news18-kannada Updated:September 3, 2020, 9:02 PM IST
ಎಸ್ ಪಿ ಬಾಲಸುಬ್ರಹ್ಮಣ್ಯಂ
ಐದು ದಶಕಗಳ ಕಾಲ, 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನ ಹಾಡಿರುವ ಗಾನಗಾರುಡಿಗ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಗಂಭೀರ ಸ್ಥಿತಿಯಲ್ಲಿದೆ. ಖಾಸಗಿ ಆಸ್ಪತ್ರೆಯ ಐ.ಸಿ.ಯುವಿನಲ್ಲಿ ಮಹಾನ್ ಸಾಧಕ ಎಸ್.ಪಿ.ಬಾಲಸುಬ್ರಹ್ಮಣಂ ಚಿಕಿತ್ಸೆ ಪಡಿಯುತ್ತಿದ್ದಾರೆ. ಇಂತಹ ಎಸ್.ಪಿ.ಬಿ ಆದಷ್ಟು ಬೇಗ ಹುಷಾರಾಗಿ ಬರಲಿ ಅಂತ ಕನ್ನಡ ಚಿತ್ರರಂಗ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿತು. ಪ್ರತಿದಿನ ಲಕ್ಷಾಂತರ ಅಭಿಮಾನಿಗಳು ಎಸ್ ಪಿ ಬಿ ಅವರ ಆರೋಗ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಇಂದು ಕನ್ನಡ ಚಿತ್ರರಂಗದ ಕಲಾವಿದರೆಲ್ಲಾ ಸೇರಿ ಎಸ್.ಪಿ. ಬಾಲಸುಬ್ರಹ್ಮಣಂಗಾಗಿ ಪ್ರಾರ್ಥಿಸಿದರು. ಗಾನಗಾರುಡಿಗ ಆದಷ್ಟು ಬೇಗ ಹುಷಾರಾಗಲಿ ಅಂತ ಮೃತ್ಯುಂಜಯ ಮಂತ್ರ ಪಠಿಸಿದರು. ಯೂನಿವರ್ಸಲ್ ಗಾಯಕನನ್ನ ಪಂಚಭೂತಗಳಿಗೆ ಹೋಲಿಸಿ ಹಂಸಲೇಖ ಹಾಡು ಬರೆದು ಗಗನ ಚುಕ್ಕಿ ಭರಚುಕ್ಕಿ ಹಿನ್ನಲೆಯಲ್ಲಿ ಚಿತ್ರೀಸಿದ್ದಾರೆ. ಅದನ್ನ ಕಾರ್ಯಕ್ರಮದಲ್ಲಿ ಪ್ಲೇ ಮಾಡಲಾಯಿತು. ಇದೇ ವೇಳೆ ಎಸ್.ಪಿ.ಬಿಯಂತಹ ಗಾಯಕ ಐನೂರು ವರ್ಷಗಳಾದರೂ ಇನ್ನೊಬ್ಬ ಗಾಯಕ ನಮಗೆ ಸಿಗೋದಿಲ್ಲ ಎಂದು ಹಂಸಲೇಖ ಹೇಳಿದರು.
ಇನ್ನು ಎಸ್.ಪಿ.ಬಿ ಜೊತೆ ತಾನು ವೇದಿಕೆ ಹಂಚಿಕೊಂಡಿರೋದರ ಬಗ್ಗೆ, ಜೊತೆಯಲ್ಲಿ ಕೆಲಸ ಮಾಡಿರೋರ ಬಗ್ಗೆ ಎಸ್.ಪಿ.ಬಿಗಿರೋ ಗೌರವದ ಬಗ್ಗೆ ವಿಜಯ್ ಪ್ರಕಾಶ್ ಕೊಂಡಾಡಿದರು.
ಎಸ್.ಪಿ.ಬಿ ನನಗೂ ಒಂದು ಹಾಡು ಹಾಡಿದ್ದಾರೆ ಅನ್ನೋದೆ ನನ್ನ ಖುಷಿ. ಅವರಿಗಾಗಿ ಇಲ್ಲಿ ಸೇರಿರೋದು ನಿಜಕ್ಕೂ ಸಂತೋಷವಾಗುತ್ತಿದೆ. ನಾವು ನನಗಾಗಿ ಕೇಳೋದಕ್ಕಿಂತ, ಬೇರೆಯವರಿಗಾಗಿ ಕೇಳಿಕೊಂಡಾಗ ದೇವರಿಗೆ ಬೇಗ ತಲುಪುತ್ತೆ. ಅದರಂತೆ ಎಸ್.ಪಿ.ಬಿ ಆದಷ್ಟು ಬೇಗ ಹುಷರಾಗಲಿ ಎಂದರು ನಟ ಯಶ್.
Published by:
Harshith AS
First published:
September 3, 2020, 8:42 PM IST