• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Rajkumar: ಭಾರತದಲ್ಲಿ ಮೊದಲ ಬಾಂಡ್ ಚಿತ್ರ ಮಾಡಿದ್ದೇ ಅಣ್ಣಾವ್ರು! ಅದು ಹೇಗಿತ್ತು ಗೊತ್ತಾ?

Rajkumar: ಭಾರತದಲ್ಲಿ ಮೊದಲ ಬಾಂಡ್ ಚಿತ್ರ ಮಾಡಿದ್ದೇ ಅಣ್ಣಾವ್ರು! ಅದು ಹೇಗಿತ್ತು ಗೊತ್ತಾ?

ಕನ್ನಡದ ಜೇಡರ ಬಲೆ ಮೊದಲ ಬಾಂಡ್ ಶೈಲಿ ಸಿನಿಮಾ

ಕನ್ನಡದ ಜೇಡರ ಬಲೆ ಮೊದಲ ಬಾಂಡ್ ಶೈಲಿ ಸಿನಿಮಾ

ಕನ್ನಡದ ಮೊದಲ ಬಾಂಡ್ ಶೈಲಿಯ ಸಿನಿಮಾ ಯಾವುದು? ರಾಜ್ ಮೊದಲ ಬಾಂಡ್ ಶೈಲಿ ಚಿತ್ರದ ಹೀರೋ ಅಲ್ವೇ? ಬಾಂಡ್ ಶೈಲಿಯ ಜೇಡರ ಬಲೆ ಚಿತ್ರದ ಅಂದಿನ ಬಜೆಟ್ ಎಷ್ಟು? ಈ ಎಲ್ಲ ಇಂಟ್ರಸ್ಟಿಂಗ್ ವಿಷಯದ ಡಿಟೈಲ್ಸ್ ಇಲ್ಲಿದೆ ಓದಿ.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

ಡಾಕ್ಟರ್ ರಾಜ್‌ ಕುಮಾರ್ ಬಾಂಡ್ ಸಿನಿಮಾ (Raj Bond Style Movies) ಕೂಡ ಮಾಡಿದ್ದಾರೆ. ಈ ಮೂಲಕ ರಾಜ್ ಭಾರತೀಯ ಸಿನಿಮಾರಂಗದ ಮೊದಲ ಬಾಂಡ್ ಸಿನಿಮಾ ಹೀರೋ ಎನಿಸಿಕೊಂಡರು. ಬಾಂಡ್ ಚಿತ್ರಗಳು ಕೇವಲ (Rajkumar Bond Style Cinema) ಹಾಲಿವುಡ್‌ನಲ್ಲಿ ಮಾತ್ರ ಬಂದಿದ್ದವು. ಆದರೆ ರಾಜ್‌ ಮೂಲಕ ಭಾರತದಲ್ಲೂ ಬಾಂಡ್ ರೀತಿಯ ಸಿನಿಮಾ ತಯಾರಾದವು. ದಕ್ಷಿಣ ಭಾರತದ ಅದರಲ್ಲೂ ಕರ್ನಾಟಕದಲ್ಲಿಯೇ (Jedara Bale First Bond Style Movie) ಇಂತಹ ಚಿತ್ರ ರೆಡಿ ಆದವು ಅನ್ನೋದೇ ಹೆಮ್ಮೆಪಡುವ ವಿಷಯ ಆಗಿದೆ. ಹಾಗೇ ಕನ್ನಡದಲ್ಲಿ ಬಾಂಡ್ ರೀತಿಯ ರೆಡಿಯಾದ ಮೊದಲ ಸಿನಿಮಾದ ಹೆಸರು ಜೇಡರ ಬಲೆ, ಈ ಚಿತ್ರದಿಂದಲೇ ಬಾಂಡ್ ಸರಣಿ ಸಿನಿಮಾ ಶುರು ಆಗಿದ್ದವು.


ಹಾಗೆ ಬಂದ ಅಷ್ಟೂ ಸಿನಿಮಾಗಳಲ್ಲಿ (Rajkumar Bond Style Firs Cinema) ರಾಜ್‌ ಕುಮಾರ್ ಬಾಂಡ್ ಪಾತ್ರವನ್ನ ಮಾಡಿದ್ದರು.


Sandalwood great Actor Doctor Rajkumar is the First Indian Bond Series Film Hero
ರಾಜ್ ಚಿತ್ರದ ಬಳಿಕ ಪರ ಭಾಷೆಯಲ್ಲಿ ಬಾಂಡ್ ಶೈಲಿ ಚಿತ್ರ ನಿರ್ಮಾಣ


ರಾಜ್ ಕುಮಾರ್ ಭಾರತೀಯ ಚಿತ್ರರಂಗದ ಮೊದಲ ಬಾಂಡ್ ಚಿತ್ರದ ಹೀರೋ!


ರಾಜ್‌ ಕುಮಾರ್ ಅಭಿನಯದ ಜೇಡರ ಬಲೆ ಚಿತ್ರವನ್ನ ಅಂದು ಕೇವಲ ೩ ಲಕ್ಷ ಬಜೆಟ್‌ನಲ್ಲಿ ತಯಾರಿಸಲಾಗಿತ್ತು. ಸಿನಿಮಾ ಬಂದ್ಮೇಲೆ ಈ ಚಿತ್ರದ ಹಕ್ಕುಗಳೇ 2 ಲಕ್ಷಕ್ಕೆ ಹೋಗಿತ್ತು ಅನ್ನೋದು ಅಷ್ಟೇ ವಿಶೇಷವಾದ ವಿಚಾರವೇ ಆಗಿದೆ.




ಬಾಂಡ್ ಚಿತ್ರ ತಯಾರಿಗೆ 11 ಪುಸ್ತಕ ಓದಿದ್ದ ಡೈರೆಕ್ಟರ್ ಭಗವಾನ್


ಬಾಂಡ್ ರೀತಿಯ ಸಿನಿಮಾ ಮಾಡೋದು ಅಷ್ಟು ಸುಲಭ ಕೂಡ ಆಗಿರಲಿಲ್ಲ. 1968 ಸಮಯದಲ್ಲಿ ಇದೆಲ್ಲ ಹೇಗೆ ಸಾಧ್ಯ ಅನ್ನೋ ಅನುಮಾನಗಳೂ ಇದ್ದವು. ಆದರೆ ಚಿತ್ರದ ನಿರ್ದೇಶಕರಾದ ದೊರೆ-ಭಗವಾನ್ ಇದನ್ನ ಸಾಧ್ಯವಾಗಿಸಿದ್ದರು.


ಜೇಮ್ಸ್ ಬಾಂಡ್ ರೀತಿಯ ಚಿತ್ರವನ್ನ ಕನ್ನಡದಲ್ಲಿ ತಯಾರಿಸಲೇಬೇಕು ಎಂದು ಆಸೆ ಪಟ್ಟ ಡೈರೆಕ್ಟರ್ ದೊರೆ-ಭಗವಾನ್ ಸಾಕಷ್ಟು ತಯಾರಿ ಮಾಡಿಕೊಂಡಿದ್ದರು. ಡೈರೆಕ್ಟರ್ ಭಗವಾನ್ ಅವರು ಜೇಮ್ಸ್ ಬಾಂಡ್ ಸಿನಿಮಾ ಸಂಬಂಧಿಸಿದ ಬರೋಬ್ಬರಿ 11 ಪುಸ್ತಕಗಳನ್ನ ಅಭ್ಯಾಸ ಮಾಡಿದ್ದರು.


ಜೇಡರ ಬಲೆ ಚಿತ್ರದ ಬಳಿಕ ಸಾಲು ಸಾಲು ಸರಣಿ ಸಿನಿಮಾ


ಈ ಒಂದು ನಿರಂತರ ಅಭ್ಯಾಸದ ಫಲವೇ, ಬಾಂಡ್ ರೀತಿಯಲ್ಲಿ ಕನ್ನಡದ ಜೇಡರ ಬಲೆ ಸಿನಿಮಾ ರೆಡಿ ಆಯಿತು. ಇನ್ನೂ ಒಂದು ವಿಶೇಷ ಅಂದ್ರೆ, ಈ ಚಿತ್ರ ಸರಣಿ ರೂಪದಲ್ಲಿ ಬಂದಿತ್ತು. ಡಾಕ್ಟರ್ ರಾಜ್‌ ಕುಮಾರ್ ಇಲ್ಲಿ ಪ್ರಕಾಶ್ ಸಿಐಡಿ-999 ಪಾತ್ರದಲ್ಲಿ ಅಭಿನಯಿಸಿದ್ದರು.


ಸಿಐಡಿ ಚಿತ್ರದಲ್ಲಿ ಹಾಸ್ಯ ಇರದೇ ಇದ್ರೇ ಹೇಗೆ? ಹಾಗಾಗಿಯೇ ದೊರೆ-ಭಗವಾನ್ ಇನ್ನೂ ಒಂದು ಪ್ಲಾನ್ ಮಾಡಿದ್ದರು. ನರಸಿಂಹ ರಾಜು ಅವರ ಪಾತ್ರವನ್ನ ಈ ಚಿತ್ರದಲ್ಲಿ ಇಟ್ಟಿದ್ದರು. ಆ ಪಾತ್ರಕ್ಕೆ ಬೇಬಿ ಸಿಐಡಿ 888 ಅನ್ನೋ ಹೆಸರು ಕೊಟ್ಟಿದ್ದರು.


ಕನ್ನಡದ ಜೇಡರ ಬಲೆ ಮೊದಲ ಬಾಂಡ್ ಶೈಲಿ ಸಿನಿಮಾ!


ಹೀಗೆ ಬಾಂಡ್ ಸಿನಿಮಾ ತಯಾರಾಗಿತ್ತು. ಈ ಮೂಲಕ ಜೇಮ್ಸ್ ಬಾಂಡ್ ರೀತಿಯ ಸರಣಿ ಚಿತ್ರಗಳಲ್ಲಿ ಜೇಡರ ಬಲೆ ಮೊದಲ ಚಿತ್ರವೇ ಆಗಿತ್ತು. ಇದಾದ್ಮೇಲೆ ಗೋವಾದಲ್ಲಿ ಸಿಐಡಿ-999, ಆಪರೇಷನ್ ಜಾಕ್‌ಪಾಟ್ ನಲ್ಲಿ ಸಿಐಡಿ-999 ಹಾಗೂ ಕಡೆಯ ಸರಣಿ ಆಪರೇಷನ್ ಡೈಮಂಡ್ ರಾಕೆಟ್ ಸಿನಿಮಾ ತಯಾರಾಗಿ ರಿಲೀಸ್ ಆಯಿತು.




ಬಾಂಡ್ ಸಿನಿಮಾಗಳ ಮೂಲಕ ಡಾಕ್ಟರ್ ರಾಜ್‌ಕುಮಾರ್ ಭಾರತೀಯ ಚಿತ್ರರಂಗದ ಮೊದಲ ಬಾಂಡ್ ಸಿನಿಮಾ ಹೀರೋ ಅಂತಲೂ ಕರೆಸಿಕೊಂಡರು. ಕನ್ನಡದಲ್ಲಿ ಬಾಂಡ್ ಶೈಲಿಯ ಸಿನಿಮಾ ಬಂದ್ಮೇಲೆ ದಕ್ಷಿಣದ ಇತರ ಭಾಷೆಯಲ್ಲೂ ಈ ರೀತಿಯ ಸಿನಿಮಾ ಬಂದವು.


Sandalwood great Actor Doctor Rajkumar is the First Indian Bond Series Film Hero
ಬಾಂಡ್ ಶೈಲಿ ಚಿತ್ರಕ್ಕೆ ರಾಜ್ ಕುಮಾರ್ ಸಖತ್ ಸೂಟೇಬಲ್


ರಾಜ್ ಬಳಿಕ ಪರ ಭಾಷೆಯಲ್ಲಿ ಬಾಂಡ್ ಶೈಲಿ ಚಿತ್ರ ನಿರ್ಮಾಣ


ಹಾಗೆ ತಮಿಳಿನಲ್ಲಿ ಜೈಶಂಕರ್ ಬಾಂಡ್ ಶೈಲಿಯ ಸಿನಿಮಾ ಮಾಡಿದ್ದರು. ತೆಲುಗು ಭಾಷೆಯಲ್ಲಿ ಮಹೇಶ್ ಬಾಬು ತಂದೆ ಕೃಷ್ಣ ಅವರು ಬಾಂಡ್ ರೀತಿಯ ಚಿತ್ರಗಳನ್ನ ಮಾಡಿದ್ದರು. ಮಲೆಯಾಳಂ ಭಾಷೆಯಲ್ಲಿ ಪ್ರೇಮ್ ನಜೀರ್ ಬಾಂಡ್ ಶೈಲಿಯ ಚಿತ್ರಗಳಲ್ಲಿ ಅಭಿನಯಿಸಿದ್ದರು.


ಹೀಗೆ ಬಾಂಡ್ ಶೈಲಿಯ ಚಿತ್ರಗಳಿಗೆ ಇತರರಿಗೂ ರಾಜ್ ಸ್ಪೂರ್ತಿ ಆದರು. ಹಾಗೆ ರಾಜ್‌ ಕುಮಾರ್ ಅವರ ಬಾಂಡ್ ಸಿನಿಮಾಗಳ ಖ್ಯಾತಿ ಅಂದು ಬಾಲಿವುಡ್‌ಗೂ ತಲುಪಿತ್ತು. ಹೆಸರಾಂತ ಹಿಂದಿ ಪತ್ರಿಕೆ "ಅಮರ್‌ ಉಜಾಲಾ" ರಾಜ್ ಅವರನ್ನ ಕೊಂಡಾಡಿತ್ತು. ರಾಜ್‌ಕುಮಾರ್ ಭಾರತದ ಜೇಮ್ಸ್ ಬಾಂಡ್ ಅಂತಲೂ ಬಣ್ಣಿಸಿತ್ತು.


ಬಾಂಡ್ ಶೈಲಿ ಚಿತ್ರಕ್ಕೆ ರಾಜ್ ಕುಮಾರ್ ಸಖತ್ ಸೂಟೇಬಲ್


ರಾಜ್ ಕುಮಾರ್ ನಿಜಕ್ಕೂ ಬಾಂಡ್ ಶೈಲಿಯ ಚಿತ್ರಗಳಲ್ಲಿ ಬಾಂಡ್ ರೀತಿಯಲ್ಲಿಯೇ ಕಾಣಿಸಿಕೊಂಡಿದ್ದರು. ಬಾಂಡ್ ಪಾತ್ರಕ್ಕೆ ಬೇಕಾಗೋ ಎಲ್ಲ ಕ್ವಾಲಿಟಿಗಳೂ ರಾಜ್‌ಕುಮಾರ್ ಅವರಲ್ಲಿತ್ತು. ಹಾಗಾಗಿಯೇ ರಾಜ್ ಬಾಂಡ್ ಶೈಲಿಯ ಅಷ್ಟೂ ಸರಣಿ ಚಿತ್ರದಲ್ಲಿ ಮಿಂಚಿದ್ದರು.


ಇದನ್ನೂ ಓದಿ: Rocking Star Yash: ರಾಕಿಂಗ್ ಸ್ಟಾರ್​ಗೆ ಏಪ್ರಿಲ್-14 ಸ್ಪೆಷಲ್ ಯಾಕೆ? ವರ್ಷದ ಹಿಂದೆ ಈ ದಿನ ಏನಾಗಿತ್ತು?


ಬಾಂಡ್ ಶೈಲಿಯ ಸರಣಿಯ ಮೊದಲ ಚಿತ್ರ ಜೇಡರ ಬಲೆ ಚಿತ್ರಕ್ಕೆ ಜಿ.ಕೆ. ವೆಂಕಟೇಶ್ ಸಂಗೀತ ಕೊಟ್ಟಿದ್ದರು. ಇಳಯರಾಜಾ ಆ ಸಮಯದಲ್ಲಿ ಜಿ.ಕೆ. ವೆಂಕಟೇಶ್ ಅವರಿಗೆ ಈ ಚಿತ್ರದಲ್ಲಿ ಅಸಿಸ್ಟಂಟ್ ಆಗಿ ಕೆಲಸ ಮಾಡಿದ್ದರು. ಒಟ್ಟಾರೆ 1968 ರಲ್ಲಿ ಬಂದ ಜೇಡರ ಬಲೆ ಸಿನಿಮಾ ಈಗಲೂ ಕುತೂಹಲ ಮೂಡಿಸುತ್ತದೆ ಅಂತ ಹೇಳಬಹುದು.

First published: