Shivarajkumar: ಶಿವಣ್ಣ ಪ್ಯಾನ್ ಇಂಡಿಯಾ ಸಿನಿಮಾ ಅನೌನ್ಸ್, ಟೈಟಲ್​ನಲ್ಲೇ ಕಿಕ್​ ಕೊಟ್ಟ ಮ್ಯಾಜಿಕಲ್ ಕಂಪೋಸರ್

ಶಿವರಾಜ್​ಕುಮಾರ್ ಅವರ ಜನ್ಮದಿನದ ಪ್ರಯುಕ್ತ ಸಾಲು ಸಾಲು ಸಿನಿಮಾಗಳ ಅನೌನ್ಸ್ ಆಗುತ್ತಿದೆ. ಕಳೆದ ದಿನವಷ್ಟೇ ಅವರ 127ನೇ ಚಿತ್ರದ ಅನೌನ್ಸ್ ಆದ ಬೆನ್ನಲ್ಲೇ ಇದೀಗ ಮತ್ತೊಂದು ಹೊಸ ಸಿನಿಮಾದ ಅನೌನ್ಸ್ ಆಗಿದ್ದು, ಹೊಸ ಪೋಸ್ಟರ್​ ಸಹ ಬಿಡುಗಡೆ ಮಾಡಲಾಗಿದೆ.

ಹೊಸ ಪೋಸ್ಟರ್​

ಹೊಸ ಪೋಸ್ಟರ್​

  • Share this:
ಸ್ಯಾಂಡಲ್​ವುಡ್ (Sandalwood) ನ ಹ್ಯಾಟ್ರಿಕ್ ಹೀರೋ (Hattrick Hero) , ಅಭಿಮಾನಿಗಳ ಪಾಲಿನ ಮೆಚ್ಚಿನ ಶಿವಣ್ಣ (Shivanna) ,  ಡಾ. ಶಿವರಾಜ್‌ಕುಮಾರ್‌ (Shivarajkumar) ಅವರು ಇಂದು ತಮ್ಮ  60ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಸಂತಸದ ಕ್ಷಣದಲ್ಲಿ ಅವರ ಸಾಲು ಸಾಲು ಹೊಸ ಸಿನಿಮಾಗಳ ಘೋಷಣೆ ಆಗುತ್ತಿದೆ. ಹೌದು, ಕಳೆದ ದಿನವಷ್ಟೇ ಅವರ 127ನೇ ಚಿತ್ರದ ಅನೌನ್ಸ್ ಆದ ಬೆನ್ನಲ್ಲೇ ಇದೀಗ ಮತ್ತೊಂದು ಹೊಸ ಸಿನಿಮಾದ ಅನೌನ್ಸ್ ಆಗಿದ್ದು, ಚಿತ್ರತಂಡದಿಂದ ಶಿವಣ್ಣನ ಹುಟ್ಟುಹಬ್ಬಕ್ಕೆ ಹೊಸ ಪೋಸ್ಟರ್​ ಒಂದನ್ನು ಬಿಡುಗಡೆ ಮಾಡಲಾಗಿದೆ. ಅಲ್ಲದೇ ಶಿವಣ್ಣನ ಅಭಿಮಾನಿಗಳಿಗೆ ಮತ್ತೊಂದು ಸಂತಸದ ಸುದ್ದಿ ಹೊರಬಂದಿದ್ದು, ಶಿವರಾಜ್​ಕುಮಾರ್ ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಸಹ ಇದೇ ಆಗಿರಲಿದೆ. ಹೌದು ಈ ಚಿತ್ರಕ್ಕೆ ಮೊದಲ ಬಾರಿಗೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ (Arjun Janya) ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ಶಿವಣ್ಣನ ಹೊಸ ಸಿನಿಮಾ ಅನೌನ್ಸ್:

ಹೌದು, ಶಿವರಾಜ್​ಕುಮಾರ್ ಅವರ ಜನ್ಮದಿನದ ಹಿನ್ನಲೆ ಇಂದು ಶಿವಣ್ಣನ ಮತ್ತೊಂದು ಹೊಸ ಸಿನಿಮಾ ಘೋಷಣೆ ಆಗಿದೆ. ಮೊಟ್ಟ ಮೊದಲ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಶಿವರಾಜ್​ಕುಮಾರ್ ಅವರಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರಕ್ಕೆ ಸದ್ಯ ‘45‘ ಎಂದು ಹೆಸರಿಡಲಾಗಿದೆ. ಈ ಕುರಿತು ಶಿವರಾಜ್​ ಕುಮಾರ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್​ ಅನ್ನು ಹಂಚಿಕೊಂಡಿದ್ದು, ‘ನನ್ನ ಮುಂದಿನ ಚಿತ್ರ “45”!! ಪೋಸ್ಟರ್ ನಿಮಗಾಗಿ ಅರ್ಜುನ್ ಜನ್ಯರವರ ಚೊಚ್ಚಲ ನಿರ್ದೇಶನ ಹಾಗು ಎಂ.ರಮೇಶ್ ರೆಡ್ಡಿ ರವರ ನಿರ್ಮಾಣ. ನನ್ನ ಜನ್ಮದಿನದಂದು ಶೀರ್ಷಿಕೆಯನ್ನು ಪ್ರೀತಿಯಿಂದ ಬಹಿರಂಗಪಡಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು ಹಾಗೂ ಅಭಿಮಾನಿ ದೇವರುಗಳಿಗೆ ನನ್ನ ಥ್ಯಾಂಕ್ಯೂ ಎಂದು ಬರೆದುಕೊಂಡಿದ್ದಾರೆ.





ಮೊದಲ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಶಿವಣ್ಣ:

ಇನ್ನು, ಶಿವರಾಜ್​ಕುಮಾರ್ ಅವರು ಇದೇ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚು ಹರಿಸಲಿದ್ದಾರೆ. ಹೌದು, ಶಿವಣ್ಣನ ಮುಂದಿನ ಚಿತ್ರ ‘45‘ ಅನ್ನು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶಿಸುತ್ತಿದ್ದು, ಈ ಚಿತ್ರವು ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಈ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ಶಿವಣ್ಣ ಪ್ಯಾನ್ ಇಂಡಿಯಾ ಸ್ಟಾರ್​ ಆಗಿ ಮಿಂಚಲು ಸಿದ್ಧರಾಗಿದ್ದಾರೆ. ಇನ್ನು, ಈ ಚಿತ್ರದ ಪೋಸ್ಟರ್​ ಡಿಜಿಟಲ್ ರಿಲೀಸ್​ ಅನ್ನು ಮಲಯಾಳಂ ನಲ್ಲಿ ಖ್ಯಾತ ನಟ ಪ್ರಥ್ವಿರಾಜ್ ಸುಕುಮಾರನ್ ರಿಲೀಸ್ ಮಾಡಿದ್ದು,ಟ್ವೀಟ್​​  ಮಾಡುವ ಮಾಡುವ  ಮೂಲಕ ವಿಶ್​ ಮಾಡಿದ್ದಾರೆ.





ಇದಲ್ಲದೇ ತಮಿಳಿನಲ್ಲಿ ಶಿವಕಾರ್ತಿಕೇಯನ್ ಮತ್ತು ತೆಲುಗಿನಲ್ಲಿ ನಾಗಾರ್ಜುನ ಅಕ್ಕಿನೇನಿ ಅವರು 45 ಚಿತ್ರದ ಡಿಜಿಟಲ್ ಪೋಸ್ಟರ್​ ಅನ್ನು ರಿಲೀಸ್ ಮಾಡಿ, ಟ್ವೀಟ್​​ ಮಾಡುವ ಮೂಲಕ ಶಿವಣ್ಣನಿಗೆ ಜನ್ಮದಿನದ ಶುಭಕೋರಿದ್ದಾರೆ.

ಇದನ್ನೂ ಓದಿ: HBD Shivarajkumar: 60ರಲ್ಲೂ 16ರ ಉತ್ಸಾಹ, ಹ್ಯಾಟ್ರಿಕ್‌ ಹೀರೋ ಎನರ್ಜಿಗೆ ಸಾಟಿ ಯಾರು? ಹ್ಯಾಪಿ ಬರ್ತ್‌ ಡೇ ಶಿವಣ್ಣ

ಶಿವಣ್ಣ-ಸಚಿನ್ ಸಿನಿಮಾ ಅನೌನ್ಸ್:

ಕನ್ನಡ ಸಿನಿಲೋಕದ ಯಂಗ್ ಅಂಡ್ ಎನರ್ಜಿಟಿಕ್ ಸೂಪರ್ ಸ್ಟಾರ್ ಶಿವರಾಜ್ ಕುಮಾರ್ ಭತ್ತಳಿಕೆಯಲ್ಲೀಗ ಸಾಲು ಸಾಲು ಸಿನಿಮಾಗಳಿವೆ. ಈ ಚಿತ್ರಗಳ ಪೈಕಿ ಶಿವಣ್ಣ ನಟಿಸಲಿರುವ 127ನೇ ಸಿನಿಮಾಗೆ ಅವನೇ ಶ್ರೀಮನ್ನಾರಾಯಣ ನಿರ್ದೇಶಕ ಸಚಿನ್ ರವಿ ಆಕ್ಷನ್ ಕಟ್ ಹೇಳುವುದು ಕನ್ಫರ್ಮ್ ಆಗಿದೆ. ಶಿವಣ್ಣನ 60ನೇ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಇಂಟ್ರೆಸ್ಟಿಂಗ್ ಆಗಿರುವ ಪೋಸ್ಟರ್ ರಿಲೀಸ್ ಮಾಡಿ ಶಿವಣ್ಣ‌ನ‌ ಜನುಮದಿನಕ್ಕೆ ಶುಭಾಶಯ ಕೋರಿದೆ.

ಇದನ್ನೂ ಓದಿ: Shivarajkumar: ಬರ್ತ್‌ ಡೇ ಆಚರಿಸಿಕೊಳ್ಳಲ್ವಂತೆ ಶಿವಣ್ಣ, ಆದರೂ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ಕೊಟ್ರು ದೊಡ್ಮನೆ ದೊರೆ!

ಮಾನ್ಯತಾ ರೆಸಿಡೆನ್ಸಿ ವೃತ್ತಕ್ಕೆ ಶಿವಣ್ಣನ ಹೆಸರು:

ಮಾನ್ಯತಾ ರೆಸಿಡೆನ್ಸಿಯಲ್ಲಿರುವ ಶಿವಣ್ಣನ ನಿವಾಸದ ಬಳಿ ಇರುವ ವೃತ್ತಕ್ಕೆ, ಶಿವಣ್ಣನ 60 ನೇ ಹುಟ್ಟುಹಬ್ಬದ ಪ್ರಯುಕ್ತ ಡಾ.ಶಿವರಾಜ್ ಕುಮಾರ್ ಎಂದು ಹೆಸರಿಡಲಾಗಿದೆ. 2007 ರಿಂದ ಶಿವಣ್ಣ ಇಲ್ಲಿ ವಾಸವಿದ್ದು, ಇಲ್ಲಿನ ನಿವಾಸಿಗಳ ಜೊತೆ  ತುಂಬಾ ಆತ್ಮೀಯವಾಗಿ ಶಿವಣ್ಣ ಇದ್ದಾರೆ. ಅಲ್ಲದೆ ಶಿವಣ್ಣ ಮಾನ್ಯತಾ ರೆಸಿಡೆಸನ್ಸಿ ಅಸೋಸಿಯೇಷನ್  ಬೆಳವಣಿಗೆಗೆ ಸಹಕಾರ ನೀಡಿದ್ದು, ಶಿವಣ್ಣನ ಸರಳತೆಗೆ ಇಲ್ಲಿನ ನಿವಾಸಿಗಳು ಮನಸೋತಿ ದ್ದಾರೆ.
Published by:shrikrishna bhat
First published: