರಿ, ಇವರೆಲ್ಲಾ ಒಲವಿನ "ಸಾಕ್ಷಾತ್ಕಾರ" ಇಲ್ಲಿದೆ ನೋಡಿ.

ಮುಂದೆ ಓದಿ ...
  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

ಒಲವೇ ಜೀವನ ಸಾಕ್ಷಾತ್ಕಾರ. ಪ್ರೀತಿ (Kannada Love Base Movie) ಅನ್ನೋದು ಅಮರ. ಇದು ಎಲ್ಲರಿಗೂ ಧಕ್ಕೋದಿಲ್ಲ ಅನ್ನೋದು ಅಷ್ಟೇ ಸತ್ಯ. ಚಂದನವನದ ಬೆಳ್ಳಿ ಪರದೆ ಮೇಲೆ ಅನೇಕ ಚಿತ್ರಗಳು ಬಂದಿವೆ. ಈಗಲೂ ಬರ್ತಾನೇ ಇವೆ. ಪ್ರತಿ (Love Story On Sliver Screen) ನಿರ್ದೇಶಕನ ಕಲ್ಪನೆಯಲ್ಲಿ ಪ್ರೀತಿ ಬೇರೆ ಬೇರೆ ರೀತಿ ಕಂಡಿದೆ. ಅದನ್ನ ಸಿಲ್ವರ್ ಸ್ಕ್ರೀನ್ ಮೇಲೆ ತಂದು ಸೋತವರು ಕಡಿಮೆ. ಪ್ರೀತಿಯನ್ನ ಅಷ್ಟೇ ಗಾಢವಾಗಿ ಮನಮುಟ್ಟುವಂತೆ ಕೊಟ್ಟ ಸಿನಿಮಾಗಳು ಸಾಕಷ್ಟಿವೆ. ಅವುಗಳಲ್ಲಿ ಕೆಲವು ಸಿನಿಮಾಗಳ ಬಗ್ಗೆ ನಿಮಗೆ ಇಲ್ಲಿ ಹೇಳುತ್ತೇವೆ. ಜೀವನದಲ್ಲಿ (Kannada Movies) ಒಲವು ಎಷ್ಟು ಮುಖ್ಯವೋ, ಅದು ಅತಿಯಾದ್ರೆ ಪ್ರೀತಿ ಅಮರ ತ್ಯಾಗ ಮಧುರ ಅಂತ ಹೇಳಬೇಕು ಅನ್ನೋ ಡೈಲಾಗ್​ಗಳೂ ಇವೆ.


ಪ್ರೀತಿಯ ಅಲೆಯಲ್ಲಿ ತೇಲಿ ಹುಚ್ಚನಾದವನ ಕಥೆನೂ (Sandalwood Movies) ಇಲ್ಲಿ ಮನ ಮಟ್ಟಿದೆ. ಪ್ರೀತಿಗಾಗಿಯೇ ವಿಷ ಸೇವಿಸಿದವರ ವ್ಯಥೆಗಳು ಇಲ್ಲಿ ನಿಮ್ಮ ಜೀವನ ಹಿಂಡುತ್ತವೆ.


ಒಲವೇ ಜೀವನ-ಜೀವನವೇ ಒಲವು-ಇದುವೇ ಸಾಕ್ಷಾತ್ಕಾರ!
ಪ್ರೀತಿ ಪ್ರೇಮದ ವಿಚಾರದಲ್ಲಿ ಎಲ್ಲ ಕಾಲಕ್ಕೂ ಒಂದು ಸಿನಿಮಾ ಮೇಲ್ಪಂಕ್ತಿಯಲ್ಲಿ ನಿಲ್ಲುತ್ತದೆ. ಕಪ್ಪು-ಬಿಳುಪು ಜಮಾನಾದಲ್ಲಿಯೇ ಆ ಚಿತ್ರದ ಒಲವಿನ ಸಾಕ್ಷಾತ್ಕಾರದ ಕಥೆ ಹೇಳಿತ್ತು.


Sandalwood Kannada top Love Base Movies Secrets
ಅಮೃತ ವರ್ಷಿಣಿ ಎಂಬ ಪ್ರೇಮಾಮೃತ ಕಥೆ!


ಡಾಕ್ಟರ್ ರಾಜ್​ಕುಮಾರ್​​ ಮತ್ತು ಜಮುನಾ ಅಭಿನಯದ ಈ ಚಿತ್ರಕ್ಕೆ ಶೀರ್ಷಿಕೆ ಕೂಡ ತುಂಬಾ ಚೆನ್ನಾಗಿಯೇ ಇತ್ತು. ಒಲವೇ ಜೀವನ ಸಾಕ್ಷಾತ್ಕಾರ ಅನ್ನೋದೇ ಇಡೀ ಚಿತ್ರದ ಥೀಮ್ ಆಗಿತ್ತು. ಅದಕ್ಕೆ ಈ ಚಿತ್ರಕ್ಕೆ ಸಾಕ್ಷಾತ್ಕಾರ ಅನ್ನುವ ಟೈಟಲ್​ನ್ನ ಡೈರೆಕ್ಟರ್ ಪುಟ್ಟಣ್ಣ ಕಣಗಾಲ್ ಇಟ್ಟಿದ್ದರು.




ಒಲವೇ ಜೀವನ ಸಾಕ್ಷಾತ್ಕಾರ-ಇದುವೇ ಜೀವನದ ಅಸಲಿ ಮಂತ್ರ
ಕಣಗಾಲ್ ಪ್ರಭಾಕರ್ ಶಾಸ್ತ್ರಿಗಳು ಈ ಚಿತ್ರಕ್ಕೆ ಕಥೆ ಮಾಡಿದ್ದರು. ಕಥೆ ಕೂಡ ಅವರೇ ಬರೆದಿದ್ದರು. ಅದೇ ಕಥೆಯನ್ನ ಡೈರೆಕ್ಟರ್ ಪುಟ್ಟಣ್ಣ ಕಣಗಾಲ್ ಬೆಳ್ಳಿ ತೆರೆ ಮೇಲೆ ತುಂಬಾ ಪರಿಣಾಮಕಾರಿಯಾಗಿ ಮೂಡಿಸಿದ್ದರು. ಎಂ.ರಂಗರಾವ್ ಸಂಗೀತದ ಒಲವೇ ಜೀವನ ಸಾಕ್ಷಾತ್ಕಾರ ಅನ್ನೋ ಹಾಡು ಇಡೀ ಚಿತ್ರದ ಶಕ್ತಿಯನ್ನ ಕಟ್ಟಿಕೊಟ್ಟಿತ್ತು.


ಒಲವಿನ ಪರಿ ಹೋಗ್ತಾ ಹೋಗ್ತಾ ಬದಲಾಯಿತು. ಕನ್ನಡದ ಬೆಳ್ಳಿ ಪರದೆ ಮೇಲೆ ಯುವ ಡೈರೆಕ್ಟರ್ಸ್ ಪ್ರೀತಿಯ ತೀವ್ರತೆಯನ್ನ ಬೇರೆ ರೀತಿ ಹೇಳ್ತಾ ಹೋದ್ರು, ಮುಂಗಾರು ಮಳೆ ಏನೂ ಕಡಿಮೇನೆ. ಇಲ್ಲಿ ಪ್ರೀತಿಯ ಉತ್ತುಂಗ ಇತ್ತು. ಪ್ರೀತಿ ಅಮರ, ತ್ಯಾಗ ಅಮರ ಅನ್ನೋ ಸತ್ಯವನ್ನ ಡೈರೆಕ್ಟರ್ ಯೋಗರಾಜ್ ಭಟ್ಟರು ಹೇಳಿದ್ದರು.


ಪ್ರೀತಿಯ ಮುಂಗಾರು ಮಳೆಯಲ್ಲಿ ಮಿಂದೆದ್ದ ಕನ್ನಡ ಪ್ರೇಕ್ಷಕರು
ಚಿತ್ರದ ಈ ಒಂದು ಸಂದೇಶವನ್ನ ಅದೆಷ್ಟು ಜನ ಒಪ್ಪಿದರೋ ಏನೋ. ಆದರೆ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪೂಜಾ ಗಾಂಧಿಯ ಕಥೆಯನ್ನ ಜನ ಒಪ್ಪಿದರು. ಬಾಲಿವುಡ್​ ಗಾಯಕ ಸೋನು ನಿಗಮ್ ಹಾಡಿದ ಅನಿಸುತಿದೆ ಯಾಕೋ ಇಂದು ಅನ್ನೋ ಹಾಡು ಎಲ್ಲರ ನಾಡಿ ಮಿಡಿತವೇ ಆಗಿ ಬಿಡ್ತು.


ಮನೋ ಮೂರ್ತಿಗಳ ಸಂಗೀತದಲ್ಲಿ ಅದ್ಭುತ ಹಾಡುಗಳನ್ನ ಯೋಗರಾಜ್ ಭಟ್ ಮತ್ತು ಜಯಂತ್ ಕಾಯ್ಕಿಣಿ, ಕವಿರಾಜ್, ಹೃದಯ ಶಿವ ರಚಿಸಿಕೊಟ್ಟಿದ್ದರು. ಜನ ಚಿತ್ರದ ಪ್ರತಿ ಹಾಡನ್ನೂ ಒಲವಿನ ದೃಷ್ಟಿಯಲ್ಲಿಯೇ ನೋಡಿದ್ರು.


ತ್ರಿಕೋನ ಪ್ರೇಮಕ್ಕೆ ಸಾಕ್ಷಿ ನಮ್ಮೂರ ಮಂದಾರ ಹೂವೇ!
ಸುನಿಲ್ ಕುಮಾರ್ ಇದೇ ಪ್ರೀತಿಯನ್ನ ಬೇರೆ ರೀತಿ ಹೇಳಿದರು. ಪ್ರೀತಿಯಲ್ಲಿ ತ್ರಿಕೋನ ಪ್ರೀತಿ ಅನ್ನೋದು ಇರುತ್ತದೆ. ಆದರೆ ಅದು ಸಕ್ಸಸ್ ಆಗೋದಿಲ್ಲ ಅಂತಲೇ ಹೇಳಿದ್ದರು. ಶಿವರಾಜ್ ಕುಮಾರ್, ರಮೇಶ್ ಅರವಿಂದ್ ಮತ್ತು ನಟಿ ಪ್ರೇಮ ಇಲ್ಲಿ ತ್ರಿಕೋನ ಪ್ರೀತಿಯ ಕಥೆ ಹೇಳಿದ್ದರು.


ಇಳೆಯರಾಜ ಸಂಗೀತದಲ್ಲಿ ಅದ್ಭುತ ಹಾಡುಗಳು ಇಲ್ಲಿ ಪ್ರೀತಿಯ ವಿವಿಧ ಭಾವಗಳನ್ನ ಮೂಡಿಸಿದ್ದವು. ಪ್ರೀತಿ ಎರಡೂ ಕಡೆಯಿಂದಲೂ ಆಗಬೇಕು. ಏಕಮುಖ ಪ್ರೀತಿ ಸಲ್ಲದು ಅನ್ನೋದನ್ನ ಇಲ್ಲಿ ಕೊನೆಗೆ ಸಂದೇಶ ರೂಪದಲ್ಲಿ ಹೇಳಲಾಗಿತ್ತು.


ರೌಡಿಗಳ ಲೋಕದಲ್ಲಿ ಪ್ರೀತಿ-ಪ್ರೇಮದ ದುನಿಯಾ!
ದುನಿಯಾ ಚಿತ್ರದಲ್ಲಿ ಪ್ರೀತಿ-ಪ್ರೇಮದ ಕಥೆಯನ್ನ ರೌಡಿಸಂ ಲೋಕದಲ್ಲಿಯೇ ನಿಂತು ಡೈರೆಕ್ಟರ್ ಸೂರಿ ಹೇಳಿದ್ದರು. ದುನಿಯಾ ವಿಜಯ್ ಈ ಚಿತ್ರದ ಮೂಲಕವೇ ಕನ್ನಡಿಗರಿಗೆ ಅಪ್ಪಟ ದೇಶಿ ಲವ್ ಆಗಿ ಕಾಣಿಸಿಕೊಂಡರು. ಅಪ್ಪಟ ರಗಢ್ ಲವ್ ಆಗಿಯೇ ಕಾಣಿಸಿಕೊಂಡರು.


ಪ್ರೀತಿ-ಪ್ರೇಮದ ಆಳ ಮತ್ತು ಎತ್ತರವನ್ನ ಸಂಗೀತ ನಿರ್ದೇಶಕ ವಿ.ಮನೋಹರ್ ಇಲ್ಲಿ ಅದ್ಭುತವಾಗಿಯೇ ಸಂಗೀತದ ಮೂಲಕವೂ ಹೇಳಿದ್ದರು. ಚಿತ್ರದ ಹಾಡುಗಳು ಕೇಳಿದ್ರೆ ಈಗಲೂ ದುನಿಯಾ ಚಿತ್ರದ ರಶ್ಮಿ ಪಾತ್ರ ಮತ್ತು ದುನಿಯಾ ವಿಜಯ್ ಪಾತ್ರಗಳು ಕಣ್ಮುಂದೆ ಇದ್ದವು.


ಆದರೆ ಡೈರೆಕ್ಟರ್ ಸೂರಿ ಇಲ್ಲಿ ಪ್ರೇಮಿಗಳನ್ನ ಉಳಿಸಲಿಲ್ಲ ಅನ್ನೋದೇ ಸತ್ಯ. ಅದುವೇ ಇಡೀ ಚಿತ್ರದ ಸಕ್ಸಸ್​ಗೂ ಕಾರಣ ಆಯಿತು ಅನ್ನೋದೇ ಎಲ್ಲ ಕಾಲದ ಸತ್ಯವೇ ಆಗಿದೆ.
ಅಭಿನಯದ ಚಕ್ರವರ್ತಿ ಕಿಚ್ಚ ಸುದೀಪ್ ಬೆಳ್ಳಿ ತೆರೆ ಮೇಲೆ ಅಭಿನಯಸಿದ್ದ ಆ ಪ್ರೇಮ ಕಥೆ ಎಲ್ಲ ಹೃದಯವನ್ನೂ ಕಲುಕಿತ್ತು. ಪ್ರೀತಿಸಿದ್ರೆ ಹೀಗೆ ಆಗೋದು ಹುಚ್ಚೇ ಹಿಡಿದು ಬಿಡುತ್ತದೆ ಅನ್ನೋದನ್ನ ನಟ-ನಿರ್ದೇಶಕ ಓಂ ಪ್ರಕಾಶ್ ರಾವ್ ಈ ಚಿತ್ರದಲ್ಲಿ ಹೇಳಿದ್ದರು.


ಕಿಚ್ಚನ ಅಗಾಧ ಪ್ರೀತಿಗೆ "ಹುಚ್ಚು" ಹಿಡಿಸಿದ ಒಲವಿನ ಕಥೆ!
ಹಾಗೆ ಈ ಚಿತ್ರಕ್ಕೆ ಹುಚ್ಚ ಅನ್ನುವ ಶೀರ್ಷಿಕೆಯನ್ನೂ ಇಟ್ಟಿದ್ದರು. ರಾಜೇಶ್ ರಾಮ್​ನಾಥ್ ಸಂಗೀತದಲ್ಲಿ, ಕೆ.ಕಲ್ಯಾಣ್ ಸಾಹಿತ್ಯದಲ್ಲಿ, ಹುಚ್ಚ ಚಿತ್ರದ ನಾಯಕ ಕಿಚ್ಚ ಸುದೀಪ್ ಅಮೋಘವಾಗಿಯೇ ಅಭಿನಯಿಸಿದ್ದರು.


ಪ್ರೇಯಸಿಯಾಗಿ ನಟಿ ರೇಖಾ ಕಾಣಿಸಿಕೊಂಡರು. ಇವರ ಜೋಡಿಯ ಈ ಚಿತ್ರ ಇದುವೇ ನೋಡಿ ಪ್ರೀತಿಯ ಪರಿ ಅಂತಲೂ ಪ್ರೇಮಿಗಳಿಗೆ ಅಂದು ಹೊಸ ಪಾಠವನ್ನೆ ಹುಚ್ಚ ಚಿತ್ರ ಹೇಳಿಬಿಟ್ಟಿತ್ತು.


ಅಮೃತ ವರ್ಷಿಣಿ ಚಿತ್ರದಲ್ಲಿ ಪ್ರೀತಿಯ ಪರಿ ಬೇರೆನೆ ಇತ್ತು. ಡೈರೆಕ್ಟರ್ ದಿನೇಶ್ ಬಾಬು ಅವರು ಇಲ್ಲಿ ನಿಜಕ್ಕೂ ಬೇರೆ ಕಥೆಯನ್ನ ಹೇಳಿದ್ದರು. ಪ್ರೀತಿ-ಪ್ರೇಮ ಅಂತ ಇರೋ ಸುಹಾಸಿನಿ ಮತ್ತು ಶರತ್ ಬಾಬು ಅಭಿನಯಿಸಿದ್ದರು.


ಅಮೃತ ವರ್ಷಿಣಿ ಎಂಬ ಪ್ರೇಮಾಮೃತ ಕಥೆ!
ಇವರ ಪ್ರೀತಿ ತುಂಬಿದ ದಾಂಪತ್ಯ ಜೀವನದಲ್ಲಿ ಗೆಳೆಯನಾಗಿ ಬರುವ ರಮೇಶ್ ಅರವಿಂದ್ ಅವರು ಯಾರು ನಿರೀಕ್ಷೆ ಮಾಡದೇ ಇರೋ ವಿಲನ್ ಪಾತ್ರದಲ್ಲಿಯೇ ಕಾಣಿಸಿಕೊಂಡ್ರು. ಪ್ರೀತಿ ಅನ್ನೋದು ಯಾರ ಮೇಲೆ ಯಾವಾಗಲೂ ಹುಟ್ಟಿ ಬಿಡಬಹುದು ಅನ್ನುವುದು ಈ ಚಿತ್ರದ ಮೂಲ ಎಳೆ ಆಗಿತ್ತು.


Sandalwood Kannada top Love Base Movies Secrets
ಕಿಚ್ಚನ ಅಗಾಧ ಪ್ರೀತಿಗೆ "ಹುಚ್ಚು" ಹಿಡಿಸಿದ ಒಲವಿನ ಕಥೆ!


ಆದರೆ ಅದೇ ಪ್ರೀತಿ ಅತೀರೇಕಕ್ಕೆ ಹೋದ್ರೆ, ಜೋಡಿ ಹಕ್ಕಿಯನ್ನೆ ಒಂಟಿ ಮಾಡೋ ದುಷ್ಟ ಮನಸ್ಥಿತಿ ಕೂಡ ಇರುತ್ತದೆ ಅನ್ನುವುದನ್ನ ಕೂಡ ರಮೇಶ್ ಅರವಿಂದ್ ಅವರ ಪಾತ್ರದ ಮೂಲಕ ಇಲ್ಲಿ ನೋಡಬಹುದು. ಇಂತಹ ಪ್ರೇಮ ಕಥೆ ಚಿತ್ರ ಇಲ್ಲಿವರೆಗೂ ಬಂದಿಲ್ಲ ಅಂತಲೇ ಹೇಳಬಹುದು.


ಅಮೃತ ವರ್ಷಿಣಿಯಲ್ಲಿ ಪ್ರೀತಿ-ಪ್ರೇಮ್ ವಿಭಿನ್ನ ಮೋಹ!
ಕೆ.ಕಲ್ಯಾಣ್ ಸಾಹಿತ್ಯದಲ್ಲಿ ಅಮೃತ ವರ್ಷಿಣಿ ಚಿತ್ರಕ್ಕೆ ಸಂಗೀತ ನಿರ್ದೇಶಕ ದೇವ ಒಳ್ಳೆ ಹಾಡುಗಳನ್ನ ಕೊಟ್ಟಿದ್ದರು. ಪ್ರೀತಿ-ಪ್ರೇಮದ ಜೊತೆಗೆ ಪ್ರೀತಿ ತುಂಬಿದ ಹಾಡುಗಳು ಎಲ್ಲರ ಮನ ತಟ್ಟಿದ್ದವು.


ಇದನ್ನೂ ಓದಿ: Kiara-Sidharth: ಕಿಯಾರಾ-ಸಿದ್ಧಾರ್ಥ್ ಅದ್ಧೂರಿ ಆರತಕ್ಷತೆ; ಆಲಿಯಾ, ಕರೀನಾ ಕಪೂರ್ ಸೇರಿದಂತೆ ಅನೇಕ ಬಾಲಿವುಡ್ ಗಣ್ಯರ ಸಮಾಗಮ


ಮೈ ಆಟೋಗ್ರಾಫ್ ಚಿತ್ರದಲ್ಲಿ ಸುದೀಪ್ ಅವರು ಒಲವಿನ ವಿವಿಧ ಪರಿಯನ್ನ ಕಟ್ಟಿಕೊಟ್ಟಿದ್ದರು. ಹೀಗೆ ಕನ್ನಡದಲ್ಲಿ ಪ್ರೀತಿ-ಪ್ರೇಮ ಕಥೆಯನ್ನ ನೋಡಬಹುದಾಗಿದೆ. ಆದರೆ ಕ್ರೇಜಿ ಸ್ಟಾರ್​ ರವಿಚಂದ್ರನ್ ಅವರು ಸೃಷ್ಟಿಸಿದ್ದ ಪ್ರೇಮಲೋಕಕ್ಕೆ ಯಾರೂ ಸಾಟಿನೇ ಇಲ್ಲ ಬಿಡಿ ಅಂತಲೇ ಹೇಳಬಹುದು ನೋಡಿ.

First published: