ಮತ್ತೊಂದು ತೆಲುಗು ಸ್ಟಾರ್ ನಟನ ಚಿತ್ರಕ್ಕೆ ​ರಶ್ಮಿಕಾ ನಾಯಕಿ!; ಏನಿದು ಕನ್ನಡತಿಯ ಮಾಯೆ

ಮಹೇಶ್​ ಬಾಬುಗೆ ಜೊತೆಯಾಗಿ ರಶ್ಮಿಕಾ ನಟಿಸುತ್ತಿರುವ ವಿಚಾರ ನಿಜವೋ ಅಥವಾ ಸುಳ್ಳೋ ಎಂಬ ಬಗ್ಗೆ ಚಿತ್ರತಂಡವೇ ಸ್ಪಷ್ಟನೆ ನೀಡಬೇಕಿದೆ. ಈ ಮೊದಲು ಕೂಡ ಇದೇ ರೀತಿಯ ಸಾಕಷ್ಟು ವದಂತಿಗಳು ಹರಿದಾಡಿದ್ದವು. ಕೆಲ ವಿಚಾರಕ್ಕೆ ಖುದ್ದು ರಶ್ಮಿಕಾ ಸ್ಪಷ್ಟನೆ ನೀಡಿದ್ದಾರೆ.

Rajesh Duggumane | news18
Updated:March 8, 2019, 3:44 PM IST
ಮತ್ತೊಂದು ತೆಲುಗು ಸ್ಟಾರ್ ನಟನ ಚಿತ್ರಕ್ಕೆ ​ರಶ್ಮಿಕಾ ನಾಯಕಿ!; ಏನಿದು ಕನ್ನಡತಿಯ ಮಾಯೆ
ರಶ್ಮಿಕಾ-ಮಹೇಶ್​ ಬಾಬು
  • News18
  • Last Updated: March 8, 2019, 3:44 PM IST
  • Share this:
ನಟಿ ರಶ್ಮಿಕಾ ಮಂದಣ್ಣ ಖ್ಯಾತಿ ದುಪ್ಪಟ್ಟಾಗಿದೆ. ಇಡೀ ದಕ್ಷಿಣ ಭಾರತಕ್ಕೆ ಅವರ ಪರಿಚಯವಾಗಿದೆ. ಕನ್ನಡದಲ್ಲಿ ‘ಕಿರಿಕ್​ ಪಾರ್ಟಿ’ ತೆಲುಗಿನಲ್ಲಿ ‘ಗೀತ ಗೋವಿಂದಂ’ ರಶ್ಮಿಕಾ ಅದೃಷ್ಟವನ್ನೇ ಬದಲಾಯಿಸಿಬಿಟ್ಟಿತ್ತು. ದಿನ ಕಳೆದಂತೆ ಅವರಿಗೆ ಬೇಡಿಕೆ ಹೆಚ್ಚುತ್ತಿದೆ. ಹಾಗಾಗಿ ಸ್ಟಾರ್​ ನಟರ ಜೊತೆ ಅವರಿಗೆ ತೆರೆಹಂಚಿಕೊಳ್ಳಲು ಅವಕಾಶ ಸಿಗುತ್ತಿದೆ. ಈಗ ಟಾಲಿವುಡ್​ ಅಂಗಳದಿಂದ ಇಂಥದ್ದೇ ವಿಚಾರ ಹರಿದಾಡಿದೆ. ಅವರು ಸ್ಟಾರ್​ ನಟನ ಜೊತೆ ತೆರೆಹಂಚಿಕೊಳ್ಳಲಿದ್ದಾರಂತೆ.

ಹಾಗಿದ್ದರೆ ಯಾರು ಆ ನಟ? ಪ್ರಿನ್ಸ್​ ಮಹೇಶ್​ ಬಾಬು! ಹೀಗೊಂದು ಸುದ್ದಿ ಸದ್ಯ ತೆಲುಗು ಚಿತ್ರರಂಗದಲ್ಲಿ ಹರಿದಾಡುತ್ತಿದೆ. ಮಹೇಶ್ ಬಾಬು ‘ಮಹರ್ಷಿ’ ಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ‘ಎಫ್​ 2’ ಖ್ಯಾತಿಯ ನಿರ್ದೇಶಕ ಅನಿಲ್​ ರವಿಪುಡಿ ಹೊಸ ಚಿತ್ರಕ್ಕಾಗಿ ಮಹೇಶ್​ ಬಾಬು ಜೊತೆ ಕೈಜೋಡಿಸಿದ್ದಾರೆ. ನಾಯಕಿಯ ಹುಡುಕಾಟದಲ್ಲಿ ತೊಡಗಿರುವ ಅವರು ರಶ್ಮಿಕಾ ಮನೆ ಬಾಗಿಲು ತಟ್ಟಿದ್ದಾರೆ.

ರಶ್ಮಿಕಾ ಜೊತೆ ಈಗಾಗಲೇ ಒಂದು ಹಂತದ ಮಾತುಕತೆ ನಡೆದಿದೆ ಎನ್ನುತ್ತಿವೆ ಮೂಲಗಳು. ರಶ್ಮಿಕಾ ಕೂಡ ಚಿತ್ರದ ಕಥೆ ಒಪ್ಪಿಕೊಂಡಿದ್ದಾರಂತೆ. ಎಲ್ಲಕ್ಕಿಂತ ಮುಖ್ಯವಾಗಿ ಮಹೇಶ್​ ಬಾಬು ಜೊತೆ ತೆರೆಹಂಚಿಕೊಳ್ಳುವ ಅವಕಾಶ ಸಿಕ್ಕಿರುವಾಗ ಎಲ್ಲಾದರೂ ಬಿಡುವುದುಂಟೇ? ಹಾಗಾಗಿ, ಅವರು ಈ ಚಿತ್ರದಲ್ಲಿ ಬಣ್ಣ ಹಚ್ಚುವುದು ಬಹುತೇಕ ಖಚಿತ ಎನ್ನಲಾಗಿದೆ. ದಿಲ್​ ರಾಜು ಹಾಗೂ ಸುಂಕಾರಾ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ: ಧ್ರುವ ಅಭಿನಯದ ‘ಪೊಗರು’ ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ಅವತಾರ ಹೇಗಿರಲಿದೆ ಗೊತ್ತಾ?

ಮಹೇಶ್​ ಬಾಬುಗೆ ಜೊತೆಯಾಗಿ ರಶ್ಮಿಕಾ ನಟಿಸುತ್ತಿರುವ ವಿಚಾರ ನಿಜವೋ ಅಥವಾ ಸುಳ್ಳೋ ಎಂಬ ಬಗ್ಗೆ ಚಿತ್ರತಂಡವೇ ಸ್ಪಷ್ಟನೆ ನೀಡಬೇಕಿದೆ. ರಶ್ಮಿಕಾ ಖ್ಯಾತಿ ಹೆಚ್ಚಿದಂತೆ ಅವರ ಬಗ್ಗೆ ವದಂತಿಗಳೂ ಹೆಚ್ಚಿವೆ. ಈ ಮೊದಲು ಕೂಡ ಇದೇ ರೀತಿಯ ಸಾಕಷ್ಟು ವದಂತಿಗಳು ಹರಿದಾಡಿದ್ದವು. ಕೆಲ ವಿಚಾರಕ್ಕೆ ಖುದ್ದು ರಶ್ಮಿಕಾ ಸ್ಪಷ್ಟನೆ ನೀಡಿದ್ದಾರೆ.

ವಿಜಯ್​ ದೇವರಕೊಂಡ ಅಭಿನಯದ ‘ಡಿಯರ್​ ಕಾಮ್ರೇಡ್​’ ಚಿತ್ರದಲ್ಲಿ ವಿಜಯ್​ ದೇವರಕೊಂಡ ಅವರಿಗೆ ಜೊತೆಯಾಗಿ ರಶ್ಮಿಕಾ ಅಭಿನಯಿಸುತ್ತಿದ್ದಾರೆ. ಈ ಸಿನಿಮಾ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಇತ್ತೀಚೆಗೆ ಕನ್ನಡದಲ್ಲಿ ತೆರೆಕಂಡ ಅವರ ‘ಯಜಮಾನ’ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಒಳ್ಳೆಯ ಕಲೆಕ್ಷನ್​ ಮಾಡುತ್ತಿದೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಹಾಟ್​ ಫೋಟೋ: ಖ್ಯಾತ ನಿಯತಕಾಲಿಕೆಗೆ ಪೋಸ್​ ನೀಡಿದ ಕಿರಿಕ್​ ಹುಡುಗಿ..!
First published:March 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading