Abishek Ambareesh: ಖಡಕ್ ಲುಕ್​ನಲ್ಲಿ ಯಂಗ್ ರೆಬಲ್ ಸ್ಟಾರ್, ಅಂಬಿ ಜನ್ಮದಿನಂದು ಅಭಿಷೇಕ್ ಹೊಸ ಚಿತ್ರ ಅನೌನ್ಸ್

ಅಪ್ಪನ ಹುಟ್ಟುಹಬ್ಬದಂದು ಅಭಿಷೇಕ್ ಅಂಬರೀಶ್ ತಮ್ಮ ಮುಂದಿನ 2 ಚಿತ್ರಗಳ ಅನೌನ್ಸ್ ಮಾಡಿದ್ದಾರೆ. ಅಲ್ಲದೇ ಈ ಚಿತ್ರಗಳ ಫಸ್ಟ್ ಲುಕ್ ಪೋಸ್ಟರ್​ ಅನ್ನು ಸಹ ಬಿಡುಗಡೆ ಮಾಡಲಾಗಿದೆ.

ಅಭಿಷೇಕ್ ಅಂಬರೀಶ್

ಅಭಿಷೇಕ್ ಅಂಬರೀಶ್

  • Share this:
ಇಂದು ಸ್ಯಾಂಡಲ್​ವುಡ್​ ನ ಕರ್ಣ ರೆಬೆಲ್ ಸ್ಟಾರ್ ಅಂಬರೀಶ್ (Rebel Star Ambareesh) ಅವರ70ನೇ ಜನ್ಮದಿನ, ಈ ದಿನಂದು ಅಂಬಿ ಅಭಿಮಾನಿಗಳು ಮಾದರಿ ರೀತಿಯಲ್ಲಿ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಅಲ್ಲದೇ ಅಂಬರೀಶ್ ಅವರ ಮಗ ಅಭಿಷೇಕ್ ಅಂಬರೀಶ್ (Abishek Ambareesh) ಮತ್ತು ಅಂಬಿ ಪತ್ನಿ ಸುಮಲತಾ ಅಂಬರೀಶ್ (Sumalatha Ambareesh) ಅವರು ಅಂಬರೀಶ್ ಸಮಾಧಿ ಸ್ಥಳಕ್ಕೆ ಬಂದು ಫೊಜೆ ಸಲ್ಲಿಸಿದ್ದಾರೆ. ಅಲ್ಲದೆ ಸುಮಲತಾ ಮನೆಯಲ್ಲಿ ಕೇಕ್ ಕತ್ತರಿಸಿ ಅಂಬಿ ಜನ್ಮದಿನ ಆಚರಿಸಿದ್ದಾರೆ. ಇದರ ನಡುವೆ ಅಪ್ಪನ ಹುಟ್ಟುಹಬ್ಬದಂದು ಅಭಿಷೇಕ್ ಅಂಬರೀಶ್ ತಮ್ಮ ಮುಂದಿನ 2 ಚಿತ್ರಗಳ (Movies) ಅನೌನ್ಸ್ ಮಾಡಿದ್ದಾರೆ. ಅಲ್ಲದೇ ಈ ಚಿತ್ರಗಳ ಫಸ್ಟ್ ಲುಕ್ ಪೋಸ್ಟರ್​ ಅನ್ನು ಸಹ ಬಿಡುಗಡೆ ಮಾಡಲಾಗಿದ್ದು, ಸಖತ್ ಖಡಕ್ ಲುಕ್​ ನಲ್ಲಿ ಅಭಿಷೇಕ್ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಅಪ್ಪನ ಹಾಗೇ ಮಗನೂ ಸಹ ಹೆಸರಿಗೆ ತಕ್ಕಂತೆ ರೆಬಲ್ ಆಗಿ ಕಾಣಿಸಿಕೊಂಡಿದ್ದಾರೆ ಎಂದು ಅಭಿಮಾಣಿಗಳು ಹೇಳುತ್ತಿದ್ದಾರೆ.

ಬ್ಯಾಡ್ ಮ್ಯಾನರ್ಸ್ ಚಿತ್ರದಲ್ಲಿ ಅಭಿಷೇಕ್ ಬ್ಯೂಸಿ:

ಇನ್ನು, ಅಮರ್ ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿರುವ ಅಭಿಷೇಕ್ ಸಧ್ಯ ಸುಕ್ಕಾ ಸೂರಿ ನಿರ್ದೇಶನದ ‘ಬ್ಯಾಡ್ ಮ್ಯಾನರ್ಸ್‘ ಚಿತ್ರದ ಸೂಟಿಂಗ್​ ನಲ್ಲಿ ಬ್ಯೂಸಿಯಾಗಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಬ್ಯಾಡ್ ಮ್ಯಾನರ್ಸ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮತ್ತು ತುಣುಕುಗಳು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದ್ದು, ಅಭಿಷೇಕ್​ ಗೆ ಸಖತ್ ಮೈಲೆಜ್ ಕೊಡುವ ಚಿತ್ರ ಇದಾಗಲಿದೆ ಂಬ ಮಾತುಗಳು ಕೇಳಿಬರುತ್ತಿದೆ.

ಅಪ್ಪನ ಜನ್ಮದಿನದಂದೇ ಹೊಸ ಚಿತ್ರಗಳು ಅನೌನ್ಸ್:

ಎಲ್ಲಾ ಸ್ಟಾರ್ ನಟರುಗಳು ತಮ್ಮ ತಮ್ಮ ಹುಟ್ಟುಹಬ್ಬಂದು ಹೊಸ ಚಿತ್ರಗಳ ಅನೌನ್ಸ್ ಮಾಡುವುದು ಸಾಮಾನ್ಯ. ಆದರೆ ಅಭಿಷೇಕ್ ಅಂಬರೀರ್ಶ ತಮ್ಮ ತಂದೆಯ ಜನ್ಮದಿನದಂದು 2 ಹೊಸ ಚಿತ್ರಗಳನ್ನು ಘೋಷಣೆ ಮಾಡಿದ್ದಾರೆ. ಈ ಮೂಲಕ ಅಂಬರೀಶ್ ಮೇಳಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅಂಬಿ ಅಭಿಮಾನಿಗಳು ಸಹ ಅಬಿಷೇಕ್ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಕಾಳಿ‘ ಆಗಿ ಅಬ್ಬರಿಸಲಿರುವ ಅಭಿಷೇಕ್:

ಚಂದನವನದ ಸ್ಟಾರ್ ಡೈರೆಕ್ಟರ್ ಕೃಷ್ಣ ಅವರೊಂದಿಗೆ ಅಭಿಷೇಕ್ ಮುಂದಿನ ಸಿನಿಮಾ ಘೋಷಣೆ ಆಗಿದೆ. ಹೆಬ್ಬುಲಿ, ಗಜಕೇಸರಿ ಅಮತ ಹಿಟ್ ಸಿನಿಮಾ ನೀಡಿರುವ ಕೃಷ್ಣ ಇದೀಗ ಅಭಿಷೇಕ್​ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈ ಹೊಸ ಚಿತ್ರದ ಪೋಸ್ಟರ್ ಸಹ ಬಿಡುಗಡೆ ಮಾಡಲಾಗಿದ್ದು, ಚಿತ್ರಕ್ಕೆ ಕಾಳಿ ಎಂದು ಹೆಸರಿಡಲಾಗಿದೆ. ಇನ್ನು, ಸುಮಲಾತ ಮಗನ ಮುಂದಿನ ಚಿತ್ರಕ್ಕೆ ಶುಭಕೋರಿದ್ದು, ‘ಅಭಿಷೇಕ್ ಅಂಬರೀಶ್ ನಟನೆನೆಯ ಕಾಳಿ ಚಿತ್ರದ ಪೋಸ್ಟರ್ ಬಿಡುಗಡೆ ಆಗಿದ್ದು, ಎಲ್ಲರೂ ನೋಡಿ ಹರಸಿ ಆಶಿರ್ವದಿಸಿ‘ ಎಂದು ಹೇಳಿದ್ದಾರೆ. ಅಲ್ಲದೇ ಕಿಚ್ಚ ಸುದೀಪ್ ಸಹ ಶುಭ ಕೋರಿದ್ದು, ಆಲ್​ ಬೆಸ್ಟ್ ಎಂದು ಟ್ವಟರ್ ಮೂಲಕ ಶುಭ ಕೋರಿ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.





ಮಹೇಶ್ ಕುಮಾರ್ ನಿರ್ದೇಶನದಲ್ಲಿ ಹೊಸ ಚಿತ್ರ:

'ಅಯೋಗ್ಯ' ಹಾಗೂ 'ಮದಗಜ' ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶನದಲ್ಲಿ ‘AA 04‘ ಎಂಬ ಚಿತ್ರದಲ್ಲಿ ಅಭಿಷೇಕ್ ಅಭಿನಯಿಸಲಿದ್ದಾರೆ. ಈಚ ಇತ್ರದ ಫೋಸ್ಟರ್ ಸಹ ರಿಲೀಸ್ ಆಗಿದ್ದು, ರಕ್ತ ಮತ್ತು ಕೆಸರಿನಿಂದ ಕೂಡಿರುವ ಅರ್ಧ ಮುಖದಲ್ಲಿ ಯಂಗ್ ರೆಬಲ್ ಸ್ಟಾರ್ ಮಿಂಚಿದ್ದಾರೆ. ಇದೊಂದು ಒಂದು ಕಾಲಘಟ್ಟದಲ್ಲಿ ನಡೆಯುವ ಕಥೆ ಇದಾಗಿದೆ ಎಂದು ನಿರ್ದೇಶಕ ಮಹೇಶ್ ಕುಮಾರ್ ಹೇಳಿಕೊಂಡಿದ್ದಾರೆ.





ತುಂಬಾ ದೊಡ್ಡ ಬಜೆಟ್ ಸಿನಿಮಾವಿ ಇದಾಗಿದ್ದು,  ಸುಮಾರು 30 ರಿಂದ 35 ಕೋಟಿ ಬಜೇಟ್​ ನಲ್ಲಿ ಚಿತ್ರ ನಿರ್ಮಾಣವಾಗಲಿದೆ. ಅಲ್ಲದೇ ಚಿತ್ರದ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್​ ಸೀನ್​ ಗಳು ಇರಲಿವೆ ಎಂದು ಹೇಳಿದ್ದಾರೆ. ಅಲ್ಲದೇ  135 ದಿನ ಶೂಟಿಂಗ್ ಪ್ಲ್ಯಾನ್ ಮಾಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
Published by:shrikrishna bhat
First published: