Sandalwoodನಲ್ಲಿ ಸಿನಿಹಬ್ಬ ಆರಂಭ-ಯರ್ರಾಬಿರ್ರಿ ಚಿತ್ರತಂಡದಿಂದ ರಾಯಚೂರಿನಲ್ಲಿ Fans Show ಆಯೋಜನೆ

Fans Show In Sandalwood:  ಕನ್ನಡ ಚಿತ್ರರಂಗ ಮಾತ್ರವಲ್ಲದೇ ಬಾಲಿವುಡ್​ ,ತೆಲುಗು, ತಮಿಳು, ಮಲಯಾಳಂ ಭಾಷೆಗಳ ಸಿನಿಮಾಗಳಿಗೂ ಕೊರೊನಾ ಬಿಸಿ ಮುಟ್ಟಿದೆ. ಇತ್ತೀಚಿನ ದಿನಗಳಲ್ಲಿ ಥಿಯೇಟರ್‌ಗಳನ್ನು ಪಡೆದುಕೊಳ್ಳುವುದೇ ದೊಡ್ಡ ಕಷ್ಟ ಎಂಬತಾಗಿದ್ದು. ಈಗ ಥೀಯೇಟರ್ ಲಭ್ಯವಿದ್ದರೂ ಸಹ ಜನ ಬರುತಿಲ್ಲ, ಇದು ನಿರ್ಮಾಪಕರನ್ನು  ಚಿಂತೆಗೀಡು ಮಾಡಿದೆ.

ಚಿತ್ರದ ಪೋಸ್ಟ್​ರ್​

ಚಿತ್ರದ ಪೋಸ್ಟ್​ರ್​

  • Share this:
 ಕೊರೊನಾ (Coronavirus)ಪ್ರತಿಯೊಂದು ಕ್ಷೇತ್ರದ ಮೇಲೂ ಪರಿಣಾಮ ಬೀರಿದೆ. ಅದಕ್ಕೆ  ಚಿತ್ರಂಗ(Film Industry) ಹೊರತಾಗಿಲ್ಲ. ಕೊರೊನಾಗೂ ಮುನ್ನ ಇದ್ದ ಸಿನಿಮಾ ಕ್ರೇಜ್ ಈಗ ಕಡಿಮೆಯಾಗಿದೆ. ಅಲ್ಲದೇ, ಕೊರೊನಾ ಲಾಕ್​ಡೌನ್ ಕಾರಣದಿಂದ ಥಿಯೇಟರ್​ಗಳನ್ನು(Theater) ಓಪನ್​ ಮಾಡಲು ಅವಕಾಶ ನೀಡಿದ್ದರೂ ಸಹ  ಕೇವಲ 50 ರಷ್ಟು ಮಾತ್ರ ಅವಕಾಶ ನೀಡಲಾಗಿತ್ತು. ಕಳೆದ ವಾರವಷ್ಟೇ ಕರ್ನಾಟಕ ಸರ್ಕಾರ(Karnataka Government) ಸಂಪೂರ್ಣವಾಗಿ ಅನುಮತಿ ನೀಡಿದೆ. ಆದರು ಕೂಡ ಜನರು ಥೀಯೇಟರ್​ಗಳತ್ತ ಮುಖ ಮಾಡಲು ಹಿಂಜರಿಯುತ್ತಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿ ಹಲವಾರು ಚಿತ್ರಗಳು ಬಿಡುಗಡೆ ಸಜ್ಜಾಗಿವೆ.

ರಾಯಚೂರಿನಲ್ಲಿ ಫ್ಯಾನ್ಸ್​ ಶೋ 

ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಸಿನಿಮಾ ಉತ್ಸವ ಶುರುವಾಗುವ ಲಕ್ಷಣ ಕಾಣಿಸುತ್ತಿದೆ.  ಈ ಮಧ್ಯೆ  ಯರ್ರಾಬಿರ್ರಿ ಸಿನಿಮಾ ಪ್ಯಾನ್ಸ್ ಷೋ ನಡೆಸಲು ನಿರ್ಧರಿಸಿದ್ದು, ಇಂದು ರಾಯಚೂರು ಜಿಲ್ಲೆ ಮಸ್ಕಿ ತಾಲ್ಲೂಕಿನ  ಶ್ರೀ ಶರಣ ಬಸವೇಶ್ವರ ಚಿತ್ರಮಂದಿರದಲ್ಲಿ ಯರ್ರಾಬಿರ್ರಿ -ಚಿತ್ರದ ಪ್ಯಾನ್ಸ್ ಷೋ ನಡೆಸಲಾಗಿದೆ. ನಾಯಕ ನಟ ರೂರಲ್ ಅಂಜನ್, ನಿರ್ದೇಶಕ ಗೋವಿಂದ ದಾಸರ್​ ಹಾಗೂ ನಿರ್ಮಾಪಕ HG ದಾಸರ್​ ಅಭಿಮಾನಿಗಳ ಜೊತೆಗೆ ಷೋ ಗಳನ್ನು ವೀಕ್ಷಿಸಿದ್ದಾರೆ.

ಇನ್ನು 3 ದಿನಗಳಲ್ಲಿ 12 ಷೋ ಗಳನ್ನು ಅಭಿಮಾನಿಗಳಿಗಾಗಿ ತೋರಿಸುವ ಉದ್ದೇಶವನ್ನು ಚಿತ್ರತಂಡ ಹೊಂದಿದ್ದು,  ಪ್ರತಿ ಷೋ ಗಳು ಹೌಸ್-ಪುಲ್ ಆಗುತ್ತಿರುವುದು ಸಿನಿಮಾ ತಂಡಕ್ಕೆ  ಖುಷಿ ನೀಡಿದೆ.  ಚಿತ್ರದ ಅಭಿಮಾನಿಗಳಿಗೆ ಪಾಸ್ ಮೂಲಕ ಚಿತ್ರ ವೀಕ್ಷಿಸಲು ಅವಕಾಶ ನೀಡಲಾಗಿದೆ. ಪಾಸ್ ಗಾಗಿ ₹ 100 ರೂ ದರವನ್ನು ನಿಗದಿ ಮಾಡಲಾಗಿದ್ದು, ಇದೇ ಅಕ್ಟೊಬರ್ ತಿಂಗಳಲ್ಲಿ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ.

ಇದನ್ನೂ ಓದಿ: ಹಿರಿಯ ನಟ ಸತ್ಯಜಿತ್ ಆರೋಗ್ಯ ಸ್ಥಿತಿ ಗಂಭೀರ: ಐಸಿಯುನಲ್ಲಿ ಚಿಕಿತ್ಸೆ..!

ಕನ್ನಡ ಚಿತ್ರರಂಗ ಮಾತ್ರವಲ್ಲದೇ ಬಾಲಿವುಡ್​ ,ತೆಲುಗು, ತಮಿಳು, ಮಲಯಾಳಂ ಭಾಷೆಗಳ ಸಿನಿಮಾಗಳಿಗೂ ಕೊರೊನಾ ಬಿಸಿ ಮುಟ್ಟಿದೆ. ಇತ್ತೀಚಿನ ದಿನಗಳಲ್ಲಿ ಥಿಯೇಟರ್‌ಗಳನ್ನು ಪಡೆದುಕೊಳ್ಳುವುದೇ ದೊಡ್ಡ ಕಷ್ಟ ಎಂಬತಾಗಿದ್ದು. ಈಗ ಥೀಯೇಟರ್ ಲಭ್ಯವಿದ್ದರೂ ಸಹ ಜನ ಬರುತಿಲ್ಲ, ಇದು ನಿರ್ಮಾಪಕರನ್ನು  ಚಿಂತೆಗೀಡು ಮಾಡಿದೆ.

