Suman Ranganathan: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎವರ್​ಗ್ರೀನ್​ ಬ್ಯೂಟಿ ಸುಮನ್ ರಂಗನಾಥ್

Suman Ranganathan: ಸುಮನ್​ ರಂಗನಾಥ್ ಸ್ಯಾಂಡಲ್​ವುಡ್​ನಲ್ಲಿ ಎವರ್​ಗ್ರೀನ್​ ಬ್ಯೂಟಿ ಎಂದೇ ಖ್ಯಾತರು. 1989ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಅವರು, ಈವರೆಗೆ ಕನ್ನಡ, ತಮಿಳು, ತೆಲುಗು, ಬೆಂಗಾಳಿ,ಬೋಜ್​ಪುರಿ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ.

Rajesh Duggumane | news18
Updated:June 6, 2019, 1:11 PM IST
Suman Ranganathan: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎವರ್​ಗ್ರೀನ್​ ಬ್ಯೂಟಿ ಸುಮನ್ ರಂಗನಾಥ್
ಸುಮನ್​ ರಂಗನಾಥ್​ ಹಾಗೂ ಅವರ ಪತಿ
  • News18
  • Last Updated: June 6, 2019, 1:11 PM IST
  • Share this:
ಬೆಂಗಳೂರು (ಜೂ. 6): ಸ್ಯಾಂಡಲ್​​ವುಡ್​ ನಟಿ ಸುಮನ್​ ರಂಗನಾಥ್​ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರು ಮೂಲದ ಸಜನ್ ಹೆಸರಿನ ವ್ಯಕ್ತಿಯನ್ನು ಅವರು ಸರಳವಾಗಿ ರಿಜಿಸ್ಟರ್​ ಮದುವೆ ಆಗಿದ್ದಾರೆ.

ಸಾಮಾನ್ಯವಾಗಿ ಸ್ಯಾಂಡಲ್​ವುಡ್​ ನಟ-ನಟಿಯರು ವಿವಾಹವಾಗುತ್ತಾರೆ ಎಂದರೆ ಭಾರೀ ಸುದ್ದಿಯಾಗುತ್ತದೆ. ಆದರೆ, ಸುಮನ್​ ರಂಗನಾಥ್​ ಮಾತ್ರ ಸೈಲೆಂಟ್​ ಆಗಿ ಮದುವೆಯಾಗಿದ್ದಾರೆ. 44 ವರ್ಷದ ಸುಮನ್​ಗೆ ಆರು ತಿಂಗಳ ಹಿಂದೆ ಸಜನ್ ಪರಿಚಯವಾಗಿದ್ದರು. ಇವರು ಬೆಂಗಳೂರಿನ ಆಹಾರ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

ಸುಮನ್​ ರಂಗನಾಥ್ ಸ್ಯಾಂಡಲ್​ವುಡ್​ನಲ್ಲಿ ಎವರ್​ಗ್ರೀನ್​ ಬ್ಯೂಟಿ ಎಂದೇ ಖ್ಯಾತರು. 1989ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಅವರು, ಈವರೆಗೆ ಕನ್ನಡ, ತಮಿಳು, ತೆಲುಗು, ಬೆಂಗಾಳಿ,ಬೋಜ್​ಪುರಿ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ.

suman ranganathan
ಸುಮನ್​ ರಂಗನಾಥ್​


ಇತ್ತೀಚೆಗೆ ತೆರೆಕಂಡ ರಿಷಿ ಅಭಿನಯದ ‘ಕವಲುದಾರಿ’ ಸಿನಿಮಾದಲ್ಲಿ ಸುಮನ್​ ಹೀರೋಯಿನ್​ ಪಾತ್ರ ನಿರ್ವಹಿಸಿದ್ದರು. ‘ದಂಡುಪಾಳ್ಯ 4’ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. 'ಬುದ್ಧಿವಂತ', ನೀರ್​ ದೋಸೆ ಸೇರಿ ಸಾಕಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.

First published:June 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...