ಸ್ಯಾಂಡಲ್ವುಡ್ ನಟ ಚಿರಂಜೀವಿ ಸರ್ಜಾ ಇಂದು ಸಾವನಪ್ಪಿದ್ದಾರೆ. ನಿನ್ನೆ ಲಘು ಹೃದಯಘಾತದಿಂದಾಗಿ ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇಂದು ಚಿಕಿತ್ಸೆಗೆ ಸ್ಪಂದಿಸದೆ ಸಾವನಪ್ಪಿದ್ದಾರೆ. ಸ್ಯಾಂಡಲ್ನ ಅನೇಕ ತಾರೆಯರು, ನಿರ್ಮಾಪಕರು ನಟ ಚಿರಂಜೀವಿ ಸರ್ಜಾ ಅವರ ಸಾವಿಗೆ ಕಂಬನಿ ಮಿಡಿದಿದ್ದಾರೆ.
ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ನಿರ್ಮಾಪಕ ಕೆ ಮಂಜು ‘ ತುಂಬಾ ದುಃಖವಾಗುತ್ತಿದೆ. ಒಳ್ಳೆಯ ಹುಡುಗ, ನಿನ್ನೆ ಊಟಮಾಡುತ್ತಿರುವ ಸಮಯದಲ್ಲಿ ಲಘು ಹೃದಯಘಾತ ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಿದ್ದರು. ಆದರೀಗ ಅವರಿಲ್ಲ ಎಂಬು ಸುದ್ದಿ ಅರಗಿಸಿಕೊಳ್ಳಲಾಗುತ್ತಿಲ್ಲ ಎಂದು ಹೇಳಿದ್ದಾರೆ.
ನಟಿ ಸುಮಲತಾ ಅಂಬರೀಷ್ ಅವರು ಟ್ವೀಟ್ ಮಾಡಿದ್ದು, ಬೇಸರವನ್ನು ಹೊರಹಾಕಿದ್ದಾರೆ. ಅತಿ ಚಿಕ್ಕ ವಯಸ್ಸಿನಲ್ಲೇ ನಮ್ಮನ್ನು ಅಗಲಿದ್ದು,ತುಂಬಾ ನೋವಿನ ಸಂಗತಿ. ನನ್ನ ಕುಟುಂಬಕ್ಕೂ ಅವರು ಅತೀ ಹತ್ತಿರದವರು.ಚಿರು ಅಗಲಿಕೆ ನನಗೆ , ಅಭಿಗೆ ಅಪಾರ ನೋವನ್ನುಂಟು ಮಾಡಿದೆ.ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ನೋವನ್ನು ಭರಿಸುವಶಕ್ತಿಯನ್ನು ಭಗವಂತ ನೀಡಲಿ ಎಂದು ಬರೆದುಕೊಂಡಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಟ್ವೀಟ್ ಮಾಡಿದ್ದು, ಶಾಕಿಂಗ್ ವಿಚಾರ ತಿಳಿದುಬಂತು ಚಿರಂಜೀವಿ ಸರ್ಜಾ ವಿಧಿವಶರಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ನಟ ಜಗ್ಗೇಶ್ ಕೂಡ ಟ್ವೀಟ್ ಮಾಡಿದ್ದಾರೆ. ನಂಬಲಾಗುತ್ತಿಲ್ಲಾ..ಹೇಳಲಾಗದ ನೋವು..ಏನಾಗುತ್ತಿದೆ ನನ್ನ ಚಿತ್ರರಂಗಕ್ಕೆ..ಅನ್ಯರ ಸಂತೋಷಕ್ಕೆ ನಟಿಸಿ ಬದುಕುವ ಜನ್ಮ ಕಲಾಬದುಕು..ಯಾವ ತಪ್ಪಿಗೆ ಈ ಶಿಕ್ಷೆ..!
ನಿನ್ನ ಆತ್ಮಕ್ಕೆ ಶಾಂತಿ ಕೋರಲು ಒಪ್ಪುತ್ತಿಲ್ಲಾ ನನ್ನಮನಸ್ಸು.ದೇವರೆ ಈ ಸಾವು ನ್ಯಾಯವೆ! ಎಂದು ಬರೆದುಕೊಂಡಿದ್ದಾರೆ.
ಇನ್ನು ನಿರ್ದೇಶಕ ಪವನ್ ಒಡೆಯರ್, ಸಿಂಪಲ್ ಸುನಿ, ನಟ ಸುದೀಪ್ ಪತ್ನಿ ಪ್ರಿಯಾ ರಾಧಾಕೃಷ್ಣನ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಚಿಕ್ಕ ಮಯಸ್ಸಿನಲ್ಲಿ ವಿಧಿವಶರಾದ ಚಿರಂಜೀವಿ ಸರ್ಜಾ ಬಗ್ಗೆ ಕಂಬನಿ ಮಿಡಿದಿದ್ದಾರೆ.
![]()
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