ಥೀಯೇಟರ್​ಗಳು ಓಪನ್​

ಐದು ತಿಂಗಳ ಬಳಿಕ ಶೇ.100 ರಷ್ಟು ಪ್ರಮಾಣದಲ್ಲಿ ಸಂಪೂರ್ಣ ಥಿಯೇಟರ್​ ಭರ್ತಿಗೆ ರಾಜ್ಯ ಸರ್ಕಾರ ಕೊನೆಗೂ ಇಂದು ಅನುಮತಿ ನೀಡಿದೆ. ಪರಿಣಾಮ ಸಾಲು ಸಾಲು ಕನ್ನಡ ಚಿತ್ರಗಳು ಬಿಡುಗಡೆಗೆ ಸಿದ್ದವಾಗಿದ್ದರೆ, ಅಭಿಮಾನಿಗಳು ಸಹ ಕಾತರದಿಂದ ಕಾಯುತ್ತಿದ್ದಾರೆ. ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್ ಗಳಲ್ಲಿ ಹೌಸ್ ಫುಲ್ ಪ್ರದರ್ಶನಕ್ಕೆ ಅನುಮತಿ  ನಿಡಿದ ದಿನದಂದೇ ಕನ್ನಡದ ಎರಡು ಸಿನಿಮಾಗಳು ರಿಲೀಸ್ ಆಗಿದ್ದವು.

ಕಿಚ್ಚ ಸುದೀಪ್  ಮತ್ತು ದುನಿಯಾ ವಿಜಯ್ ಬಾಕ್ಸಾಫೀಸ್‍ನಲ್ಲಿ ಮುಖಾಮುಖಿಯಾಗಲು ಸಿದ್ಧತೆ ನಡೆಸಿದ್ದಾರೆ. ಅಕ್ಟೋಬರ್ 14ರಂದೇ ಕೋಟಿಗೊಬ್ಬ 3 ಹಾಗೂ ಸಲಗ ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ.

ಇದನ್ನೂ ಓದಿ: ನಾಗಚೈತನ್ಯ-ಸಮಂತಾ ವಿಚ್ಛೇದನಕ್ಕೆ ಅಮೀರ್ ಖಾನ್ ಕಾರಣ ಎಂದ ಕಂಗನಾ ರಣಾವತ್.. ನಿಜನಾ?

ಒಟ್ಟಾರೆ ಒಂದೆಡೆ ಲಾಕ್‍ಡೌನ್ ಅನ್‍ಲಾಕ್ ಆಯಿತಲ್ಲಾ, ಇನ್ನು ಸ್ಯಾಂಡಲ್‍ವುಡ್‍ಗೆ ಒಳ್ಳೇ ಟೈಮ್ ಬಂತು ಎನ್ನುತ್ತಿರುವಾಗಲೇ ಬಿಗ್ ಬಜೆಟ್ ಸಿನಿಮಾಗಳು ಬಾಕ್ಸಾಫೀಸ್‍ನಲ್ಲಿ ಬಿಗ್ ಫೈಟ್‍ಗೆ ಸಜ್ಜಾಗುತ್ತಿವೆ. ಅದರ ನಡುವೆಯೇ ಇದೂ ಕೂಡ ಒಳ್ಳಯ ಬೆಳವಣಿಗೆಯೇ ಎಂದು ಎರಡೂ ಚಿತ್ರತಂಡಗಳೂ ಆತ್ಮವಿಶ್ವಾಸದಿಂದ ಇದ್ದಾರೆ. ಅದೇನೇ ಇರಲಿ, ದಸರಾ ಹಬ್ಬ ಯಾರಿಗೆ ಸಿಹಿ ನೀಡುತ್ತೋ ಕುತೂಹಲ ಮೂಡಿಸಿದೆ.
Published by:Sandhya M
First published: