ಈ ವಿಚಾರ ಪುರುಷರೊಂದಿಗೆ ಹಂಚಿಕೊಳ್ಳದಿರಿ!; ಮಹಿಳೆಯರಿಗೆ ಹರಿಪ್ರಿಯಾರಿಂದ ಇಂತಹದೊಂದು ಸಲಹೆ

ಸ್ಯಾಂಡಲ್​ವುಡ್​​ ನಟಿ ಹರಿಪ್ರಿಯಾ ತಮ್ಮ ಬ್ಲಾಗ್​ನಲ್ಲಿ ಮಹಿಳೆಯರಿಗೊಂದು ಗುಟ್ಟು ಹೇಳಿದ್ದಾರೆ. ಪುರುಷರೊಂದಿಗೆ ಆ ವಿಚಾರವನ್ನು ಮಾತ್ರ ಎಂದಿಗೂ ಹಂಚಿಕೊಳ್ಳದಿರಿ ಎಂದು ಸಲಹೆ ನೀಡಿದ್ದಾರೆ. ಏನದು ಗೊತ್ತಾ?

ಹರಿಪ್ರಿಯಾ

ಹರಿಪ್ರಿಯಾ

 • Share this:
  ಸ್ಯಾಂಡಲ್​ವುಡ್​​ ನಟಿ ಹರಿಪ್ರಿಯಾ ತಮ್ಮ ಬ್ಲಾಗ್​ನಲ್ಲಿ ಮಹಿಳೆಯರಿಗೊಂದು ಗುಟ್ಟು ಹೇಳಿದ್ದಾರೆ. ಪುರುಷರೊಂದಿಗೆ ಆ ವಿಚಾರವನ್ನು ಮಾತ್ರ ಎಂದಿಗೂ ಹಂಚಿಕೊಳ್ಳದಿರಿ ಎಂದು ಸಲಹೆ ನೀಡಿದ್ದಾರೆ. ಏನದು ಗೊತ್ತಾ?

  ಮಹಿಳೆಯರಿಗೆ ಎಲ್ಲವನ್ನು ಎದುರಿಸಲಬಲ್ಲ ತಾಕತ್ತು ಇರುತ್ತದೆ. ಆದರೆ ಕೆಲವರಿಗೆ ಜಿರಳೆಯನ್ನು ಕಂಡರೆ ಅಸಹ್ಯ ಹುಟ್ಟಿಕೊಳ್ಳುತ್ತದೆ. ಇನ್ನು ಕೆಲವರು ಜಿರಳೆ ಹತ್ತಿರ ಬಂದರೆ ಸಾಕು ಓಡಿ ಹೋಗುತ್ತಾರೆ. ನಾನು ಕೂಡ ಅಷ್ಟೇ ಜಿರಳೆಯನ್ನು ಕಂಡರೆ ಕೊಂಚ ಹೆದರುತ್ತೇನೆ.

  ಜಿರಳೆಗಳು ನೋಡಲು ಚಿಕ್ಕದಾಗಿದ್ದರು, ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಿರುವ ಮಹಿಳೆಯನ್ನು ಹೆದರಿಸಿಬಿಡುತ್ತವೆ. ಮಹಿಳೆಯರಿಗೂ ಕೂಡ ಎಂಥ ಪ್ರಾಣಿಗಳನ್ನು ಬೇಕಾದರೂ ಪಳಗಿಸುವ ಸಾಮರ್ಥ್ಯವಿದೆ. ದೊಡ್ಡ ಗಾತ್ರದ ಡೈನೊಸರ್​ ಬರಲಿ.. ಆದರೆ ಜಿರಳೆಯನ್ನು ಮಾತ್ರ ಪಳಗಿಸಲು ಅಸಾಧ್ಯವೆಂದು ಹೇಳಿದ್ದಾರೆ.

  ಜಿರಳೆಗಳನ್ನು ಕಂಡರೆ ನನಗೇಕೆ ಅಷ್ಟು ಭಯ, ಹೇಸಿಗೆ ಎಂದು ತಿಳಿಯುತ್ತಿಲ್ಲ. ಆದರೆ ಅದನ್ನು ಕಂಡಾಗ ಬರುವ ದ್ವೇಷಕ್ಕೆ ಕತ್ಸರಿಡಾಫೋಬಿಯಾ ಎಂದು ಕರೆಯಲಾಗುತ್ತದೆ ಎಂದಿದ್ದಾರೆ.

  ನಮ್ಮ ಫ್ಯಾಮಿಲಿಯಲ್ಲಿ ಹೆಚ್ಚಿನವರು ಜಿರಳೆಯನ್ನು ಕಂಡರೆ ಓಡುತ್ತಾರೆ. ಅದರಲ್ಲಿ ನಮ್ಮ ಅಮ್ಮ, ಚಿಕ್ಕಮ್ಮ ಕೂಡ ಜಿರಳೆಯನ್ನು ಕಂಡಾಗ ಓಡುತ್ತಿದ್ದರು. ಅವರಿಂದಾಗಿ ನನಗೂ ಜಿರಳೆಯನ್ನು ಕಂಡಾಗ ಭಯ ಹುಟ್ಟಿಕೊಂಡಿದೆ. ಇದಕ್ಕೆ ಅವರನ್ನೇ ಹೊಣೆ ಮಾಡುತ್ತೇನೆ.

  ಈ ವಿಚಾರವಾಗಿ ಮಹಿಳೆಯರಿಗೊಂದು ಸಣ್ಣ ಸಲಹೆ, ನೀವು ಜಿರಳೆಯನ್ನು ಕಂಡು ಹೆದರುತ್ತೀರಿ ಎಂಬ ವಿಚಾರವನ್ನು ಪುರುಷರೊಂದಿಗೆ ಎಂದಿಗೂ ಹೇಳಬೇಡಿ. ಅವರು ನಿಮ್ಮನ್ನು ಹೆದರಿಸಲು ಈ ತಂತ್ರವನ್ನು ಬಳಸಬಹುದು. ಹಿಂದೊಮ್ಮೆ ನನ್ನ ಸ್ನೇಹಿತರು ಜಿರಳೆಯನ್ನು ಹಿಡಿದುಕೊಂಡು ನನಗೆ ಭಯ ಹುಟ್ಟಿಸಿದ್ದರು. ಅದರ ಕಾಲುಗಳನ್ನು ಹಿಡಿದುಕೊಂಡು ನನ್ನ ಕಣ್ಣುಗಳ ಮುಂದೆ ತಂದಿದ್ದರು.  ನಾನು ಜಿರಳೆ ಕಂಡು ಜೋರಾಗಿ ಕಿರುಚಿದೆ.

  ಜಿರಳೆ ನನ್ನ ಕಡೆಗೆ ಒಂದು ಹೆಜ್ಜೆ ಇಟ್ಟರೆ. ನಾನು 100 ಹೆಜ್ಜೆ ಹಿಂದಕ್ಕೆ ಓಡುತ್ತೇನೆ. ನನ್ನ ಕೋಣೆಯಲ್ಲಿ ಜಿರಳೆ ಕಂಡರೆ ಒಂದೋ ಅದು ಸಾಯಬೇಕು.. ಇಲ್ಲವೇ ಅದು ಹೋಗಬೇಕು.

  ಸಿನಿಮಾದಲ್ಲಿನ ವಿಲನ್​ ಕೂಡ ಜಿರಳೆಯಷ್ಟು ಭಯ ಹುಟ್ಟಿಸುವುದಿಲ್ಲ. ಆದರೀಗ ಜಿರಳೆಯ ಭಯವನ್ನು ನಾನು ನಿವಾರಿಸಿಕೊಂಡಿದ್ದೇನೆ. ಇನ್ನು ನಿಮ್ಮ ಸರದಿ ಎಂದು ತಮ್ಮ ಬ್ಲಾಗ್​ನಲ್ಲಿ ಬರೆದುಕೊಂಡಿದ್ದಾರೆ.

  Xiaomi : ‘ಮಿ ಪೇ ಆ್ಯಪ್‘ ಮೂಲಕ ಚಿನ್ನ ಖರೀದಿಸಲು ಮತ್ತು ಮಾರಾಟ ಮಾಡಲು ಮುಂದಾದ ಶಿಯೋಮಿ
  First published: