HOME » NEWS » Entertainment » SANDALWOOD DRUGS SCANDAL POLICE MAY ISSUE NOTICE TO 15 SANDALWOOD HERO HEROINS AFTER INDRAJIT LANKESH INVESTIGATION RMD

Indrajit Lankesh: ಇಂದ್ರಜಿತ್ ಲಂಕೇಶ್ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ; ಆ 15 ಮಂದಿಗೆ ಸಂಕಷ್ಟ?

Sandalwood Drugs Scandal: ಇಂದ್ರಜಿತ್ ವಿಚಾರಣೆ ವೇಳೆ ಕೊಟ್ಟ ದಾಖಲೆಗಳು ಮತ್ತು 15 ಮಂದಿ ನಟ ನಟಿಯರ ಪೂರ್ವಾಪರ ಪರಿಶೀಲನೆಯಲ್ಲಿ ಸಿಸಿಬಿ ಅಧಿಕಾರಿಗಳು ನಿರತರಾಗಿದ್ದಾರೆ. ಸಿಸಿಬಿಯಿಂದ ಆ 15 ಮಂದಿ ನಟ-ನಟಿಯರಿಗೆ ನೋಟೀಸ್ ನೀಡುವ ಸಾಧ್ಯತೆ ಇದೆ.

news18-kannada
Updated:September 1, 2020, 8:31 AM IST
Indrajit Lankesh: ಇಂದ್ರಜಿತ್ ಲಂಕೇಶ್ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ; ಆ 15 ಮಂದಿಗೆ ಸಂಕಷ್ಟ?
ಇಂದ್ರಜಿತ್​ ಲಂಕೇಶ್​.
  • Share this:
Sandalwood Drug Scandal: ಬೆಂಗಳೂರು (ಸೆಪ್ಟೆಂಬರ್ 1): ನಾನು ಹೇಳಿದ ಮಾತಿಗೆ ಈಗಲೂ ಬದ್ಧನಾಗಿದ್ದೇನೆ. ಪೊಲೀಸರ ವಿಚಾರಣೆಗೆ ಎಲ್ಲಾ ಸಹಕಾರ ನೀಡಿದ್ದೇನೆ. ಅಲ್ಲದೆ, ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ಸೇವಿಸುವ 10-15 ಜನರ ಹೆಸರುಗಳನ್ನು ಸೂಕ್ತ ಸಾಕ್ಷಿ ಸಮೇತ ಪೊಲೀಸರಿಗೆ ನೀಡಿದ್ದೇನೆ ಎಂದು ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಹೇಳಿದ್ದರು. ಇದಾದ ಬೆನ್ನಲ್ಲೇ ಪೊಲೀಸರು ಮಹತ್ವದ ಸಭೆ ನಡೆಸಿದ್ದು, ಆ 15 ಜನರಿಗೆ ನೋಟಿಸ್​ ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮಾದಕ ವಸ್ತುಗಳನ್ನು ಬಳಸುವವರ ಕುರಿತ ಸಿಸಿಬಿ ಪೊಲೀಸ್‌ ವಿಚಾರಣೆಗೆ ಇಂದು ಹಾಜರಾಗಿ ಎಲ್ಲಾ ಮಾಹಿತಿ ನೀಡಿದ ನಂತರ ಪತ್ರಕರ್ತರ ಎದುರು ಮಾತನಾಡಿರುವ ಇಂದ್ರಜಿತ್‌ ಲಂಕೇಶ್, "ಸ್ಯಾಂಡಲ್‌ವುಡ್‌ನಲ್ಲಿ ಮಾದಕ ವಸ್ತುಗಳನ್ನು ಬಳಸುತ್ತಿರುವವರ ಹೆಸರುಗಳನ್ನು ಸಾಕ್ಷಿ ಸಮೇತ ಪೊಲೀಸರಿಗೆ ನೀಡಿದ್ದೇನೆ. ನನಗೆ ಗೊತ್ತಿರುವ ಎಲ್ಲಾ ಮಾಹಿತಿಯನ್ನೂ ಅವರಿಗೆ ನೀಡಿದ್ದೇನೆ. ನಾನು ಮೊನ್ನೆ ಹೇಳಿದ ಮಾತಿಗೆ ತಕ್ಕಂತೆ ಅವರ ತನಿಖೆಗೆ-ವಿಚಾರಣೆಗೆ ಸಹಕರಿಸಿದ್ದೇನೆ,” ಎಂದು ಹೇಳಿದ್ದರು. ಈಗ ಆ 15 ಹೆಸರುಗಳು ಯಾರದ್ದು ಎನ್ನುವ ಕುತೂಹಲ ಮೂಡಿದೆ.

ಇದನ್ನೂ ಓದಿ: ಡ್ರಗ್ಸ್‌ ಸೇವನೆ ಮಾಡುವವರ 10-15 ಹೆಸರುಗಳನ್ನು ಸಾಕ್ಷಿ ಸಮೇತ ಪೊಲೀಸರಿಗೆ ನೀಡಿದ್ದೇನೆ; ಇಂದ್ರಜಿತ್ ಲಂಕೇಶ್

ಇಂದ್ರಜಿತ್ ವಿಚಾರಣೆ ವೇಳೆ ಕೊಟ್ಟ ದಾಖಲೆಗಳು ಮತ್ತು 15 ಮಂದಿ ನಟ ನಟಿಯರ ಪೂರ್ವಾಪರ ಪರಿಶೀಲನೆಯಲ್ಲಿ ಸಿಸಿಬಿ ಅಧಿಕಾರಿಗಳು ನಿರತರಾಗಿದ್ದಾರೆ. ಸಿಸಿಬಿಯಿಂದ ಆ 15 ಮಂದಿ ನಟ-ನಟಿಯರಿಗೆ ನೋಟೀಸ್ ನೀಡುವ ಸಾಧ್ಯತೆ ಇದೆ. ಒಂದೊಮ್ಮೆ ಇವರಿಗೆ ನೋಟಿಸ್​ ನೀಡಿದರೆ ಈ 15 ಮಂದಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
Youtube Video

ನಿನ್ನೆಮೊನ್ನೆ ಬಂದ ನಟ-ನಟಿಯರು ಸ್ಯಾಂಡಲ್‌ವುಡ್‌ ಇಂಡಸ್ಟ್ರಿಯಲ್ಲಿ ಡ್ರಗ್ಸ್‌ಗೆ ಬ್ಯ್ರಾಂಡ್‌ ಅಂಬಾಸಿಡರ್‌ ಆಗುತ್ತಿದ್ದಾರೆ. ಡ್ರಗ್ಸ್‌ ಸೇವನೆ ಮಾಡುವವರ ಹೆಸರನ್ನು ಹೇಳುವ ಮೂಲಕ ಅವರಿಗೆ ವ್ಯಯಕ್ತಿಕವಾಗಿ ಹಿಂಸೆ ನೀಡಬೇಕು ಎಂಬುದು ನನ್ನ ಉದ್ದೇಶವಲ್ಲ. ಬದಲಿಗೆ ಯುವ ನಟರು, ಮಕ್ಕಳು ಹಾಗೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಇದರ ವಿರುದ್ಧ ಸೂಕ್ತಕ್ರಮ ತೆಗೆದುಕೊಳ್ಳಬೇಕು ಎಂದು ಇಂದ್ರಜಿತ್​ ಹೇಳಿದ್ದರು.
Published by: Rajesh Duggumane
First published: September 1, 2020, 8:04 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories